AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Beer Day 2024: ಬಿಯರ್ ಬಗ್ಗೆ ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳಿವು

ಬಿಯರ್ ಕುಡಿಯದೆ ಇರುವ ವ್ಯಕ್ತಿಗಳು ಯಾರಿದ್ದಾರೆ ಹೇಳಿ, ಫ್ರೆಂಡ್ಸ್ ಜೊತೆಗೆ ಪಾರ್ಟಿಯೆಂದು ಹೊರಗಡೆ ಹೋದಾಗ ಬಹುತೇಕರು ಲೈಟ್ ಆಗಿ ಈ ಬಿಯರ್ ತೆಗೆದುಕೊಳ್ಳುತ್ತಾರೆ. ಆದರೆ ಸುರಪಾನ ಪ್ರಿಯರಿಗಾಗಿಯೇ ಬಿಯರ್ ದಿನ ಮೀಸಲಿಡಲಾಗಿದೆ. ಪ್ರತಿ ವರ್ಷ ಆಗಸ್ಟ್‌ ತಿಂಗಳ ಮೊದಲ ಶುಕ್ರವಾರವನ್ನು ಅಂತಾರಾಷ್ಟ್ರೀಯ ಬಿಯರ್‌ ದಿನ ಎಂದು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

International Beer Day 2024: ಬಿಯರ್ ಬಗ್ಗೆ ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳಿವು
International Beer Day 2024
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ|

Updated on: Aug 01, 2024 | 6:36 PM

Share

ಕೆಲವರು ದುಃಖ ಹಾಗೂ ಸಂತೋಷದ ಕ್ಷಣದಲ್ಲಿ ಈ ಬಿಯರ್ ಕುಡಿಯುವ ಮೂಲಕ ಎಂಜಾಯ್ ಮಾಡುತ್ತಾರೆ. ಇದು ಆಲ್ಕೋಹಾಲ್​​​ಯುಕ್ತ ಪಾನೀಯಗಳಲ್ಲಿ ಒಂದಾಗಿದ್ದು, ಪಾರ್ಟಿಯ ವೇಳೆ ಹೆಚ್ಚಿನವರು ಆಯ್ಕೆ ಮಾಡುವುದೇ ಈ ಪಾನೀಯವನ್ನು. ಇದರಲ್ಲಿ ಆಲ್ಕೋಹಾಲ್ ಅಂಶವು ಕಡಿಮೆಯಿರುವ ಕಾರಣ ಇತರ ಪಾನೀಯಗಳಿಗಿಂತ ಕಡಿಮೆ ಹಾನಿಕಾರಕ ಎನ್ನಲಾಗಿದೆ. ಈ ಬಾರಿ ಆಗಸ್ಟ್ 2 ರಂದು ಅಂತಾರಾಷ್ಟ್ರೀಯ ಬಿಯರ್ ದಿನ ದಿನವನ್ನು ಆಚರಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಬಿಯರ್ ದಿನದ ಇತಿಹಾಸ ಹಾಗೂ ಆಚರಣೆ:

ಅಮೇರಿಕಾದ ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಜ್​​​ನ ಜೆಸಿ ಅವ್ಶಲೋವ್ನ್ ಎಂಬ ವ್ಯಕ್ತಿಯಿಂದಲೇ ಬಿಯರ್ ದಿನವನ್ನು ಆಚರಿಸಲಾಯಿತು. ಹೌದು, ಅಮೇರಿಕಾದಲ್ಲಿ ಸ್ಥಳೀಯ ಕಾರ್ಯಕ್ರಮವಾಗಿ ಬಿಯರ್ ದಿನ ಹುಟ್ಟಿಕೊಂಡಿತು. ಮೊದಲು ಈ ಕಾರ್ಯಕ್ರಮವನ್ನು ಸ್ಥಳೀಯ ಮಟ್ಟದಲ್ಲಿ ಮಾತ್ರ ಆಚರಿಸಲಾಗುತ್ತಿತು. ಇದರ ಜನಪ್ರಿಯತೆ ಹೆಚ್ಚಾದ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಯಿತು. 2007 ರಿಂದ 2012 ರ ವರೆಗೆ ಈ ದಿನವನ್ನು ಆಗಸ್ಟ್ 5 ರಂದು ಆಚರಿಸಲಾಯಿತು. 2012 ರ ನಂತರದಲ್ಲಿ ಆಗಸ್ಟ್ ತಿಂಗಳ ಮೊದಲ ಶುಕ್ರವಾರದಂದು ಬಿಯರ್ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಈ ದಿನದಂದು ವಿದೇಶಗಳಲ್ಲಿ ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ಪಬ್ ಗಳಿಗೆ ತೆರಳಿ ಬಿಯರ್ ಕುಡಿದು ಸಂಭ್ರಮಿಸುತ್ತಾರೆ. ಇಲ್ಲದಿದ್ದರೆ ಮನೆಯಲ್ಲೇ ಪಾರ್ಟಿಯನ್ನು ಆಯೋಜಿಸುತ್ತಾರೆ.

ಇದನ್ನೂ ಓದಿ: ವಿಶ್ವ ಸ್ತನ್ಯಪಾನ ಸಪ್ತಾಹ ದಿನವನ್ನು ಆಚರಿಸುವುದು ಏಕೆ? ಏನಿದರ ಮಹತ್ವ?

ಬಿಯರ್‌ ಕುರಿತಾದ ಆಸಕ್ತಿಕರ ಸಂಗತಿಗಳು:

  • ಸರಿಸುಮಾರು 400 ಬಗೆಯ ಬಿಯರ್ ಬ್ರ್ಯಾಂಡ್ ಗಳಿದ್ದು, ಬೆಲ್ಜಿಯಂಗೆ ಹೋದರೆ ಎಲ್ಲಾ ಬ್ರ್ಯಾಂಡ್ ಗಳು ಸಿಗುತ್ತದೆ.
  • ಮೊದಲಿಗೆ ಬೀರ್ ಅನ್ನು ಚಿಚಾ ಎಂಬ ವಸ್ತುವಿನಿಂದ ತಯಾರಿಸಲಾಯಿತು ಎನ್ನಲಾಗಿದೆ.
  • 1716ರಿಂದ ಇಂಗ್ಲೆಡ್‌ನ ಬಿಯರ್‌ ಅನ್ನು ಭಾರತಕ್ಕೆ ಆಮದುಕೊಳ್ಳಲಾಗಿತ್ತು.
  • ಕ್ರಿಸ್ತಪೂರ್ವ 1500ಕ್ಕೂ ಮೊದಲು ಭಾರತೀಯರು ಅಕ್ಕಿಯಿಂದ ತಯಾರಿಸಿದ ಬಿಯರ್‌ ಕುಡಿಯುತ್ತಿದ್ದರಂತೆ.
  • ವೇದಗಳ ಕಾಲದಲ್ಲೇ ಬಿಯರ್‌ ಇತ್ತು. ಆದರೆ ಇದನ್ನು ಸುರ ಎಂಬ ಹೆಸರಿನಲ್ಲಿ ಕರೆಯುತ್ತಿದ್ದರು.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ