ವಿಶ್ವದ ಹಲವು ಭಾಗಗಳಲ್ಲಿ ನವೆಂಬರ್ 3ರಂದು ಸ್ಯಾಂಡ್‌ವಿಚ್ ದಿನವನ್ನು ಆಚರಿಸಲಾಗುತ್ತದೆ. ನಿಮ್ಮ ಒತ್ತಡದ ಜೀವನದ ನಡುವೆ ಅತ್ಯಂತ ಸುಲಭವಾಗಿ ಸಿಗುವ ಹಾಗೂ ಅದರಲ್ಲೂ ಯುವಜನತೆ ಇಷ್ಟಪಡುವ ಆಹಾರ ಪದಾರ್ಥಗಳಲ್ಲಿ ಸ್ಯಾಂಡ್‌ವಿಚ್ ಪ್ರಮುಖವಾದುದಾಗಿದೆ.
ಇತಿಹಾಸ:
ಇತಿಹಾಸದ ಪ್ರಕಾರ 1762 ರಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಬದಲಿ ಆಹಾರವಾಗಿ ಸ್ಯಾಂಡ್‌ವಿಚ್ ಅನ್ನು ಕಂಡುಹಿಡಿಯಲಾಯಿತು. ಇಂಗ್ಲೆಂಡ್‌ನ ಜಾನ್ ಮೊಂಟಾಗು ಎಂಬ ವ್ಯಕ್ತಿ ಭಾರೀ ಜೂಜುಕೋರನಾಗಿದ್ದ ಮತ್ತು ರಾತ್ರಿಯ ಊಟವು ಆತನಿಗೆ ಜೂಜು ಆಟಕ್ಕೆ ತೊಂದರೆ ನೀಡುತ್ತಿತ್ತು. ಆದ್ದರಿಂದ ಅವನ ಸೇವಕರು ಆತನ ರಾತ್ರಿ ಊಟದ ಬದಲಿಗಾಗಿ ಎರಡು ಬ್ರೆಡ್ ಸ್ಲೈಸ್‌ಗಳ ನಡುವೆ ಮಾಂಸವನ್ನು ಹಾಕಿ ಕೊಡಲಾಗುತ್ತಿತ್ತು. ಇದೇ ಮುಂದೆ ಸ್ಯಾಂಡ್‌ವಿಚ್ ಆಗಿ ಹೆಸರಾಯಿತು. ಆದ್ದರಿಂದ ಜಾನ್ ಮೊಂಟಾಗು ಹುಟ್ಟಿದ ದಿನ ನವೆಂಬರ್ 3ರಂದು ಸ್ಯಾಂಡ್‌ವಿಚ್ ದಿನವನ್ನು ಆಚರಿಸಲಾಗುತ್ತದೆ.
ಇಂದಿನ ಜೀವನ ಶೈಲಿಯಲ್ಲಿ ಅತ್ಯಂತ ಜನಪ್ರಿಯವಾಗಿರುವ ಸ್ಯಾಂಡ್‌ವಿಚ್ ಗಳಲ್ಲಿ ಹಲವಾರು ಬಗೆಗಳನ್ನು ಕಾಣಬಹುದು. ಸಿಹಿ, ಮಸಾಲೆ ಮತ್ತು ಖಾರ ಹಾಗೂ ಮೊಟ್ಟೆ, ಮಾಂಸ ಹಾಗೂ ವಿವಿಧ ರೀತಿಯ ತರಕಾರಿಗಳನ್ನು ಉಪಯೋಗಿಸಿ ಸ್ಯಾಂಡ್‌ವಿಚ್ ಗಳನ್ನು ತಯಾರಿಸಲಾಗುತ್ತದೆ. ಹಾಗೆಯೇ ಇಂದು ಸ್ಯಾಂಡ್‌ವಿಚ್ ಗಳದ್ದೇ ಸಾಕಷ್ಟು ಅಂಗಡಿಗಳನ್ನು ಕಾಣಬಹುದು. ದೊಡ್ಡ ಉದ್ಯಮವಾಗಿ ಬೆಳೆದಿದಂತೂ ಸುಳ್ಳಲ್ಲ.
ನಿಮಗೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಸ್ಯಾಂಡ್‌ವಿಚ್ ರೆಸಿಪಿ ಇಲ್ಲಿದೆ.
ಇದನ್ನು ಓದಿ: ಕೆಲವೇ ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಿ ಕ್ಯಾಶೂ ಬಟರ್ ನಟ್
ಆದ್ದರಿಂದ ಇಂದು ವಿಶ್ವ ಸ್ಯಾಂಡ್‌ವಿಚ್ ದಿನದ ಅಂಗವಾಗಿ ನಿಮ್ಮ ಮನೆಯಲ್ಲೇ ಆರೋಗ್ಯಕರ ಸ್ಯಾಂಡ್‌ವಿಚ್ ಮಾಡಿ ಸವಿಯಿರಿ.
ಜೀವನ ಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ಧಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:52 am, Thu, 3 November 22