Clothes Drying Tips: ಮನೆಯೊಳಗೆ ಬಟ್ಟೆ ಒಣಗಿಸಿದಾಗ ಏಕೆ ವಾಸನೆ ಬರುತ್ತದೆ?, ಇದಕ್ಕೆ ಕಾರಣವೇನು?

ಮಳೆಗಾಲದಲ್ಲಿ ಬಟ್ಟೆಗಳನ್ನು ಮನೆಯೊಳಗೆ ಒಣಗಿಸುವುದು ಅನಿವಾರ್ಯವಾಗುತ್ತದೆ. ಆದರೆ ಹೀಗೆ ಒಣಗಿಸಿದ ಬಳಿಕ ಬಟ್ಟೆಯಿಂದ ಒದ್ದೆ ಅಥವಾ ಹುಳಿ ವಾಸನೆ ಬರಬಹುದು. ಬಟ್ಟೆ ಸ್ವಚ್ಛವಾಗಿ ತೊಳೆದಿದ್ದರೂ ಈ ವಾಸನೆ ಏಕೆ ಬರುತ್ತದೆ? ತೇವಾಂಶ, ಗಾಳಿಯ ಕೊರತೆ ಮತ್ತು ಸೂಕ್ಷ್ಮಜೀವಿಗಳು ಇದಕ್ಕೆ ಹೇಗೆ ಕಾರಣವಾಗುತ್ತವೆ ಎಂಬುದನ್ನು ತಿಳಿಯಿರಿ.

Clothes Drying Tips: ಮನೆಯೊಳಗೆ ಬಟ್ಟೆ ಒಣಗಿಸಿದಾಗ ಏಕೆ ವಾಸನೆ ಬರುತ್ತದೆ?, ಇದಕ್ಕೆ ಕಾರಣವೇನು?
Dry Clothes
Edited By:

Updated on: Sep 13, 2026 | 8:42 AM

ಮುಖ್ಯಾಂಶಗಳು

  • ಮನೆಯೊಳಗೆ ಬಟ್ಟೆ ಒಣಗಿಸಿದಾಗ ವಾಸನೆ ಏಕೆ?
  • ತೇವಾಂಶವೇ ಬಟ್ಟೆಯ ವಾಸನೆಗೆ ಕಾರಣವೇ?
  • ಬಟ್ಟೆಯಿಂದ ದುರ್ವಾಸನೆ ಹೋಗಿಸಲು ಏನು ಮಾಡಬೇಕು?

ಮಳೆಗಾಲದಲ್ಲಿ ಬಟ್ಟೆಗಳನ್ನು (Rainy Season Cloths) ಹೊರಗೆ ಒಣಗಿಸಲು ಸಾಧ್ಯವಾಗದೆ ಮನೆಯೊಳಗೇ ಒಣಗಿಸುವುದು ಸಾಮಾನ್ಯ. ಆದರೆ ಹೀಗೆ ಒಣಗಿಸಿದ ಬಳಿಕ ಬಟ್ಟೆಯಿಂದ ಕೆಲವೊಮ್ಮೆ ಒದ್ದೆಯಾದ ಅಥವಾ ಬೆವರಿನಂತಹ ವಾಸನೆ ಬರುತ್ತದೆ. ಬಟ್ಟೆ ಸ್ವಚ್ಛವಾಗಿ ತೊಳೆದಿದ್ದರೂ ಈ ರೀತಿಯ ವಾಸನೆ ಏಕೆ ಬರುತ್ತದೆ ಎಂಬುದು ಹಲವರ ಪ್ರಶ್ನೆ. ಇದಕ್ಕೆ ಮುಖ್ಯ ಕಾರಣ ಬಟ್ಟೆಯಲ್ಲಿ ಉಳಿದುಕೊಳ್ಳುವ ಸೂಕ್ಷ್ಮಜೀವಿಗಳು ಮತ್ತು ತೇವಾಂಶ.

ಬಟ್ಟೆಯನ್ನು ತೊಳೆದ ಬಳಿಕ ಅದರಲ್ಲಿರುವ ನೀರು ಸಂಪೂರ್ಣವಾಗಿ ಆವಿಯಾಗಲು ಸಮಯ ಬೇಕಾಗುತ್ತದೆ. ಮನೆಯೊಳಗೆ ಗಾಳಿಯ ಸಂಚಾರ ಕಡಿಮೆ ಇದ್ದರೆ ಬಟ್ಟೆ ನಿಧಾನವಾಗಿ ಒಣಗುತ್ತದೆ. ಈ ಸಂದರ್ಭದಲ್ಲಿ ಬಟ್ಟೆ ಹೆಚ್ಚು ಸಮಯ ತೇವವಾಗಿಯೇ ಉಳಿಯುತ್ತದೆ. ತೇವಾಂಶದ ವಾತಾವರಣವು ಕೆಲವು ಸೂಕ್ಷ್ಮಜೀವಿಗಳು ಬೆಳೆಯಲು ಅನುಕೂಲಕರವಾಗುತ್ತದೆ. ಬಟ್ಟೆ ತೊಳೆಯುವ ಮತ್ತು ಒಣಗಿಸುವ ಪ್ರಕ್ರಿಯೆಯಲ್ಲೂ ಕೆಲವು ಸೂಕ್ಷ್ಮಜೀವಿಗಳು ಉಳಿದುಕೊಳ್ಳಬಹುದು.

ಈ ಸೂಕ್ಷ್ಮಜೀವಿಗಳು ಬಟ್ಟೆಯಲ್ಲಿರುವ ಬೆವರು, ಚರ್ಮದ ಸತ್ತ ಜೀವಕೋಶಗಳು, ಎಣ್ಣೆ ಮತ್ತು ಇತರ ಸಾವಯವ ಅಂಶಗಳಿಂದ ಕೆಲವು ರಾಸಾಯನಿಕ ಸಂಯುಕ್ತಗಳು ಉತ್ಪತ್ತಿಯಾಗುತ್ತವೆ. ಇವುಗಳಿಂದಲೇ ಬಟ್ಟೆಯಲ್ಲಿ ಹುಳಿ, ಬೆವರಿನ ಅಥವಾ ಒದ್ದೆಯಾದಂತಹ ವಾಸನೆ ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಬಟ್ಟೆ ನಿಧಾನವಾಗಿ ಒಣಗಿದಷ್ಟೂ ಈ ವಾಸನೆ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಮನೆಯೊಳಗೆ ಬಟ್ಟೆ ಒಣಗಿಸುವಾಗ ಗಾಳಿಯ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಮುಖ್ಯ. ಕಿಟಕಿ ಅಥವಾ ಬಾಗಿಲು ತೆರೆದಿಡುವುದು, ಫ್ಯಾನ್ ಬಳಸುವುದು ಹಾಗೂ ಬಟ್ಟೆಗಳನ್ನು ಒಂದಕ್ಕೊಂದು ಅಂಟಿಕೊಳ್ಳದಂತೆ ಅಂತರವಿಟ್ಟು ನೇತುಹಾಕುವುದು ಒಣಗುವ ಪ್ರಕ್ರಿಯೆಯನ್ನು ವೇಗಗೊಳಿಸಬಹುದು. ಬಟ್ಟೆಗಳನ್ನು ತುಂಬಾ ಹತ್ತಿರ ಹತ್ತಿರ ಹಾಕಿದರೆ ಗಾಳಿ ಸರಿಯಾಗಿ ಹರಿಯದೆ ತೇವಾಂಶ ಹೆಚ್ಚು ಸಮಯ ಉಳಿಯಬಹುದು.

Tart Cherry: ಉತ್ತಮ ನಿದ್ದೆಗೆ ಟಾರ್ಟ್ ಚೆರಿ ಜ್ಯೂಸ್ ಸಹಾಯಕ: ಯಾವಾಗ ಕುಡಿಯಬೇಕು?

ಬಟ್ಟೆಯಿಂದ ಈಗಾಗಲೇ ವಾಸನೆ ಬರುತ್ತಿದ್ದರೆ ಅದನ್ನು ಮತ್ತೆ ತೊಳೆದು ಸಂಪೂರ್ಣವಾಗಿ ಒಣಗಿಸುವುದು ಉತ್ತಮ. ತೊಳೆಯುವಾಗ ಬಟ್ಟೆಯ ಸ್ವರೂಪಕ್ಕೆ ಸೂಕ್ತವಾದ ಡಿಟರ್ಜೆಂಟ್ ಬಳಸಬೇಕು. ತೊಳೆದ ನಂತರ ಬಟ್ಟೆಯನ್ನು ತಕ್ಷಣ ಒಣಗಲು ಹಾಕುವುದರಿಂದಲೂ ಹೆಚ್ಚು ಸಮಯ ತೇವವಾಗಿರುವುದನ್ನು ತಪ್ಪಿಸಬಹುದು.

ಒಟ್ಟಿನಲ್ಲಿ, ಮನೆಯೊಳಗೆ ಬಟ್ಟೆ ಒಣಗಿಸಿದಾಗ ಬರುವ ವಾಸನೆ ಎಂದರೆ ಬಟ್ಟೆ ಸರಿಯಾಗಿ ತೊಳೆದಿಲ್ಲ ಎಂದರ್ಥವಲ್ಲ. ಬಟ್ಟೆ ಹೆಚ್ಚು ಸಮಯ ತೇವವಾಗಿರುವುದು, ಗಾಳಿಯ ಸಂಚಾರದ ಕೊರತೆ ಮತ್ತು ತೊಳೆಯುವ ಪ್ರಕ್ರಿಯೆಯ ನಂತರವೂ ಉಳಿಯಬಹುದಾದ ಸೂಕ್ಷ್ಮಜೀವಿಗಳ ಚಟುವಟಿಕೆ ಇದಕ್ಕೆ ಪ್ರಮುಖ ಕಾರಣಗಳಾಗಿರಬಹುದು. ಆದ್ದರಿಂದ ಬಟ್ಟೆಗಳನ್ನು ಸಾಧ್ಯವಾದಷ್ಟು ಬೇಗ ಹಾಗೂ ಉತ್ತಮ ಗಾಳಿಯ ಸಂಚಾರವಿರುವ ಸ್ಥಳದಲ್ಲಿ ಒಣಗಿಸುವುದು ವಾಸನೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us