ನೀವು ಹೋಟೆಲ್​ನಲ್ಲಿ ಉಳಿದುಕೊಳ್ತೀರಾ? ರೂಂನಲ್ಲಿರುವ ಈ ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸಿ

| Updated By: ನಯನಾ ರಾಜೀವ್

Updated on: Jul 25, 2022 | 3:56 PM

ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲಾ ಒಂದು ಕಾರಣದಿಂದ ಹೋಟೆಲ್​ನಲ್ಲಿ ಉಳಿಯುವ ಸಂದರ್ಭ ಬಂದೇ ಬರುತ್ತದೆ

ನೀವು ಹೋಟೆಲ್​ನಲ್ಲಿ ಉಳಿದುಕೊಳ್ತೀರಾ? ರೂಂನಲ್ಲಿರುವ ಈ ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸಿ
Glass
Follow us on

ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲಾ ಒಂದು ಕಾರಣದಿಂದ ಹೋಟೆಲ್​ನಲ್ಲಿ ಉಳಿಯುವ ಸಂದರ್ಭ ಬಂದೇ ಬರುತ್ತದೆ. ಎಲ್ಲಾದರೂ ಟ್ರಿಪ್​ಗೆ ಹೋಗುವಾಗ, ಒಂದು ದಿನ ಔಟಿಂಗ್ ಹೋಗಲು ಪ್ಲ್ಯಾನ್ ಮಾಡಿದ್ದರೆ ನೀವು ಹೋಟೆಲ್​ನಲ್ಲಿ ಉಳಿದುಕೊಳ್ಳುತ್ತೀರಿ, ಹಾಗೆ ನೀವು ಹೋಟೆಲ್​ಗೆ ಹೋದಾಗ ರೂಂನಲ್ಲಿ ಗಮನಿಸಬೇಕಾದ ಕೆಲವು ವಿಷಯಗಳ ಕುರಿತು ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ.

ನೀವು ಹೋಟೆಲ್​ಗೆ ಹೋದರೆ ಮೊದಲು ಬೆಡ್​, ಬೆಡ್​ಶೀಟ್ ಸರಿ ಇದೆಯೇ, ಬಾತ್​ರೂಂ ನೀಟ್​ ಆಗಿದೆಯೇ, ಕೋಣೆಯ ಡೋರ್​ಗಳ ಬಗ್ಗೆ ಯೋಚನೆ ಮಾಡ್ತೀರಿ ಆದರೆ ಇವೆಲ್ಲವನ್ನೂ ಹೊರತುಪಡಿಸಿ ನೀವು ಸೂಕ್ಷ್ಮವಾಗಿ ಗಮನಿಸಬೇಕಾದ ಕೆಲವು ವಸ್ತುಗಳಿವೆ.

ಗಾಜಿನ ಲೋಟಗಳನ್ನು ಗಮನಿಸಿ: ಅಲ್ಲೇ ಪಕ್ಕದಲ್ಲಿ ಟೇಬಲ್​ ಮೇಲೆ ಇಟ್ಟಿರುವ ಗಾಜಿನ ಲೋಟಗಳನ್ನು ಗಮನಿಸಿ, ಎದುರಿಗೆ ಸ್ವಚ್ಛವಾಗಿ ಕಾಣಿಸಿದರೂ ಅದು ಶುಭ್ರವಾಗಿರುವುದಿಲ್ಲ, ಅದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಹೋಟೆಲ್​ಗಳಲ್ಲಿ ಗಾಜಿನ ಲೋಟಗಳನ್ನು ಏಕೆ ಯಾವಾಗಲೂ ಪರೀಕ್ಷಿಸಬೇಕು?: ಈ ಗಾಜಿನ ಲೋಟಗಳು ನೋಡುವಷ್ಟು ಸ್ವಚ್ಛವಾಗಿಲ್ಲದಿರುವುದು ಇದರ ಹಿಂದಿನ ಕಾರಣ. ಹೆಚ್ಚಿನ ಸಂದರ್ಭಗಳಲ್ಲಿ, ಅವುಗಳನ್ನು ಸರಳವಾದ ನೀರಿನಿಂದ ಅರ್ಜೆಂಟ್​ ಅಲ್ಲಿ ತೊಳೆಯಲಾಗುತ್ತದೆ ಮತ್ತು ಇನ್ನೊಂದು ಅತಿಥಿಗೆ ಅದನ್ನೇ ಇರಿಸಲಾಗುತ್ತದೆ.

ಅವುಗಳನ್ನು ಸ್ವಚ್ಛಗೊಳಿಸಲು ಸಿಬ್ಬಂದಿ ಕನಿಷ್ಠ ಸಮಯ ತೆಗೆದುಕೊಳ್ಳುತ್ತಾರೆ ಎಂಬುದು ಹಲವು ವರದಿಗಳಲ್ಲಿ ಬಹಿರಂಗವಾಗಿದೆ.
ಅವುಗಳನ್ನು ಸರಳ ನೀರಿನಿಂದ ಸ್ವಚ್ಛಗೊಳಿಸಲಾಗುತ್ತದೆ, ಸಾದ ಬಟ್ಟೆಯಲ್ಲಿ ಒರೆಸಲಾಗುತ್ತದೆ, ಅದೇ ಬಟ್ಟೆಯಿಂದ ಬೇರೆ ಗ್ಲಾಸ್​​ಗಳನ್ನು ಕೂಡ ಒರೆಸಿರುತ್ತಾರೆ.

ಗಾಜಿನ ಗ್ಲಾಸ್​ನಲ್ಲಿ ಕೈಗುರುತುಗಳು ಇವೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಹಾಗೇನಾದರೂ ಇದ್ದರೆ ಲೋಟವನ್ನು ಬದಲಾಯಿಸಿಕೊಡುವಂತೆ ಕೇಳಿ.

ಟಿವಿ ರಿಮೋಟ್​: ಹೋಟೆಲ್​ ಕೋಣೆಗಳಲ್ಲಿ ತುಂಬಾ ಕೊಳಕಾಗಿರುವ ವಸ್ತುವೆಂದರೆ ಅದು ರಿಮೋಟ್. ರಿಮೋಟ್​ನ ಕೀಗಳಲ್ಲಿ ಸಿಲುಕಿಕೊಂಡಿರುವ ಧೂಳು ಕಣ್ಣಿಗೆ ಅಷ್ಟು ಸುಲಭವಾಗಿ ಗೋಚರಿಸುವುದಿಲ್ಲ.

ಬಾತ್​ರೂಮ್​ನಿಂದ ಬಂದವರು, ಹೊರಗಡೆಯಿಂದ ಬಂದವರು ರಿಮೋಟ್​ ಅನ್ನು ಕೈತೊಳೆಯದೆ ನೇರವಾಗಿ ಮುಟ್ಟುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮೊದಲು ಅದನ್ನು ಕ್ಲೀನ್ ವೈಪ್ಸ್​ಅಥವಾ ಸ್ಯಾನಿಟೈಜರ್ ಬಳಸಿ ಸ್ವಚ್ಛಗೊಳಿಸಬೇಕು. ಹೋಟೆಲ್ ಕೋಣೆಯಲ್ಲಿ ನೀವು ಈ ವಸ್ತುಗಳನ್ನು ಬಳಸುತ್ತಿದ್ದರೆ, ಮೊದಲು ಅವುಗಳನ್ನು ಸ್ವಚ್ಛಗೊಳಿಸಿ.