World Day For Audiovisual Heritage 2024: ಇಂದು ವಿಶ್ವ ಶ್ರವ್ಯ-ದೃಶ್ಯ ಪರಂಪರೆಯ ದಿನ; ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ

| Updated By: ಅಕ್ಷತಾ ವರ್ಕಾಡಿ

Updated on: Oct 27, 2024 | 11:36 AM

ಇಂದಿನ ಡಿಜಿಟಲ್‌ ಹಾಗೂ ತಂತ್ರಜ್ಞಾನದ ಯುಗದಲ್ಲಿ ಹಿಂದಿನ ಕಾಲದಲ್ಲಿದ್ದ ಟೇಪ್‌ಗಳು, ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್‌ಗಳಂತಹ ಅಡಿಯೊವಿಶುವಲ್‌ ವಸ್ತುಗಳು ಕಣ್ಮರೆಯಾಗಿತ್ತಿದೆ. ಹೀಗಿರುವಾಗ ಭವಿಷ್ಯದ ಪೀಳಿಗೆಗಾಗಿ ಹಳೆಯ ಹಾಗೂ ಕಳೆದುಹೋಗುತ್ತಿರುವ ಇಂತಹ ಆಡಿಯೋ-ವಿಡಿಯೋ ವಸ್ತುಗಳನ್ನು ಸಂರಕ್ಷಿಸುವ ಹಾಗೂ ಅವುಗಳ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್‌ 27 ರಂದು ವಿಶ್ವ ಶ್ರವ್ಯ-ದೃಶ್ಯ ಪರಂಪರೆಯ ದಿನವನ್ನು (World Day For Audiovisual Heritage) ಆಚರಿಸಲಾಗುತ್ತದೆ.

World Day For Audiovisual Heritage 2024: ಇಂದು ವಿಶ್ವ ಶ್ರವ್ಯ-ದೃಶ್ಯ ಪರಂಪರೆಯ ದಿನ; ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ
World Day For Audiovisual Heritage
Follow us on

ಈ ಡಿಜಿಟಲ್‌ ಯುಗದಲ್ಲಿ ವಿಡಿಯೋ ಆಡಿಯೋ ರೆಕಾರ್ಡಿಂಗ್‌ ಎಲ್ಲವೂ ತುಂಬಾನೇ ಸುಲಭವಾಗಿದೆ. ಆದರೆ ಹಿಂದೆಲ್ಲಾ ಚಲನ ಚಿತ್ರಗಳು, ದೂರದರ್ಶನ, ರೆಡಿಯೋ ಕಾರ್ಯಕ್ರಮಗಳಲ್ಲಿ ವಿಡಿಯೋ ಆಡಿಯೋ ರೆಕಾರ್ಡಿಂಗ್‌ ಮಾಡುವುದು ಅಷ್ಟು ಸಲುಭದ ಕೆಲಸವಾಗಿರಲಿಲ್ಲ. ಕಾಲ ಮುಂದುವರೆದಂತೆ ಹಿಂದೆಲ್ಲಾ ಇದ್ದ ಆಡಿಯೋ-ವಿಡಿಯೋ ಸಾಧನಗಳು ಕ್ಷೀಣಿಸುತ್ತಾ ಬರುತ್ತಿವೆ. ಹೌದು ಹಿಂದಿನ ಕಾಲದಲ್ಲಿದ್ದ ಟೇಪ್‌ಗಳು, ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್‌ಗಳಂತಹ ಅಡಿಯೊವಿಶುವಲ್‌ ವಸ್ತುಗಳು ಕಣ್ಮರೆಯಾಗಿತ್ತಿದೆ. ಹೀಗಿರುವಾಗ ಭವಿಷ್ಯದ ಪೀಳಿಗೆಗಾಗಿ ಹಳೆಯ ಹಾಗೂ ಕಳೆದುಹೋಗುತ್ತಿರುವ ಇಂತಹ ಇತಿಹಾಸದ ವಸ್ತುಗಳನ್ನು ಸಂಗ್ರಹಿಸಿ ಮತ್ತು ಸಂರಕ್ಷಿಸುವ ಸಲುವಾಗಿ ವಿಶ್ವಸಂಸ್ಥೆಯ ಯುನೆಸ್ಕೋ (UNESCO) ಪ್ರತಿವರ್ಷ ಅಕ್ಟೋಬರ್‌ 27 ರಂದು ವಿಶ್ವ ಶ್ರವ್ಯ ದೃಶ್ಯ ಪರಂಪರೆಯ ದಿನವನ್ನು (World Day For Audiovisual Heritage) ಆಚರಿಸುತ್ತಿದೆ.

ವಿಶ್ವ ಶ್ರವ್ಯ-ದೃಶ್ಯ ದಿನದ ಇತಿಹಾಸ:

ಅಕ್ಟೋಬರ್‌ 27, 1980 ರಲ್ಲಿ ಸೆರ್ಬಿಯಾದ ಬೆಲ್‌ಗ್ರೇಟ್‌ನಲ್ಲಿ ನಡೆದ ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಯುನೆಸ್ಕೋದ (UNESCO) 21 ನೇ ಸಾಮಾನ್ಯ ಸಭೆಯಲ್ಲಿ, ಆಡಿಯೋವಿಶುವಲ್‌ ಸಂರಕ್ಷಣೆಗಾಗಿ ಒಂದು ಪ್ರಮುಖ ಶಿಫಾರಸ್ಸನ್ನು ಅಂಗೀಕರಿಸಲಾಯಿತು. 2005 ರಲ್ಲಿ ಯುನೆಸ್ಕೋದ ಜನರಲ್‌ ಕಾನ್ಫರೆನ್ಸ್‌ನ 33 ನೇ ಅಧಿವೇಶನವು 1980 ರ ಶಿಫಾರಸಿನ 25 ನೇ ವಾರ್ಷಿಕೋತ್ಸವದ ನೆನಪಿಗಾಗಿ ಅಕ್ಟೋಬರ್‌ 27 ನ್ನು ವಿಶ್ವ ಶ್ರವ್ಯ-ದೃಶ್ಯ ಪರಂಪರೆಯ (World Day For Audiovisual Heritage) ದಿನವೆಂದು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್‌ 27 ರಂದು ಚಲನಚಿತ್ರ, ಟಿವಿ, ರೆಡಿಯೋ, ಪ್ರಿಂಟ್‌ಗಳಂತಹ ಶ್ರವ್ಯ-ದೃಶ್ಯ ಮಾಧ್ಯಮಗಳನ್ನು ಸಂರಕ್ಷಿಸುವ ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಶ್ರವ್ಯ-ದೃಶ್ಯ ಪರಂಪರೆಯ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಇನ್ಮುಂದೆ ಈ AI ಕ್ಯಾಲ್ಕುರೇಟರ್ ಮೂಲಕ ಸಾವಿಗೆ ಎಷ್ಟು ಹತ್ತಿರದಲ್ಲಿದ್ದೇವೆ ಎಂದು ತಿಳಿಯಬಹುದು

ವಿಶ್ವ ಶ್ರವ್ಯ-ದೃಶ್ಯ ಪರಂಪರೆಯ ದಿನದ ಮಹತ್ವ:

ಇಂದಿನ ಡಿಜಿಟಲ್‌ಹಾಗೂ ವರ್ಚುವಲ್ ಯುಗದಲ್ಲಿ ಹಿಂದಿನ ಕಾಲದಲ್ಲಿದ್ದ ಟೇಪ್‌ಗಳು, ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್‌ಗಳಂತಹ ಅಡಿಯೊವಿಶುವಲ್‌ ವಸ್ತುಗಳು ಕಣ್ಮರೆಯಾಗುತ್ತಿದೆ. ಇಂತಹ ಕಳೆದುಹೋಗುತ್ತಿರುವ ಐತಿಹಾಸಿಕ ವಸ್ತುಗಳನ್ನು ಸಂರಕ್ಷಿಸಲು ಮತ್ತು ಈ ಮೌಲ್ಯಯುತ ವಸ್ತುಗಳ ಮಹತ್ವದ ಬಗ್ಗೆ ಮುಂದಿನ ಪೀಳಿಗೆ ತಿಳಿಸಿಕೊಡಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ ಈ ವಸ್ತುಗಳು ಅಮೂಲ್ಯವಾದ ಶೈಕ್ಷಣಿಕ ಸಂಪನ್ಮೂಲಗಳಾಗಿವೆ. ಹೌದು ಇದು ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಇತಿಹಾಸದಲ್ಲಿ ಆಸಕ್ತಿಯನ್ನು ಹೊಂದಿರುವವರಿಗೆ ಹಿಂದಿನ ಕಾಲದಲ್ಲಿ ಆಡಿಯೋ-ವಿಶುವಲ್‌ ಹೇಗೆ ಕಾರ್ಯ ನಿರ್ವಹಿಸುತ್ತಿತ್ತು, ಮತ್ತು ಆ ವಸ್ತುಗಳು ಹೇಗಿದ್ದವು ಎಂಬುದನ್ನು ತಿಳಿದುಕೊಳ್ಳಲು ಅನು ಮಾಡಿಕೊಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ