AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dharwad: ಮಾನವ ಜಾತಿ ತಾನೊಂದೆ ವಲಂ; ಕರುಣೆಯನ್ನು ನಾಶಗೊಳಿಸುವುದು, ಶೃಂಗಾರವನ್ನು ಇಲ್ಲವಾಗಿಸುವುದು

Kumar Ambuj and Vikram Visaji : ಒಂದು ಅನಂತವಾದ ಸ್ಪರ್ಧೆ ಏರ್ಪಡುವುದು ಸೋಲಲು ಅಲ್ಲ, ತಮ್ಮ ಶ್ರೇಷ್ಠತೆಗಾಗಿ ಜನ ಯುದ್ಧ ಕೈಗೊಳ್ಳುವರು. ಆಗ ಕ್ರೌರ್ಯವೂ ಧರೆಗಿಳಿವುದು ಮೊದಲು ಹೃದಯಕ್ಕೆ ಇಳಿವುದು ಆದರೆ ಮುಖದಲ್ಲಿ ಕಾಣದು.

Dharwad: ಮಾನವ ಜಾತಿ ತಾನೊಂದೆ ವಲಂ; ಕರುಣೆಯನ್ನು ನಾಶಗೊಳಿಸುವುದು, ಶೃಂಗಾರವನ್ನು ಇಲ್ಲವಾಗಿಸುವುದು
ಹಿಂದಿ ಕವಿ ಕುಮಾರ ಅಂಬುಜ್ ಮತ್ತು ಅನುವಾದಕ ಡಾ. ವಿಕ್ರಮ ವಿಸಾಜಿ
ಶ್ರೀದೇವಿ ಕಳಸದ
|

Updated on:Apr 13, 2022 | 1:27 PM

Share

Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.

ಬೀದರ್ ಜಿಲ್ಲೆಯ ಭಾಲ್ಕಿಯವರಾದ ಡಾ. ವಿಕ್ರಮ ವಿಸಾಜಿ ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರು. ಹಿಂದಿ ಕವಿ ಕುಮಾರ ಅಂಬುಜ್ ಅವರ ಕವನವನ್ನು ಅವರು  ಅನುವಾದಿಸಿದ್ದಾರೆ.  

ಕ್ಷಮಿಸಬೇಕೆಂಬ ಭಾವವೂ ನಿಧಾನವಾಗಿ ಕೊನೆಯಾಗುವುದು ಪ್ರೇಮದ ಅಪೇಕ್ಷೆಯೇನೂ ಇರುವುದುಂಟು ಆದರೆ ಅದರ ಅಗತ್ಯವಿದೆಯೆಂದು ತೋರುವುದಿಲ್ಲ ಪಡೆಯುವ ತಳಮಳ, ಕಳೆದುಕೊಳ್ಳುವ ನೋವು ಹತಾಶೆಯೊಂದೇ ಅಲ್ಲಿರುವುದಿಲ್ಲ. ಒಂದು ಅನಂತವಾದ ಸ್ಪರ್ಧೆ ಏರ್ಪಡುವುದು ಸೋಲಲು ಅಲ್ಲ, ತಮ್ಮ ಶ್ರೇಷ್ಠತೆಗಾಗಿ ಜನ ಯುದ್ಧ ಕೈಗೊಳ್ಳುವರು. ಆಗ ಕ್ರೌರ್ಯವೂ ಧರೆಗಿಳಿವುದು ಮೊದಲು ಹೃದಯಕ್ಕೆ ಇಳಿವುದು ಆದರೆ ಮುಖದಲ್ಲಿ ಕಾಣದು. ನಂತರ ಧರ್ಮಗ್ರಂಥಗಳ ಪುಟಗಳಲ್ಲಿ ಅಡಗುವುದು. ಬಗೆಬಗೆಯ ವ್ಯಾಖ್ಯಾನಗಳಲ್ಲಿ ಚಿಗುರುವುದು ಇತಿಹಾಸದಿಂದ ಎದ್ದು ಸೀದಾ ವರ್ತಮಾನಕ್ಕೆ ಬರುವುದು ಹಾಗೆಯೇ ಭವಿಷ್ಯಕ್ಕಾಗಿ ಕೆಲ ಬೀಜಗಳನ್ನು ಉಳಿಸುವುದು. ಜನತೆಯ ಆದರ್ಶಕ್ಕಾಗಿ ಕೆಲ ಬೀಜಗಳನ್ನು ಉಳಿಸುವುದು. ಜನತೆಯ ಆದರ್ಶಕ್ಕಾಗಿ ಎಲ್ಲೆಡೆ ರಾರಾಜಿಸುವುದು ಎಲ್ಲಾ ಶಾಂತಿ ಸಮಾಧಾನಗಳು ನಿರರ್ಥಕಗೊಳ್ಳುವುದು. ಮೊದಲ ಹತ್ಯೆಯ ಕಣ್ಣೀರನ್ನು ಎರಡನೆ ಹತ್ಯೆಯ ಕಣ್ಣೀರು ತಡೆವುದು ನೆರೆಮನೆಯವರು ಸಾಂತ್ವನ ಹೇಳುವುದಿಲ್ಲ ನಿಮ್ಮ ಕೈಗೊಂದು ಶಸ್ತ್ರಾಸ್ತ್ರ ಕೊಡುವರು ಆಗ ಕ್ರೌರ್ಯ ನಿಜವಾಗಿ ಫಲಕೊಡುವ ಕಾಲ ಕ್ರೌರ್ಯ ಇನ್ನು ಮುಖದ ಮೇಲೂಕಾಣುವುದು ಆಗ ಬೇರೆ ಬೇರೆ ಮುಖಗಳ ನಡುವೆ ವ್ಯತ್ಯಾಸ ಮಾಡಲು ಸಾಧ್ಯವಾಗುವುದಿಲ್ಲ ಯಾಕೆಂದರೆ ಎಲ್ಲೆಡೆಗೆ ಒಂದೇ ತರಹದ ಮುಖಗಳು ಪ್ರತಿ ಮುಖವೂ ತನ್ನದೇ ರೀತಿಯಲ್ಲಿ ಕ್ರೌರ್ಯಕ್ಕಿಳಿವುದು ಎಲ್ಲರಿಗೂ ಕರ್ತವ್ಯಪ್ರಜ್ಞೆಯ ಪಾಠ ಮಹಾನ್ ಕೆಲಸದಲ್ಲಿ ತೊಡಗಿಸಿಕೊಂಡ ಸುಖ ಕ್ರೌರ್ಯ ಈಗ ಸಂಸ್ಕೃತಿಯಾಗಿ ಬಂದಿದೆ ಇದಕ್ಕೀಗ ಯಾರ ವಿರೋಧವಿಲ್ಲ. ಈಗ ಉಳಿದಿರುವುದೇನೆಂದರೆ ಕ್ರೌರ್ಯವನ್ನು ಇನ್ನೆಷ್ಟು ಸುಸಂಸ್ಕೃತಗೊಳಿಸುವುದು ಚಾರಿತ್ರಿಕ ಮಹಾತ್ಮೆಯಾಗಿಸುವುದು. ಕರುಣೆಯನ್ನು ನಾಶಗೊಳಿಸುವುದು ಶೃಂಗಾರವನ್ನು ಇಲ್ಲವಾಗಿಸುವುದು ಈಗ ಅದರ ನಿರಂತರ ಆಗಮನ ಮಾತ್ರವಿದೆ ದೀರ್ಘ ಕಾಲದವರೆಗೆ ಯಾರಿಗೂ ಗೊತ್ತಾಗುವುದಿಲ್ಲ ಅದು ಈಗಾಗಲೇ ತಳ ಊರಿದೆ ಅಂತ.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ತರಗತಿಯ ನನ್ನ ಪಾಠಗಳ ಜಾತ್ಯಾತೀತ ಪೂಜೆಗೆ ಮೂವತ್ತನಾಲ್ಕು ವರ್ಷ

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ನುಗ್ಗಿಕೆರಿಯ ನೀರು ಕಲಕುವುದನ್ನು ನೋಡುತ್ತಿದ್ದೀರಾ ರಹಿಮತ್ ಖಾನರೇ

Published On - 11:42 am, Wed, 13 April 22

ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್