Forest Stories: ಕಾಡೇ ಕಾಡತಾವ ಕಾಡ; ಕೋವಿ ಎತ್ತಿ ಲಾರಿಯ ಚಕ್ರದ ಕಡೆ ಗುರಿ ಹಿಡಿದು ಫೈರ್ ಮಾಡಿದರು

Story : ಜೀಪು ರಿವರ್ಸ್ ಗೇರಿನಲ್ಲಿಯೇ ಅವರು ಹಿಂದೆ ಕುಳಿತಿದ್ದ ಮೋರಿಯ ಹತ್ತತ್ತಿರ ತಲುಪಿತು, ಅಷ್ಟರಲ್ಲಿ ಹಿಂದೆ ತಿರುಗಿ ನೋಡಿದ ದಿನೇಶ ಕಿರುಚಿದ, ಸತೀಶ ಹಿಂದೆ ದುರ್ಗಾಂಬ ಬಸ್ ಬರ್ತಿದೆ ಕಣೋ...

Forest Stories: ಕಾಡೇ ಕಾಡತಾವ ಕಾಡ; ಕೋವಿ ಎತ್ತಿ ಲಾರಿಯ ಚಕ್ರದ ಕಡೆ ಗುರಿ ಹಿಡಿದು ಫೈರ್ ಮಾಡಿದರು
ಫೋಟೋ: ವಿ. ಕೆ. ವಿನೋದ್​ಕುಮಾರ್
Follow us
ಶ್ರೀದೇವಿ ಕಳಸದ
|

Updated on:Feb 26, 2022 | 1:06 PM

ಕಾಡೇ ಕಾಡತಾವ ಕಾಡ | Kaade Kaadataava Kaada : ಆದರೆ ವೇಗ ತಗ್ಗಿಸಿದ ಲಾರಿ ಒಂದೇ ಸಲ ವೇಗ ಹೆಚ್ಚಿಸಿ ಬ್ಯಾರಿಕೇಡ್​ಗೆ ಗುದ್ದಿ ಮುಂದಕ್ಕೆ ಹೋಯ್ತು. ಅನಿರೀಕ್ಷಿತವಾದ ಈ ನಡೆಗೆ ಮೂರು ಜನ ಶಾಕ್ ಆದರು. ಗುದ್ದಿದ ರಭಸಕ್ಕೆ ಬ್ಯಾರಿಕೇಡ್ ರಸ್ತೆಯಿಂದ ಚಿಮ್ಮಿ 30 ಅಡಿ ದೂರ ಬಿತ್ತು. ಕೂಡಲೇ ಹುಷಾರಾದ ಡ್ರೈವರ್ ಧಡಭಡನೆ ಓಡಿ ಜೀಪ್ ಸ್ಟಾರ್ಟ್ ಮಾಡಿ ಮುಖ್ಯ ರಸ್ತೆಗೆ ತಂದವನೇ ಹತ್ತೀ ಸಾ ಅನ್ನುತ್ತಾ ಕಿರುಚಿದ. ಕೇಸ್ ಹಿಡಿಯುವ ವಿಚಾರದಲ್ಲಿ ಅನುಭವಿಯಾಗಿದ್ದ ಸತೀಶನಿಗೆ ಇಂಥ ಸಮಯದಲ್ಲಿ ಧೈರ್ಯದಿಂದ ಮತ್ತು ಚಾಣಾಕ್ಷತನದಿಂದ ವರ್ತಿಸುವುದು ತಿಳಿದಿತ್ತು. ಬಿಲ್ಲಿನಿಂದ ಬಿಟ್ಟ ಬಾಣದಂತೆ ಜೀಪು ಚಿಮ್ಮಿತು, ಹಿಂದೆ ಕುಳಿತಿದ್ದ ದಿನೇಶ ಅದರ ರಭಸಕ್ಕೆ ಬ್ಯಾಲೆನ್ಸ್ ತಪ್ಪಿ ಜೀಪಿನೊಳಗೆ ಮಗುಚಿಬಿದ್ದ. ಮೆಲ್ಲ ಕಣೋ ಅನ್ನುತ್ತಾ ಕಿರುಚಿದ. ವೇಗವಾಗಿ ಹೋಗುತ್ತಿದ್ದ ಲಾರಿಯನ್ನು ಬೆನ್ನಟ್ಟಿದರು. ಏನ್ಸಾರ್ ಹಂಗ್ ಹೋಯ್ತಿದಾನೆ? ಅನ್ನುತ್ತಾ ಗೇರ್ ಬದಲಾಯಿಸಿದ ಸತೀಶ. ವಿ.ಕೆ. ವಿನೋದ್​ಕುಮಾರ್ (V.K. Vinod Kumar)

* (ಕಥೆ: 4, ಭಾಗ: 4)

ಬಿಡ್ಬೇಡ, ಹೊಡಿ ಹೊಡಿ… ಫಾಸ್ಟು ಅನ್ನುತ್ತಾ ಕೂಗಿದರು ಫಾರೆಸ್ಟರ್. ಎಲ್ಲೋಗ್ತಾನೆ ಸಾ, ಮುಂದೆ ಅವ್ರಿಲ್ವಾ? ಅಂದ. ಹಾ… ಅವ್ರಿಗೇಳಿದಿನಿ ಅಡ್ಡ ಹಾಕೋಕೆ ಅಂದ. ವೇಗವಾಗಿ ಬೆನ್ನಟ್ಟಿದ ಸತೀಶ, ನೋಡ ನೋಡುತ್ತಿದ್ದಂತೇ ಮುಂದಿದ್ದ ಕಳ್ಳರ ಲಾರಿ ಹತ್ತಿರವಾಗತೊಡಗಿತು. ಸಾರ್, ಕೋವಿ ರೆಡಿ ಮಾಡ್ಕಳೀ ಅಂದ. ಆ ಕಡೆ ಅವ್ರು ಅಡ್ಡಾಕಿದಾರೆ ಅನ್ಸುತ್ತೆ, ಹೆದ್ರಿ ನಿಲ್ಸಿದಾನ? ಅಂದ ದಿನೇಶ. ಖಾಕಿ ಖದರ್ರೂ ಸಾ ಅನ್ನುತ್ತಾ ಸತೀಶ ಗಾಡಿಯ ವೇಗ ಹೆಚ್ಚಿಸಿದ. ಅಷ್ಟರಲ್ಲಿ ಫಾರೆಸ್ಟರ್, ಸತೀಶ, ಸರೀ ನೋಡು ಗಾಡಿ ನಿಂತಿಲ್ಲಾ ಎಂದರು. ಹೌದಾ? ಅನ್ನುತ್ತಾ ಲಾರಿ ಕಡೆಗೆ ನೋಡಿದ ಸತೀಶ. ಅಷ್ಟರಲ್ಲಿ ಫಾರೆಸ್ಟರ್, ಗಾಡಿ ರಿವರ್ಸ್ ಬರ್ತಿದೆ, ಸ್ಲೋ ಮಾಡು ಎಂದು ಕಿರುಚಿದರು.

ರಿವರ್ಸಾ? ಯಾಕ್ಸಾರ್ ಅನ್ನುತ್ತಾ ಫಾರೆಸ್ಟರ್ ಕಡೆ ನೋಡಿದ ಸತೀಶ. ಅಷ್ಟರಲ್ಲಾಗಲೇ ಲಾರಿ ಹತ್ತಿರವಾಗತೊಡಗಿತ್ತು. ಲಾರಿ ನಮ್ಗೇ ಗುದ್ದೋಕ್ ಬರ್ತಿದೆ, ಲೋಡಿದೆ ಗಾಡೀಲಿ, ಹುಷಾರು, ನೀ ಜೀಪ್ ನಿಲ್ಸು ಸೈಡಿಗಾಕು ಅಂದರು. ಗಾಡಿ ಸ್ಲೋ ಮಾಡುತ್ತಿದ್ದಂತೇ, ಲಾರಿ ಇನ್ನೇನು ಜೀಪಿಗೆ ಗುದ್ದೇಬಿಡುತ್ತೆ ಅನ್ನುವಷ್ಟು ಹತ್ತಿರ ಬಂತು. ಸತೀಶ ಜೀಪು ನಿಲ್ಲಿಸಿದ. ರಿವರ್ಸ್ ಹಾಕು, ಹಿಂದಕ್ ಓಡ್ಸೋ, ಲೋಡ್ ಲಾರಿ ಗುದ್ದಿದ್ರೆ ನಾವೆಲ್ಲಾ ಇಲ್ಲೇ ಫಿನಿಸ್ ಅನ್ನುತ್ತಾ ಕಿರುಚಿದ ದಿನೇಶ. ಸತೀಶ ಜೀಪಿಗೆ ರಿವರ್ಸ್ ಗೇರ್ ಹಾಕಿ ಹಿಂದಕ್ಕೆ ಓಡಿಸಲು ಶುರು ಮಾಡಿದ.

ಇದನ್ನೂ ಓದಿ : Hijab: ವೈಶಾಲಿಯಾನ; ಮುಸ್ಲಿಂ ಯುವತಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವುದು ಎಂಥಾ ಹೇಯವಾದ ಆಷಾಢಭೂತಿತನ!

ಲಾರಿಯೂ ರಿವರ್ಸ್ ಗೇರಲ್ಲಿ ಹಿಂದೆ ಬರ್ತಿತ್ತು. ಫಾರೆಸ್ಟರ್ ಕುಳಿತಿದ್ದಲ್ಲಿಂದಲೇ ಕೋವಿ ಎತ್ತಿ ಲಾರಿಯ ಚಕ್ರದ ಕಡೆ ಗುರಿ ಹಿಡಿದು ಫೈರ್ ಮಾಡಿದರು, ಅದೆಲ್ಲಿಗೆ ತಗುಲಿತೋ, ಸತೀಶ ರಿವರ್ಸ್ ಗೇರಲ್ಲೇ ವೇಗವಾಗಿ ಚಲಾಯಿಸುತ್ತಾ, ಸಾ ನಾವ್ ಕೂತಿದ್ವಲಾ? ಅಲ್ಲಿ ತನ್ಕ ಹೋದ್ರೆ ಸಾಕು, ಪಕ್ಕದ ಮಣ್ಣಿನ ರಸ್ತೆಗೆ ಎಳೀತೀನಿ ಅಂದ.

ಲಾರಿಯೂ ವೇಗವಾಗಿ ಹತ್ತಿರ ಬರತೊಡಗಿತು, ಯಾವಾಗ ಜೀಪಿಗೆ ಗುದ್ದುತ್ತೋ ಅನ್ನೋ ಗಾಬರಿ ಎಲ್ಲರಿಗೂ ಇತ್ತು. ಜೀಪು ರಿವರ್ಸ್ ಗೇರಿನಲ್ಲಿಯೇ ಅವರು ಹಿಂದೆ ಕುಳಿತಿದ್ದ ಮೋರಿಯ ಹತ್ತತ್ತಿರ ತಲುಪಿತು, ಅಷ್ಟರಲ್ಲಿ ಹಿಂದೆ ತಿರುಗಿ ನೋಡಿದ ದಿನೇಶ ಕಿರುಚಿದ, ಸತೀಶ ಹಿಂದೆ ದುರ್ಗಾಂಬ ಬಸ್ ಬರ್ತಿದೆ ಕಣೋ, ಹುಷಾರು ಅಂದ ಬಸ್ಸಾ? ಅಯ್ಯೋ ಅನ್ನುತ್ತಾ ಜೀಪು ಸ್ಲೋ ಮಾಡಿದ ಸತೀಶ. ಲಾರಿ ಹತ್ತಿರ ತಲುಪಿತು, ಹಿಂದಿನಿಂದ ಬಸ್ಸೂ ಕೂಡಾ ಸತೀಶ ಗಾಡಿ ಸೈಡಿಗೆಳಿಯೋ, ಫಾರೆಸ್ಟರ್ ಮತ್ತು ದಿನೇಶ ಒಟ್ಟಿಗೇ ಕಿರುಚಿದರು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 3 : Forest Stories: ಕಾಡೇ ಕಾಡತಾವ ಕಾಡ; ಮೋರಿ ಕೆಳಗೆ ಕುಳಿತು ಕಾಯ್ದು ಕಾಯ್ದು ಬೇಸರವಾದರೂ

Published On - 12:59 pm, Sat, 26 February 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್