Monsoon Tips : ಮಳೆಗಾಲಕ್ಕೆ ಪಾದರಕ್ಷೆ ಖರೀದಿಸುವಾಗ ಈ ವಿಚಾರಗಳು ನೆನಪಿನಲ್ಲಿರಲಿ

| Updated By: ಅಕ್ಷತಾ ವರ್ಕಾಡಿ

Updated on: Jun 05, 2024 | 5:45 PM

ಮಳೆಗಾಲದಲ್ಲಿ ಬಿಡದೇ ಸುರಿಯುವ ಮಳೆಯ ನಡುವೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತದೆ. ಈ ಸಮಯದಲ್ಲಿ ಸೇವಿಸುವ ಆಹಾರ, ಧರಿಸುವ ಉಡುಗೆ ತೊಡುಗೆಗಳು, ಪಾದರಕ್ಷೆಯ ಮೇಲೂ ಗಮನ ಹರಿಸಬೇಕಾಗುತ್ತದೆ. ಹೊರಗಡೆ ಹೋಗುವಾಗ ಪಾದರಕ್ಷೆಗಳು ಒದ್ದೆಯಾಗುತ್ತದೆ. ಇದರಿಂದ ಪಾದಗಳ ಅಂದ ಹಾಗೂ ಆರೋಗ್ಯ ಕೆಡಬಹುದು. ಹೀಗಾಗಿ ಈ ಋತುಮಾನಕ್ಕೆ ಅನುಗುಣವಾಗಿ ಪಾದರಕ್ಷೆಗಳ ಆಯ್ಕೆಯಿರಬೇಕು.

Monsoon Tips : ಮಳೆಗಾಲಕ್ಕೆ ಪಾದರಕ್ಷೆ ಖರೀದಿಸುವಾಗ ಈ ವಿಚಾರಗಳು ನೆನಪಿನಲ್ಲಿರಲಿ
Follow us on

ಮಳೆಗಾಲ ಬಂತೆಂದರೆ ಸಾಕು, ಎಲ್ಲಿ ನೋಡಿದರೂ ನೀರಿನ ಆರ್ಭಟವೇ ಕಂಡುಬರುತ್ತಿರುತ್ತದೆ. ರಸ್ತೆಯಲ್ಲಿ ನೀರು ನಿಂತಿರುತ್ತದೆ. ನೀರು ನಿಂತ ಪ್ರದೇಶದಲ್ಲಿ ನಡೆದುಕೊಂಡುವಾಗ ಜಾಗರೂಕರಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಜಾರಿ ಬೀಳುವ ಸಾಧ್ಯತೆಯೇ ಹೆಚ್ಚು. ಪಾದರಕ್ಷೆಗಳ ಆಯ್ಕೆಯು ಸರಿಯಿಲ್ಲದಿದ್ದರೆ ಬಟ್ಟೆಯ ಹಿಂಭಾಗದಲ್ಲಿ ಕೆಸರಾಗಿರುತ್ತದೆ. ಹೀಗಾಗಿ ಪಾದಗಳ ಆರೋಗ್ಯವನ್ನು ಕಾಪಾಡಲು ಸೂಕ್ತವಾಗಿರುವ, ನಡೆಯಲು ಆರಾಮದಾಯಕವೆನಿಸುವ ಚಪ್ಪಲಿಯ ಆಯ್ಕೆಯಿರಲಿ.

ಮಳೆಗಾಲಕ್ಕೆ ಈ ಪಾದರಕ್ಷೆಗಳೇ ಬೆಸ್ಟ್:

ಮಳೆಗಾಲಕ್ಕಾಗಿಯೇ ವಿವಿಧ ಬಗೆಯ ವಿನ್ಯಾಸ ಹಾಗೂ ಬಣ್ಣಗಳಲ್ಲಿ ಪಾದರಕ್ಷೆಗಳು ಲಭ್ಯವಿದೆದೆ. ಆದರೆ ಈ ಸಮಯದಲ್ಲಿ ಕ್ಯಾನ್ವಾಸ್, ಲೆದರ್ ಚಪ್ಪಲಿಗಳನ್ನು ಖರೀದಿಸಬೇಡಿ. ಮಳೆಗಾಲಕ್ಕೆ ಪ್ಲಾಸ್ಟಿಕ್ ಹಾಗೂ ರಬ್ಬರ್ ಚಪ್ಪಲಿಗಳು ಬೆಸ್ಟ್ ಆಯ್ಕೆಯಾಗಿದ್ದು, ಈ ಋತುಮಾನಕ್ಕೆ ನಿಮ್ಮ ಪಾದಗಳನ್ನು ಆರಾಮದಾಯಕವಾಗಿಸುತ್ತದೆ.

ಇದನ್ನೂ ಓದಿ: ಈ ಸಂದರ್ಭದಲ್ಲಿ ನೀವು ಅಪ್ಪಿತಪ್ಪಿಯೂ ಮಾತನಾಡಲೇಬೇಡಿ, ಇದ್ರಿಂದ ತೊಂದರೆಯೇ ಹೆಚ್ಚು

ಪಾದರಕ್ಷೆ ಖರೀದಿಸುವಾಗ ಈ ಸಲಹೆಗಳನ್ನು ಅನುಸರಿಸಿ:

  • ಮಳೆಗಾಲಕ್ಕೆ ಗಟ್ಟಿಮುಟ್ಟಾದ ಚಪ್ಪಲಿಗಳ ಖರೀದಿಯತ್ತ ಗಮನ ಕೊಡಿ.
  • ಹೆಚ್ಚು ಜಾರದಂತಹ ಹಿಮ್ಮಡಿ ಇರುವ ಚಪ್ಪಲಿಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.
  • ಹೈಹೀಲ್ಡ್ ಚಪ್ಪಲಿ ಮಳೆಗಾಲಕ್ಕೆ ಸೂಕ್ತವಲ್ಲ. ಈ ಚಪ್ಪಲಿಗಳು ಗ್ರಿಪ್ ಸಿಗದ ಕಾರಣ ಜಾರಿ ಬೀಳುವ ಸಾಧ್ಯತೆಯೇ ಹೆಚ್ಚು.
  • ಪಾದವು ಒದ್ದೆಯಾಗುವ ಕಾರಣ ಪಾದಗಳ ಬಿಗಿಯಾದ ಚಪ್ಪಲಿಯು ಚರ್ಮದ ಆರೋಗ್ಯವನ್ನು ಹಾಳು ಮಾಡುತ್ತದೆ. ಹೀಗಾಗಿ ಬಿಗಿಯಾದ ಚಪ್ಪಲಿಯ ಬದಲು ಸ್ವಲ್ಪ ಸಡಿಲವಾದ ಪಾದರಕ್ಷೆಯನ್ನು ಆಯ್ದುಕೊಳ್ಳಿ.
  • ಹೊಸ ಚಪ್ಪಲಿಯಿಂದ ಗಾಯವಾದರೆ ತಕ್ಷಣವೇ ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆ ಲೇಪಿಸಿ ಗುಣಪಡಿಸಿಕೊಳ್ಳುವುದು ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: