ಐಷಾರಾಮಿ ಹೋಟೆಲ್​ಗಳ ಬಾತ್​ರೂಂಗಳಲ್ಲಿ ಗಾಜಿನ ಲೋಟ ಇಡುವುದೇಕೆ?

| Updated By: ನಯನಾ ರಾಜೀವ್

Updated on: Aug 02, 2022 | 1:44 PM

ಹೋಟೆಲ್ ಕೊಠಡಿಗಳಲ್ಲಿ, ಸ್ನಾನಗೃಹದಲ್ಲಿ ಕುಡಿಯುವ ಲೋಟಗಳನ್ನು ಇಡುವುದನ್ನು ನೀವು ನೋಡಿರಬಹುದು. ಆದರೆ ಎಂದಾದರೂ ಈ ಲೋಟಗಳನ್ನು ಏಕೆ ಇಡುತ್ತಾರೆ ಎಂದು ಯೋಚನೆ ಮಾಡಿದ್ದೀರಾ

ಐಷಾರಾಮಿ ಹೋಟೆಲ್​ಗಳ ಬಾತ್​ರೂಂಗಳಲ್ಲಿ ಗಾಜಿನ ಲೋಟ ಇಡುವುದೇಕೆ?
Hotel
Image Credit source: herzindagi.com
Follow us on

ಹೋಟೆಲ್ ಕೊಠಡಿಗಳಲ್ಲಿ, ಸ್ನಾನಗೃಹದಲ್ಲಿ ಗಾಜಿನ ಲೋಟಗಳನ್ನು ಇಡುವುದನ್ನು ನೀವು ನೋಡಿರಬಹುದು. ಆದರೆ ಎಂದಾದರೂ ಈ ಲೋಟಗಳನ್ನು ಏಕೆ ಇಡುತ್ತಾರೆ ಎಂದು ಯೋಚನೆ ಮಾಡಿದ್ದೀರಾ. ಕೊಠಡಿಯಲ್ಲಿ ನೀರಿನ ಗ್ಲಾಸ್ ಇಡುವುದು ಸಹಜ ಆದರೆ, ಬಾತ್​ ರೂಂನಲ್ಲಿ ನೀರಿನ ಗ್ಲಾಸ್ ಇಡುವುದು ಏಕೆ, ಅಲ್ಲಿ ನೀರನ್ನು ಯಾರಾದ್ರೂ ಕುಡೀತಾರಾ ಎಂದು ಆಲೋಚಿಸಿರಬಹುದು. ಆದರೆ ಸತ್ಯ ಬೇರೆಯೇ ಇದೆ.

ಸ್ನಾನ ಮಾಡುವಾಗ ಬೆಲೆ ಬಾಳುವ ವಸ್ತುಗಳಿದ್ದರೆ ಆ ಗ್ಲಾಸ್​ನಲ್ಲಿ ಇಟ್ಟುಕೊಳ್ಳಲಿ, ಆ ವಸ್ತುಗಳು ಒದ್ದೆಯಾಗದಿರಲಿ, ಹಾಗೂ ಪಾರದರ್ಶಕದಲ್ಲಿದ್ದರೆ ಅಲ್ಲಿಟ್ಟಿರುವ ವಸ್ತುಗಳು ಕಾಣುತ್ತವೆ, ಧರಿಸಲು ಮರೆಯುವುದಿಲ್ಲ ಎನ್ನುವ ಕಾರಣಕ್ಕೆ ಗಾಜಿನ ಲೋಟವನ್ನು ಅಲ್ಲಿರಿಸಲಾಗುತ್ತದೆ.

ಟೂತ್‌ಬ್ರಷ್, ಟೂತ್‌ಪೇಸ್ಟ್, ಶೇವಿಂಗ್‌ಗಾಗಿ ರೇಜರ್ ಮುಂತಾದ ನೈರ್ಮಲ್ಯವನ್ನು ಇರಿಸಿಕೊಳ್ಳಲು ಅಗತ್ಯವಿರುವ ನಿಮ್ಮ ವಸ್ತುಗಳನ್ನು ನೀವು ಇರಿಸಬಹುದು.

ಹೋಟೆಲ್ ಕೊಠಡಿಗಳಲ್ಲಿ ಯಾವಾಗಲೂ ಬಿಳಿ ಬೆಡ್‌ಶೀಟ್‌ಗಳನ್ನು ಏಕೆ ಹಾಕಲಾಗುತ್ತದೆ, ಅಲ್ಲಿನ ಹಾಸಿಗೆಗಳಿಗೆ ಸಂಬಂಧಿಸಿದ ರಹಸ್ಯಗಳನ್ನು ತಿಳಿಯಿರಿ
ಬೇರೆ ಬಣ್ಣದ ಬೆಡ್​ಶೀಟ್​ಗಳನ್ನು ಹಾಸಿದರೆ ಅದರ ಸ್ವಚ್ಛತೆ ಬಗ್ಗೆ ನಮಗೆ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ, ಅದೇ ಬಿಳಿ ಬಟ್ಟೆಯಾದರೆ ಕೊಳೆಯು ಸುಲಭವಾಗಿ ಕಾಣುತ್ತದೆ, ಹಾಗೂ ಬೆಡ್​ಬಗ್​ಗಳು ಆಗದಂತೆ ತಡೆಯಬಹುದು.

ಹೋಟೆಲ್​ ಟಬ್
ಹೋಟೆಲ್​ನಲ್ಲಿರುವ ಅತ್ಯಂತ ಕೊಳಕು ಸ್ಥಳಗಳ ಪಟ್ಟಿಯನ್ನು ಮಾಡಿದರೆ, ಅದರಲ್ಲಿ ಟಬ್​ ಕೂಡ ಒಂದು ಟೆಕ್ಸಾಸ್ ವಿಶ್ವವಿದ್ಯಾನಿಲಯದ ಪಟ್ಟಿಯ ಪ್ರಕಾರ, ಮಾನವನ ಮಲದಿಂದ ಹೊರಹೊಮ್ಮುವ ಬ್ಯಾಕ್ಟೀರಿಯಾಗಳು 95 ಪ್ರತಿಶತ ಹೋಟೆಲ್ ಸ್ನಾನದ ಟಬ್​ಗಳಲ್ಲಿ ಇರುತ್ತದೆ.