Oral Health: ಹಲ್ಲು ಹುಳುಕಾಗುವುದನ್ನು ತಡೆಯುವುದು ಹೇಗೆ?
ಬಾಯಿಯ ನೈರ್ಮಲ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಬಹಳ ಅತ್ಯಗತ್ಯ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೆಗೆ ಯಾರಿಗೆ ಬೇಕಾದರೂ ಹಲ್ಲಿನಲ್ಲಿ ಕುಳಿ ಬೀಳಬಹುದು. ಅದರಲ್ಲೂ ಮಕ್ಕಳ ಹಲ್ಲುಗಳು ಸೂಕ್ಷ್ಮವಾಗಿರುವುದರಿಂದ ಹಲ್ಲು ಹುಳುಕಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಹಲ್ಲಿನ ಕುಳಿಯೆಂದರೆ ಹಲ್ಲಿನ ಕೊಳೆತದಿಂದ ಬೆಳವಣಿಗೆಯಾಗುವ ಹಲ್ಲಿನ ರಂಧ್ರವಾಗಿದೆ. ನಿಮ್ಮ ಬಾಯಿಯಲ್ಲಿರುವ ಆಮ್ಲಗಳು ನಿಮ್ಮ ಹಲ್ಲಿನ ಗಟ್ಟಿಯಾದ ಹೊರ ಪದರವನ್ನು (ಎನಾಮೆಲ್) ಸವೆಸಿದಾಗ (ಸವೆತ) ಕುಳಿಗಳು ರೂಪುಗೊಳ್ಳುತ್ತವೆ. ಯಾರಿಗೆ ಬೇಕಾದರೂ ಹಲ್ಲಿನಲ್ಲಿ ಕುಳಿ ಉಂಟಾಗಬಹುದು. ಸರಿಯಾದ ಮೌಖಿಕ ನೈರ್ಮಲ್ಯ ಮತ್ತು ನಿಯಮಿತ ಹಲ್ಲಿನ ಶುಚಿಗೊಳಿಸುವಿಕೆಯು ಹಲ್ಲು ಹುಳುಕಾಗುವುದನ್ನು ಕೊಂಚ ಮಟ್ಟಿಗೆ ತಡೆಯುತ್ತದೆ.
ಹಲ್ಲಿನ ಕುಳಿಗಳನ್ನು ತಡೆಯುವುದು ಹೇಗೆ?:
- ಬಾಯಿಯನ್ನು ಸ್ವಚ್ಛವಾಗಿ ಮತ್ತು ಕುಳಿಯಿಂದ ಮುಕ್ತವಾಗಿಡಲು ಕನಿಷ್ಟ ದಿನಕ್ಕೆ 2 ಬಾರಿ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ.
- ಕುಳಿಗಳ ಅಪಾಯವನ್ನು ತಡೆಗಟ್ಟಲು ನಿಮ್ಮ ಬಾಯಿಯನ್ನು ಸಾಧ್ಯವಾದಷ್ಟು ಆಗಾಗ ತೊಳೆಯಲು ದಂತವೈದ್ಯರು ಶಿಫಾರಸು ಮಾಡುತ್ತಾರೆ.
- ನಿಯಮಿತ ತಪಾಸಣೆಗಳು ಯಾವುದೇ ಸಂಭವನೀಯ ತೊಡಕುಗಳನ್ನು ಎದುರಿಸಲು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
- ಹೆಚ್ಚು ಸಕ್ಕರೆ ಅಂಶವಿರುವ ಪಾನೀಯಗಳನ್ನು ಕುಡಿಯುವುದು ಬಾಯಿಯ ಬ್ಯಾಕ್ಟೀರಿಯಾ ಆಮ್ಲಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
- ಸಕ್ಕರೆ ಅಂಶವಿರದ ಕಾಫಿ, ಚಹಾ ಮತ್ತು ಸಕ್ಕರೆ ರಹಿತ ಗಮ್‌ನಂತಹ ಹಲ್ಲುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವ ಆಹಾರಗಳಿಗೆ ಆದ್ಯತೆ ನೀಡಿ.
- ಧೂಮಪಾನವು ಹಲ್ಲಿನ ಸವಕಳಿ, ಒಸಡಿನ ಕಾಯಿಲೆಗಳು ಮುಂತಾದ ತೀವ್ರವಾದ ಬಾಯಿಯ ಕಾಯಿಲೆಗಳಿಗೆ ಕಾರಣವಾಗಬಹುದು.
- ಮಲಗುವ ಮುನ್ನ ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸಬೇಡಿ. ನೀವು ಏನನ್ನಾದರೂ ತಿಂದರೂ, ಮಲಗುವ ಮುನ್ನ ನಿಮ್ಮ ಹಲ್ಲುಗಳನ್ನು ಉಜ್ಜುವುದು ಒಳ್ಳೆಯದು.
- ಹಲ್ಲುಗಳ ನಡುವೆ ಸಿಲುಕಿರುವ ಆಹಾರವನ್ನು ತೆರವುಗೊಳಿಸಲು ಸಹಾಯ ಮಾಡುವುದರಿಂದ ಪ್ರತಿದಿನ ಫ್ಲೋಸ್ ಮಾಡುವುದು ಕುಳಿಗಳನ್ನು ತಡೆಗಟ್ಟುವ ಒಂದು ಪರಿಣಾಮಕಾರಿ ಮಾರ್ಗವಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ