ಜೇನು ನೊಣಗಳು ನೋಡಲು ಚಿಕ್ಕದಾಗಿರಬಹುದು. ಮನುಷ್ಯನ ಜೀವನದಲ್ಲಿ ಜೇನುಗಳ ಪಾತ್ರವು ಅಗಾಧವಾದದ್ದು. ಜೇನುನೊಣಗಳು ಜೇನನ್ನು ಮಾತ್ರ ಸವಿಯಲು ನೀಡುವುದಿಲ್ಲ. ಬದಲಾಗಿ ನಾವು ಸೇವಿಸುವ ಹಣ್ಣುಗಳು, ತರಕಾರಿಗಳು ಪರಾಗ ಸ್ಪರ್ಶದಿಂದ ಮಾತ್ರ ಸಾಧ್ಯವಾಗಿದೆ. ಆದರೆ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಜೇನುನೊಣಗಳ ಸಂತತಿಯು ನಾಶವಾಗುತ್ತಿದೆ.
ಜೇನುಸಾಕಣೆಯ ಪ್ರವರ್ತಕ ಆಂಟನ್ ಜಾನ್ಸಾ 1734 ರಲ್ಲಿ ಸ್ಲೊವೇನಿಯಾದಲ್ಲಿ ಜನಿಸಿದರು. ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷವು ವಿಶ್ವ ಜೇನುನೊಣ ದಿನವೆಂದು ಆಚರಿಸಲಾಗುತ್ತದೆ. ಆದರೆ ವಿಶ್ವ ಜೇನುನೊಣ ದಿನದ ಉದ್ದೇಶ, ಪರಿಸರ ವ್ಯವಸ್ಥೆಯಲ್ಲಿ ಜೇನುನೊಣಗಳ ಪಾತ್ರವನ್ನು ಅಂಗೀಕರಿಸುವುದು. ಹೀಗಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು 2017 ರ ಡಿಸೆಂಬರ್‌ನಲ್ಲಿ ವಿಶ್ವ ಜೇನುನೊಣ ದಿನಾಚರಣೆಯ ಪ್ರಸ್ತಾಪವನ್ನು ಅಂಗೀಕರಿಸಿದವು. 2018 ರ ಮೇ 20 ರಂದು ವಿಶ್ವ ಜೇನುನೊಣ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು.
ಇದನ್ನೂ ಓದಿ: ಅಡುಗೆ ಮನೆಯಲ್ಲಿ ನೊಣಗಳ ಕಾಟಕ್ಕೆ ಇದುವೇ ಪರಿಹಾರ
ಪರಿಸರ ವ್ಯವಸ್ಥೆಯಲ್ಲಿ ಜೇನು ನೊಣಗಳು ಮತ್ತು ಇತರೆ ಪರಾಗಸ್ಪರ್ಶಗಳ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸುವುದು. ಈ ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಈ ಜೇನು ನೊಣಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ದಿನದಂದು ಸಮಾವೇಶಗಳು, ಸೆಮಿನಾರ್ಗಳು, ಜೇನು ಉತ್ಸವಗಳು, ಪ್ರದರ್ಶನಗಳು ಹೀಗೆ ಮುಂತಾದ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ