ಗಂಡಾಗಲಿ, ಹೆಣ್ಣಾಗಲಿ ಮದುವೆ ನಿಶ್ಚಯವಾದ ನಂತರ ತಮ್ಮ ಭಾವಿ ಪತ್ನಿ ಅಥವಾ ಪತಿ ಬಳಿ ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುತ್ತಿರುತ್ತಾರೆ. ಈ ವೇಳೆಯಲ್ಲಿ ಇಬ್ಬರ ಇಷ್ಟ ಕಷ್ಟಗಳು, ಗುಣ ಸ್ವಭಾವವನ್ನು ತಿಳಿದುಕೊಳ್ಳಬಹುದು. ಈ ಮಾತುಕತೆಯೂ ಇಬ್ಬರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿಸುತ್ತದೆ. ಆದರೆ ಈ ಮಾತುಕತೆಯ ವೇಳೆ ಗಂಡು ಮಕ್ಕಳಿಗೆ ತನ್ನ ಭಾವಿ ಪತ್ನಿಯ ಗುಣಸ್ವಭಾವಗಳು ಹೇಗಿವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಈ ರೀತಿಯ ಆಕೆಯಲ್ಲಿದ್ದರೆ ಸಂಸಾರವು ಸುಖಕರವಾಗಿರಲು ಸಾಧ್ಯ ಎಂದು ಅರಿತುಕೊಳ್ಳಿ.
* ಕೇಳಿಸಿಕೊಳ್ಳುವ ಅಭ್ಯಾಸವಿರಬೇಕು : ಮಹಿಳೆಯರು ಬಾಯಿ ಬಿಟ್ಟರೆ ಮಾತೇ ಬಂಡವಾಳ ಮಾಡಿಕೊಂಡಿರುತ್ತಾರೆ. ಹೀಗಾಗಿ ಹೆಚ್ಚು ಮಾತನಾಡುವ ಕಡಿಮೆ ಕೇಳುವ ಗುಣವನ್ನು ಹೊಂದಿರುತ್ತಾರೆ. ಆದರೆ ಮಹಿಳೆಯರು ವಿಶೇಷವಾಗಿ ಕೇಳುವ ಅಭ್ಯಾಸವನ್ನು ಹೊಂದಿರಬೇಕು. ಯಾಕೆಂದರೆ ಗಂಡನ ಮಾತು ಕೇಳಿದರೆ ಜಗಳವೇ ಆಗುವುದಿಲ್ಲ. ಯಾವುದೇ ಸಂಬಂಧದಲ್ಲಿ ಕೇಳಿಸಿಕೊಳ್ಳುವಿಕೆ ಬಹಳ ಮುಖ್ಯವಾಗುತ್ತದೆ. ಆದ್ದರಿಂದ ಒಬ್ಬರನ್ನೊಬ್ಬರ ಮಾತನ್ನು ಕೇಳುವ ದಂಪತಿಗಳು ಎಂದಿಗೂ ಜಗಳವಾಗುವುದಿಲ್ಲ ಇದರಿಂದ ಸಂಸಾರದಲ್ಲಿ ಖುಷಿಯೂ ಹೆಚ್ಚು ತುಂಬಿರುತ್ತದೆ.
* ಪ್ರಾಮಾಣಿಕತೆ : ಸಂಬಂಧದಲ್ಲಿ ಪ್ರಾಮಾಣಿಕವಾಗಿರುವುದು ಬಹಳ ಮುಖ್ಯ. ಏಕೆಂದರೆ ಹೆಂಡತಿ ತನ್ನ ಪತಿಯೊಂದಿಗೆ ಪ್ರಾಮಾಣಿಕಳಾಗಿದ್ದರೆ, ಸಂಬಂಧದಲ್ಲಿ ಪ್ರೀತಿ ಮತ್ತು ವಿಶ್ವಾಸ ಹೆಚ್ಚಿರುತ್ತದೆ. ಹೆಂಡತಿಯೂ ಗಂಡನಿಗೆ ಪ್ರಾಮಾಣಿಕಳಾಗಿಲ್ಲದಿದ್ದರೆ ಸಂಬಂಧವು ಹಾಳಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಭಾವಿ ಪತ್ನಿಯೂ ಎಲ್ಲವನ್ನು ನಿಮ್ಮ ಬಳಿ ಹೇಳುತ್ತಾಳೆ ಎಂದರೆ ನಿಮ್ಮ ಬದುಕು ಪ್ರೀತಿಯಿಂದ ತುಂಬಿ ನೆಮ್ಮದಿಯುತವಾಗಿರುತ್ತದೆ.
* ತಪ್ಪನ್ನು ಒಪ್ಪಿಕೊಳ್ಳುವುದು: ಅನೇಕ ಮಹಿಳೆಯರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಬದಲು ತಮ್ಮ ಸಂಗಾತಿಯ ಮೇಲೆ ತಮ್ಮ ತಪ್ಪನ್ನು ದೂಷಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಹೀಗೆ ಮಾಡುವುದರಿಂದ ಸಂಬಂಧ ದುರ್ಬಲವಾಗಲು ಶುರುವಾಗುತ್ತದೆ. ಯಾರು ತನ್ನ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳಲು ಪ್ರಯತ್ನಿಸುತ್ತಾರೋ ಆಗ ಬಾಂಧವ್ಯವು ಗಟ್ಟಿಯಾಗುತ್ತದೆ.
ಇದನ್ನೂ ಓದಿ: ವಿಶ್ವ ಸ್ತನ್ಯಪಾನ ಸಪ್ತಾಹ ದಿನವನ್ನು ಆಚರಿಸುವುದು ಏಕೆ? ಏನಿದರ ಮಹತ್ವ?
* ಸುಳ್ಳು ಹೇಳದಿರುವುದು : ದಾಂಪತ್ಯ ಜೀವನಕ್ಕೆ ನಂಬಿಕೆಯೇ ಜೀವಾಳ. ಆದರೆ ಈ ಸುಳ್ಳು ಹೇಳುವುದು ಸಂಬಂಧವನ್ನು ಹಾಳುಮಾಡುತ್ತದೆ. ಒಂದು ಸುಳ್ಳು ನಿಮ್ಮ ದಾಂಪತ್ಯ ಸಂಬಂಧದ ಅಡಿಪಾಯವನ್ನೇ ಅಲುಗಾಡಿಸಬಹುದು. ಹೆಂಡತಿಯೂ ಗಂಡನಿಗೆ ಸುಳ್ಳು ಹೇಳುವ ಅಭ್ಯಾಸವನ್ನು ಹೊಂದಿದ್ದರೆ ಈ ವಿಷಯವು ಪತಿಗೆ ತಿಳಿದರೆ ನಂಬಿಕೆಯೇ ಕಳಚಿ ಬೀಳಬಹುದು. ಹೀಗಾಗಿ ಸುಳ್ಳು ಹೇಳದೇ ಇರುವ ಗುಣವು ನೀವು ಮದುವೆಯಾಗುವ ಹುಡುಗಿಯಲ್ಲಿದ್ದರೆ, ಆಕೆಯನ್ನು ಪಡೆದ ಹುಡುಗನು ಅದೃಷ್ಟವಂತನು ಎನ್ನುವುದರಲ್ಲಿ ಎರಡು ಮಾತಿಲ್ಲ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ