ನೀವು ಹೋಟೆಲ್ನಲ್ಲಿ ಉಳಿದುಕೊಳ್ತೀರಾ? ರೂಂನಲ್ಲಿರುವ ಈ ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸಿ
ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲಾ ಒಂದು ಕಾರಣದಿಂದ ಹೋಟೆಲ್ನಲ್ಲಿ ಉಳಿಯುವ ಸಂದರ್ಭ ಬಂದೇ ಬರುತ್ತದೆ
ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲಾ ಒಂದು ಕಾರಣದಿಂದ ಹೋಟೆಲ್ನಲ್ಲಿ ಉಳಿಯುವ ಸಂದರ್ಭ ಬಂದೇ ಬರುತ್ತದೆ. ಎಲ್ಲಾದರೂ ಟ್ರಿಪ್ಗೆ ಹೋಗುವಾಗ, ಒಂದು ದಿನ ಔಟಿಂಗ್ ಹೋಗಲು ಪ್ಲ್ಯಾನ್ ಮಾಡಿದ್ದರೆ ನೀವು ಹೋಟೆಲ್ನಲ್ಲಿ ಉಳಿದುಕೊಳ್ಳುತ್ತೀರಿ, ಹಾಗೆ ನೀವು ಹೋಟೆಲ್ಗೆ ಹೋದಾಗ ರೂಂನಲ್ಲಿ ಗಮನಿಸಬೇಕಾದ ಕೆಲವು ವಿಷಯಗಳ ಕುರಿತು ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ.
ನೀವು ಹೋಟೆಲ್ಗೆ ಹೋದರೆ ಮೊದಲು ಬೆಡ್, ಬೆಡ್ಶೀಟ್ ಸರಿ ಇದೆಯೇ, ಬಾತ್ರೂಂ ನೀಟ್ ಆಗಿದೆಯೇ, ಕೋಣೆಯ ಡೋರ್ಗಳ ಬಗ್ಗೆ ಯೋಚನೆ ಮಾಡ್ತೀರಿ ಆದರೆ ಇವೆಲ್ಲವನ್ನೂ ಹೊರತುಪಡಿಸಿ ನೀವು ಸೂಕ್ಷ್ಮವಾಗಿ ಗಮನಿಸಬೇಕಾದ ಕೆಲವು ವಸ್ತುಗಳಿವೆ.
ಗಾಜಿನ ಲೋಟಗಳನ್ನು ಗಮನಿಸಿ: ಅಲ್ಲೇ ಪಕ್ಕದಲ್ಲಿ ಟೇಬಲ್ ಮೇಲೆ ಇಟ್ಟಿರುವ ಗಾಜಿನ ಲೋಟಗಳನ್ನು ಗಮನಿಸಿ, ಎದುರಿಗೆ ಸ್ವಚ್ಛವಾಗಿ ಕಾಣಿಸಿದರೂ ಅದು ಶುಭ್ರವಾಗಿರುವುದಿಲ್ಲ, ಅದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಹೋಟೆಲ್ಗಳಲ್ಲಿ ಗಾಜಿನ ಲೋಟಗಳನ್ನು ಏಕೆ ಯಾವಾಗಲೂ ಪರೀಕ್ಷಿಸಬೇಕು?: ಈ ಗಾಜಿನ ಲೋಟಗಳು ನೋಡುವಷ್ಟು ಸ್ವಚ್ಛವಾಗಿಲ್ಲದಿರುವುದು ಇದರ ಹಿಂದಿನ ಕಾರಣ. ಹೆಚ್ಚಿನ ಸಂದರ್ಭಗಳಲ್ಲಿ, ಅವುಗಳನ್ನು ಸರಳವಾದ ನೀರಿನಿಂದ ಅರ್ಜೆಂಟ್ ಅಲ್ಲಿ ತೊಳೆಯಲಾಗುತ್ತದೆ ಮತ್ತು ಇನ್ನೊಂದು ಅತಿಥಿಗೆ ಅದನ್ನೇ ಇರಿಸಲಾಗುತ್ತದೆ.
ಅವುಗಳನ್ನು ಸ್ವಚ್ಛಗೊಳಿಸಲು ಸಿಬ್ಬಂದಿ ಕನಿಷ್ಠ ಸಮಯ ತೆಗೆದುಕೊಳ್ಳುತ್ತಾರೆ ಎಂಬುದು ಹಲವು ವರದಿಗಳಲ್ಲಿ ಬಹಿರಂಗವಾಗಿದೆ. ಅವುಗಳನ್ನು ಸರಳ ನೀರಿನಿಂದ ಸ್ವಚ್ಛಗೊಳಿಸಲಾಗುತ್ತದೆ, ಸಾದ ಬಟ್ಟೆಯಲ್ಲಿ ಒರೆಸಲಾಗುತ್ತದೆ, ಅದೇ ಬಟ್ಟೆಯಿಂದ ಬೇರೆ ಗ್ಲಾಸ್ಗಳನ್ನು ಕೂಡ ಒರೆಸಿರುತ್ತಾರೆ.
ಗಾಜಿನ ಗ್ಲಾಸ್ನಲ್ಲಿ ಕೈಗುರುತುಗಳು ಇವೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಹಾಗೇನಾದರೂ ಇದ್ದರೆ ಲೋಟವನ್ನು ಬದಲಾಯಿಸಿಕೊಡುವಂತೆ ಕೇಳಿ.
ಟಿವಿ ರಿಮೋಟ್: ಹೋಟೆಲ್ ಕೋಣೆಗಳಲ್ಲಿ ತುಂಬಾ ಕೊಳಕಾಗಿರುವ ವಸ್ತುವೆಂದರೆ ಅದು ರಿಮೋಟ್. ರಿಮೋಟ್ನ ಕೀಗಳಲ್ಲಿ ಸಿಲುಕಿಕೊಂಡಿರುವ ಧೂಳು ಕಣ್ಣಿಗೆ ಅಷ್ಟು ಸುಲಭವಾಗಿ ಗೋಚರಿಸುವುದಿಲ್ಲ.
ಬಾತ್ರೂಮ್ನಿಂದ ಬಂದವರು, ಹೊರಗಡೆಯಿಂದ ಬಂದವರು ರಿಮೋಟ್ ಅನ್ನು ಕೈತೊಳೆಯದೆ ನೇರವಾಗಿ ಮುಟ್ಟುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮೊದಲು ಅದನ್ನು ಕ್ಲೀನ್ ವೈಪ್ಸ್ಅಥವಾ ಸ್ಯಾನಿಟೈಜರ್ ಬಳಸಿ ಸ್ವಚ್ಛಗೊಳಿಸಬೇಕು. ಹೋಟೆಲ್ ಕೋಣೆಯಲ್ಲಿ ನೀವು ಈ ವಸ್ತುಗಳನ್ನು ಬಳಸುತ್ತಿದ್ದರೆ, ಮೊದಲು ಅವುಗಳನ್ನು ಸ್ವಚ್ಛಗೊಳಿಸಿ.