Monsoon Cravings: ತಂಪಾದ ವಾತಾವರಣದಲ್ಲಿ ಬಿಸಿಬಿಸಿ ಕರಿದ ತಿನಿಸುಗಳನ್ನು ತಿನ್ನಲು ಬಯಸುತ್ತೇವೆ ಏಕೆ? ವೈಜ್ಞಾನಿಕ ಕಾರಣ ಇಲ್ಲಿದೆ
ಮಳೆಗಾಲದಲ್ಲಿ ಹೆಚ್ಚಿನವರು ಪಕೋಡ, ಸಮೋಸ ಮುಂತಾದ ಬಿಸಿಬಿಸಿ ಕುರುಕುಲು ತಿಂಡಿಗಳನ್ನು ತಿನ್ನಲು ಬಯಸುತ್ತಾರೆ. ಇವುಗಳು ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ ಎಂದು ತಿಳಿದಿದ್ದರೂ ಸಹ, ಈ ತಿಂಡಿಗಳ ಬಯಕೆ ಎಂದಿಗೂ ಕಡಿಮೆಯಾಗುವುದಿಲ್ಲ. ಮಳೆಗಾಲದಲ್ಲಿ ಪಕೋಡಾ, ಸಮೋಸಗಳಂತಹ ಬಿಸಿಬಿಸಿ ಆಹಾರಗಳನ್ನು ಜನರು ತಿನ್ನಲು ಬಯಸುವುದರ ಹಿಂದೆ ವೈಜ್ಞಾನಿಕ ಕಾರಣವಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಿದ್ದರೆ ಆ ವೈಜ್ಞಾನಿಕ ಕಾರಣ ಏನೆಂಬುದನ್ನು ನೋಡೋಣ.
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರು ಸಾಕಾಗುವುದಿಲ್ಲ. ಈ ಕಾರಣದಿಂದ ವೈದ್ಯರು ಬೀದಿಬದಿಯಲ್ಲಿ ಮಾರಾಟ ಮಾಡುವ ಸಮೋಸಾ, ಪಕೋಡಾ, ಬಜ್ಜಿ, ಬೋಂಡಾ ಇತ್ಯಾದಿ ಎಣ್ಣೆಯಲ್ಲಿ ಕರಿದ ತಿನಿಸುಗಳಿಂದ ಈ ಸಮಯದಲ್ಲಿ ದೂರವಿರಲು ಸಲಹೆ ನೀಡುತ್ತಾರೆ. ಆದರೂ ಮಳೆಗಾಲದಲ್ಲಿ ತಂಪಾದ ವಾತಾವರಣದಲ್ಲಿ ಹೆಚ್ಚಿನ ಜನರನ್ನು ಪಕೋಡಾ, ಸಮೋಸಾಗಳಂತಹ ಏನಾದರೂ ಬಿಸಿಬಿಸಿಯಾಗಿ ಕರಿದ ತಿಂಡಿಗಳನ್ನು ತಿನ್ನಬೇಕೆಂದು ಬಯಸುತ್ತಾರೆ. ಮಳೆಗಾಲದಲ್ಲಿ ಈ ಬಯಕೆ ಉಂಟಾಗಲು ಒಂದು ವೈಜ್ಞಾನಿಕ ಕಾರಣವಿದೆಯೆಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಬಗ್ಗೆ ಫಿಟ್ನೆಸ್ ಮತ್ತು ನ್ಯೂಟ್ರಿಷನಲ್ ಸೈಂಟಿಸ್ಟ್ ಆಗಿರುವ ಡಾ. ಸಿದ್ಧಾಂತ್ ಭಾರ್ಗವ್ ಅವರು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ
ಮಳೆಗಾಲದಲ್ಲಿ ನಾವು ಕರಿದ ತಿನಿಸನ್ನು ತಿನ್ನಲು ಏಕೆ ಬಯಸುತ್ತೇವೆ?
ಮಳೆಗಾಲದಲ್ಲಿ ಎಣ್ಣೆಯಲ್ಲಿ ಕರಿದ ಆಹಾರಗಳ ಕಡುಬಯಕೆಗಳ ಹಿಂದಿನ ಕಾರಣವೇನೆಂಬುದನ್ನು ಡಾ. ಸಿದ್ಧಾಂತ ಭಾರ್ಗವ ಬಹಿರಂಗಪಡಿಸಿದ್ದಾರೆ: ಮಳೆಗಾಲದ ಸಮಯದಲ್ಲಿ ನಮ್ಮ ಸಂತೋಷದ ಹಾರ್ಮೋನು ಆಗಿರುವ ಸೆರೊಟೋನಿನ್ ಹಾರ್ಮೋನಿನ ಉತ್ಪತ್ತಿ ಕಡಿಮೆಯಿರುತ್ತದೆ. ಸರಿಯಾದ ಸೂರ್ಯನ ಬೆಳಕು ನಮ್ಮ ಮೈ ಮೇಲೆ ಬೀಳದೆ ಇರುವುದು ಇದಕ್ಕೆ ಕಾರಣ. ಇದು ದೇಹದಲ್ಲಿ ವಿಟಮಿನ್ ಡಿ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕೊರತೆಗಳಿಗೆ ಹೊಂದಿಕೊಳ್ಳಲು ನಮ್ಮ ದೇಹವು ಕಾರ್ಬೋಹೈಡ್ರೇಟ್ ಅಂಶವನ್ನು ಬಯಸುತ್ತದೆ, ಏಕೆಂದರೆ ನಮ್ಮ ದೇಹದಲ್ಲಿ ಸಿರೋಟೋನಿನ್ ಮಟ್ಟವನ್ನು ಹೆಚ್ಚಿಸಲು ಕಾರ್ಬೋಹೈಡ್ರೇಟ್ ಸಹಾಯ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಕರಿದ ಆಹಾರಗಳನ್ನು ಸೇವಿಸುವುದರಿಂದ ಅದು ನಮಗೆ ಆರಾಮದಾಯಕ ಭಾವನೆಯನ್ನು ಉಂಟುಮಾಡುತ್ತದೆ.
ಮಳೆಗಾಲದಲ್ಲಿ ನಾವು ಕರಿದ ಆಹಾರವನ್ನು ಸೇವಿಸಲು ಇಷ್ಟಪಡುತ್ತೇವೆ ಎಂಬುದನ್ನು ನೋಡುವುದಾದರೆ, ಮಳೆಯ ಸಮಯದಲ್ಲಿ ಕರಿದ ಮತ್ತು ಬಿಸಿಯಾದ ತಿನಿಸುಗಳ ಸೇವನೆಯು ನಮ್ಮನ್ನು ಆರಾಮದಾಯಕವನ್ನಾಗಿಸುತ್ತದೆ. ಅಲ್ಲದೆ ಪಕೋಡಾ, ಸಮೋಸಾ, ಬಜ್ಜಿಯಂತಹ ಕರಿದ ಆಹಾರ ಸೇವಿಸುವುದರಿಂದ ಮೆದುಳಿನಲ್ಲಿ ಡೋಪಮೈನ್ ಹಾರ್ಮೋನು ಬಿಡುಗೆಯಾಗುತ್ತದೆ. ಡೊಪಮೈನ್ ಸಂತೋಷದ ಹಾರ್ಮೋನು ಆಗಿದ್ದು, ಇದು ಇಂತಹ ಆಹಾರಗಳನ್ನು ಸೇವಿಸಿದಾಗ ನಮ್ಮನ್ನು ಆರಾಮದಾಯಕವನ್ನಾಗಿರಿಸುವುದು ಮಾತ್ರವಲ್ಲದೆ ನಮಗೆ ಸಂತೋಷದ ಭಾವನೆಯನ್ನು ಉಂಟುಮಾಡುತ್ತದೆ. ಆದ್ದರಿಂದ ನಾವು ಹೆಚ್ಚಾಗಿ ಮಳೆಗಾಲದಲ್ಲಿ ಇಂತಹ ಎಣ್ಣೆಯಲ್ಲಿ ಕರಿದ ತಿನಿಸುಗಳನ್ನು ತಿನ್ನಲು ಬಯಸುತ್ತೇವೆ. ಎಂದು ಡಾ. ಸಿದ್ಧಾಂತ ಭಾರ್ಗವ ಹೇಳುತ್ತಾರೆ.
ಇದನ್ನೂ ಓದಿ: ಶುಂಠಿ ಚಹಾ ಕುಡಿಯುವುದರಿಂದಾಗುವ ಆರೋಗ್ಯ ಪ್ರಯೋಜನಗಳು
ಮಾನ್ಸೂನ್ ಕಡುಬಯಕೆಗಳನ್ನು ಪೂರೈಸಲು ಆರೋಗ್ಯಕರ ಪರ್ಯಾಯಗಳು
ಎಣ್ಣೆಯಲ್ಲಿ ಕರಿದ ಆಹಾರವು ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೋರಿಯನ್ನು ಹೊಂದಿರುತ್ತದೆ. ಇದು ತೂಕ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಮೂಲಕ ನಮ್ಮ ಆರೋಗ್ಯವನ್ನು ಹಾನಿಗೊಳಿಸಬಹುದು. ಈ ಅನಗತ್ಯ ತೂಕ ಹೆಚ್ಚಳವನ್ನು ತಪ್ಪಿಸಲು, ನಿಮ್ಮ ರುಚಿಮೊಗ್ಗುಗಳನ್ನು ತೃಪ್ತಿಪಡಿಸಲು ಮತ್ತು ಸಂತೋಷದ ಹಾರ್ಮೋನುಗಳನ್ನು ಹೆಚ್ಚಿಸಲು ಆರೋಗ್ಯಕರ ಆಹಾರಗಳನ್ನು ಸೇವಿಸಬಹುದು ಎಂದು ಡಾ. ಸಿದ್ಧಾಂತ ಭಾರ್ಗವ ಸಲಹೆ ನೀಡಿದ್ದಾರೆ.
• ಜೋಳಕ್ಕೆ ಮಸಾಲೆ ಮತ್ತು ಬೆಣ್ಣೆಯನ್ನು ಹಾಕಿ ಅದನ್ನು ಹುರಿದು ಕಾರ್ನ್ ಚಾಟ್ ಮಾಡಿ ತಿನ್ನಬಹುದು.
• ಮೊಳಕೆ ಕಾಳುಗಳ ಸಲಾಡ್, ತರಕಾರಿ ಸಲಾಡ್ ಇತ್ಯಾದಿಗಳಿಗೆ ಮಸಾಲೆಯನ್ನು ಬೆರೆಸಿ ತಿನ್ನಬಹುದು.
• ಕೆಲವು ಆರೋಗ್ಯಕರ ತರಕಾರಿಯಿಂದ ಗರಿಗರಿಯಾದ ಸ್ಯಾಂಡ್ವಿಚ್ ಟೋಸ್ಟ್ ಮಾಡಿ ತಿನ್ನಬಹುದು.
• ಅಲ್ಲದೆ ಮಾನ್ಸೂನ್ ಕಡುಬಯಕಯನ್ನು ಪೌಷ್ಟಿದಾಯಕವಾದ ಡ್ರೈನಟ್ಸ್ ಮತ್ತು ಹಣ್ಣುಗಳನ್ನು ಸೇವಿಸುವ ಮೂಕ ತೃಪ್ತಿಪಡಿಸಿಕೊಳ್ಳಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: