World Jellyfish Day 2025: ಸಾಗರ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಜೆಲ್ಲಿ ಮೀನುಗಳ ಪಾತ್ರ ಅಪಾರ

ಆಳ ಸಮುದ್ರದಲ್ಲಿ ಹಲವಾರು ಬಗೆಯ ಜಲಚರಗಳಿವೆ. ಅವುಗಳಲ್ಲಿ ಜೆಲ್ಲಿ ಫಿಶ್‌ಗಳು ಕೂಡ ಒಂದು. ಮೆದುಳು ಮತ್ತು ಹೃದಯವೇ ಇಲ್ಲದ ಈ ಜೀವಿಗಳು ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಇವುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ನವೆಂಬರ್‌ 03 ರಂದು ವಿಶ್ವ ಜೆಲ್ಲಿ ಮೀನು ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.

World Jellyfish Day 2025: ಸಾಗರ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಜೆಲ್ಲಿ ಮೀನುಗಳ ಪಾತ್ರ ಅಪಾರ
ವಿಶ್ವ ಜೆಲ್ಲಿ ಫಿಶ್‌ ದಿನ
Image Credit source: Unsplash

Updated on: Nov 03, 2025 | 9:33 AM

ಸಮುದ್ರದಲ್ಲಿ ದೈತ್ಯ ಜಲಚರಗಳ ಜೊತೆಗೆ ಸಣ್ಣಪುಟ್ಟ ಜಲ ಜೀವಿಗಳು ಕೂಡ ವಾಸಿಸುತ್ತವೆ. ಇವುಗಳಲ್ಲಿ ಜೆಲ್ಲಿ ಫಿಶ್‌ಗಳೂ (Jellyfish) ಒಂದು. ಹೆಚ್ಚಾಗಿ ಆಳ ಸಮುದ್ರದಲ್ಲಿ ಜೀವಿಸುವ ಈ ಅಕಶೇರುಕ  ಜೀವಿಗಳಿಗೆ ಬೆನ್ನುಮೂಳೆ, ಮೆದುಳು ಮತ್ತು ಹೃದಯವೇ ಇಲ್ಲ. ಪ್ರಪಂಚದಾದ್ಯಂತ ಸುಮಾರು 1500 ಕ್ಕೂ ಹೆಚ್ಚು ಜಾತಿಯ ಜೆಲ್ಲಿ ಫಿಶ್‌ಗಳಿದ್ದು, ಇವುಗಳು ಸಾಗರ ಪರಿಸರ ವ್ಯವಸ್ಥೆಯನ್ನು ಕಾಪಾಡುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಹೌದು ಒಂದು ಲೆಕ್ಕದಲ್ಲಿ ಈ ಜೆಲ್ಲಿ  ಫಿಶ್‌ಗಳು ಸಮುದ್ರದಲ್ಲಿನ ಫಿಲ್ಟರ್‌ ಫೀಡರ್‌ಗಳಾಗಿವೆ. ಅಂದರೆ ಇವುಗಳು ಸಮುದ್ರದಲ್ಲಿ ತೇಳುವ ಪ್ಲ್ಯಾಂಕ್ಟನ್‌ ಮತ್ತು ಇತರ ಸೂಕ್ಷ್ಮ ಜೀವಿಗಳನ್ನು ತಿನ್ನುವ ಮೂಲಕ ನೀರನ್ನು ಸ್ವಚ್ಛವಾಗಿರಿಸಲು ಸಹಾಯ ಮಾಡುತ್ತವೆ. ಈ ಮೂಲಕ ಸಮುದ್ರದ ಪರಿಸರ ವ್ಯವಸ್ಥೆಯನ್ನು ಕಾಪಾಡಲು ಸಹಾಯ ಮಾಡುತ್ತವೆ. ಹಾಗಾಗಿ ಜೆಲ್ಲಿ ಮೀನುಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರತಿವರ್ಷ ನವೆಂಬರ್‌ 03 ರಂದು ವಿಶ್ವ ಜೆಲ್ಲಿ ಮೀನು ದಿನವನ್ನು ಆಚರಿಸಲಾಗುತ್ತದೆ.

ಜೆಲ್ಲಿ ಮೀನು ದಿನದ ಇತಿಹಾಸವೇನು?

ಜೆಲ್ಲಿ ಫಿಶ್‌ಗಳು ಹೆಚ್ಚಾಗಿ ದಕ್ಷಿಣ ಗೋಳಾರ್ಧದಲ್ಲಿನ ಸಮುದ್ರದಲ್ಲಿ ವಾಸಿಸುತ್ತವೆ. ಆದರೆ ಹವಾಮಾನವು ಬದಲಾಗುತ್ತಿದ್ದಂತೆ ಇವುಗಳು ದಕ್ಷಿಣದಿಂದ ಉತ್ತರ ಗೋಳಾರ್ಧದ ಕಡೆಗೆ ವಲಸೆ ಹೋಗುತ್ತವೆ.  ದಕ್ಷಿಣ ಗೋಳಾರ್ಧದಲ್ಲಿ ನವೆಂಬರ್ ತಿಂಗಳಲ್ಲಿ ವಸಂತಕಾಲ ಆರಂಭವಾಗುತ್ತದೆ. ಈ ಸಮಯದಲ್ಲಾಗುವ ಹವಮಾನ ಬದಲಾವಣೆಯ ಕಾರಣದಿಂದಾಗಿ ಜೆಲ್ಲಿ ಫಿಶ್‌ಗಳ ಸಮೂಹ ದಕ್ಷಿಣ ಗೋಳಾರ್ಧದಿಂದ ಉತ್ತರ ಗೋಳಾರ್ಧದ ಸಮುದ್ರ ತೀರಕ್ಕೆ ವಲಸೆ ಹೋಗುತ್ತವೆ.  ಈ ಕಾರಣದಿಂದಾಗಿ ನವೆಂಬರ್ 2014 ರಿಂದ ವಿಶ್ವ ಜೆಲ್ಲಿ ಫಿಶ್ ದಿನವನ್ನು ಆಚರಿಸಬೇಕು ಎಂದು ತೀರ್ಮಾನಿಸಲಾಯಿತು. ಜೆಲ್ಲಿ ಮೀನುಗಳ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿದ ಜರ್ಮನ್ ಜೀವಶಾಸ್ತ್ರಜ್ಞ ಡಾ. ಅರ್ನ್ಸ್ಟ್ ಹೆಕೆಲ್ ಅವರ ಜನ್ಮದಿನವಾದ ನವೆಂಬರ್ 3 ರಂದು ಜೆಲ್ಲಿ ಮೀನು ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ  ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಸಸ್ಯಾಧಾರಿತ ಆಹಾರ ಕ್ರಮದ ಪಾತ್ರ ಅಪಾರ

ಇದನ್ನೂ ಓದಿ
ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಸಸ್ಯಾಧಾರಿತ ಆಹಾರ ಕ್ರಮದ ಪಾತ್ರ
ಖರ್ಚು ತಗ್ಗಿಸಿ ಭವಿಷ್ಯದ ಭದ್ರ ಬುನಾದಿಗಾಗಿ ಹಣ ಕೂಡಿಡಿ
ಪೊಲೀಸ್‌ ಸಂಸ್ಮರಣಾ ದಿನವನ್ನು ಏಕೆ ಪ್ರಾರಂಭಿಸಲಾಯಿತು?
ವಿಶ್ವ ಅಂಕಿಅಂಶ ದಿನವನ್ನು ಆಚರಿಸುವ ಉದ್ದೇಶವೇನು?

ವಿಶ್ವ ಜೆಲ್ಲಿ ಮೀನು ದಿನದ ಮಹತ್ವವೇನು?

  • ಜೆಲ್ಲಿ ಮೀನುಗಳು ಫಿಲ್ಟರ್‌ ಪೀಡರ್‌ಗಳಾಗಿ ಕಾರ್ಯ ನಿವರ್ಹಿಸುವ ಮೂಲಕ ಸಮುದ್ರ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಟ್ಟುಕೊಳ್ಳುವ ಮೂಲಕ ಸಾಗರವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ. ಈ ವಿಷಯದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ.
  • ಹವಾಮಾನ ಬದಲಾವಣೆ, ಅತಿಯಾದ ಮೀನುಗಾರಿಕೆ ಮತ್ತು ಮಾಲಿನ್ಯ ಈ ಎಲ್ಲಾ ಸಂಗತಿಗಳು ಜೆಲ್ಲಿಫಿಶ್ ಸಂತತಿಗೆ ಬೆದರಿಕೆಯಾಗಿ ಪರಿಣಮಿಸಿದ್ದು, ಹಾಗಾಗಿ ಅವುಗಳು ಮತ್ತು ಆವಾಸಸ್ಥಾನದ ರಕ್ಷಣೆ ಮಾಡುವುದು ಎಷ್ಟು ಮುಖ್ಯ ಎಂದು ಈ ದಿನ ಜನರಿಗೆ ತಿಳುವಳಿಕೆಯನ್ನು ಮೂಡಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ