Qatar Mail: ಬೇರೆ ವಾಟ್ಸಪ್ ಗ್ರೂಪ್​ಗೆ ಹಾಕಿ ನನ್ನನ್ನು ಪರಕೀಯಳಂತೆ ಕಂಡರು

Women‘s Day 2022 : "ನಾವು ಗಂಡಸರು ಚರ್ಚೆ ಮಾಡ್ತಿದ್ವಿ, ನೀನು ಮಧ್ಯೆ ಬಂದು ದೊಡ್ಡ ಫೆಮಿನಿಸ್ಟ್ ಥರ ಮಾತಾಡಿದ್ದು ನಮಗ್ಯಾರಿಗೂ ಇಷ್ಟವಾಗ್ಲಿಲ್ಲ. ನಿನ್ನ ಮಾತನ್ನು ನಮಗೆ ಜೀರ್ಣಿಸಿಕೊಳ್ಳೋಕಾಗ್ಲಿಲ್ಲ.’’

Qatar Mail: ಬೇರೆ ವಾಟ್ಸಪ್ ಗ್ರೂಪ್​ಗೆ ಹಾಕಿ ನನ್ನನ್ನು ಪರಕೀಯಳಂತೆ ಕಂಡರು
Follow us
|

Updated on: Mar 04, 2022 | 1:39 PM

ಕತಾರ್ ಮೇಲ್ | Qatar Mail : ಕೊರೊನಾ ಕತಾರಿಗೆ ವಕ್ಕರಿಸಿ ವರ್ಷಕ್ಕೂ ಮೇಲಾಗಿತ್ತು. ಲಾಕ್ಡೌನ್ ಮುಗಿದು ಹೊರಗೆ ಕಾಲಿಡಲು ಅವಕಾಶ ಸಿಕ್ಕಾಗಲೆಲ್ಲಾ ಫೋಟೋಗ್ರಾಫರ್​ಗಳು ಚಿತ್ರ ತೆಗೆಯಲು ಹೊರಗೆ ಹೋಗುವುದು ಮತ್ತೊಮ್ಮೆ ಪ್ರಾರಂಭವಾಗಿತ್ತು. ಅಂತಹ ಒಂದು ಸಮಯದಲ್ಲಿ ಫೋಟೋ ತೆಗೆಯಲು ಹೋದ ನನಗೆ ಹುಡುಗನೊಬ್ಬ ಹಳೆಯ ಫೋಟೋವಾಕ್ ಗುಂಪಿನ ಹಿರಿಯರೊಬ್ಬರು ನನ್ನ ಬಗ್ಗೆ ಬಹಳ ವಿಚಾರಿಸಿಕೊಂಡರೆಂದು ತಿಳಿಸಿದ. ಆ ಫೋಟೋವಾಕ್ ಗುಂಪಿನಲ್ಲಿದ್ದವರ ಮನಸ್ಥಿತಿಗೆ ಬೇಸತ್ತು ಅವರ ಗುಂಪಿನಿಂದ ದೂರವುಳಿದು ಸುಮಾರು ಎರಡು ವರ್ಷಕ್ಕೂ ಮೇಲಾಗಿತ್ತು. ಈಗ ಅಚಾನಕ್ ನನ್ನ ಬಗ್ಗೆ ವಿಚಾರಿಸಿಕೊಳ್ಳುವಂಥಾದ್ದೇನಿದೆ, ನೇರವಾಗಿ ನನಗೇ ಫೋನಾಯಿಸಬಹುದಿತ್ತಲ್ಲ ಎನ್ನಿಸಿದರೂ ಅಹಂ ನಡುವೆ ಬಂದಿರಬೇಕು ಎಂದುಕೊಂಡು ಸುಮ್ಮನಾದೆ. ಅಷ್ಟಕ್ಕೂ ಎರಡು ವರ್ಷಗಳಿಂದಲೂ ಮನಸ್ಸಿನಲ್ಲಿ ಕೊರೆಯುತ್ತಿದ್ದ ಪ್ರಶ್ನೆಯೊಂದಕ್ಕೆ ಆ ವ್ಯಕ್ತಿಯಿಂದಲೇ ಉತ್ತರವೂ ದೊರಕಬೇಕಿತ್ತು. ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ನೈಟ್ ಫೋಟೋಗ್ರಾಫರ್ (Chaitra Arjunpuri)

(ಪತ್ರ 5, ಭಾಗ 2)

ಸಂಬಂಧಿಕರನ್ನು, ಗೆಳೆಯರನ್ನು, ಪರಿಚಯದ ವಲಯದಲ್ಲಿ ಸಾಕಷ್ಟು ಮಂದಿಯನ್ನು ಕೊರೊನಾ ಬಲಿ ತೆಗೆದುಕೊಳ್ಳುತ್ತಿತ್ತು. ಇಂದು ಮಾತನಾಡಿದವರು, ನಾಳೆ ಇರುತ್ತಿರಲಿಲ್ಲ. ನಾಳೆ ನಾನು ಮರೆಯಾಗುತ್ತೇನೋ ಅಥವಾ ಆ ವ್ಯಕ್ತಿಯೋ ಎಂದು ಮನಸ್ಸು ಚುಚ್ಚುತ್ತಲೇ ಇತ್ತು. ಮೂರ್ನಾಲ್ಕು ದಿನಗಳವರೆಗೆ “ಟು ಡು ಆರ್ ನಾಟ್ ಟು ಡು” ಎಂದು ಹತ್ತಾರು ಬಾರಿ ಯೋಚಿಸಿ, ಆ ಹಿರಿಯ ಫೋಟೋಗ್ರಾಫರ್​ಗೆ ಕರೆ ಮಾಡಿದೆ. ಕರೆ ಸ್ವೀಕರಿಸಿದ ಆ ವ್ಯಕ್ತಿ ಇಷ್ಟು ವರ್ಷಗಳಾದ ಮೇಲೆ ಕರೆ ಮಾಡುತ್ತಿರುವ ಕಾರಣ ಕೇಳಿ, ಅವರ ಫೋಟೋವಾಕ್ ಗುಂಪಿನೊಂದಿಗೆ ಮಾತನಾಡುವುದು ನಿಲ್ಲಿಸಿದ್ದು ನಾನೇ ಎನ್ನುವುದನ್ನು ನೆನಪಿಸಿದರು. ದನಿಯಲ್ಲಿ ಅದೇ ವ್ಯಂಗ್ಯ ತುಂಬಿತ್ತು. ನಾನು ಹೌದೆಂದು ಒಪ್ಪಿಕೊಂಡು, ನನ್ನನ್ನು ಬೇರೆ ಗುಂಪಿಗೆ ಹಾಕಿ ಪರಕೀಯಳ ಹಾಗೆ ನಡೆಸಿಕೊಂಡಿದ್ದರ ಕಾರಣ ಕೇಳಿದೆ. ವಿಷಯವನ್ನು ಆತ ಬೇರೆಡೆಗೆ ಹೊರಳಿಸುವ ಪ್ರಯತ್ನಪಟ್ಟರೂ, ನಾನು ಪಟ್ಟುಹಿಡಿದೆ. ಕೊರೊನಾ ಸಮಯ, ನಾಳೆ ನಾನಿರುತ್ತೇನೋ, ಆತನಿರುತ್ತಾನೋ, ಅಸಲಿ ವಿಚಾರ ತಿಳಿದರೆ ಮನಸ್ಸು ಹಗುರವಾಗುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಕಾಫ್ಕಾ ಕಥೆ ‘ಹಳೆಯ ಹಸ್ತಪ್ರತಿ’ ಅನುವಾದಿಸಿದ್ದಾರೆ ಎಚ್ಎಸ್ ರಾಘವೇಂದ್ರ ರಾವ್

ನನ್ನ ವರ್ತನೆಯನ್ನು ಮಾನಿಟರ್ ಮಾಡುವ ಸಲುವಾಗಿ ನನ್ನನ್ನು ಬೇರೆ ವಾಟ್ಸಾಪ್ ಗ್ರೂಪಿಗೆ ಹಾಕಲಾಗಿತ್ತು ಎನ್ನುವ ಸತ್ಯವನ್ನು ಆತ ಬಹಿರಂಗ ಪಡಿಸಿದಾಗ ಅಚ್ಚರಿಯೇನೂ ಆಗಲಿಲ್ಲ. “ನಾವು ಗಂಡಸರು ಚರ್ಚೆ ಮಾಡ್ತಿದ್ವಿ, ನೀನು ಮಧ್ಯೆ ಬಂದು ದೊಡ್ಡ ಫೆಮಿನಿಸ್ಟ್ ಥರ ಮಾತಾಡಿದ್ದು ನಮಗ್ಯಾರಿಗೂ ಇಷ್ಟವಾಗ್ಲಿಲ್ಲ. ನಿನ್ನ ಮಾತನ್ನು ನಮಗೆ ಜೀರ್ಣಿಸಿಕೊಳ್ಳೋಕಾಗ್ಲಿಲ್ಲ. ಇಟ್ ವಾಸ್ ಮೆನ್ಸ್ ಟಾಕ್, ಆ ಥರದ ಮಾತುಕತೆ ನಮಗೆ ಅದೇ ಮೊದಲೇನಲ್ಲ. ಅದೇ ಥರದ, ಅದಕ್ಕಿಂತಲೂ ಬೇರೆ ಥರದ ಮಾತುಗಳು ನಮ್ಮ ನಡುವೆ ಆಗಾಗ ನಡೆಯುತ್ತಲೇ ಇರುತ್ತವೆ…” ಎಂದು ಆ ವ್ಯಕ್ತಿ ಸಮರ್ಥಿಸಿಕೊಳ್ಳುತ್ತಿದ್ದರೆ ನಾನು ಅರೆಕ್ಷಣ ಅವಾಕ್ಕಾದೆ.

ಪುರುಷರ ಮಾತುಕತೆ: ನಾನು ಮುಂಚೆ ಊಹಿಸಿದ್ದ ಕಾರಣ ಸರಿಯಾಗಿಯೇ ಇತ್ತು. ಅದೇ ಫೋಟೋವಾಕ್ ಗುಂಪಿನ ಹಿರಿಯ ಗೆಳೆಯನೊಬ್ಬ ಆ ಘಟನೆ ನಡೆದ ಒಂದಷ್ಟು ದಿನಗಳ ಬಳಿಕ, ‘ನೀನು ತುಂಬಾ ಸೆನ್ಸಿಟಿವ್ ಹುಡುಗಿ, ಸುಮ್ಮನೆ ಇಲ್ಲದ್ದೆಲ್ಲಾ ಯೋಚಿಸಿ ತಲೆ ಕೆಡಿಸಿಕೊಳ್ಳುತ್ತಿದ್ದೀಯೆ,’ ಎಂದು ಬುದ್ಧಿವಾದ ಹೇಳಿದ್ದು ನೆನಪಾಗಿ ಮನಸ್ಸು ಮತ್ತಷ್ಟು ವಿಚಲಿತವಾಯಿತು. ನಾನು ಮುಖ್ಯ ವಾಟ್ಸಾಪ್ ಗುಂಪಿನಲ್ಲಿ ಚರ್ಚೆ ಮಾಡುವುದನ್ನು ತಪ್ಪಿಸಲೆಂದೇ ನಾಲ್ಕು ಹುಡುಗರ ಒಂದು ವಾಟ್ಸಾಪ್ ಗ್ರೂಪ್ ರಚಿಸಿ, ಅದರಲ್ಲಿ ನನ್ನ ಹೆಸರನ್ನೂ ಸೇರಿಸಿ, ಅದನ್ನು ನೋಡಿಕೊಳ್ಳುತ್ತಿದ್ದ ಇಬ್ಬರು ಹಿರಿಯ ಫೋಟೋಗ್ರಾಫರ್ ಗಳು, “ಬಿ ಎ ಬ್ಯಾಕ್ ಬೆಂಚರ್ ಫಾರ್ ಸಮ್ ಟೈಮ್,” ಎಂದು ಸಲಹೆ ನೀಡಿದ್ದು ನೆನಪಾಯಿತು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 1 : Qatar Mail: ಪುರುಷ ಜಗತ್ತಿನೊಳಗೆ ಛಾಯಾಗ್ರಾಹಕಿಯ ಮೌನಯುದ್ಧ

ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ