Menopause: ಮುಟ್ಟು ನಿಲ್ಲುವ ಸಮಯದಲ್ಲಿ ಮಹಿಳೆಯರು ಮಾನಸಿಕ ಹಾಗೂ ದೈಹಿಕ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು? ಇಲ್ಲಿವೆ ಸಲಹೆಗಳು

| Updated By: ನಯನಾ ರಾಜೀವ್

Updated on: Sep 14, 2022 | 12:26 PM

ಮುಟ್ಟು ನಿಲ್ಲುವ ಸಮಯದಲ್ಲಿ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ, ಅವು ದೈಹಿಕವಾಗಿಯೂ ಇರಬಹುದು ಅಥವಾ ಮಾನಸಿಕವಾಗಿಯೂ ಇರಬಹುದು.

Menopause: ಮುಟ್ಟು ನಿಲ್ಲುವ ಸಮಯದಲ್ಲಿ ಮಹಿಳೆಯರು ಮಾನಸಿಕ ಹಾಗೂ ದೈಹಿಕ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು? ಇಲ್ಲಿವೆ ಸಲಹೆಗಳು
Menopause
Follow us on

ಮುಟ್ಟು ನಿಲ್ಲುವ ಸಮಯದಲ್ಲಿ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ, ಅವು ದೈಹಿಕವಾಗಿಯೂ ಇರಬಹುದು ಅಥವಾ ಮಾನಸಿಕವಾಗಿಯೂ ಇರಬಹುದು. ಒಬ್ಬೊಬ್ಬರು ಒಂದೊಂದು ರೀತಿಯ ತೊಂದರೆಯನ್ನು ಅನುಭವಿಸುತ್ತಾರೆ. ಕೆಲವು ಮಹಿಳೆಯರಿಗೆ ಋತುಚಕ್ರ ಸರಿಯಾದ ಸಮಯಕ್ಕೆ ಆಗುತ್ತಿರುತ್ತದೆ, ಏಕಾಏಕಿ ನಿಂತುಬಿಡುತ್ತದೆ.

ಆದರೆ ಇನ್ನೂ ಕೆಲವು ಮಹಿಳೆಯರಿಗೆ ನಾಲ್ಕೈದು ತಿಂಗಳು ಮುಟ್ಟಾಗುವುದೇ ಇಲ್ಲ, ಬಳಿಕ ಆಗುತ್ತಾರೆ ಮತ್ತೆ ನಾಲ್ಕೈದು ತಿಂಗಳು ಆಗುವುದೇ ಇಲ್ಲ. ಇನ್ನೂ ಕೆಲವು ಮಹಿಳೆಯರು ಮುಟ್ಟಾಗುವ ಸಮಯದಲ್ಲಿ ತುಂಬಾ ರಕ್ತಸ್ರಾವವಿರುತ್ತದೆ, ಅದು 15 ದಿನಗಳ ಕಾಲ ಮುಂದುವರೆಯಲೂಬಹುದು.

ಇನ್ನೂ ಕೆಲವು ಮಹಿಳೆಯರಿಗೆ ತಿಂಗಳಲ್ಲಿ ಎರಡು ಬಾರಿ ಮುಟ್ಟು ಬರುವುದುಂಟು. ಇದು ಕ್ರಮೇಣವಾಗಿ ಅವರ ಮನಸ್ಸಿನ ಮೇಲೆ ಪರಿಣಾಮವನ್ನು ಬೀರುತ್ತದೆ.

ಸಾಮಾನ್ಯವಾಗಿ 46.2 ವರ್ಷಗಳ ಬಳಿಕ ಮುಟ್ಟು ನಿಲ್ಲುತ್ತದೆ. ಮುಟ್ಟು ನಿಲ್ಲುವ ಸಮಯದಲ್ಲಿ ಬೆನ್ನುನೋವು, ತಲೆ ನೋವು, ಹೊಟ್ಟೆ ನೋವು, ಅತಿಯಾಗಿ ಬೆವರುವುದು, ನಿದ್ರೆಯಲ್ಲಿ ತೊಂದರೆ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಮುಟ್ಟು ನಿಂತಿದೆ ಆದರೆ ಯಾವ ಸಮಸ್ಯೆಯೂ ಆಗಿಲ್ಲ ಎಂದು ಹೇಳುವವರು ತುಂಬಾ ಕಡಿಮೆ. ಹಾಗಾದರೆ ಮುಟ್ಟಿನ ಸಮಯದಲ್ಲಿ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು, ಸಲಹೆಗಳು ಇಲ್ಲಿವೆ.

ಡಯೆಟ್ ಹೀಗಿರಲಿ
ಮುಟ್ಟು ನಿಲ್ಲುವ ಸಮಯದಲ್ಲಿ ಡಯೆಟ್ ಮಾಡಿ, ಉತ್ತಮ ಆಹಾರವನ್ನು ಸೇವಿಸಿ.

ಹಣ್ಣುಗಳು ಮತ್ತು ತರಕಾರಿಗಳು: ವಿಟಮಿನ್ಸ್​ಗಳು, ಮಿನರಲ್ಸ್​ಗಳು, ಆಂಟಿಆಕ್ಸಿಡೆಂಟ್ಸ್​ ನಿಮ್ಮ ದೇಹಕ್ಕೆ ಬೇಕು. ಆದರೆ ಸೀಸನಲ್ ಹಣ್ಣುಗಳನ್ನು ಹೊರತುಪಡಿಸಿ ಬೇರೆ ಹಣ್ಣುಗಳನ್ನು ತಿನ್ನಬೇಡಿ.

ಫೈಬರ್: ಫೈಬರ್, ವಿಟಮಿನ್​ ಡಿ, ಕ್ಯಾಲ್ಸಿಯಂ ಹೆಚ್ಚಿರುವ ಆಹಾರವನ್ನು ಸೇವಿಸಿ. ಇದು ನಿಮ್ಮ ಆರೋಗ್ಯ, ಕಿಡ್ನಿಗೆ ಸಹಾಯ ಮಾಡುತ್ತದೆ.
ಇವುಗಳನ್ನು ತಿನ್ನಬೇಡಿ

-ಮಾಂಸಗಳು, ಕರಿದ ಆಹಾರ ಪದಾರ್ಥಗಳು, ಹೆಚ್ಚು ಸೋಡಿಯಂ ಯುಕ್ತ ಆಹಾರಗಳು. ಸ್ನ್ಯಾಕ್ಸ್​ಗಳನ್ನು ತಿನ್ನಬೇಡಿ.
-ಮದ್ಯಪಾನ: ಪ್ರತಿದಿನವೂ ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದಾಗಿ ಚೆನ್ನಾಗಿ ನಿದ್ರೆ ಬರುವುದಿಲ್ಲ, ಇದರಿಂದ ನಿಮ್ಮ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ.

ಕೆಫೀನ್: ನಿತ್ಯ ಹೆಚ್ಚು ಕೆಫೀನ್​ಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಅದರ ಬದಲು ಬೇರೆ ಪಾನೀಯಗಳನ್ನು ಬಳಕೆ ಮಾಡಿ.
ಸದಾ ಚಟುವಟಿಕೆಯಿಂದಿರಿ: ನೀವು ನಿತ್ಯ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹ ಸದೃಢವಾಗುತ್ತದೆ. ಆದಷ್ಟು ತೂಕವನ್ನು ಕಡಿಮೆ ಮಾಡಿಕೊಳ್ಳುವ ಆಲೋಚನೆ ಮಾಡಿ.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ