Year Ender 2024 : ಈ ವರ್ಷ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯ ಯಾವುದು ಗೊತ್ತಾ?

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 25, 2024 | 2:49 PM

2024 ಕ್ಕೆ ಗುಡ್ ಬೈ ಹೇಳುವ ಸಮಯ ಹತ್ತಿರವಿದ್ದು, 2025 ಹೊಸವರ್ಷವನ್ನು ಸ್ವಾಗತಿಸಲು ಪ್ರಪಂಚದಾದಂತ್ಯ ಜನರು ಸಜ್ಜಾಗಿದ್ದಾರೆ. ಈಗಾಗಲೇ ಈ ವರ್ಷ ಕಿಚನ್ ಹ್ಯಾಕ್ ಗಳು, ಆಹಾರ ರೆಸಿಪಿಗಳು ಹೀಗೆ ಸಾಕಷ್ಟು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಆದರೆ ಇದೀಗ 2024 ರಲ್ಲಿ ಜನರು ಜನರು ಅತೀ ಹೆಚ್ಚಾಗಿ ಆರ್ಡರ್ ಮಾಡಿರುವ ಆಹಾರದ ಪಟ್ಟಿಯನ್ನು ಸ್ವಿಗ್ಗಿಯೂ ಬಿಡುಗಡೆ ಮಾಡಿವೆ. ಹಾಗಾದ್ರೆ ಈ ವರ್ಷ ಆಹಾರ ಪ್ರಿಯರು ಹೆಚ್ಚು ಆರ್ಡರ್ ಮಾಡಿದ ಆಹಾರಗಳಾವುವು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Year Ender 2024 : ಈ ವರ್ಷ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯ ಯಾವುದು ಗೊತ್ತಾ?
ಸಾಂದರ್ಭಿಕ ಚಿತ್ರ
Follow us on

ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ, ಕುಳಿತಲ್ಲಿಂದಲೇ ಏನು ಬೇಕಾದರೂ ಬುಕ್ ಮಾಡುವ ಕಾಲ ಘಟ್ಟಕ್ಕೆ ನಾವೆಲ್ಲರೂ ಬಂದು ತಲುಪಿದ್ದೇವೆ. ಹೀಗಾಗಿ ಆನ್‌ಲೈನ್‌ ನಲ್ಲಿ ಫುಡ್ ಆರ್ಡರ್ ಮಾಡಿದರೆ ಕ್ಷಣಾರ್ಧದಲ್ಲಿಯೇ ಮನೆ ಬಾಗಿಲಿಗೆ ಬರುತ್ತದೆ. ಹೀಗಾಗಿ ನಗರ ಪ್ರದೇಶಗಳ ಜನರಿಗೆ ಈ ಆನ್ಲೈನ್ ಅಪ್ಲಿಕೇಶನ್ ಗಳನ್ನೆ ಅವಲಂಬಿಸಿದ್ದಾರೆ. ಇದೀಗ ಭಾರತದಲ್ಲಿ ಜನಪ್ರಿಯ ಆಹಾರ ವಿತರಣಾ ಕಂಪೆನಿಯಾಗಿರುವ ಸ್ವಿಗ್ಗಿಯೂ ಈ ವರ್ಷದ ಕೊನೆಯಲ್ಲಿ ಅತೀ ಹೆಚ್ಚು ಆರ್ಡರ್ ಮಾಡಿದ ಆಹಾರಗಳ ಪಟ್ಟಿಯನ್ನು ಬಹಿರಂಗಪಡಿಸಿದೆ.

ಹೌದು, 2024 ರಲ್ಲಿ ಭಾರತೀಯರು ಹೆಚ್ಚು ಆರ್ಡರ್ ಮಾಡಿದ ಆಹಾರಗಳಲ್ಲಿ ಬಿರಿಯಾನಿ ಅಗ್ರಸ್ಥಾನದಲ್ಲಿದೆ. ಹೌದು, ಈ ವರ್ಷ ಈ ಕಂಪೆನಿಯೂ ಬರೋಬ್ಬರಿ 83 ಮಿಲಿಯನ್ ಬಿರಿಯಾನಿ ಆರ್ಡರ್ ಅನ್ನು ಡೆಲಿವರಿ ಮಾಡಿದೆ. ದೇಶದಲ್ಲಿ ಪ್ರತಿ ನಿಮಿಷಕ್ಕೆ 158 ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ. ಈ ಮೂಲಕ ಸತತ ಒಂಬತ್ತೇ ವರ್ಷವೂ ಟಾಪ್‌ಒನ್‌ ಫುಡ್‌ ಲಿಸ್ಟ್ ನಲ್ಲಿ ಬಿರಿಯಾನಿಯೇ ಉಳಿದಿದೆ. ದೋಸೆಯೂ ಎರಡನೇ ಸ್ಥಾನದಲ್ಲಿದ್ದು, 23 ಮಿಲಿಯನ್ ಜನರು ಇದನ್ನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದಾರೆ.

ಈ ವರ್ಷದ ಅತ್ಯಂತ ಅತೀ ಹೆಚ್ಚು ಜನರು ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಸರಿಸುಮಾರು 49 ಮಿಲಿಯನ್ ಜನರು ಈ ಚಿಕನ್ ಬಿರಿಯಾನಿಯನ್ನು ಆರ್ಡರ್ ಮಾಡಿದ್ದಾರೆ ಎಂದು ಸ್ವಿಗ್ಗಿ ತಿಳಿಸಿದೆ. ಅದಲ್ಲದೇ, ದಕ್ಷಿಣ ಭಾರತದಲ್ಲಿ ಈ ಆಹಾರವನ್ನೇ ಆರ್ಡರ್ ಮಾಡಿ ಸವಿದಿದ್ದಾರೆ. ಹೈದರಾಬಾದ್‌ನಲ್ಲಿ 9.7 ಮಿಲಿಯನ್ ಬಿರಿಯಾನಿ ಆರ್ಡರ್‌ ಮಾಡಿ ರುಚಿ ಸವಿದಿದ್ದಾರೆ. ಬೆಂಗಳೂರು ಎರಡನೇ ಸ್ಥಾನದಲ್ಲಿದ್ದು ಸುಮಾರು 7.7 ಮಿಲಿಯನ್ ಜನರು ಆರ್ಡರ್ ಮಾಡಿದರೆ ಮತ್ತು ಚೆನ್ನೈನಲ್ಲಿ 4.6 ಮಿಲಿಯನ್ ಬಿರಿಯಾನಿಯನ್ನು ಸ್ವಿಗ್ಗಿ ಮೂಲಕ ಆರ್ಡರ್ ಮಾಡಿದ್ದಾರೆ.

ಅದಲ್ಲದೇ, ಹಗಲಿನಲ್ಲಿ ಬಿರಿಯಾನಿ ಆರ್ಡರ್ ಮಾಡಿರುವ ಸಂಖ್ಯೆಯೂ ಹೆಚ್ಚಾಗಿದ್ದು, ಮಧ್ಯರಾತ್ರಿ 12 ರಿಂದ 2 ಗಂಟೆಯವರೆಗೆ ಆರ್ಡರ್ ಮಾಡಿದ ಆಹಾರಗಳಲ್ಲಿ ಮೊದಲ ಸ್ಥಾನವನ್ನು ಚಿಕನ್ ಬರ್ಗರ್ ಗಳಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಮತ್ತದೇ ಬಿರಿಯಾನಿಯೇ ಇದ್ದು, ಈ ವರ್ಷದ ರಂಜಾನ್ ತಿಂಗಳಿನಲ್ಲಿ ಸುಮಾರು 6 ಮಿಲಿಯನ್ ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಸಭ್ಯವಾಗಿ ಬಾಳೆಹಣ್ಣು ತಿನ್ನುವುದು ಹೇಗೆ ಗೊತ್ತಾ? ಫುಲ್‌ ವೈರಲ್‌ ಆಗ್ತಿದೆ ಮಹಿಳೆಯ ಟ್ಯುಟೋರಿಯಲ್

ಈ ವರ್ಷ ಸ್ವಿಗ್ಗಿಯಲ್ಲಿ ಬೆಂಗಳೂರಿನ ಗ್ರಾಹಕನೊರ್ವನು ಪಾಸ್ತಾಕ್ಕಾಗಿ 49,900 ರೂ ಹಣವನ್ನು ಖರ್ಚು ಮಾಡಿರುವ ಬಗ್ಗೆಯೂ ಸ್ವಿಗ್ಗಿಯೂ ಹೇಳಿದೆ. ಅದಲ್ಲದೇ , ಇದರೊಂದಿಗೆ 55 ಆಲ್ಫ್ರೆಡೋ ಭಕ್ಷ್ಯಗಳು, 40 ಮ್ಯಾಕ್ ಮತ್ತು ಚೀಸ್ ಪ್ಲೇಟ್‌ಗಳು ಮತ್ತು 30 ಸ್ಪಾಗೆಟ್ಟಿಯನ್ನು ಆರ್ಡರ್‌ ಮಾಡಿರುವ ಬಗ್ಗೆ ತಿಳಿಸಿದೆ. ಬೆಂಗಳೂರಿನಲ್ಲಿ ದೋಸೆ, ಹೈದರಾಬಾದ್‌ನಲ್ಲಿ ಬಿರಿಯಾನಿ, ದೆಹಲಿಯಲ್ಲಿ ಚೋಲಾ ಪುರಿ, ಚಂಡೀಗಢದಲ್ಲಿ ಆಲೂ ಪರಾಠಾ ಹಾಗೂ ಕೋಲ್ಕತ್ತಾದಲ್ಲಿ ಕಚೋರಿ ಈ ಆಹಾರವನ್ನು ಅತೀ ಹೆಚ್ಚು ಆರ್ಡರ್ ಮಾಡಲಾಗಿದೆ. ಅದಲ್ಲದೇ, 2024 ರಲ್ಲಿ ದೇಶದ ಅತಿ ಹೆಚ್ಚು ಆರ್ಡರ್ ಮಾಡಿದ ತಿಂಡಿ ಚಿಕನ್ ರೋಲ್ ಆಗಿದ್ದು 2.48 ಮಿಲಿಯನ್ ಜನರು ಆರ್ಡರ್‌ ಮಾಡಿದ್ದಾರೆ. ಜನಪ್ರಿಯ ಚಿಕನ್ ಮೊಮೊಸ್ ಅನ್ನು 1.63 ಮಿಲಿಯನ್ ಜನರು ಹಾಗೂ 1.3 ಮಿಲಿಯನ್ ಆರ್ಡರ್‌ಗಳೊಂದಿಗೆ ಆಲೂಗೆಡ್ಡೆ ಫ್ರೈಸ್ ಮೂರನೇ ಸ್ಥಾನವನ್ನು ಗಳಿಸಿಕೊಂಡಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ