G. K. Govind Rao ; ಇದು ಪ್ರೊ. ಜಿಕೆಜಿಯವರ ದತ್ತುಪುತ್ರಿಯ ‘ಆಶಾವಾದ’

The Great Power : ‘ಇಂದು ಅಧ್ಯಯನಶೀಲ, ವಸ್ತುನಿಷ್ಠ, ಪ್ರಜ್ಞಾವಂತ, ಪ್ರಜಾಪ್ರಭುತ್ವವಾದಿಯಾದ ಮನಸ್ಸು ನಮ್ಮಿಂದ ದೂರವಾಗಿದೆ ಎನ್ನುವುದು ಸಣ್ಣ ಸಂಗತಿಯಲ್ಲ. ಅವರ ನೆನಪುಕ್ಕಿದಾಗೆಲ್ಲಾ ಅವರಂತೆಯೇ ಬದುಕಿಬಿಡಬೇಕು ಎಂದು ಮನಸ್ಸು ತಹತಹಿಸುತ್ತದೆ. ಆದರೆ, ‘ನನ್ನ ಇರಾದೆಯ ಹಾಗೆ ಬದುಕಬೇಕು ಅದೂ 84ರ ವಯಸ್ಸಿನಲ್ಲಿ’ ಎನ್ನುವುದಿದೆಯಲ್ಲ ಖಂಡಿತ ಸುಲಭದ್ದಲ್ಲ!’

G. K. Govind Rao ; ಇದು ಪ್ರೊ. ಜಿಕೆಜಿಯವರ ದತ್ತುಪುತ್ರಿಯ ‘ಆಶಾವಾದ’
ಪ್ರೊ. ಜಿ. ಕೆ. ಗೋವಿಂದ ರಾವ್ ಮತ್ತು ಡಾ. ಎಂ. ಎಸ್ ಆಶಾದೇವಿ
Follow us
ಶ್ರೀದೇವಿ ಕಳಸದ
|

Updated on:Oct 15, 2021 | 4:57 PM

G. K. Govind Rao : ಜಿಕೆಜಿ, ‘ಬದುಕಿರುವವರೆಗೂ ಯಾವ ಹುದ್ದೆಯನ್ನೂ ಬಯಸದ ನೀವು, ಲೋಕದ ಜೊತೆ ಸ್ನೇಹ ಜಗಳ ಎಲ್ಲವನ್ನೂ ಉಳಿಸಿಕೊಂಡು ಹೋದಿರಿ. ಅದನ್ನು ನಮಗೂ ಕಲಿಸಿದಿರಿ. ಒಂದೊಳ್ಳೆ ಪುಸ್ತಕ ಬಂತೆಂದರೆ, ತಕ್ಷಣವೇ ಓದು, ಈಗಲೇ ತಂದುಕೊಡು ಅಂತೆಲ್ಲ ಇನ್ನು ಯಾರು ಹೇಳುತ್ತಾರೆ ನನಗೆ? ಕಲಬುರ್ಗಿ, ಕೀರಂ ಮತ್ತು ನೀವು ನಿಮ್ಮಂಥವರು ನನಗೆ, ನನ್ನಂಥವರಿಗೆಲ್ಲ ದೊಡ್ಡ ಶಕ್ತಿ. ನಿಮ್ಮ ಯಾರ ನಂಬರುಗಳೂ ನನ್ನ ಮೊಬೈಲಿನಿಂದ ಡಿಲೀಟ್ ಆಗಲಾರವು, ಅವು ಹಾಗೆಯೇ ಇರಬೇಕು. ನೀವೆಲ್ಲ ಯಾವಾಗಲೂ ನಮ್ಮೊಂದಿಗಿರುತ್ತೀರಿ ಮಾರ್ಗದರ್ಶಕರಂತೆ.’ ಡಾ. ಎಂ. ಎಸ್. ಆಶಾದೇವಿ, ಹಿರಿಯ ವಿಮರ್ಶಕರು

‘ನಾಗಭೂಷಣಾ, ಅಲ್ಲಿ ಶಿವಮೊಗ್ಗದಲ್ಲಿ ನನ್ನ ದತ್ತುಮಗಳಿದಾಳೆ. ಒಮ್ಮೆ ಹೋಗಿ ಭೇಟಿಯಾಗಿ ಬಾರಪ್ಪಾ’ ಆಗಷ್ಟೇ ಶಿವಮೊಗ್ಗಕ್ಕೆ ಬಂದು ಬೀಡುಬಿಟ್ಟಿದ್ದ ಸಾಹಿತಿ ಡಿ. ಎಸ್. ನಾಗಭೂಷಣ ಅವರಿಗೆ (ಪ್ರೊ. ಜಿ.ಕೆ. ಗೋವಿಂದ ರಾವ್) ಆಗಾಗ ಹೇಳುತ್ತಿದ್ದರಂತೆ. ಒಮ್ಮೆ ನಾಗಭೂಷಣ ಅವರು ಫೋನ್ ಮಾಡಿ, ‘ನೋಡಿ, ಆಗಾಗ ಜಿಕೆಜಿ ಹೀಗೆ ಹೇಳುತ್ತಿರುತ್ತಾರೆ. ಮತ್ತೆ ಅವರ ಮಗಳು ಯಾರು, ಎಲ್ಲಿರುತ್ತಾರೆ, ನಿಮಗೇನಾದರೂ ಗೊತ್ತೇ?’ ಎಂದು ಕೇಳಿದರು. ಜೋರಾಗಿ ನಕ್ಕು, ‘ನಾನೇ ದತ್ತುಮಗಳು’ ಎಂದೆ.

ಜಿಕೆಜಿ ಎಂದರೆ ದೊಡ್ಡ ಶಕ್ತಿ. ತಂದೆಯ ವಾತ್ಸಲ್ಯ, ಅಧಿಕಾರ ಎರಡೂ ಅವರ ಧ್ವನಿಯಲ್ಲಿ ಇರುತ್ತಿತ್ತು. ಫೋನ್ ಮಾಡದಿದ್ರೆ ತಾವೇ ಫೋನ್ ಮಾಡಿ, ‘Hey! My bad girl, how are you?’ ಎನ್ನುತ್ತಿದ್ದರು.

ಅವರ ‘ಗಾಂಧೀಜಿಯ ಉಪವಾಸಗಳು ಮತ್ತು…’ ಕೊನೆಯ ಪುಸ್ತಕಕ್ಕೆ ನನ್ನಿಂದ ಮುನ್ನುಡಿ ಬರೆಸಿದ್ದು ನನಗೀಗ ನೆನಪಾಗುತ್ತಿದೆ. ಈ ಜವಾಬ್ದಾರಿಯನ್ನು ನನಗೆ ವಹಿಸುವ ಮೊದಲು ಅವರೊಂದಿಗೆ ಒಡನಾಡಿಕೊಂಡಿದ್ದ ನಮಗೆಲ್ಲ ನಾಲ್ಕು ಸಲ ಬದಲಾಯಿಸಿದ ಡ್ರಾಫ್ಟ್​ ಅನ್ನು ಓದಲು ಕೊಟ್ಟಿದ್ದರು. ‘ನಿನ್ನ ಅಭಿಪ್ರಾಯಕ್ಕೂ ನನ್ನ ಬಳಿ ಬೆಲೆ ಇದೆ’ ಎಂದು ಹೇಳುವ ಪರಿಸ್ಥಿತಿ ಕಡಿಮೆ ಇರುವಂಥ ಕಾಲದಲ್ಲಿ ನಾವಿದ್ದೇವೆ ಎನ್ನುವುದನ್ನು ನಾನಿಲ್ಲಿ ಹೇಳಲು ಇಚ್ಛಿಸುತ್ತಿದ್ದೇನೆ.

ಹಿಂದೆ ನ್ಯಾಮತಿಯ ಕಾಲೇಜಿನಲ್ಲಿ ನಾನು ಕೆಲಸ ಮಾಡುತ್ತಿದ್ದಾಗ, ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಹೋಟೆಲ್​ನಲ್ಲಿ ರೂಮ್ ಬುಕ್ ಮಾಡುತ್ತೇನೆಂದರೂ ಒಪ್ಪಲಿಲ್ಲ. ನಮ್ಮ ಮನೆಗೆ ಬಂದು ಉಳಿದುಕೊಳ್ಳಿ ಎಂದರೂ ಕೇಳಲಿಲ್ಲ. ಕೊನೆಗೆ ಸ್ವಂತ ಖರ್ಚಿನಲ್ಲಿ ರೂಮು ಮಾಡಿ ಉಳಿದುಕೊಂಡರು. ಆ ಕಾರ್ಯಕಮಕ್ಕೆ ಒಬ್ಬ ಶಾಸಕರನ್ನು ಆಹ್ವಾನಿಸಿದ್ದೆವು. ‘ಐದು ನಿಮಿಷ ಕಾಯುತ್ತೇನೆ, ಅವರು ಬರದಿದ್ದರೆ ಹೊರಟು ಹೋಗುತ್ತೇನೆ’ ಎಂದರು. ಸದ್ಯ ಮಹಾನುಭಾವರು ಬಂದರು; ಕೈಕಾಲಿಗೆಲ್ಲ ಬ್ಯಾಂಡೇಜು ಹಾಕಿಕೊಂಡಿದ್ದರು. ‘ಏನ್ರೀ? ನೀವೇ ಮುರಿದುಕೊಂಡ್ರಾ ಅಥವಾ ಯಾರಾದರೂ ಮುರಿದರಾ?’ ಎಂದು ಜಿಕೆಜಿ ನೇರ ಕೇಳಿಬಿಟ್ಟರು. ಅಂಥಾ ನೇರವಂತಿಕೆಯ ಸ್ವಭಾವ. ನಂತರ ನಮ್ಮ ಮನೆಗೆ ಬಂದರು. ಅವರಿಗೆ ತಾಲೀಪಟ್ಟೆಂದರೆ ತುಂಬಾ ಇಷ್ಟ. ಆ ದಿನ ಬಂದು, ನಾನು ಮಾಡಿದ ತಾಲೀಪಟ್ಟು ಸವಿದು, ತನ್ನಮ್ಮನ ತಾಲೀಪಟ್ಟನ್ನು ನೆನೆಯುತ್ತ ಬೆಂಗಳೂರಿಗೆ ಮರಳಿದರು.

ಹೀಗೆ ಒಮ್ಮೆ, ನಾಟಕಕ್ಕೆ ಮಗನನ್ನೂ ಕರೆದುಕೊಂಡು ಬಾ ಎಂದರು. ಅಯ್ಯೋ ಅವನಿಗೆ ಕಾಲೇಜು ಎಂದೆ. ‘ಕಾಲೇಜ್ ನನ್ನ ಬಡಿಯಾ, ಕಿಂಗ್ ಲಿಯರ್ ನಾಟಕಕ್ಕಿಂತ ಆ ಕಾಲೇಜೇನು ದೊಡ್ಡದಾ?’ ಅಂಥ ಜೀವನಪ್ರೀತಿ. ಒಳ್ಳೆಯ ಅಭಿರುಚಿ; ಓದು, ಕಾಫಿ, ತಿನಿಸು, ಊಟ ಎಲ್ಲದರಲ್ಲಿಯೂ. ಒಮ್ಮೆ ನಾನು ವೈದೇಹಿ ಇನ್ನೊಬ್ಬರು ಯಾರೋ, ನೆನಪಾಗುತ್ತಿಲ್ಲ ಸದ್ಯಕ್ಕೆ. ಮೂವರೂ ಸೇರಿ ಅವರ ಮನೆಗೆ ಹೋದೆವು. ನಮ್ಮ ಮನೆಗೆ ಮೂವರು ದೇವಿಯವರು ಬಂದಿದಾರೆ ನೋಡಿರೋ! ಎಂದು ಸಂತಸಪಟ್ಟರು.

ಸದಾ ಓದು ಓದು ಓದು. ಕೊನೇತನಕ ಓದು. ವಿಚಾರವನ್ನು ಒಪ್ಪಲಿ ಬಿಡಲಿ ಅದನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡುಬಿಡಬೇಕು ಎನ್ನುವ ತುಡಿತ. ಆದರೆ, ಕೊನೆಗಳಿಗೆ ತನಕ ಹೊಂದಾಣಿಕೆ ಎನ್ನುವುದನ್ನು ತನ್ನ ಬಳಿ ಸುಳಿಯಲು ಬಿಡಲೇ ಇಲ್ಲ. ಸಾರ್ವಜನಿಕವಾಗಿ ಪ್ರಜಾವಾಣಿಯ ವಾಚಕರ ವಾಣಿಗೆ ಅದೆಷ್ಟು ಪತ್ರಗಳನ್ನು ಬರೆದರೆಂದರೆ… ಲೆಕ್ಕವಿಲ್ಲ. ಹಾಗೆಯೇ ಒಬ್ಬರ ಮೇಲೆ ವಿಶ್ವಾಸವಿಟ್ಟರೆಂದರೆ ಮುಗಿಯಿತು. ಎಲ್ಲಾದರೂ ಅನ್ಯಾಯ ನಡೆದಿದೆ ಎಂದಾಗ, ಅವರಿಗೆ ಕೇಳದೆಯೂ ನಾನು ಅವರ ಹೆಸರನ್ನು ನಮೂದಿಸಿದ್ದಿದೆ! ‘ನೀನೇನು ಮಾಡಿದರೂ ಸರಿಯಾದ ನಿರ್ಧಾರವನ್ನೇ ಮಾಡುತ್ತೀ’ ಎನ್ನುತ್ತಿದ್ದರು.

ಸಾಕು… ಈ ವಯಸ್ಸಿನಲ್ಲಿ ಯಾಕಿಷ್ಟು ಕೋಪ? ಎಂದಾಗೆಲ್ಲ, ‘ಯಾಕೆ, ಯಾವನಿಗೆ ತಲೆ ಬಗ್ಗಿಸಬೇಕು?’ ನೋಡಬೇಕಿತ್ತು ಆಗೆಲ್ಲಾ ಅವರ ಕಣ್ಣುಗಳಲ್ಲಿನ ತೀಕ್ಷ್ಣತೆ, ಕೇಳಬೇಕಿತ್ತು ನಾಭಿಯಿಂದ ಹೊಮ್ಮುವ ಆ ಧ್ವನಿ. ಸ್ವಲ್ಪ ಹೊತ್ತಿನ ನಂತರ, ‘ಏನು ಮಾಡುವುದು ಈ ವಯಸ್ಸಿನಲ್ಲಿಯೂ ನನಗೆ ರಕ್ತ ಕುದಿಯುತ್ತದೆ’ ಎನ್ನುತ್ತ ಮೌನವಾಗುತ್ತಿದ್ದರು.

ಇಂದು ಅಧ್ಯಯನಶೀಲ, ವಸ್ತುನಿಷ್ಠ, ಪ್ರಜ್ಞಾವಂತ, ಪ್ರಜಾಪ್ರಭುತ್ವವಾದಿಯಾದ ಮನಸ್ಸು ನಮ್ಮಿಂದ ದೂರವಾಗಿದೆ ಎನ್ನುವುದು ಸಣ್ಣ ಸಂಗತಿಯಲ್ಲ. ಅವರ ನೆನಪುಕ್ಕಿದಾಗೆಲ್ಲಾ ಅವರಂತೆಯೇ ಬದುಕಿಬಿಡಬೇಕು ಎಂದು ಮನಸ್ಸು ತಹತಹಿಸುತ್ತದೆ. ಆದರೆ, ‘ನನ್ನ ಇರಾದೆಯ ಹಾಗೆ ಬದುಕಬೇಕು ಅದೂ 84ರ ವಯಸ್ಸಿನಲ್ಲಿಯೂ’ ಎನ್ನುವುದಿದೆಯಲ್ಲ ಖಂಡಿತ ಸುಲಭದ್ದಲ್ಲ!

ಇನ್ನು ಬದುಕಿನುದ್ದಕ್ಕೂ ಪ್ರಭುತ್ವದ ಛಾಯೆಗಳನ್ನು ಅವರು ಯಾವತ್ತೂ ಸಹಿಸಿಕೊಳ್ಳಲೇ ಇಲ್ಲ. ಹಿಂದೆ ಹೆಗ್ಗೋಡಿನಲ್ಲಿ ಮೊದಲ ಸಲ ಭಾಷಣ ಮಾಡಿದ್ದೆ. ‘ಹೆಣ್ಣು ಮತ್ತು ಹಿಂಸೆ’ ಎನ್ನುವ ವಿಷಯದ ಮೇಲೆ. ಮುಗಿದ ತಕ್ಷಣ ಬಂದು ತಬ್ಬಿಕೊಂಡು, ತಕ್ಷಣವೇ ಪತ್ರಿಕೆಗೆ ಆ ಭಾಷಣದ ಬಗ್ಗೆ ಬರೆದು ಕಳಿಸಿದರು. ಆಗ, ‘ಗಂಡಸರಾದ ನಮಗೇ ನಮ್ಮ ಬಗ್ಗೆ ಕಾಣದ  ಕೊಳಕು ಮುಖಗಳನ್ನೆಲ್ಲ ಆಶಾದೇವಿ ಅವಳ ಮಾತಿನಲ್ಲಿ ಹಿಡಿದು ತೋರಿಸಿದಳು’ ಎಂದಿದ್ದರು. ಈ ಪ್ರಾಮಾಣಿಕತೆ ಎಲ್ಲರಲ್ಲೂ ಸಿಗುವುದಿಲ್ಲ.

ಕೊನೆಯವರೆಗೂ ಅವರು ಸ್ವಂತ ಮನೆ ಮಾಡಿಕೊಳ್ಳದೆ, ಭೋಗ್ಯದಲ್ಲಿಯೇ ಇದ್ದರು. ‘ಯಾಕೆ ಬೇಕು ಮನೆ? ನನ್ನಿಬ್ಬರೂ ಹೆಣ್ಣುಮಕ್ಕಳು ಚೆನ್ನಾಗಿ ಬದುಕುತ್ತಿದ್ದಾರೆ. ಇನ್ನು ನಾನು ನನ್ನ ಹೆಂಡತಿ. ನಮಗೇತಕ್ಕೆ ಮನೆ, ಆರಾಮಾಗಿಲ್ಲವೆ?’ ಎನ್ನುತ್ತಿದ್ದರು. ಪತ್ನಿ ಮಂಜುಳಾ ಕೂಡ ರಂಗಭೂಮಿ ಸಿನೆಮ ಕಲಾವಿದೆಯಾಗಿದ್ದರು. ಪರಸ್ಪರ ಬಹಳ ಮುಕ್ತವಾಗಿದ್ದರು. ಅವರವರ ‘ಏಕಾಂತ’ಕ್ಕೆ ತೊಂದರೆಯಾಗದಂತೆ ಸಂಬಂಧವನ್ನು ನಿಭಾಯಿಸಿಕೊಂಡು ಬಂದ ಬಾಂಧವ್ಯ ಅದಾಗಿತ್ತು.

ಜಿಕೆಜಿ, ‘ಬದುಕಿರುವವರೆಗೂ ಯಾವ ಹುದ್ದೆಯನ್ನೂ ಬಯಸದ ನೀವು, ಲೋಕದ ಜೊತೆ ಸ್ನೇಹ ಜಗಳ ಎಲ್ಲವನ್ನೂ ಉಳಿಸಿಕೊಂಡು ಹೋದಿರಿ. ಅದನ್ನು ನಮಗೂ ಕಲಿಸಿದಿರಿ. ಒಂದೊಳ್ಳೆ ಪುಸ್ತಕ ಬಂತೆಂದರೆ, ತಕ್ಷಣವೇ ಓದು, ಈಗಲೇ ತಂದುಕೊಡು ಅಂತೆಲ್ಲ ಇನ್ನು ಯಾರು ಹೇಳುತ್ತಾರೆ ನನಗೆ? ಕಲಬುರ್ಗಿ, ಕೀರಂ ಮತ್ತು ನೀವು ನಿಮ್ಮಂಥವರು ನನಗೆ, ನನ್ನಂಥವರಿಗೆಲ್ಲ ದೊಡ್ಡ ಶಕ್ತಿ. ನಿಮ್ಮ ಯಾರ ನಂಬರುಗಳೂ ನನ್ನ ಮೊಬೈಲಿನಿಂದ ಡಿಲೀಟ್ ಆಗಲಾರವು, ಅವು ಹಾಗೆಯೇ ಇರಬೇಕು. ನೀವೆಲ್ಲ ಯಾವಾಗಲೂ ನಮ್ಮೊಂದಿಗಿರುತ್ತೀರಿ ಮಾರ್ಗದರ್ಶಕರಂತೆ.’

ಇದನ್ನೂ ಓದಿ : G. K. Govind Rao : ‘ಅಧ್ಯಾಪಕ ವೃಂದದಲ್ಲಿ ಸ್ವಾಯತ್ತತೆಯ ಪರಿಕಲ್ಪನೆ ಉಳಿದುಕೊಂಡಿದೆಯೇ?’

ಇದನ್ನೂ ಓದಿ : G. K. Govind Rao : ‘ಓಹೋ, ಬೆಳಗಾಗಿ ಈ ದೈತ್ಯರ ಮುಖ ನೋಡಬೇಕು ನಾನು?’

ಇದನ್ನೂ ಓದಿ : G. K. Govind Rao : ‘ಪ್ರೊಫೆಸರ್, ಇನ್ನ್ಯಾರೊಂದಿಗೆ ನಾನು ಜಗಳವಾಡಲಿ’ ನಿರ್ದೇಶಕ ಟಿ.ಎನ್. ಸೀತಾರಾಮ್

Published On - 4:44 pm, Fri, 15 October 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ