ಆರೋಗ್ಯಕರ, ರುಚಿಕರ ಆಹಾರ ತಯಾರಿಸುವಲ್ಲಿ ಅಡುಗೆ ಪಾತ್ರೆಗಳ ಪಾತ್ರ ದೊಡ್ಡದು! ಯಾವುದು ಬೆಸ್ಟ್ ತಿಳಿಯಿರಿ

| Updated By: ಸಾಧು ಶ್ರೀನಾಥ್​

Updated on: Oct 13, 2022 | 6:06 AM

Cooking Utensils: ಹಿತ್ತಾಳೆಯ ಪಾತ್ರೆಗಳಲ್ಲಿ ಅಡುಗೆ ಮಾಡುವ ಮೂಲಕ ಆಹಾರದ 90 ಪ್ರತಿಶತ ಪೋಷಕಾಂಶಗಳನ್ನು ಉಳಿಸಿಕೊಳ್ಳಲಾಗುತ್ತದೆ. ಆದರೆ ಈ ಪಾತ್ರೆಗಳನ್ನು ತೊಳೆಯಲು ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು.

ಆರೋಗ್ಯಕರ, ರುಚಿಕರ ಆಹಾರ ತಯಾರಿಸುವಲ್ಲಿ ಅಡುಗೆ ಪಾತ್ರೆಗಳ ಪಾತ್ರ ದೊಡ್ಡದು! ಯಾವುದು ಬೆಸ್ಟ್ ತಿಳಿಯಿರಿ
ಆರೋಗ್ಯಕರ, ರುಚಿಕರ ಆಹಾರ ತಯಾರಿಸುವಲ್ಲಿ ಅಡುಗೆ ಪಾತ್ರೆಗಳ ಪಾತ್ರ ದೊಡ್ಡದು! ಯಾವುದು ಬೆಸ್ಟ್ ತಿಳಿಯಿರಿ
Follow us on

ಅಲ್ಯೂಮಿನಿಯಂ, ಕಬ್ಬಿಣ, ಸ್ಟೀಲ್, ಮಣ್ಣಿನ ಪಾತ್ರೆಗಳು.. ಇವುಗಳಲ್ಲಿ ಯಾವುದು ಬೆಸ್ಟ್: ಯಾವ ಪಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಇಲ್ಲಿ ತಿಳಿಯಿರಿ.. ಈಗ ನಾವು ಬಳಸುವ ಅಡುಗೆ ಪಾತ್ರೆಗಳಿಗೂ.. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ನಮ್ಮ ಅಡುಗೆ ಪಾತ್ರೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಅಂದರೆ ನಮ್ಮ ಅಜ್ಜಿಯರ ಕಾಲದಲ್ಲಿ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುತ್ತಿದ್ದರು. ನೇರವಾಗಿ ತೋಟಗಳಲ್ಲಿ ಬೆಳೆದ ತರಕಾರಿಗಳನ್ನು ಕಿತ್ತು ತಂದು, ಬೇಯಿಸಿ ತಿನ್ನುತ್ತಿದ್ದರು. ಪ್ರಸ್ತುತ ಎಲ್ಲವನ್ನೂ ಕೃತಕವಾಗಿ ತಿನ್ನಲಾಗುತ್ತಿದೆ ಎಂದು ಹೇಳಬಹುದು. ಇದು ಬದಲಾದ ಕಾಲಕ್ಕೆ ತಕ್ಕಂತೆ…

ಉತ್ತಮ ಆರೋಗ್ಯಕ್ಕಾಗಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಆರೋಗ್ಯಕರ, ರುಚಿಕರವಾದ ಆಹಾರವನ್ನು ತಯಾರಿಸುವಲ್ಲಿ ಅಡುಗೆ ಪಾತ್ರೆಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ. ನಿಮ್ಮ ಆಹಾರವನ್ನು ನೀವು ಹೇಗೆ ಮತ್ತು ಯಾವ ಪಾತ್ರೆಗಳಲ್ಲಿ ಬೇಯಿಸುತ್ತೀರಿ ಎಂಬುದು ಬಹಳ ಮುಖ್ಯ. ಅಡುಗೆಗಾಗಿ ಸರಿಯಾದ ಪಾತ್ರೆಗಳನ್ನು ಆರಿಸುವುದು ಬಹಳ ಮುಖ್ಯ. ಅಡುಗೆಗೆ ಬಳಸುವ ಬಹುತೇಕ ಪಾತ್ರೆಗಳು ವಿಷಕಾರಿ ರಾಸಾಯನಿಕಗಳಿಂದ ತುಂಬಿದ್ದು ಅದು ಆಹಾರದೊಳಗೆ ಸೇರಿಕೊಂಡು ಆಹಾರವನ್ನು ಕಲುಷಿತಗೊಳಿಸುತ್ತದೆ ಎಂಬುದು ನಿಮಗೆ ತಿಳಿದಿದೆ. ಹಗಾದರೆ ಕಲುಷಿತವಲ್ಲದ ಮತ್ತು ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ಯಾವ ಪಾತ್ರೆಯಲ್ಲಿ ಬೇಯಿಸುವುದು ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ. ತಿನ್ನಲು ಬಳಸುವ ಪಾತ್ರೆಗಳಲ್ಲಿ ಯಾವುದು ಒಳ್ಳೆಯದು ಎಂಬುದನ್ನು ಆಯುರ್ವೇದ ತಜ್ಞರು ವಿವರಿಸುತ್ತಾರೆ.

  1. ಸ್ಟೈನ್​​ಲೆಸ್​​ ಸ್ಟೀಲ್: ಇತ್ತೀಚಿನ ದಿನಗಳಲ್ಲಿ ಸ್ಟೈನ್​​ಲೆಸ್​​ ಸ್ಟೀಲ್ ಪಾತ್ರೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಅದರಲ್ಲಿ ವಿವಿಧ ಆಹಾರಗಳನ್ನು ತಯಾರಿಸಬಹುದು. ತಜ್ಞರ ಪ್ರಕಾರ, ಕೇವಲ 60-70 ಪ್ರತಿಶತ ಪೋಷಕಾಂಶಗಳು ಸರಳ ಉಕ್ಕಿನ ಪಾತ್ರೆಗಳಲ್ಲಿ ಸಂಗ್ರಹವಾಗುತ್ತವೆ. ಕ್ರೋಮಿಯಂ ಅಥವಾ ನಿಕಲ್​ನಲೊಂದಿಗೆ ಪಾಲಿಶ್ ಮಾಡಿದ ಸ್ಟೈನ್​​ಲೆಸ್​​ ಸ್ಟೀಲ್ ಖರೀದಿಸುವುದನ್ನು ತಪ್ಪಿಸಲು ತಜ್ಞರು ಎಚ್ಚರಿಸುತ್ತಾರೆ. ಏಕೆಂದರೆ ಅವು ಆರೋಗ್ಯಕ್ಕೆ ಹಾನಿಕರ.
  2. ಕಚ್ಚಾ ಕಬ್ಬಿಣ: ಎರಕಹೊಯ್ದ ಕಬ್ಬಿಣದ ಪಾತ್ರೆಗಳ ಬಗ್ಗೆ ತಜ್ಞರು ಹೇಳುವುದೇನೆಂದರೆ ಇದು ಬಾಳಿಕೆ ಬರುವ ಲೋಹವಾಗಿದ್ದು ಅದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುದು. ಕ್ಯಾಸ್ಟ್​​ ಐರನ್ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸಿದಾಗ, ಆಹಾರದಲ್ಲಿ ಸ್ವಲ್ಪ ಪ್ರಮಾಣದ ಕಬ್ಬಿಣ ಸೇರುತ್ತದೆ. ಇದರಿಂದ ನಮ್ಮ ದೇಹ ಆರೋಗ್ಯಕರವಾಗುತ್ತದೆ ಎನ್ನುತ್ತಾರೆ. ಆದರೆ, ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಿರುವವರು ಈ ಪಾತ್ರೆಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ.
  3. ಹಿತ್ತಾಳೆ ಪಾತ್ರೆಗಳು: ಹಿತ್ತಾಳೆಯ ಪಾತ್ರೆಗಳಲ್ಲಿ ಅಡುಗೆ ಮಾಡುವ ಮೂಲಕ ಆಹಾರದ 90 ಪ್ರತಿಶತ ಪೋಷಕಾಂಶಗಳನ್ನು ಉಳಿಸಿಕೊಳ್ಳಲಾಗುತ್ತದೆ. ಆದರೆ ಈ ಪಾತ್ರೆಗಳನ್ನು ತೊಳೆಯಲು ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು. ಈ ಪಾತ್ರೆಗಳಲ್ಲಿ ಸಿಟ್ರಿಕ್ ಆಹಾರವನ್ನು ಬೇಯಿಸಬಾರದು ಎಂದು ತಜ್ಞರು ಹೇಳುತ್ತಾರೆ.
  4. ಕಂಚಿನ ಪಾತ್ರೆಗಳು: ಕಂಚಿನ ಪಾತ್ರೆಯು ಆಹಾರದಲ್ಲಿ 97 ಪ್ರತಿಶತದಷ್ಟು ಪೋಷಕಾಂಶಗಳನ್ನು ಉಳಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದಾಗ್ಯೂ, ತಾಮ್ರ ಅಥವಾ ನಿಕಲ್ ಲೋಹ ಲೇಪದೊಂದಿಗೆ ಬರುವ ಕಂಚಿನ ಪಾತ್ರೆಗಳಲ್ಲಿ ಅಡುಗೆ ಮಾಡದಂತೆ ಸಲಹೆ ನೀಡುತ್ತಾರೆ. ಈ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕ ಎಚ್ಚರಾ.
  5. ಮಣ್ಣಿನ ಪಾತ್ರೆಗಳು: ಮಣ್ಣಿನ ಪಾತ್ರೆಗಳು ನಿಧಾನವಾಗಿ ಬಿಸಿಯಾಗುತ್ತವೆ. ಇದು ಆಹಾರದಲ್ಲಿ ತೇವಾಂಶ ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರವು ಪೌಷ್ಟಿಕವಾಗಿರುತ್ತದೆ. ಆದರೆ ಬೇಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ.
  6. ಅಲ್ಯೂಮಿನಿಯಂ ಪಾತ್ರೆಗಳು: ಅಲ್ಯೂಮಿನಿಯಂ ಅನ್ನು ಥೈರೋಟಾಕ್ಸಿಕ್ ಲೋಹವೆಂದು ಪರಿಗಣಿಸಲಾಗುತ್ತದೆ. ಇದು ಸುಲಭವಾಗಿ ಆಹಾರದಲ್ಲಿ ಕರಗುತ್ತದೆ. ಇದು ಯಕೃತ್ತಿನ ಅಸ್ವಸ್ಥತೆಗಳು, ಮಲಬದ್ಧತೆ, ಪಾರ್ಶ್ವವಾಯು ಮತ್ತು ಮೆದುಳಿನ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ.