
ಈ ಪೃಥ್ವಿಯ ಮೇಲಿರುವ ಸಕಲ ಜೀವ ರಾಶಿಗಳಿಗೆ ಆಹಾರ ಹಾಗೂ ಗಾಳಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಈ ನೀರು ಕೂಡ. ಆದರೆ ಈ ಮನುಷ್ಯ ಆಹಾರವಿಲ್ಲದೇ ಹೋದರೂ ಬದುಕಬಹುದು. ಆದರೆ ನೀರಿಲ್ಲದೇ ಹೋದರೆ ಬದುಕಲು ಸಾಧ್ಯವಿಲ್ಲ. ಊಟ ತಿಂಡಿಯಿಲ್ಲದೇ ನೀರು ಕುಡಿದೇ ಎಷ್ಟೋ ವರ್ಷಗಳಿಂದ ಇರುವವರನ್ನು ನೋಡಿರಬಹುದು. ಭೂಮಿಯಲ್ಲಿರುವ ಸಕಲ ಜೀವ ರಾಶಿಗಳಿಗೆ ನೀರು ಅಗತ್ಯವಾಗಿ ಬೇಕು. ಆದರೆ ಮಾನವನ ಸ್ವಾರ್ಥದಿಂದ ಅದೆಷ್ಟೋ ಜಲಮೂಲಗಳು ಅಳಿವಿನಂಚಿನಲ್ಲಿದೆ. ಕಾಡಿನ ನಾಶದಿಂದ ಸರಿಯಾದ ಸಮಯಕ್ಕೆ ಮಳೆ ಬಾರದೆ ಹಳ್ಳ ಕೊಳ್ಳ ಸೇರಿದಂತೆ ನೀರಿನ ಮೂಲಗಳು ಬತ್ತಿ ಹೋಗಿವೆ. ಸಿಹಿ ನೀರಿನ ಮೂಲಗಳನ್ನು ಉಳಿಸಿ, ಮುಂದಿನ ಪೀಳಿಗೆಯವರಿಗೆ ಈ ಜಲವನ್ನು ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿವೆ.
ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನದ ಇತಿಹಾಸದ ಬಗ್ಗೆ ನೋಡುವುದಾದರೆ 1992ರಲ್ಲಿ ರಿಯೊ ಡಿ ಜನೈರೋದಲ್ಲಿ ನಡೆದ ವಿಶ್ವ ಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿಯ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಸಿಹಿ ನೀರಿನ ದಿನವನ್ನು ಆಚರಿಸುವ ಬಗ್ಗೆ ಶಿಫಾರಸ್ಸು ಮಾಡಲಾಯಿತು. ಆದಾದ ಬಳಿಕ ಡಿಸೆಂಬರ್ 22ರಂದು ವಿಶ್ವಸಂಸ್ಥೆ ಸಂಸತ್ತಿನಲ್ಲಿ ಈ ನಿರ್ಣಯಕ್ಕೆ ಒಪ್ಪಿಗೆ ಸಿಕ್ಕಿತು. 1993 ಮಾರ್ಚ್ 22ರಂದು ಮೊದಲ ವಿಶ್ವ ಜಲ ದಿನವೆಂದು ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಜಲದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಈ ದ್ವೀಪದಲ್ಲಿ ಬೆಕ್ಕುಗಳದ್ದೇ ಸಾಮ್ರಾಜ್ಯ, ಈ ದ್ವೀಪ ಕ್ಯಾಟ್ ಐಲ್ಯಾಂಡ್ ಆಗಿದ್ದು ಹೇಗೆ?
ವಿಶ್ವ ಜಲ ದಿನವನ್ನು ಆಚರಿಸುವುದರ ಹಿಂದಿನ ಪ್ರಮುಖ ಉದ್ದೇಶವೇನೆಂದರೆ ಸಿಹಿನೀರಿನ ಮೂಲಗಳನ್ನು ಕಾಪಾಡುವ ಮೂಲಕ ಮುಂದಿನ ಪೀಳಿಗೆಯವರಿಗೆ ನೀರನ್ನು ಒದಗಿಸುವುದು. ಈ ದಿನದಂದು ಸಿಹಿ ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಆಚರಿಸಲಾಗುತ್ತದೆ. ಹೀಗಾಗಿ ನೀರನ್ನು ಮಿತವಾಗಿ ಬಳಸಿ ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಗುರಿಯಾಗಿದೆ. ಈ ದಿನದಂದು ವಿವಿಧ ಸಂಸ್ಥೆಗಳು, ಎನ್‌ಜಿಒಗಳು ಹಾಗೂ ಖಾಸಗಿ ಸಂಸ್ಥೆಗಳು ನೀರಿನ ಸಂರಕ್ಷಣೆಯ ಬಗ್ಗೆ ಮಾಹಿತಿ ಕಾರ್ಯಾಗಾರಗಳು ಹಾಗೂ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ