World Milk Day 2023: ಹಾಲಿನಿಂದ 5 ಭಾರತೀಯ ಭಕ್ಷ್ಯಗಳನ್ನು ತಯಾರಿಸಬಹುದು? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 01, 2023 | 2:11 PM

ಇಂದು ವಿಶ್ವ ಹಾಲು ದಿನ. ಹಾಲು ನಮ್ಮ ದೈನಂದಿನ ಆಹಾರದ ಅವಿಭಾಜ್ಯ ಅಂಗವಾಗಿದ್ದು, ಹಲವಾರು ರೀತಿಯಲ್ಲಿ ಉಪಯೋಗವಾಗುತ್ತದೆ. ಜೊತೆಗೆ ಇದರಿಂದ ಅನೇಕಾನೇಕ ಪದಾರ್ಥಗಳನ್ನು ಮಾಡಬಹುದಾಗಿದ್ದು ಇಲ್ಲಿ 5 ರುಚಿಕರವಾದ ಹಾಲು ಆಧಾರಿತ ಭಾರತೀಯ ಭಕ್ಷ್ಯಗಳ ಬಗ್ಗೆ ಮಾಹಿತಿ ನೀಡಲಾಗಿದೆ.

World Milk Day 2023: ಹಾಲಿನಿಂದ 5 ಭಾರತೀಯ ಭಕ್ಷ್ಯಗಳನ್ನು ತಯಾರಿಸಬಹುದು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಹಾಲು ಒಂದು ರೀತಿಯ ಬಹುಮುಖ ಪದಾರ್ಥ. ಜೊತೆಗೆ ದೈನಂದಿನ ಆಹಾರದ ಅವಿಭಾಜ್ಯ ಅಂಗವಾಗಿದ್ದು, ಹಲವಾರು ರೀತಿಯಲ್ಲಿ ಉಪಯೋಗವಾಗುತ್ತದೆ. ಅದಲ್ಲದೆ ಇದರಿಂದ ಅನೇಕಾನೇಕ ರುಚಿ ರುಚಿಯಾದ ಪದಾರ್ಥಗಳನ್ನು ಮಾಡಬಹುದಾಗಿದೆ. ಹೆಚ್ಚಿನ ಭಾರತೀಯ ಸಿಹಿ ತಿಂಡಿಗಳು ಮತ್ತು ಕೆಲವು ರುಚಿಕರವಾದ ಪದಾರ್ಥಗಳಲ್ಲಿ ಹಾಲು ಒಂದು ಪ್ರಮುಖ ಭಾಗವಾಗಿದೆ. ಆದ್ದರಿಂದ ನಾವು ಹಾಲಿನಿಂದ ಮಾಡಿದ 5 ರುಚಿಕರವಾದ ಭಾರತೀಯ ಭಕ್ಷ್ಯಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಇದನ್ನು ನೀವು ಮನೆಯಲ್ಲಿ ಮಾಡಬಹುದಾಗಿದೆ.

1. ಕಾಶ್ಮೀರಿ ಪನೀರ್:

ಈ ಅಧಿಕೃತ ಮತ್ತು ಮೂಲ ಕಾಶ್ಮೀರಿ ಪನೀರ್ ಕರಿಯನ್ನು ಮಾಡುವುದರಿಂದ ನಿಮ್ಮ ಡಿನ್ನರ್ ಟೇಬಲ್ ಎಲ್ಲರ ಗಮನ ಸೆಳೆಯುವುದರಲ್ಲಿ ಸಂಶಯವೇ ಇಲ್ಲ. ಹಾಲು ಮತ್ತು ಮಸಾಲೆಯ ಮಿಶ್ರಣ ಖಂಡಿತವಾಗಿಯೂ ಆಹಾರ ಪ್ರಿಯರಿಗೆ ಕಣ್ಣು, ಮನಸ್ಸಿಗೆ ಮುದ ನೀಡುತ್ತದೆ.

2. ಧನಿವಾಲ್ ಕೊರ್ಮಾ:

ಆಹಾರ ಪ್ರಿಯರಿಗೆ ಇದೊಂದು ಅದ್ಭುತ ರೆಸಿಪಿ. ಇದನ್ನು ಹಾಲು ಮತ್ತು ಕುರಿ ಮಾಂಸ ಬೆರೆಸಿ ತಯಾರಿಸಲಾಗುತ್ತದೆ. ಇದೊಂದು ವಿಶಿಷ್ಟ ರೀತಿಯ ಪ್ರಯೋಗವೆಂದರೂ ತಪ್ಪಾಗಲಾರದು. ಇದು ಹೊಸ ಹೊಸ ಖಾದ್ಯಗಳನ್ನು ಇಷ್ಟ ಪಡುವವರಿಗೆ ಹೇಳಿ ಮಾಡಿಸಿದ ಆಹಾರವಾಗಿದ್ದು, ವಿಲಕ್ಷಣ ಮಸಾಲೆಗಳು, ಮೊಸರು ಮತ್ತು ಸುವಾಸನೆಯುಕ್ತ ಕೇಸರಿ, ಹಾಲಿನಿಂದ ತುಂಬಿರುವ ಸೊಗಸಾದ ಪಲ್ಯ ಇದಾಗಿದ್ದು, ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾಗಿದೆ.

3. ಚಿಕನ್ ಹಾಲಿನ ಪಲ್ಯ:

ಇದು ಕೂಡ ನಿಮಗೆ ಹೊಸದೆನಿಸಬಹುದು. ಆದರೆ ಇದನ್ನು ಮಾಡುವ ವಿಧಾನ ತೀರಾ ಕಷ್ಟವೇನಲ್ಲ. ಚಿಕನ್ ಸುಂದರವಾಗಿ ಚಿನ್ನದ ಕಂದು ಬಣ್ಣಕ್ಕೆ ತಿರಗುವವರೆಗೆ ಬೆಯಿಸಿಕೊಂಡು ಬಳಿಕ, ಹಾಲು ಮತ್ತು ಸುವಾಸನೆಯುಕ್ತ ಗಿಡಮೂಲಿಕೆಗಳಿಂದ ತಯಾರಿಸಿದ ಬೆಣ್ಣೆಯಲ್ಲಿ ಮತ್ತಷ್ಟು ಬೇಯಿಸಿದರೆ ಚಿಕನ್ ಹಾಲಿನ ಪಲ್ಯ ತಯಾರಾಗುತ್ತದೆ. ಇದು ನಿಮಗೆ ನಿರಾಶೆ ಮಾಡಲಾರದು. ಕೆಲವರು ಚಿಕನ್ ಜೊತೆ ಹಾಲು ಬೆರೆಸುವುದಿಲ್ಲ ಆದರೆ ಈ ಖಾದ್ಯದಲ್ಲಿ ಬಳಸಬಹುದಾಗಿದ್ದು ಹಾಲಿನ ಜೊತೆಯಲ್ಲಿ ಸುವಾಸನೆಯುಕ್ತ ಗಿಡಮೂಲಿಕೆಗಳನ್ನು ಬೆರೆಸಲಾಗುತ್ತದೆ. ಹಾಗಾಗಿ ಇದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ.

ಇದನ್ನೂ ಓದಿ:World Milk Day 2023: ಕತ್ತೆ ಹಾಲಿನಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳು ಇಲ್ಲಿವೆ

4. ಜಫ್ರಾನಿ ಪುಲಾವ್:

ಕೆಲವರಿಗೆ ಅನ್ನವಿಲ್ಲದೆ ಊಟ ಸೇರುವುದಿಲ್ಲ. ಅನ್ನವಿಲ್ಲದೆ ಊಟ ಅಪೂರ್ಣ ಎನಿಸುತ್ತದೆ. ಅಂಥವರಿಗೆ ಯಲ್ಲಾದರೂ ಹೋದಲ್ಲಿ ಅಥವಾ ನೀವೇ ಮನೆಯಲ್ಲಿ ಕ್ಲಾಸಿಕ್ ಜಾಫ್ರಾನಿ ಪುಲಾವ್ ಮಾಡಿಕೊಳ್ಳಬಹುದು. ಇದನ್ನು ಒಣ ಹಣ್ಣುಗಳು, ಹಾಲು ಮತ್ತು ಕೇಸರಿಯನ್ನು ಸೇರಿಸಿ ಆಕರ್ಷಕ ಸುವಾಸನೆ ಬೀರುವ ಪುಲಾವ್ ಮಾಡಲಾಗುತ್ತದೆ. ತಾಜಾ ಹಾಲು ಉಪಯೋಗಿಸುವುದು ಉತ್ತಮ.

5. ಗುಲಾಬ್ ಸೆವಿಯಾನ್ ಖೀರ್:

ಖೀರ್ ಭಾರತದಲ್ಲಿ ಅತೀ ಹೆಚ್ಚು ಇಷ್ಟ ಪಡುವ ಸಿಹಿ ತಿಂಡಿಯಾಗಿದೆ. ವಿವಿಧ ಪದಾರ್ಥಗಳನ್ನು ಬಳಸಿಕೊಂಡು ಇದನ್ನು ಹಲವಾರು ರೀತಿಯಲ್ಲಿ ತಯಾರಿಸಬಹುದು. ವಿಶೇಷ ಸಂದರ್ಭಗಳಲ್ಲಿ ತಯಾರಿಸಲು ಹೇಳಿ ಮಾಡಿಸಿದಂತಿದ್ದು, ನೀವು ಯಾವುದೇ ಕಾರ್ಯಕ್ರಮದಲ್ಲೂ ಈ ಆಯ್ಕೆ ಇಟ್ಟು ಕೊಳ್ಳಬಹುದಾಗಿದೆ. ಜೊತೆಗೆ ಇದನ್ನು ಊಟದೊಂದಿಗೆ ಸವಿಯಲೂಬಹುದು. ಇವತ್ತು ವಿಶ್ವ ಹಾಲಿನ ದಿನವಾದ್ದರಿಂದ ನೀವು ಮನೆಯಲ್ಲಿ ಟ್ರೈ ಮಾಡಬಹುದಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: