World Vegetarian Day: ಇಂದು ಸಸ್ಯಾಹಾರಿಗಳ ದಿನ: ಸಸ್ಯಾಹಾರ ಆರೋಗ್ಯಕ್ಕೆ ಉತ್ತಮವೇ? ಈ ದಿನದ ಮಹತ್ವ ತಿಳಿಯಿರಿ!

| Updated By: ಗಂಗಾಧರ​ ಬ. ಸಾಬೋಜಿ

Updated on: Oct 01, 2022 | 7:30 AM

ವಿಶ್ವ ಸಸ್ಯಾಹಾರಿ ದಿನನ್ನು ಮೊದಲ ಬಾರಿಗೆ ಯುಕೆ ಸಸ್ಯಾಹಾರಿ ಸೊಸೈಟಿ 1 ಅಕ್ಟೋಬರ್ 1977 ರಂದು ಆಚರಿಸಿತು. ಸಸ್ಯಾಹಾರಿ ಸೊಸೈಟಿಯನ್ನು 1944 ರಲ್ಲಿ ಸ್ಥಾಪಿಸಲಾಯಿತು.

World Vegetarian Day: ಇಂದು ಸಸ್ಯಾಹಾರಿಗಳ ದಿನ: ಸಸ್ಯಾಹಾರ ಆರೋಗ್ಯಕ್ಕೆ ಉತ್ತಮವೇ? ಈ ದಿನದ ಮಹತ್ವ ತಿಳಿಯಿರಿ!
World Vegetarian Day (ಸಂಗ್ರಹ ಚಿತ್ರ)
Follow us on

ಪ್ರತಿ ವರ್ಷದಂತೆ ಅಕ್ಟೋಬರ್ 1 ರಂದು ವಿಶ್ವ ಸಸ್ಯಾಹಾರಿ ದಿನ (World Vegetarian Day) ವನ್ನು ಆಚರಿಸಲಾಗುತ್ತದೆ. ಈ ದಿನವನ್ನು 1978 ರಲ್ಲಿ ಅಂತರರಾಷ್ಟ್ರೀಯ ಸಸ್ಯಾಹಾರಿ ಒಕ್ಕೂಟವು ಔಪಚಾರಿಕವಾಗಿ ನಿರ್ಧರಿಸಿತು. ಈ ದಿನ ಸಸ್ಯಾಹಾರವನ್ನು ಉತ್ತೇಜಿಸುವುದು ಮತ್ತು ಆರೋಗ್ಯವನ್ನು ಸುಧಾರಿಸುವುದು ಇದರ ಮುಖ್ಯ ಗುರಿಯಾಗಿದೆ. ಈ ದಿನದಂದು ಚೀನಾ, ಯುರೋಪ್ ಆಫ್ರಿಕಾ ಮತ್ತು ನಾರ್ವೆಯ ಹೆಚ್ಚಿನ ಸಂಖ್ಯೆಯ ಜನರು ಈ ಒಂದು ದಿನದಂದು ಮಾಂಸಾಹಾರಿ ಆಹಾರದಿಂದ ದೂರವಿರುತ್ತಾರೆ. ಈ ದಿನ ಜನರು ಮಾಂಸವನ್ನು ಹೊರತುಪಡಿಸಿ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಾರೆ. ಬಹುಶಃ ಇದು ಭಾರತೀಯ ಜನರಿಗೆ ದೊಡ್ಡ ವಿಷಯವಲ್ಲ, ಏಕೆಂದರೆ ಭಾರತದ ಅನೇಕ ಜನರು ಸಸ್ಯಾಹಾರಿಗಳಾಗಿದ್ದಾರೆ. ಆದರೆ ಈಗ ಇತ್ತಿಚೇಗೆ ಚೀನಾದಲ್ಲಿ ಹೆಚ್ಚು ಹೆಚ್ಚು ಜನರು ಸಸ್ಯಾಹಾರಿ ಆಹಾರವನ್ನು ಇಷ್ಟಪಡುತ್ತಿದ್ದಾರೆನ್ನಲಾಗುತ್ತಿದೆ. ವಿಶೇಷವಾಗಿ ಕರೋನಾದಿಂದ, ಸಸ್ಯಾಹಾರಿ ಟ್ರೆಂಡ್ ಚೀನಾದಲ್ಲಿಯೂ ಹೆಚ್ಚಾಗಿದೆ.

ವಿಶ್ವ ಸಸ್ಯಾಹಾರಿ ದಿನದ ಇತಿಹಾಸ:
ವಿಶ್ವ ಸಸ್ಯಾಹಾರಿ ದಿನನ್ನು ಮೊದಲ ಬಾರಿಗೆ ಯುಕೆ ಸಸ್ಯಾಹಾರಿ ಸೊಸೈಟಿ 1 ಅಕ್ಟೋಬರ್ 1977 ರಂದು ಆಚರಿಸಿತು. ಸಸ್ಯಾಹಾರಿ ಸೊಸೈಟಿಯನ್ನು 1944 ರಲ್ಲಿ ಸ್ಥಾಪಿಸಲಾಯಿತು. ಅವರ 50 ನೇ ವಾರ್ಷಿಕೋತ್ಸವದಂದು, ‘ವೆಗಾನ್ ಸೊಸೈಟಿ’ ಅಧ್ಯಕ್ಷರು ಪ್ರತಿ ವರ್ಷ ಅಕ್ಟೋಬರ್ ಮೊದಲ ದಿನಾಂಕವನ್ನು ಸ್ಮರಣೀಯವಾಗಿಸುವ ಮತ್ತು ಜನರಲ್ಲಿ ಸಸ್ಯಾಹಾರಿ ಆಹಾರವನ್ನು ಉತ್ತೇಜಿಸುವ ಉದ್ದೇಶದಿಂದ ‘ಸಸ್ಯಾಹಾರಿ ದಿನ’ ಆಚರಿಸಲು ಘೋಷಿಸಿದರು. ಸಸ್ಯಾಹಾರಿ ದಿನವನ್ನು ಆಚರಿಸಲು ಒಂದು ಕಾರಣವೆಂದರೆ ತಾರತಮ್ಯ. ಏಕೆಂದರೆ, ಆ ಸಮಯದಲ್ಲಿ ಸಸ್ಯಾಹಾರಿಗಳಿಗೆ ಡೈರಿ ಉತ್ಪನ್ನಗಳನ್ನು ಸೇವಿಸಲು ಅವಕಾಶವಿರಲಿಲ್ಲ. ಹಾಗಾಗಿ 1951 ರಲ್ಲಿ ಅದು ಸಸ್ಯಾಹಾರಿ ಚಳುವಳಿಯಾಗಿ ಮಾರ್ಪಟ್ಟಿತು.
ಸಸ್ಯಾಹಾರಿ ಆಹಾರ ನಮಗೆ ತರಕಾರಿ, ಧಾನ್ಯ, ದ್ವಿದಳ ಧಾನ್ಯಗಳು, ಹಣ್ಣುಗಳು, ಒಣ ಹಣ್ಣುಗಳಿಂದ ಸಿಗುತ್ತದೆ. ಈ ಜೀವನಶೈಲಿಯು ಲ್ಯಾಕ್ಟೋ-ಓವೊ ಸಸ್ಯಾಹಾರಿಗಳನ್ನು ಸಹ ಒಳಗೊಂಡಿದೆ. ಇವರು ಮೊಟ್ಟೆ, ಡೈರಿ ಮತ್ತು ಜೇನುತುಪ್ಪದಂತಹ ಪ್ರಾಣಿ ಉತ್ಪನ್ನಗಳನ್ನು ಸೇವಿಸುತ್ತಾರೆ. ನಿಜವಾದ ಸಸ್ಯಾಹಾರ ಸೇವಿಸುವ ವ್ಯಕ್ತಿ ಯಾವುದೇ ರೀತಿಯ ಪ್ರಾಣಿ ಉತ್ಪನ್ನಗಳನ್ನು ಸೇವಿಸುವುದಿಲ್ಲ.

ಸಸ್ಯಾಹಾರವನ್ನು ಸೇವಿಸಲು ಕಾರಣ:

ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮದಂತಹ ಅನೇಕ ಸಂಸ್ಕೃತಿಗಳಲ್ಲಿ ಸಸ್ಯಾಹಾರವು ಧರ್ಮದ ಅವಿಭಾಜ್ಯ ಅಂಗವಾಗಿದೆ. ಅಂತಹ ಅನೇಕ ಪಂಥಗಳು ಮಾಂಸ ಮತ್ತು ಪ್ರಾಣಿ ಉತ್ಪನ್ನಗಳ ಸೇವನೆಯನ್ನು ನಿಷೇಧಿಸುತ್ತವೆ. ಆದರೂ ಹಾಲು, ಜೇನುತುಪ್ಪ ಮತ್ತು ಕೆಲವೊಮ್ಮೆ ಕೋಳಿ ಮೊಟ್ಟೆಗಳನ್ನು ಬಳಸುವುದು ಸ್ವೀಕಾರಾರ್ಹವಾಗಿದೆ.

ಸಸ್ಯಾಹಾರ ಆರೋಗ್ಯಕ್ಕೆ ಉತ್ತಮ:

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ದೃಷ್ಟಿಯಿಂದ ಸಸ್ಯಾಹಾರಿ ಆಹಾರವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಫೈಬರ್, ಧಾನ್ಯಗಳು, ಕಾಳುಗಳು, ಬೀಜಗಳು ಇತ್ಯಾದಿ ಹೃದಯ ಮತ್ತು ದೇಹದ ಆರೋಗ್ಯಕ್ಕೆ ಉತ್ತಮವಾದ ಕಾರಣ ಸಸ್ಯ ಆಧಾರಿತ ಆಹಾರವು ಉತ್ತಮ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ. ಇದು ಕಡಿಮೆ ರಕ್ತದೊತ್ತಡ, ಮೂಳೆಗಳನ್ನು ಸದೃಢಗೊಳಿಸುವುದು, ತೂಕ ನಿರ್ವಹಣೆ ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮತ್ತಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:30 am, Sat, 1 October 22