127 ನೇ ವಯಸ್ಸಿನಲ್ಲಿ ನಿಧನರಾದ ಬ್ರೆಜಿಲಿಯನ್ ವ್ಯಕ್ತಿಯ ಆಹಾರ ಕ್ರಮ ಹೇಗಿತ್ತು ಗೊತ್ತಾ?
ತನ್ನ 124ನೇ ವಯಸ್ಸಿನಲ್ಲಿ ವರೆಗೂ ಕುದುರೆ ಸವಾರಿ ಮಾಡುತ್ತಿದ್ದ ಗೋಮ್ಸ್, ತನ್ನ ಇಳಿ ವಯಸ್ಸಿನಲ್ಲೂ ಫಿಟ್ ಆ್ಯಂಡ್ ಫೈನ್ ಆಗಿದ್ದರು. ಆಹಾರ ಕ್ರಮ ಹಾಗೂ ಜೀವನಶೈಲಿಯೇ ಇವರ ಆರೋಗ್ಯದ ಗುಟ್ಟು.
ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಕರೆಯಲ್ಪಡುವ ಬ್ರೆಜಿಲಿಯನ್ ಜೋಸ್ ಪಾಲಿನೋ ಗೋಮ್ಸ್ ಅವರು 127 ನೇ ವಯಸ್ಸಿನಲ್ಲಿ ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ. ಇನ್ನೇನು 128 ನೇ ಹುಟ್ಟುಹಬ್ಬಕ್ಕೆ ಕೇವಲ ಏಳು ದಿನಗಳು ಬಾಕಿ ಇರುವಾಗಲೇ ಇಹಲೋಕ ತ್ಯಜಿಸಿದ್ದಾರೆ. ತನ್ನ 124ನೇ ವಯಸ್ಸಿನ ವರೆಗೂ ಕುದುರೆ ಸವಾರಿ ಮಾಡುತ್ತಿದ್ದ ಗೋಮ್ಸ್, ತನ್ನ ಇಳಿ ವಯಸ್ಸಿನಲ್ಲೂ ಫಿಟ್ ಆ್ಯಂಡ್ ಫೈನ್ ಆಗಿದ್ದರು. ಆಹಾರ ಕ್ರಮ ಹಾಗೂ ಜೀವನಶೈಲಿಯೇ ಇವರ ಆರೋಗ್ಯದ ಗುಟ್ಟು. ಹಳ್ಳಿಯ ವಾತಾವರಣದಲ್ಲಿನ ಜೀವನ ಹಾಗೂ ಸ್ಥಳೀಯವಾಗಿ ಬೆಳೆದ ಆಹಾರವನ್ನು ಮಾತ್ರ ತಿನ್ನುತ್ತಿದ್ದರು ಎಂದು ವರದಿಗಳಿಂದ ತಿಳಿದುಬಂದಿದೆ.
ಆಹಾರವು ದೀರ್ಘಾಯುಷ್ಯ ಹೇಗೆ ಸಹಾಯಕ?
ಒಂದು ಅಧ್ಯಯನದ ಪ್ರಕಾರ, ನಾಲ್ಕು ಆರೋಗ್ಯಕರ ಮಾದರಿಗಳ ಆಯ್ಕೆಯಿಂದ ಹೆಚ್ಚು ಆಹಾರವನ್ನು ಸೇವಿಸುವ ಮೂಲಕ ಅಕಾಲಿಕ ಮರಣದ ಅಪಾಯವನ್ನು ಶೇಕಡಾ 20 ರಷ್ಟು ಕಡಿಮೆ ಮಾಡಬಹುದು ಎಂದು ತಿಳಿದುಬಂದಿದೆ. JAMA ಇಂಟರ್ನಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಫಲಿತಾಂಶಗಳ ಪ್ರಕಾರ ಚೆನ್ನಾಗಿ ತಿನ್ನಲು ಮತ್ತು ಅದರ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದಕ್ಕಿಂತ ಹೆಚ್ಚು ಮಾರ್ಗಗಳಿವೆ ಎಂದು ಹೇಳುತ್ತದೆ. ಬೀಜಗಳು, ತರಕಾರಿಗಳು, ಹಣ್ಣುಗಳು, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳ ಸೇವನೆಯ ಮೇಲೆ ಕೇಂದ್ರೀಕೃತವಾಗಿರುವ ನಾಲ್ಕು ಆರೋಗ್ಯಕರ ಆಹಾರ ಪದ್ಧತಿಗಳನ್ನು ಅನುಸರಿಸುವ ಜನರು ಉಸಿರಾಟ, ಹೃದಯ, ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳು ಮತ್ತು ಕ್ಯಾನ್ಸರ್‌ನಿಂದ ಸಾಯುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಮೊದಲ ರಾತ್ರಿಯಲ್ಲಿ ಒಂದು ಲೋಟ ಹಾಲು ಏಕೆ ನೀಡುತ್ತಾರೆ? ಈ ಪದ್ಧತಿಯ ಹಿಂದಿರುವ ಆರೋಗ್ಯ ಕಾರಣ ಏನು?
ದೀರ್ಘಾಯುಷ್ಯಕ್ಕಾಗಿ ಉತ್ತಮವಾದ ಆಹಾರಗಳು ಯಾವುವು?
ದೀರ್ಘಾಯುಷ್ಯವನ್ನು ಪ್ರೇರೇಪಿಸಲು ಕೆಳಗಿನ ಆಹಾರಗಳನ್ನು ಶಿಫಾರಸು ಮಾಡಲಾಗಿದೆ:
- ದಾಳಿಂಬೆ
- ಧಾನ್ಯಗಳು
- ತಾಜಾ ಮಾಂಸ
- ಮೊಟ್ಟೆ
- ಹಣ್ಣುಗಳು
- ಬೀನ್ಸ್
- ಈರುಳ್ಳಿ, ಬೆಳ್ಳುಳ್ಳಿ
- ಟೊಮ್ಯಾಟೋ
- ಅಣಬೆಗಳು
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: