Rajeshwari Tejaswi : ‘ಕಿರಗೂರಿನ ಗಯ್ಯಾಳಿಗಳು ; ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ನಿರ್ದೇಶಕಿಯೊಬ್ಬರು ಇದ್ದರೂ ಪ್ರಶಸ್ತಿ ಬರಲಿಲ್ಲ’

| Updated By: ಶ್ರೀದೇವಿ ಕಳಸದ

Updated on: Dec 14, 2021 | 2:06 PM

Poornachandra Tejaswi : ‘ಒಂದು ರೀತಿ ತೇಜಸ್ವಿಯವರ ನೆನಪಿನ ಬುತ್ತಿಯನ್ನು ಕೊನೆತನಕವೂ ತಲೆಮೇಲೆ ಹೊತ್ತು ತಿರುಗಿದ ಮಹಾತಾಯಿಯಂತೆ ನನಗವರು ಕಂಡರು. ಎಂದೂ ಪ್ರಶಸ್ತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಜಾಯಮಾನದವರೇ ಅವರಲ್ಲ. ಆದರೆ ಆ ದಿನ ಫೋನಿಡುವ ಮೊದಲು ಪದೇಪದೆ ಹೇಳುವುದನ್ನು ಈ ಸಲವೂ ಹೇಳಿದರು...’ ಸುಮನ ಕಿತ್ತೂರು

Rajeshwari Tejaswi : ‘ಕಿರಗೂರಿನ ಗಯ್ಯಾಳಿಗಳು ; ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ನಿರ್ದೇಶಕಿಯೊಬ್ಬರು ಇದ್ದರೂ ಪ್ರಶಸ್ತಿ ಬರಲಿಲ್ಲ’
ರಾಜೇಶ್ವರಿ ತೇಜಸ್ವಿಯವರೊಂದಿಗೆ ನಿರ್ದೇಶಕಿ ಸುಮನ ಕಿತ್ತೂರು
Follow us on

Rajeshwari Tejaswi : ಒಂದು ರೀತಿ ತೇಜಸ್ವಿಯವರ ನೆನಪಿನ ಬುತ್ತಿಯನ್ನು ಕೊನೆತನಕವೂ ತಲೆಮೇಲೆ ಹೊತ್ತು ತಿರುಗಿದ ಮಹಾತಾಯಿಯಂತೆ ನನಗವರು ಕಂಡರು. ಎಂದೂ ಪ್ರಶಸ್ತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಜಾಯಮಾನದವರೇ ಅವರಲ್ಲ. ಆದರೆ ಆ ದಿನ ಫೋನಿಡುವ ಮೊದಲು ಪದೇಪದೆ ಹೇಳುವುದನ್ನು ಈ ಸಲವೂ ಹೇಳಿದರು, ‘ನೀವಿನ್ನೂ ಹುಟ್ಟಿಯೇ ಇರಲಿಲ್ಲವಲ್ರೀ ಅವರು ಈ ಕೃತಿ ಬರೆದಾಗ. ನೀವು ಒಂದೇ ವರ್ಷದಲ್ಲಿ ಇಷ್ಟೊಳ್ಳೆ ಸಿನೆಮಾ ಮಾಡಿಬಿಟ್ಟಿರಿ. ನಿರ್ದೇಶಕಿಯೊಬ್ಬರು ರಾಜ್ಯ ಪ್ರಶಸ್ತಿ ಕಮೀಟಿಗೆ ಅಧ್ಯಕ್ಷರಾಗಿದ್ದರೂ ನಿಮಗೆ ಆ ಸಿನೆಮಾಕ್ಕೆ ಪ್ರಶಸ್ತಿ ಬರಲಿಲ್ಲ. ಬರಬೇಕಿತ್ತು. ಕಷ್ಟಪಟ್ಟು ಮಾಡಿದ ಕೆಲಸವದು ಪ್ರಶಸ್ತಿ ನಿಮಗೆ ದಕ್ಕಬೇಕಿತ್ತು. ಇದೊಂದು ಕೊರಗಾಗಿ ಉಳಿಯಿತು ನನಗೆ’ ಎಂದರು. ಅಂದರೆ ಒಬ್ಬ ಒಬ್ಬ ನಿರ್ದೇಶಕರಿಗೆ ಪ್ರಶಸ್ತಿ ಎನ್ನುವುದು ಅವರ ವೃತ್ತಿಜೀವನಕ್ಕೆ ಎಷ್ಟು ಮುಖ್ಯ ಎಂಬುದನ್ನು ಅವರು ಮನಗಂಡಿದ್ದರು.
ಸುಮನ ಕಿತ್ತೂರು, ನಿರ್ದೇಶಕಿ 

ಸಿನೆಮಾ ಮಾಡಬೇಕು ಅಂದಾಗ ಯಾವುದೋ ಒಂದು ಕಥೆ ಕೊಟ್ಟು ರಾಜೇಶ್ವರಿಯವರು ಸುಮ್ಮನಾಗಬಹುದಿತ್ತು. ಆದರೆ ಹಾಗೆ ಮಾಡದೆ, ‘ಕಿರಗೂರಿನ ಗಯ್ಯಾಳಿಗಳು’ ಶುರುವಾದಾಗಿನಿಂದ ಮುಗಿಯುವವರೆಗೂ ಪ್ರತೀ ಹಂತದ ಬಗ್ಗೆಯೂ ವಿಚಾರಿಸುತ್ತಿದ್ದರು. ಸಣ್ಣಸಣ್ಣ ವಿಚಾರಗಳನ್ನು ತಮ್ಮದೇ ಆದ ಆಯಾಮದಲ್ಲಿ ನೋಡುವ ಕ್ರಮ ಹೇಗೆ ತೇಜಸ್ವಿಯವರ ಬರಹಗಳಲ್ಲಿ ಕಾಣುತ್ತೇವೋ ಹಾಗೆಯೇ ರಾಜೇಶ್ವರಿಯವರ ಗುಣ-ಸ್ವಭಾವ ವಿಚಾರಗಳಲ್ಲಿ ಕಾಣಬಹುದಾಗಿತ್ತು. ತೇಜಸ್ವಿಯವರು ಒಂದು ತೂಕವಾದರೆ ಇವರೇ ಒಂದು ತೂಕ.

ಕಿರಗೂರಿನ ಗಯ್ಯಾಳಿಗಳ ಸಿನೆಮಾ ಸ್ಕ್ರಿಪ್ಟ್​ ವಿಷಯವಾಗಿ ಅವರು, ‘ಪರವಾಗಿಲ್ಲ, ನೀವು ಬಯಲುಸೀಮೆಯ ಶೈಲಿಯಲ್ಲಿಯೇ ಮಾಡಿ. ಅಲ್ಲಿಯವರೇ ಆದ ನಿಮಗೆ ನಿರ್ದೇಶನಕ್ಕೆ ಹೆಚ್ಚು ಅನುಕೂಲವಾಗುತ್ತದೆ’ ಎಂದರು. ಈ ವಿಷಯವಾಗಿ ಬಹಳಷ್ಟು ಜನ ಅವರ ಬಳಿ ಹೋಗಿ ತಕರಾರು ತೆಗೆದರು. ಆದರೆ ಅವರಿಗೆ ಯಾಕೆ ಹಾಗೆ ಮಾಡಬೇಕಾಯಿತು ಎಂದು ತಿಳಿಹೇಳಿದಾಗ ಅದನ್ನವರು ಒಪ್ಪಿದರು.

ಇಪ್ಪತ್ತು ದಿನಗಳ ಹಿಂದೆಯಷ್ಟೇ ರಾಜೇಶ್ವರಿಯವರಿಗೆ ಫೋನ್ ಮಾಡಿದಾಗ, ‘ಸಿನೆಮಾ ಮಾಡಲು ತೇಜಸ್ವಿಯವರ ಆ ಕೃತಿ ಕೊಡಿ ಈ ಕೃತಿ ಕೊಡಿ ಅಂತ ಎಷ್ಟೊಂದು ಜನ ಕೇಳಿಕೊಂಡು ಬರುತ್ತಾರೆ. ಒಮ್ಮೊಮ್ಮೆ ಸಾಕಾಗಿ ಹಕ್ಕುಸ್ವಾಮ್ಯ ಕೊಡುವುದೇ ಬೇಡ ಅನ್ನಿಸಿಬಿಡುತ್ತದೆ. ಒಂದು ವರ್ಷದ ಅವಧಿಯೊಳಗೆ ಸಿನೆಮಾ ಪೂರ್ಣಗೊಳಿಸಿದರೆ ಅದು ಅರ್ಥಪೂರ್ಣ. ಹಾಗಾಗಿ ಒಂದು ವರ್ಷದೊಳಗೆ ಸಿನೆಮಾ ಮಾಡಬೇಕು ಎಂಬ ಕರಾರನ್ನು ಇತ್ತೀಚೆಗೆ ಹಾಕಬೇಕಾಯಿತು’ ಎಂದು ಬೇಸರಿಸಿದ್ದರು. ಯಾವ ನಿರ್ದೇಶಕರಿಗೂ ತೇಜಸ್ವಿಯವರ ಒಂದು ಕೃತಿಯನ್ನು ಸಿನೆಮಾ ಮಾಡಲೇಬೇಕು ಎಂಬ ಆಸೆ ಇದ್ದೇ ಇರುತ್ತದೆ, ಅಂಥ ಬರೆವಣಿಗೆ ಅವರದು. ಹಾಗೇ ನಮ್ಮ ಆಸೆಗಳಿಗೆ ಶಿಸ್ತೂ ಮುಖ್ಯ.

ರಾಜೇಶ್ವರಿಯವರ ಪತಿ ಪೂರ್ಣಚಂದ್ರ ತೇಜಸ್ವಿ

ಒಂದು ರೀತಿ ತೇಜಸ್ವಿಯವರ ನೆನಪಿನ ಬುತ್ತಿಯನ್ನು ಕೊನೆತನಕವೂ ತಲೆಮೇಲೆ ಹೊತ್ತು ತಿರುಗಿದ ಮಹಾತಾಯಿಯಂತೆ ನನಗವರು ಕಂಡರು. ಎಂದೂ ಪ್ರಶಸ್ತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಜಾಯಮಾನದವರೇ ಅವರಲ್ಲ. ಆದರೆ ಆ ದಿನ ಫೋನಿಡುವ ಮೊದಲು ಪದೇಪದೆ ಹೇಳುವುದನ್ನು ಈ ಸಲವೂ ಹೇಳಿದರು, ‘ನೀವಿನ್ನೂ ಹುಟ್ಟಿಯೇ ಇರಲಿಲ್ಲವಲ್ರೀ ಅವರು ಈ ಕೃತಿ ಬರೆದಾಗ. ನೀವು ಒಂದೇ ವರ್ಷದಲ್ಲಿ ಇಷ್ಟೊಳ್ಳೆ ಸಿನೆಮಾ ಮಾಡಿಬಿಟ್ಟಿರಿ. ನಿರ್ದೇಶಕಿಯೊಬ್ಬರು ರಾಜ್ಯ ಪ್ರಶಸ್ತಿ ಕಮೀಟಿಗೆ ಅಧ್ಯಕ್ಷರಾಗಿದ್ದರೂ ನಿಮಗೆ ಆ ಸಿನೆಮಾಕ್ಕೆ ಪ್ರಶಸ್ತಿ ಬರಲಿಲ್ಲ. ಬರಬೇಕಿತ್ತು. ಕಷ್ಟಪಟ್ಟು ಮಾಡಿದ ಕೆಲಸವದು ಪ್ರಶಸ್ತಿ ನಿಮಗೆ ದಕ್ಕಬೇಕಿತ್ತು. ಇದೊಂದು ಕೊರಗಾಗಿ ಉಳಿಯಿತು ನನಗೆ’ ಎಂದರು. ಅಂದರೆ ಹೊಸದಾಗಿ ಪ್ರವೇಶ ನೀಡಿದ ನಿರ್ದೇಶಕರಿಗೆ ಪ್ರಶಸ್ತಿ ಎನ್ನುವುದು ಅವರ ವೃತ್ತಿಜೀವನದ ಬೆಳವಣಿಗೆಗೆ ಎಷ್ಟು ಮುಖ್ಯ ಮತ್ತು ಪೂರಕವಾಗಿರುತ್ತದೆ ಎಂಬುದನ್ನು ಅವರು ಮನಗಂಡಿದ್ದರು.

ಹೀಗೆ ಸಾಕಷ್ಟು ಸೂಕ್ಷ್ಮ ವಿಚಾರ ಮತ್ತು ನೆನಪುಗಳೊಂದಿಗೆ ಅವರು ನಮ್ಮೊಂದಿಗೇ ಉಳಿಯುತ್ತಾರೆ.

ಇದನ್ನೂ ಓದಿ : Rajeshwari Tejaswi : ರಾಜೇಶ್ವರಿ ಮೇಡಮ್, ಬಂಗಾರವನ್ನು ಪತ್ತೆ ಹಚ್ಚುವುದು ಹೇಗೆಂದು ತೇಜಸ್ವಿಯವರಿಗೆ ಯಾಕೆ ಹೇಳಿಕೊಡಲಿಲ್ಲ?

 

Published On - 1:47 pm, Tue, 14 December 21