ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳು ಜೀವನಶೈಲಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ಸಮಯದಲ್ಲಿ ಆಹಾರದ ಮೇಲೆ ಗಮನ ಹರಿಸುವುದು ಬಹಳ ಮುಖ್ಯ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಬೇಕಾಗುವ, ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಆಹಾರ ಸೇವನೆ ಮಾಡುವುದು ಒಳ್ಳೆಯದು. ಹಣ್ಣು, ತರಕಾರಿ, ಧಾನ್ಯಗಳು, ಸ್ವಲ್ಪ ಪ್ರೋಟೀನ್ಗಳು ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವು ಹೃದ್ರೋಗ, ಮಧುಮೇಹ ಮತ್ತು ಬೊಜ್ಜಿನಂತಹ ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಸರಿಯಾದ ಪೋಷಣೆ ಸಿಗುವಂತಹ ಆಹಾರ ಸೇವನೆ ಮಾಡುವುದರಿಂದ ಮಾನಸಿಕ ಆರೋಗ್ಯ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಆಹಾರ ಸೇವನೆಯಲ್ಲಿ ನೀರು ಕುಡಿಯುವುದು ಮತ್ತು ಅಗತ್ಯಕ್ಕಿಂತ ಹೆಚ್ಚಾಗಿ ಆಹಾರ ಸೇವನೆ ಮಾಡದಿರುವುದು ಮುಖ್ಯವಾಗುತ್ತದೆ. ಜೊತೆಗೆ ಸರಿಯಾದ ರೀತಿಯಲ್ಲಿ ಆಹಾರವನ್ನು ಆಯ್ಕೆ ಮಾಡುವುದರಿಂದ ಆರೋಗ್ಯಕರ ತೂಕವನ್ನು ಕೂಡ ಕಾಯ್ದುಕೊಳ್ಳಬಹುದು. ಆದರೆ ಮನೆಯಲ್ಲಿ ನಾವು ಸೇವಿಸುತ್ತಿರುವ ಆಹಾರ ಸುರಕ್ಷಿತವೇ? ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ವರದಿಯು, ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಲು ಕೆಲವು ನಿಯಮಗಳನ್ನು ಶಿಫಾರಸು ಮಾಡಿದೆ. ಏನದು? ಈ ವರದಿ ಹೇಳುವುದೇನು? ಮಾಹಿತಿ ಇಲ್ಲಿದೆ.
ಮನೆಯಲ್ಲಿ ತಯಾರಿಸಿದ ಆಹಾರವೂ ಕೂಡ ಸಂಭಾವ್ಯ ಆರೋಗ್ಯ ಅಪಾಯಗಳನ್ನು ಹೊತ್ತು ತರಬಹುದು. ಇದರಲ್ಲಿ ನಾವು ಮಾಡುವ ಕೆಲವು ತಪ್ಪುಗಳೆಂದರೆ ಊಟ, ತಿಂಡಿ ಮಾಡುವ ಮೊದಲೇ ಅಂದರೆ ಹಲವಾರು ಗಂಟೆಗಳ ಹಿಂದೆ ಆಹಾರವನ್ನು ತಯಾರಿಸಿ ಇಟ್ಟುಕೊಳ್ಳುವುದು, ಅಡುಗೆ ಅಥವಾ ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡುವುದು, ಸ್ವಚ್ಛವಾಗಿರದೆಯೇ ಅಂದರೆ ವೈಯಕ್ತಿಕ ನೈರ್ಮಲ್ಯ ಇಲ್ಲದೆಯೇ ಆಹಾರ ತಯಾರಿ ಮಾಡುವುದು.
ಇದನ್ನೂ ಓದಿ: ಆಲ್ಬಿನಿಸಂ ಬಗ್ಗೆ ತಪ್ಪು ಕಲ್ಪನೆ ಬೇಡ, ರೋಗದ ಬಗ್ಗೆ ಇರಲಿ ಅರಿವು
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:28 pm, Thu, 13 June 24