ಇಂದು ಆಗಸ್ಟ್ 20 ವಿಶ್ವ ಸೊಳ್ಳೆ ದಿನ. ಈ ದಿನವು 1897ರಲ್ಲಿ ಬ್ರಿಟಿಷ್ ವೈದ್ಯರಾದ ರೊನಾಲ್ಡ್ ರಾಸ್ ಕಂಡು ಹಿಡಿದ ಆವಿಷ್ಕಾರವನ್ನು ಗುರುತಿಸಿದೆ. ಮನುಷ್ಯರಿಗೆ ಹೆಣ್ಣು ಸೊಳ್ಳೆಯ ಕಡಿತದಿಂದ ಮಲೇರಿಯಾ ರೋಗ ಹರಡುತ್ತದೆ ಎಂದು ಕಂಡು ಹಿಡಿದರು. ಗುಯ್ .. ಎಂದು ಕಿವಿಯ ಬಳಿಯೇ ಬಂದು ಧ್ವನಿ ಎತ್ತುತ್ತಾ ರಕ್ತ ಹೀರುವ ಸೊಳ್ಳೆಗಳಿಂದ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾದಂತಹ ಮಾರಣಾಂತಿಕ ರೋಗ ಹರಡುತ್ತದೆ. ಹೀಗಿರುವಾಗ ಈ ವರ್ಷದ ಥೀಮ್.. ಶೂನ್ಯ ಮಲೇರಿಯಾ ಪ್ರಕರಣಗಳನ್ನು ತಲುಪುವುದು. ಹಾಗಿರುವಾಗ ಸೊಳ್ಳೆಗಳಿಂದ ಹರಡುವ ರೋಗ ಸಮಸ್ಯೆಯನ್ನು ತಡೆಗಟ್ಟುವ ಕ್ರಮಗಳು ಈ ಕೆಳಗಿನಂತಿವೆ.
ಸೊಳ್ಳೆಗಳಿಂದ ಹರಡುವ ರೋಗಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಕೆಲವು ವಿಧಾನಗಳು ಇಲ್ಲಿವೆ:
ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ
ನೀರು ನಿಂತ ಸ್ಥಳಗಳು ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗಿದೆ. ಸೊಳ್ಳೆಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ತಪ್ಪಿಸಲು ನಿಮ್ಮ ಸುತ್ತಮುತ್ತಲಿನ ಸ್ಥಳ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ನೀವಿರುವ ಜಾಗ ಸ್ವಚ್ಛವಾಗಿದ್ದರೆ ಸೊಳ್ಳೆಗಳ ಮನೆಯೊಳಗೆ ಪ್ರವೇಶಿಸುವುದಿಲ್ಲ. ಇದರಿಂದ ಹರಡುವ ಅನೇಕ ರೋಗಗಳಿಂದ ದೂರವಿರಬಹುದು.
ಸೊಳ್ಳೆ ಪರದೆ ಬಳಕೆ
ಸೊಳ್ಳೆ ಕಡಿತದಿಂದ ಪರಿಹಾರ ಕಂಡುಕೊಳ್ಳಲು ಕ್ರೀಮ್ ಬಳಸಿ. ಸೊಳ್ಳೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸೊಳ್ಳೆ ಪರದೆಯನ್ನು ಉಪಯೋಗಿಸಿ. ಇವುಗಳು ನಿಮಗೆ ರಕ್ಷಣೆಗಳನ್ನು ನೀಡುತ್ತವೆ. ಜತೆಗೆ ರಾತ್ರಿಯಲ್ಲಿ ನಿಮಗೆ ಯಾವುದೇ ತೊಂದರೆಯಾಗದೇ ಚೆನ್ನಾಗಿ ನಿದ್ರೆ ಮಾಡಬಹುದು.
ಸಂಜೆಯಾಗುತ್ತಿದ್ದಂತೆಯೇ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ
ಸಾಮಾನ್ಯವಾಗಿ ರಾತ್ರಿ ವೇಳೆ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸುತ್ತದೆ. ಹಾಗಾಗಿ ನಿಮ್ಮನ್ನು ನೀವು ಸೊಳ್ಳೆಗಳ ಕಡಿತದಿಂದ ರಕ್ಷಿಸಿಕೊಳ್ಳಲು ಮನೆಯ ಕಿಟಕಿಯನ್ನು, ಬಾಗಿಲುಗಳನ್ನು ಮುಚ್ಚಿ. ಮನೆಯೊಳಗೆ ಗಾಳಿ- ಬೆಳಕು ಸರಿಯಾಗಿರುವಂತೆ ನೋಡಿಕೊಳ್ಳಿ. ಜತೆಗೆ ಯಾವಾಗಲೂ ಮನೆ ಸ್ವಚ್ಛವಾಗಿರುವಂತೆ ಕಾಯ್ದುಕೊಳ್ಳಿ.
ಇದನ್ನೂ ಓದಿ:
Health Tips: ಸೊಳ್ಳೆ ಕಡಿತದ ನಂತರ ಉಂಟಾಗುವ ಕಿರಿಕಿರಿಯಿಂದ ಹೊರಬರಲು ಈ 5 ಪದಾರ್ಥಗಳನ್ನು ಬಳಸಿ
ಜೈಲಿನಲ್ಲಿ ಸೊಳ್ಳೆ ಕಾಟ ತಾಳಲಾರದೆ ಒದ್ದಾಡಿದ ಮಾಜಿ ಮಿನಿಸ್ಟರ್, ರಾತ್ರಿ ಇಡೀ ನಿದ್ದೆ ಇಲ್ಲವಂತೆ