ಸೈಕಲ್ನಲ್ಲಿ 26 ದಿನಗಳಲ್ಲಿ 3,500 ಕಿ ಮೀ ಕ್ರಮಿಸಿ ಕಾಶ್ಮೀರ ತಲುಪಿದ ಕನ್ನಡಿಗರು
ಕರ್ನಾಟಕದ ಇಬ್ಬರು ಸೈಕ್ಲಿಸ್ಟ್‌ಗಳು ಪರಿಸರ ಮತ್ತು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಹೊಸ ದಾರಿಯೊಂದನ್ನು ಹುಡುಕಿಕೊಂಡಿದ್ದಾರೆ.
ಕರ್ನಾಟಕದ ಇಬ್ಬರು ಸೈಕ್ಲಿಸ್ಟ್‌ಗಳು ಪರಿಸರ ಮತ್ತು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಿ ಹೊಸ ದಾರಿಯೊಂದನ್ನು ಹುಡುಕಿಕೊಂಡಿದ್ದಾರೆ. ಇವರು ಸೈಕಲ್ ಮೇಲೆ ಕೇವಲ 26 ದಿನಗಳಲ್ಲಿ 3,500 ಕಿಮೀ ಕ್ರಮಿಸಿ ಕಾಶ್ಮೀರವನ್ನು ತಲುಪುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸೈಕ್ಲಿಸ್ಟ್‌ಗಳಾದ 24 ವರ್ಷದ ಜಗದೀಶ್ ಕುಲಾಲ್ ಮತ್ತು 26 ವರ್ಷದ ಶ್ರೀನಿದಿ ಶೆಟ್ಟಿ ಅವರು ಮೆಕ್ಯಾನಿಕಲ್ ಇಂಜಿನಿಯರ್‌ಗಳಾಗಿದ್ದು, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಅವರು ಅಕ್ಟೋಬರ್ 1 ರಂದು ಮಂಗಳೂರಿನ ಬಂದರು ನಗರವಾದ ಕುಡ್ಲದಿಂದ ಹೊರಟು ಅಕ್ಟೋಬರ್ 26 ರಂದು ಕಾಶ್ಮೀರದ ಗುಲ್ಮಾರ್ಗ್‌ನ ಸ್ಕೀ ರೆಸಾರ್ಟ್ ತಲುಪಿದರು ಎಂದು ಖಾಸಗಿ ಸುದ್ದಿ ಟೈಂಸ್ ಆಫ್ ಇಂಡಿಯಾ ಸುದ್ದಿ ಸಂಸ್ಥೆಯ ಟ್ರಾವೆಲ್ ನ್ಯೂಸ್ ವರದಿ ಮಾಡಿದೆ.
ಕುಲಾಲ್ ಅವರು ಎಂಟು ರಾಜ್ಯಗಳನ್ನು ದಾಟಿ 26 ದಿನಗಳ ಕಾಲ 3,500 ಕಿಮೀ ಸವಾರಿ ಮಾಡಿ ನಂತರ ಅಂತಿಮವಾಗಿ ಕಾಶ್ಮೀರವನ್ನು ತಲುಪಿದ್ದಾರೆ. ಜಾಗೃತಿ ಅಭಿಯಾನದ ಕುರಿತು ಮಾಹಿತಿ ನೀಡಿದ ಅವರು, ಪ್ರಕೃತಿಯನ್ನು ಉಳಿಸಿದು ನಮ್ಮ ಕರ್ತವ್ಯವಾಗಿದೆ. ಹಾಗೇ ಅಂಗಾಗ ದಾನ ಕೂಡ ಬಹು ಮುಖ್ಯವಾಗಿದೆ. ದೇಹವು ಒಂದು ಕೊಡುಗೆ ಮತ್ತು ಅದನ್ನು ರವಾನಿಸಬೇಕಾಗಿದೆ ಮತ್ತು ಹೆಚ್ಚಿನ ಜನರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸೈಕ್ಲಿಸ್ಟ್‌ಗಳು ತಮ್ಮ ಪ್ರಯಾಣದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಯಿತು. ಅವರು ಭಾರೀ ಮಳೆಯ ನಡುವೆ ಕರ್ನಾಟಕದಿಂದ ಪ್ರವಾಸವನ್ನು ಪ್ರಾರಂಭಿಸಿದರು. ಗುಜರಾತ್ ಮತ್ತು ರಾಜಸ್ಥಾನದಲ್ಲಿ ತೀವ್ರ ತಾಪಮಾನವನ್ನು ಎದುರಿಸಬೇಕಾಯಿತು ಎಂದು ಹೇಳಿದ್ದಾರೆ.
ಸೈಕ್ಲಿಂಗ್ ಯಾತ್ರೆ ಬಗ್ಗೆ ಕುಲಾಲ್ ಅವರು ಎರಡು ವರ್ಷಗಳ ಹಿಂದೆ ಪ್ರವಾಸವನ್ನು ಯೋಜಿಸಿದ್ದರು. ಆರಂಭದಲ್ಲಿ ಮನಾಲಿ-ಲಡಾಖ್-ಖರ್ದುಂಗ್ಲಾಗೆ ಪ್ರಯಾಣಿಸಲು ನಿರ್ಧರಿಸಿದ್ದರು. ಈ ಸಂಬಂಧ ಕಳೆದ ವರ್ಷ 500 ಕಿಮೀ ಸವಾರಿಯನ್ನು ಪೂರ್ಣಗೊಳಿಸಿದ್ದರು. ಈಗ 3,500 ಕಿಮೀ ಪ್ರಯಾಣ ಮಾಡಿದ್ದಾರೆ.
ಮತ್ತಷ್ಟು ಜೀವನಶೈಲಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:41 pm, Wed, 2 November 22