AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

G. K. Govind Rao : ‘ಅಧ್ಯಾಪಕ ವೃಂದದಲ್ಲಿ ಸ್ವಾಯತ್ತತೆಯ ಪರಿಕಲ್ಪನೆ ಉಳಿದುಕೊಂಡಿದೆಯೇ?’

NEP 2020 : ಜಿಕೆಜಿ ಅವರನ್ನು ಈಗಷ್ಟೇ 60 ದಾಟಿದ ನಮ್ಮಂಥವರು ಮಾತ್ರ ನೆನಪಿಸಿಕೊಳ್ಳುತ್ತಿದ್ದೇವೆ. ಶಿಕ್ಷಕರು ಎಂದರೆ  ತಲೆಮಾರುಗಳನ್ನು, ನಾಗರಿಕತೆಗಳನ್ನು, ಸಂಸ್ಕೃತಿಗಳನ್ನು ರೂಪಿಸಿದಂಥದವರು ಮತ್ತು ರೂಪಿಸುವಂಥವರು. ಪ್ರಸ್ತುತ, ಹೊಸ ಶಿಕ್ಷಣ ನೀತಿಯ ಬಗ್ಗೆ ನಮ್ಮ ಕಾಲೇಜು ಅಧ್ಯಾಪಕರುಗಳ ಧ್ವನಿ ಕೇಳಿಬರುತ್ತಿದೆಯೇ?’ ಡಾ. ಎನ್​. ಮನು ಚಕ್ರವರ್ತಿ

G. K. Govind Rao : ‘ಅಧ್ಯಾಪಕ ವೃಂದದಲ್ಲಿ ಸ್ವಾಯತ್ತತೆಯ ಪರಿಕಲ್ಪನೆ ಉಳಿದುಕೊಂಡಿದೆಯೇ?’
ಡಾ. ಎನ್. ಮನು ಚಕ್ರವರ್ತಿ ಮತ್ತು ಪ್ರೊ. ಜಿ. ಕೆ. ಗೋವಿಂದ ರಾವ್
ಶ್ರೀದೇವಿ ಕಳಸದ
|

Updated on:Oct 15, 2021 | 2:47 PM

Share

G. K. Govind Rao : ಎಡಪಂಥೀಯ, ಬಲಪಂಥೀಯ, ಮಧ್ಯಪಂಥೀಯ ಎಲ್ಲರೊಂದಿಗೂ ಅವರು ಮುಕ್ತವಾಗಿ ಸಂವಹನ ಮಾಡುತ್ತಿದ್ದರು. ಅವರಿಗೆ ಅವರದೇ ಆದ ಸಿದ್ಧಾಂತಗಳಿದ್ದರೂ, ಸಂವಾದಕ್ಕೆ ತೊಡಗಿದಾಗ ಏಕಮುಖಿ ಸಿದ್ಧಾಂತಕ್ಕೆ ಎಂದೂ ಕಟ್ಟುಬೀಳುತ್ತಿರಲಿಲ್ಲ. ಬಲ ಎಂದು ಕರೆಯುವಲ್ಲಿ, ಎಡ ಎಂದು ಕರೆಯುವಲ್ಲಿ ಶ್ರೇಷ್ಠವಾದಂಥ ವಿಷಯಗಳಿವೆ. ಅಂಥವುಗಳೊಂದಿಗೆ ಮುಕ್ತವಾಗಿ ಒಳಗೊಳ್ಳಬೇಕು ಎನ್ನುತ್ತಿದ್ದರು. ಗಾಂಧೀಜಿಯನ್ನು ಭಕ್ತನಂತೆ ಪೂಜಿಸುತ್ತಿದ್ದರು. ಹಿಂದೂ ಮುಸ್ಲಿಮ್ ವಿಚಾರವಾಗಿ ಗಾಂಧಿಯ ಭಕ್ತನನ್ನು ಅವರಲ್ಲಿ ಕಾಣಬಹುದಾಗಿತ್ತು. ಕೋಮು ಗಲಭೆಗಳಾದಾಗ ಧೈರ್ಯದಿಂದ ತಮ್ಮ ವಿಚಾರಗಳನ್ನು ಗಟ್ಟಿಯಾದ ಧ್ವನಿಯಲ್ಲಿ ವ್ಯಕ್ತಿಪಡಿಸುತ್ತಿದ್ದರು. ಸಾಹಿತ್ಯದ ಅಧ್ಯಾಪಕ, ಅಭಿಮಾನಿಯಾಗಿ, ಸಮಾಜ ಮತ್ತು ಸಂಸ್ಕೃತಿಯ ವಿಷಯವಾಗಿ ಏಳುವ ವಿಚಾರಗಳ ಬಗ್ಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಬದುಕಿದಂಥ ಉಗ್ರ ಮನುಷ್ಯ ಅವರು. ಡಾ. ಎನ್. ಮನು ಚಕ್ರವರ್ತಿ, ಹಿರಿಯ ವಿಮರ್ಶಕ

ಎಷ್ಟು ಉಗ್ರವೋ ಅಷ್ಟೇ ಪ್ರೀತಿಯಿಂದ ಕೂಡಿದ ವ್ಯಕ್ತಿತ್ವ ಅವರದು. ಸಾಹಿತ್ಯವೆಂದರೆ ದೊಡ್ಡ ಪ್ಯಾಷನ್ ಮತ್ತು ಒಂದು ರೀತಿ ಅಂಧಾಭಿಮಾನ ಕೂಡ. ಹುಚ್ಚು ಹಿಡಿಯುವಷ್ಟು ಶೇಕ್ಸ್​ಪಿಯರನ ಮೇಲೆ ಪ್ರೀತಿ.  ಜಯನಗರದ ನ್ಯಾಷನಲ್ ಕಾಲೇಜಿನ ಎದುರಿಗಿದ್ದ ಒಂದು ಮನೆಯ ಮಹಡಿಯಲ್ಲಿದ್ದರು. ಅವರು ಇಂಗ್ಲಿಷ್​ ಅನ್ನು ಬೋಧಿಸಿದ್ದು ಕಾಮರ್ಸ್ ಕಾಲೇಜಿನಲ್ಲಿ. ಅಲ್ಲಿಯ ಆ ಹುಡುಗರಿಗೆ ಪ್ಯಾಷನ್​ನಿಂದ ಸಾಹಿತ್ಯದ ಒಲವು ಮೂಡಿಸಿದರು ಮತ್ತು ಚಳವಳಿಯ ಕಿಡಿ ಹಚ್ಚಿದರೆಂದರೆ ಯೋಚಿಸಿ. ನನಗಿಂತ ಸುಮಾರು 25 ವರ್ಷ ದೊಡ್ಡವರು. 35 ವರ್ಷಗಳ ಕಾಲ ಅವರೊಂದಿಗೆ ಒಡನಾಡಿಕೊಂಡಿದ್ದೆ.

ಇವರನ್ನು ಈಗಷ್ಟೇ 60 ದಾಟಿದ ನಮ್ಮಂಥವರು ಮಾತ್ರ ನೆನಪಿಸಿಕೊಳ್ಳುತ್ತಿದ್ದೇವೆ. ಶಿಕ್ಷಕರು ಎಂದರೆ  ತಲೆಮಾರುಗಳನ್ನು, ನಾಗರಿಕತೆಗಳನ್ನು, ಸಂಸ್ಕೃತಿಗಳನ್ನು ರೂಪಿಸಿದಂಥದವರು ಮತ್ತು ರೂಪಿಸುವಂಥವರು. ಪ್ರಸ್ತುತ, ಹೊಸ ಶಿಕ್ಷಣ ನೀತಿಯ ಬಗ್ಗೆ ನಮ್ಮ ಕಾಲೇಜು ಅಧ್ಯಾಪಕರುಗಳ ಧ್ವನಿ ಕೇಳಿಬರುತ್ತಿದೆಯೇ? ಈ ತನಕ ಅಧ್ಯಾಪಕರುಗಳ ಧ್ವನಿ ಕೇಳಿಬಂದಿದೆ ಎಂದರೆ ಚಿಲ್ಲರೆ ತಕರಾರುಗಳ ಬಗ್ಗೆ ಮಾತ್ರ. ಆದರೆ ಜಿಕೆಜಿ (ಜಿ. ಕೆ. ಗೋವಿಂದರಾವ್), ಅಧ್ಯಾಪಕರುಗಳ ಸ್ವಾಯತ್ತತೆಯ ಬಗ್ಗೆ ಯಾವ ಅಧಿಕಾರಶಾಹಿಯೂ, ಮಂತ್ರಿಯೂ ಕೈಹಾಕುವಂತಿಲ್ಲ ಮತ್ತು ಇದಕ್ಕೂ ರಾಜಕೀಯಕ್ಕೂ ಸಂಬಂಧವೇ ಇಲ್ಲ. ಐಎಎಸ್ ಅಧಿಕಾರಿಗಳಿಗೆ ಈ ಬಗ್ಗೆ ಏನು ಅರಿವಿದೆ? ಅಂತೆಲ್ಲ ಅಧ್ಯಾಪಕರುಗಳ ಸಂಘದ ಮೂಲಕ ಪ್ರಶ್ನಿಸುತ್ತಿದ್ದರು. ಜೊತೆಗೆ ಅವರಿಗೆ ಆಸಕ್ತಿ ಇಲ್ಲದ ಕ್ಷೇತ್ರಗಳೇ ಇರಲಿಲ್ಲ. ಎಲ್ಲಿ ಧ್ವನಿ ಎತ್ತಬೇಕೋ ಅದಕ್ಕೆ ಯಾವ ರೀತಿಯ ಸಂಘಟನೆಯ ಅವಶ್ಯಕತೆ ಇದೆಯೋ ಅದನ್ನು ನೈತಿಕ ಮತ್ತು ತಾತ್ವಿಕ ನೆಲೆಯಲ್ಲಿ ರೂಪಿಸುವ ಚಾಕಚಕ್ಯತೆ ಅವರಲ್ಲಿತ್ತು. ಇಂದು ಎಂಥ ಕಾನೂನುಗಳು ಜಾರಿಗೆ ಬರುತ್ತಿವೆ.. ಆದರೆ ಅಧ್ಯಾಪಕನ ಆತ್ಮಗೌರವ? ಅದೇನಿದ್ದರೂ ಸಂಘಟನೆಯ ಮೂಲಕವೇ ಆಗಬೇಕು ಎಂದು ತೋರಿಸಿಕೊಟ್ಟ ವ್ಯಕ್ತಿಗಳಲ್ಲಿ ಜಿಕೆಜಿ ಕೂಡ ಒಬ್ಬರು.

ಎಡಪಂಥೀಯ, ಬಲಪಂಥೀಯ, ಮಧ್ಯಪಂಥೀಯ ಎಲ್ಲರೊಂದಿಗೂ ಅವರು ಮುಕ್ತವಾಗಿ ಸಂವಹನ ಮಾಡುತ್ತಿದ್ದರು. ಅವರಿಗೆ ಅವರದೇ ಆದ ಸಿದ್ಧಾಂತಗಳಿದ್ದರೂ, ಸಂವಾದಕ್ಕೆ ತೊಡಗಿದಾಗ ಏಕಮುಖಿ ಸಿದ್ಧಾಂತಕ್ಕೆ ಎಂದೂ ಕಟ್ಟುಬೀಳುತ್ತಿರಲಿಲ್ಲ. ಬಲ ಎಂದು ಕರೆಯುವಲ್ಲಿ, ಎಡ ಎಂದು ಕರೆಯುವಲ್ಲಿ ಶ್ರೇಷ್ಠವಾದಂಥ ವಿಷಯಗಳಿವೆ. ಅಂಥವುಗಳೊಂದಿಗೆ ಮುಕ್ತವಾಗಿ ಒಳಗೊಳ್ಳಬೇಕು ಎನ್ನುತ್ತಿದ್ದರು. ಗಾಂಧೀಜಿಯನ್ನು ಭಕ್ತನಂತೆ ಪೂಜಿಸುತ್ತಿದ್ದರು. ಹಿಂದೂ ಮುಸ್ಲಿಮ್ ವಿಚಾರವಾಗಿ ಗಾಂಧಿಯ ಭಕ್ತನನ್ನು ಅವರಲ್ಲಿ ಕಾಣಬಹುದಾಗಿತ್ತು. ಕೋಮು ಗಲಭೆಗಳಾದಾಗ ಧೈರ್ಯದಿಂದ ತಮ್ಮ ವಿಚಾರಗಳನ್ನು ಗಟ್ಟಿಯಾದ ಧ್ವನಿಯಲ್ಲಿ ವ್ಯಕ್ತಿಪಡಿಸುತ್ತಿದ್ದರು. ಸಾಹಿತ್ಯದ ಅಧ್ಯಾಪಕ, ಅಭಿಮಾನಿಯಾಗಿ, ಸಮಾಜ ಮತ್ತು ಸಂಸ್ಕೃತಿಯ ವಿಷಯವಾಗಿ ಏಳುವ ವಿಚಾರಗಳ ಬಗ್ಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಬದುಕಿದಂಥ ಉಗ್ರ ಮನುಷ್ಯ ಅವರು.

ದ್ವೇಷ ಮಾಡುವವರನ್ನೂ ಅವರ ಪ್ರಜ್ಞೆಯನ್ನು ಪರಿವರ್ತನೆ ಮಾಡಬೇಕು ಎಂಬ ನಂಬಿಕೆ, ಪ್ರೀತಿಯನ್ನು ಇಟ್ಟುಕೊಂಡಂಥ ಮನುಷ್ಯ. ಕೆಲವೊಮ್ಮೆ ಎಚ್ಚರತಪ್ಪಿ ಕೂಗಾಡಿಬಿಡುತ್ತಿದ್ದರು. ನಂತರ ಯಾರಾದರೂ ತಿಳಿಹೇಳಿದರೆ, ಸಮಾಧಾನವಾಗುತ್ತಿದ್ದರು ಮತ್ತು ಅವರೇ ಶಾಂತಿಯ ವಾತಾವರಣವನ್ನೂ ಕಟ್ಟಿಕೊಡುತ್ತಿದ್ದರು. ನೇರವಾದ, ನಂಬಬಹುದಾದ, ಪ್ರೀತಿಸಬಹುದಾದ ಕೆಂಪುಮುಖದ, ಆಳಧ್ವನಿಯ, ಅಷ್ಟೇ ನಿರ್ಮಲವಾದ, ಪಾರದರ್ಶಕತೆಯ ಮನುಷ್ಯ. ಕುಹಕ ಇರಲಿಲ್ಲ, ತಟವಟ ಇರಲಿಲ್ಲ. ಕಪಟ ಇರಲಿಲ್ಲ. ಆದರೆ ಮುಗ್ಧತೆ ಇತ್ತು. ಮುಗ್ಧತೆ ಇದ್ದಲ್ಲಿ ಕೆಲ  ಅಜ್ಞಾನಲೇಪಿತವಾದದ್ದೂ ಇರುತ್ತದೆ. ಯಾರು ತಿಳಿಹೇಳಿದರೂ ಸಾಕು, ತಕ್ಷಣ ಎಚ್ಚೆತ್ತುಕೊಂಡುಬಿಡುವ ಗುಣ ಅವರಲ್ಲಿ ಇತ್ತಲ್ಲ ಅದು ಸ್ಮರಣೀಯ.

ಬೆಂಗಳೂರಿನಲ್ಲಿ ಸೈದ್ಧಾಂತಿಕವಾಗಿ ಎಡಪಂಥೀಯರ ವಲಯವೊಂದು ಇತ್ತು. ಅವರು ರಷ್ಯಾ ಮತ್ತು ಚೈನಾದ ನೀತಿಗಳನ್ನು ವಿರೋಧಿಸದೆ, ಬಂಡವಾಳಶಾಹಿ ಮತ್ತು ಬಲಪಂಥೀಯರುಗಳನ್ನು ಸುಲಭವಾಗಿ ವಿರೋಧಿಸುತ್ತಿದ್ದರು. ಆಗ ಜಿಕೆಜಿ ಅವರೊಂದಿಗೆ ಸಮಾಧಾನದಿಂದ, ಎಡಪಂಥೀಯರಿಗೆ ಅನೇಕ ವಿಷಯಗಳಲ್ಲಿ ಇರುವ ಕುರುಡು ಪ್ರಜ್ಞೆಯನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದರು. ಒಂದೇ ಸಿದ್ಧಾಂತಕ್ಕೆ ಅಡಿಯಾಳಾಗದಿರುವ ಮುಕ್ತಚಿಂತನೆಯ ಗುಣ ಅವರಲ್ಲಿತ್ತು. ಯಾವ ಯಾವ ಸಿದ್ಧಾಂತದಲ್ಲಿ ಏನನ್ನು ವಿರೋಧಿಸಬೇಕು ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ಬಲಪಂಥೀಯರನ್ನು ವಿರೋಧಿಸುವುದಷ್ಟೇ ಪ್ರಜಾಪ್ರಭುತ್ವವಾದಿಯಲ್ಲ. ಎಡಪಂಥೀಯರ ಕೆಲ ವಿಚಾರಗಳನ್ನೂ ವಿರೋಧಿಸಬೇಕು ಮತ್ತು ಉತ್ತಮ ಚಿಂತನೆಗಳನ್ನು ಸ್ವೀಕರಿಸಬೇಕು ಎನ್ನುತ್ತಿದ್ದರು. ಇಂಥ ಪ್ರಖರ ವಿಚಾರವಾದಿಯನ್ನು ಕಳೆದುಕೊಂಡ ನೋವು ನನಗಿದೆ.

ಇದನ್ನೂ ಓದಿ :G. K. Govind Rao : ‘ಪ್ರೊಫೆಸರ್, ಇನ್ನ್ಯಾರೊಂದಿಗೆ ನಾನು ಜಗಳವಾಡಲಿ’ ನಿರ್ದೇಶಕ ಟಿ.ಎನ್. ಸೀತಾರಾಮ್ 

ಇದನ್ನೂ ಓದಿ : G. K. Govind Rao : ‘ಓಹೋ, ಬೆಳಗಾಗಿ ಈ ದೈತ್ಯರ ಮುಖ ನೋಡಬೇಕು ನಾನು?’

Published On - 2:24 pm, Fri, 15 October 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ