Chanakya Niti: ಇಂತಹ ಜೀವನ ಸಿಕ್ಕವರು ಮತ್ತೊಂದು ಸ್ವರ್ಗ ಬೇಕು ಎಂದು ಬಯಸುವುದಿಲ್ಲ; ಚಾಣಕ್ಯ ನೀತಿ ಇಲ್ಲಿದೆ

ಆಚಾರ್ಯ ಚಾಣಕ್ಯನ ನುಡಿಗಳನ್ನು ನೋಡಿದರೆ ಅದು ಕೆಲವೊಮ್ಮೆ ಕಟುಸತ್ಯ, ಅಥವಾ ಕಹಿ ಎಂದೂ ಕಾಣಿಸಬಹುದು. ಆದರೆ, ನೈಜವಾಗಿ ಅದು ನಿಜ ಜೀವನದ ದರ್ಶನ ಮಾಡಿಸುತ್ತದೆ. ಅಂತಹಾ ಕೆಲವು ವಿಚಾರಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ.

Chanakya Niti: ಇಂತಹ ಜೀವನ ಸಿಕ್ಕವರು ಮತ್ತೊಂದು ಸ್ವರ್ಗ ಬೇಕು ಎಂದು ಬಯಸುವುದಿಲ್ಲ; ಚಾಣಕ್ಯ ನೀತಿ ಇಲ್ಲಿದೆ
ಚಾಣಕ್ಯ ನೀತಿ
Follow us
TV9 Web
| Updated By: Skanda

Updated on: Aug 21, 2021 | 7:12 AM

ಆಚಾರ್ಯ ಚಾಣಕ್ಯ ಘನ ವಿದ್ವಾಂಸ ಆಗಿದ್ದ. ಆತ ಅರ್ಥಶಾಸ್ತ್ರ, ರಾಜನೀತಿ ಇತ್ಯಾದಿಗಳಲ್ಲಿ ಅಪಾರ ಜ್ಞಾನ ಹೊಂದಿದ್ದ. ಅದೇ ರೀತಿ ಸಾಮಾಜಿಕ ವಿಚಾರಗಳಲ್ಲಿ ಕೂಡ ಚಾಣಕ್ಯನಿಗೆ ಬಹಳಷ್ಟು ತಿಳುವಳಿಕೆ ಇತ್ತು. ತನ್ನ ಎಲ್ಲಾ ಜ್ಞಾನ ಸಂಪತ್ತನ್ನು ಚಾನಕ್ಯ ಸಮಾಜಕ್ಕೆ ನೀಡಿದ್ದಾನೆ. ಆತನ ನೀತಿ ಎಲ್ಲರಿಗೂ ಮಾರ್ಗದರ್ಶಿಯಾಗಿದೆ. ಚಾಣಕ್ಯನ ನೀತಿಗಳನ್ನು ಜನರು ತಿಳಿದು ಅದನ್ನು ಅಳವಡಿಸಲು ಪ್ರಯತ್ನಿಸಿದರೆ ಅಂತವರು ಖಂಡಿತವಾಗಿ ಜೀವನದಲ್ಲಿ ಯಶಸ್ವಿ ಆಗಬಹುದು.

ಚಾಣಕ್ಯ ಅಂತಹ ಹಲವು ಮಾರ್ಗದರ್ಶಿ ಸೂತ್ರಗಳನ್ನು ಚಾಣಕ್ಯ ನೀತಿ ಪುಸ್ತಕದಲ್ಲಿ ಬರೆದಿದ್ದಾನೆ. ಅದರಿಂದ ಇತರರ ಭವಿಷ್ಯ ಉತ್ತಮಗೊಳಿಸಬಹುದಾಗಿದೆ. ಆಚಾರ್ಯ ಚಾಣಕ್ಯನ ನುಡಿಗಳನ್ನು ನೋಡಿದರೆ ಅದು ಕೆಲವೊಮ್ಮೆ ಕಟುಸತ್ಯ, ಅಥವಾ ಕಹಿ ಎಂದೂ ಕಾಣಿಸಬಹುದು. ಆದರೆ, ನೈಜವಾಗಿ ಅದು ನಿಜ ಜೀವನದ ದರ್ಶನ ಮಾಡಿಸುತ್ತದೆ. ಅಂತಹಾ ಕೆಲವು ವಿಚಾರಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ. ಇಂತಹ ಜೀವನ ಸಿಕ್ಕರೆ ಮನುಷ್ಯನೊಬ್ಬ ಮತ್ತೊಂದು ಸ್ವರ್ಗ ಬೇಕು ಎಂದು ಬಯಸುವುದಿಲ್ಲ ಎಂದು ಹೇಳುತ್ತಾನೆ ಚಾಣಕ್ಯ.

1. ಕಲಿಯುಗದಲ್ಲಿ ಒಬ್ಬರಿಗೆ ನಿಜವಾದ ಸಂಪತ್ತು ಎಂದರೆ ಅದು ಅವರ ಮಕ್ಕಳು. ಇಂದಿನ ದಿನಮಾನದಲ್ಲಿ ಮಕ್ಕಳು ತಪ್ಪು ದಾರಿ ಹಿಡಿದರೆ, ಹೆತ್ತವರ ಮಾತು ಕೇಳದಿದ್ದರೆ, ಕಷ್ಟ ಕೊಟ್ಟರೆ ಅದುವೇ ಬಹುದೊಡ್ಡ ಸಂಕಷ್ಟ. ಅಂಥಾದ್ದರಲ್ಲಿ, ಮಕ್ಕಳು ಸುಸಂಸ್ಕೃತರಾಗಿ, ಹೆತ್ತವರಿಗೆ ವಿಧೇಯರಾಗಿ, ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡರೆ ಅದುವೇ ದೊಡ್ಡ ಭಾಗ್ಯ. ನಿಮ್ಮ ಮಕ್ಕಳು ನಿಮ್ಮ ಆಸ್ತಿ. ಹೀಗೆ ಸಂಪತ್ತು ಅನಿಸಲಿರುವ ಮಕ್ಕಳು ಇದ್ದರೆ ಅವರಿಗೆ ಮತ್ತೊಂದು ಸ್ವರ್ಗ ಬೇಕೆಂದು ಅನಿಸದು ಎನ್ನುತ್ತಾನೆ ಚಾಣಕ್ಯ.

2. ಮಹಿಳೆ ಅಥವಾ ಹೆಣ್ಣು ಮನೆಯನ್ನು ಕಟ್ಟಲೂ ಬಲ್ಲಳು, ಕೆಡವಲೂ ಬಲ್ಲಳು ಎಂದು ಹೇಳುತ್ತಾರೆ. ಮನೆಗೆ ಉತ್ತಮಳಾಗಿ ಇರುವ ಹೆಂಡತಿ ಮನೆಯ ಬಹುದೊಡ್ಡ ಆಸ್ತಿ. ಅಂತಹಾ ಹೆಣ್ಣು ಮನೆಯನ್ನು, ಮನೆಯವರನ್ನು ಒಟ್ಟಾಗಿ ಇಟ್ಟಿರುತ್ತಾಳೆ. ಹೆಣ್ಣಿನ ಉತ್ತಮ ನಡತೆಯಿಂದ ಗಂಡನು ಕೂಡ ಉತ್ತಮನಾಗಿ ಮತ್ತು ಸಮಾಜದಲ್ಲಿ ಘನತೆಯನ್ನು ಕಾಣಬಲ್ಲ. ಅಂತಹ ಜನರು ದೇವರಿಗೆ ಧನ್ಯವಾದ ತಿಳಿಸುತ್ತಾರೆ.

3. ಒಬ್ಬ ವ್ಯಕ್ತಿಗೆ ಎಷ್ಟೇ ಹಣ ಸಿಕ್ಕರೂ ಸರಿ, ಸಂಪತ್ತು ರಾಶಿ ಇದ್ದರೂ ಸರಿ, ಮನಸಿಗೆ ನೆಮ್ಮದಿ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಮಾನಸಿಕ ನೆಮ್ಮದಿ ಇಲ್ಲವಾದರೆ ತೊಂದರೆಯಲ್ಲೇ ಸಿಲುಕಿದಂತೆ. ಹಾಗಾಗಿ, ಯಾರಿಗೆ ಮನಶ್ಶಾಂತಿ ಲಭಿಸುತ್ತದೆಯೋ ಅವರು ಎಲ್ಲಾ ಪರಿಸ್ಥಿತಿಯನ್ನು ಕೂಡ ಸುಲಭವಾಗಿ ಸಂತೃಪ್ತವಾಗಿ ನಡೆಸಿಕೊಂಡು ಹೋಗುತ್ತಾರೆ. ಎಲ್ಲರಿಗೂ ಸಂತೃಪ್ತಿ ಎಂಬುದು ಸಿಗುವುದಿಲ್ಲ. ಈ ಗುಣಗಳು ಹೊಂದಿರುವವರು ಕೂಡ ಭೂಮಿಯನ್ನು ಸ್ವರ್ಗಕ್ಕಿಂತ ಕಡಿಮೆ ಎಂದು ಕಾಣುವುದಿಲ್ಲ.

ಇದನ್ನೂ ಓದಿ: Chanakya Niti: ಜೀವನದಲ್ಲಿ ಪದೇ ಪದೇ ಸೋಲನ್ನು ಕಾಣುತ್ತಿದ್ದೀರಾ? ಚಾಣಕ್ಯ ತಿಳಿಸಿದ ಯಶಸ್ಸಿನ ಗುಟ್ಟುಗಳನ್ನು ಅನುಸರಿಸಿ

Chanakya Niti: ಆಲಸ್ಯ ಸ್ವಭಾವದವರು ಎಂದಿಗೂ ಹಣ ಸಂಪಾದಿಸಲು ಸಾಧ್ಯವಿಲ್ಲ- ಚಾಣಕ್ಯ ನೀತಿ

(Chanakya Niti Heaven on Earth Chanakya says these things 3 are equal to Heaven)

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ