Home Remedies: ಬಿಳಿ ಮುಟ್ಟಿನ ಸಮಸ್ಯೆಯನ್ನು ಕಡೆಗಣಿಸಲೇ ಬೇಡಿ, ಮನೆಯಲ್ಲೇ ಇದೆ ಸುಲಭ ಪರಿಹಾರ
ಕೆಲವು ಮಹಿಳೆಯರು ತಮ್ಮ ವೈಯಕ್ತಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಬಾಯಿ ಬಿಟ್ಟು ಮಾತನಾಡುವುದೇ ಇಲ್ಲ. ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡರೆ ಬೇರೆಯವರು ಏನು ಅಂದುಕೊಳ್ಳುತ್ತಾರೆ ಎನ್ನುವುದಿರುತ್ತದೆ. ಆದರೆ, ಬಹುತೇಕ ಮಹಿಳೆಯರನ್ನು ಕಾಡುವ ಸಮಸ್ಯೆಗಳಲ್ಲಿ ಈ ಬಿಳಿ ಮುಟ್ಟು ಅಥವಾ ಬಿಳಿ ಸೆರಗು ಕೂಡ ಒಂದು. ಔಷಧಿ ಸೇವನೆ ಮಾಡದೇನೆ ಈ ಸಮಸ್ಯೆಯು ಕಡಿಮೆಯಾಗುತ್ತದೆ ಎಂದು ನಿರ್ಲಕ್ಷ್ಯ ಮಾಡಿದರೆ ಆರೋಗ್ಯದ ಮೇಲೆ ನಾನಾ ರೀತಿಯ ಪರಿಣಾಮಗಳು ಬೀರುತ್ತವೆ. ಹೀಗಾಗಿ ಈ ಬಿಳಿ ಮುಟ್ಟಿನ ಸಮಸ್ಯೆಗೆ ಮನೆಯಲ್ಲೇ ಪರಿಹಾರವನ್ನು ಕಂಡುಕೊಳ್ಳುವುದು ಸುಲಭ.
ಸಾಂದರ್ಭಿಕ ಚಿತ್ರ
Follow us on
ಮಹಿಳೆಯರನ್ನು ಕಾಡುವ ಈ ಬಿಳಿ ಮುಟ್ಟು ಸಾಮಾನ್ಯ ಸಂಗತಿಯಾಗಿದೆ. ಆದರೆ ಕೆಲವು ಮಹಿಳೆಯರಲ್ಲಿ ಇದು ಅಧಿಕವಾಗಿರುತ್ತದೆ. ಋತುಚಕ್ರವು ಸಮಯ ಸಮೀಪಿಸುತ್ತಿದ್ದಂತೆ ಅಥವಾ ಮುಟ್ಟು ಮುಗಿದ ಬಳಿಕ ಬಳಿಕ ಈ ಪ್ರಕ್ರಿಯೆಯು ಆರಂಭವಾಗುತ್ತದೆ. ಬಿಳಿ ಮುಟ್ಟು ಸ್ರವಿಕೆಯು ಯೋನಿಯನ್ನು ಸ್ವಚ್ಛಗೊಳಿಸುವುದಲ್ಲದೆ ಸೋಂಕುಗಳಿಂದ ರಕ್ಷಿಸಲು ಸಹಕಾರಿಯಾಗಿದೆ. ಆದರೆ ದಿನದಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ಸ್ರವಿಕೆಯಾದರೆ ಆರೋಗ್ಯದ ಮೇಲೆ ತೊಂದರೆಯನ್ನುಂಟು ಮಾಡುವುದರಿಂದ ಎರಡು ಮಾತಿಲ್ಲ. ಬಿಳಿ ಅಥವಾ ಹಳದಿ ಬಣ್ಣದ ದ್ರವದ ಸ್ರವಿಕೆಯ ವೇಳೆ ವಿಪರೀತವಾದ ಸೊಂಟ ಅಥವಾ ಬೆನ್ನು ನೋವಿನ ಸಮಸ್ಯೆಯು ಕಾಡುವುದಿದೆ. ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಈ ಬಿಳಿ ಸೆರಗು ಹೋಗುವ ಪ್ರಮಾಣವು ಹೆಚ್ಚಿರುತ್ತದೆ. ಆದರೆ ಮನೆಯಲ್ಲೆ ಸುಲಭವಾಗಿ ಪರಿಹಾರ ಕಂಡುಕೊಳ್ಳುವುದು ಕಷ್ಟವೇನಲ್ಲ.
ಬಿಳಿ ಮುಟ್ಟಿನ ಸಮಸ್ಯೆಗೆ ಸರಳ ಮನೆ ಮದ್ದುಗಳು
ಬಾಳೆಹಣ್ಣನ್ನು ತುಪ್ಪದಲ್ಲಿ ಬೆರೆಸಿ ಸೇವಿಸುವುದರಿಂದ ಬಿಳಿ ಮುಟ್ಟಿನ ಸಮಸ್ಯೆಯಿಂದ ಮುಕ್ತರಾಗಬಹುದು.
ದಿನಕ್ಕೆ ಕಡಿಮೆ ಅಂದರೂ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯುವುದರಿಂದ ಈ ಸಮಸ್ಯೆಯನ್ನು ಗುಣಮುಖಪಡಿಸಬಹುದು.
ಕೊತ್ತಂಬರಿ ಬೀಜವನ್ನು ರಾತ್ರಿ ನೆನೆಸಿ ಬೆಳಗ್ಗೆ ಸೇವನೆ ಮಾಡುವುದರಿಂದ ಬಿಳಿ ಮುಟ್ಟಿನ ಸಮಸ್ಯೆಯು ಕಡಿಮೆಯಾಗುತ್ತದೆ.
ಬೆಳ್ಳಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಜೀರಿಗೆ ಅಥವಾ ಜೀರಿಗೆ ಕಷಾಯವನ್ನು ಸೇವಿಸುವುದರಿಂದ ಬಿಳಿ ಮುಟ್ಟಿನಿಂದ ಪಾರಾಗಬಹುದು.
ಅಶೋಕ ಗಿಡದ ತೊಗಟೆಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಕುಡಿಯುವುದು ಮಹಿಳೆಯರ ಈ ಸಮಸ್ಯೆಗೆ ಉತ್ತಮವಾದ ಔಷಧವಾಗಿದೆ.
ಬೆಂಡೆಕಾಯಿಯನ್ನು ಕುದಿಸಿ ಮಿಕ್ಸಿ ಜಾರಿನಲ್ಲಿ ಸಣ್ಣಗೆ ರುಬ್ಬಿಕೊಂಡು, ಈ ಮಿಶ್ರಣವನ್ನು ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ.
ಎರಡು ಚಮಚ ಅಲೋವೇರಾ ಜೆಲ್, ಎರಡು ಚಮಚ ಜೇನು ತುಪ್ಪ ಈ ಎರಡನ್ನು ಚೆನ್ನಾಗಿ ಮಿಶ್ರಣ ಮಾಡಿ ಸೇವನೆ ಮಾಡುವುದರಿಂದ ಈ ಸಮಸ್ಯೆಯನ್ನು ಶಮನಗೊಳಿಸಬಹುದು.
ಬೆಟ್ಟದ ನೆಲ್ಲಿಕಾಯಿಯ ಮಿಶ್ರಣಕ್ಕೆ ಒಂದು ಚಮಚ ಜೇನು ತುಪ್ಪ ಬೆರೆಸಿ ಸೇವನೆ ಮಾಡುವುದು ಪರಿಣಾಮಕಾರಿಯಾಗಿದೆ.