Qatar Mail: ಪುರುಷ ಜಗತ್ತಿನೊಳಗೆ ಛಾಯಾಗ್ರಾಹಕಿಯ ಮೌನಯುದ್ಧ

Women‘s Day 2022 : "ಇಫ್ ಐ ಕಾಂಟ್ ಅವಾಯ್ಡ್ ರೇಪ್, ಐ ವಿಲ್ ಎಂಜಾಯ್ ಇಟ್," ಎನ್ನುವ ಹೇಳಿಕೆಯೊಂದನ್ನು ಆಕೆ ನೀಡಿದ್ದಳು. ಅಪ್ಪ, "ನೋಡು, ಎಷ್ಟು ಅಸಹ್ಯ ಹೇಳಿಕೆ ಕೊಟ್ಟಿದ್ದಾಳೆ. ಇಂಥವರೆಲ್ಲಾ ನಟಿಯರು, ಇವರಿಗೆ ಚಪ್ಪಾಳೆ, ಶಿಳ್ಳೆ ಬೇರೆ," ಎಂದು ಆ ಹಾಳೆಯನ್ನು ಹರಿದು ಹಾಕಿದ್ದರು.

Qatar Mail: ಪುರುಷ ಜಗತ್ತಿನೊಳಗೆ ಛಾಯಾಗ್ರಾಹಕಿಯ ಮೌನಯುದ್ಧ
Follow us
ಶ್ರೀದೇವಿ ಕಳಸದ
|

Updated on:Mar 04, 2022 | 12:59 PM

ಕತಾರ್ ಮೇಲ್ | Qatar Mail : ಮಾರ್ಗರೆಟ್ ಅಟ್ವುಡ್ ತಮ್ಮ ದಿ ಹ್ಯಾಂಡ್ ಮೇಡ್ಸ್ ಟೇಲ್ ನಲ್ಲಿ, “All you have to do, I tell myself, is keep your mouth shut and look stupid. It shouldn’t be that hard,” ಎಂದು ಹೇಳುತ್ತಾರೆ. ಬಾಯಿ ಮುಚ್ಚಿಕೊಂಡು ಮೂರ್ಖರ ಹಾಗಿರುವುದು ನಿಜಕ್ಕೂ ಅಷ್ಟು ಸುಲಭವೇ? ಮುಂದುವರೆಯುತ್ತಿರುವ ಸಮಾಜದಲ್ಲಿ ಪ್ರತಿದಿನದ ಜಂಜಾಟದಿಂದ ಹೊರಬರಲು ನಮ್ಮ ಸುತ್ತಲೂ ಎಲ್ಲವೂ ಚೆನ್ನಾಗಿದೆ ಎನ್ನುವ ಸುಳ್ಳಿನ ಪ್ರಪಂಚವನ್ನೇ ನಾವು ಹೆಣ್ಣುಮಕ್ಕಳು ಸೃಷ್ಟಿಸಿಕೊಂಡುಬಿಡುತ್ತೇವೆ. ನಮ್ಮನ್ನೇ ಗಂಧದ ಹಾಗೆ ತೇಯ್ದುಕೊಂಡು ಅಪರಿಮಿತ ನಿರೀಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತೇವೆ. ನಮ್ಮ ಸುತ್ತಲಿರುವವರಿಗೆ ಚಂದವಾಗಿ ಕಾಣಿಸಲು ನಮ್ಮನ್ನು ನಾವೇ ದಂಡಿಸಿಕೊಳ್ಳುತ್ತೇವೆ, ಪುರುಷ ಸಮಾಜ ನಮಗಾಗಿ ರೂಪಿಸಿದ ಆದರ್ಶಗಳಿಗೆ ಹೊಂದಿಕೊಳ್ಳಲು, ನಿತ್ಯದ ಕೆಲಸ, ಮಕ್ಕಳು, ಗಂಡ ಮತ್ತು ಮೌನ ನಿರೀಕ್ಷೆಗಳಿಂದ ನಮ್ಮ ಮನಸ್ಸನ್ನೂ ದೇಹವನ್ನೂ ಹಸಿವಿನಿಂದ ಬಳಲಿಸುತ್ತೇವೆ. ಕೊನೆಗೆ ಅವುಗಳ ಭಾರಕ್ಕೆ ಸೋತು, ಆ ಸೋಲನ್ನೂ ನಗುಮುಖದಿಂದಲೇ ಸ್ವೀಕರಿಸುತ್ತೇವೆ. ಯಾಕೆಂದರೆ, ನಾವು ಸಹನಾಮಯಿಗಳು, ಕರುಣಾಮಯಿಗಳು, ಭೂಮಿ ತೂಕದವರು!? ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ನೈಟ್ ಫೋಟೋಗ್ರಾಫರ್ (Chaitra Arjunpuri)

(ಪತ್ರ 5, ಭಾಗ 1) 

ಮಾರ್ಚ್ 8 ಬಂದರೆ ಸಾಕು ನಾವು ಕಂಡು ಕೇಳರಿಯದ ಪದಗಳಿಂದ ನಮ್ಮನ್ನು, ನಮ್ಮ ಸಾಧನೆಗಳನ್ನು ಎಲ್ಲರೂ ಹೊಗಳುತ್ತಾರೆ. ದಿನವಿಡೀ ದುಡಿದು, ವೃತ್ತಿ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಪಾಡಿಕೊಂಡು ಹೋಗುವುದು ಸುಲಭದ ಮಾತೇನಲ್ಲ ಎನ್ನುವ ಮೆಚ್ಚುಗೆಯ ಮಾತುಗಳನ್ನು ಎಲ್ಲರೂ ಹೇಳುವ ಆ ದಿನ ಅಂತಾರಾಷ್ಟ್ರೀಯ ಮಹಿಳಾ ದಿನ. ಆದರೆ ಆ ಒಂದು ದಿನ ನಮ್ಮನ್ನು, ನಮ್ಮ ಸಾಧನೆಗಳನ್ನು ಗುರುತಿಸಿದರೆ ಸಾಕೆ? ಅಸ್ತಿತ್ವದ ದೃಷ್ಟಿಯಿಂದ ನಾವು, ಮಹಿಳೆಯರು, ಸಮಾನ ಹಕ್ಕುಗಳಿಗೆ, ಸಬಲೀಕರಣಕ್ಕೆ ಪ್ರತಿ ದಿನವೂ ಒಂದಲ್ಲ ಒಂದು ರೀತಿಯಲ್ಲಿ ಹೆಣಗುತ್ತಿರುವುದು ಹೊಸ ವಿಚಾರವೇನಲ್ಲ. ನಮ್ಮದೊಂದು ಸ್ಥಾನ ಕಂಡುಕೊಳ್ಳುವುದಕ್ಕೆ ನಾವು ಪುರುಷ ಸಮಾಜದೊಂದಿಗೆ ಮೌನ ಯುದ್ಧದಲ್ಲಿ ತೊಡಗಿಕೊಂಡಿರುವುದು ಹಲವು ಸಲ ಹೊರ ಪ್ರಪಂಚಕ್ಕೆ ತಿಳಿಯುವುದೇ ಇಲ್ಲ. ಇಂಥಾ ಒಂದು ಮೌನ, ಏಕಾಂಗಿ ಯುದ್ಧವನ್ನು ಒಬ್ಬ ಮಹಿಳೆಯಾಗಿ, ಫೋಟೋಗ್ರಾಫರ್ ಆಗಿ ಹೇಗೆಲ್ಲಾ ಎದುರಿಸಬೇಕಾಗುತ್ತದೆ ಎನ್ನುವುದನ್ನು ಹೇಳುತ್ತೇನೆ.

ಉಡಾಫೆಯ ಮಾತುಗಳು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅತ್ಯಾಚಾರದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದಾಗ ನೆನಪಿಗೆ ಬಂದದ್ದು ಎರಡು ಘಟನೆಗಳು. ಹಾಗೆ ನೋಡಿದರೆ, ಆ ಸಾಲನ್ನು ಮೊದಲ ಬಾರಿಗೆ ಕೇಳಿದಾಗ ನಾನಿನ್ನೂ ಹೈಸ್ಕೂಲಿನಲ್ಲಿದ್ದೆ. ವಿಷ್ಣುವರ್ಧನ್ ಜೊತೆಯಲ್ಲಿ ಹಿಂದಿ ಚಿತ್ರನಟಿ ಮಮತಾ ಕುಲಕರ್ಣಿ ನಟಿಸಿದ ಕನ್ನಡ ಚಿತ್ರವೊಂದು ಆಗಷ್ಟೇ ಬಿಡುಗಡೆಯಾಗಿತ್ತು. ಯಾವುದೋ ಕನ್ನಡ ವಾರಪತ್ರಿಕೆಗೆ ನೀಡಿದ್ದ ಸಂದರ್ಶನವೊಂದರಲ್ಲಿ, “ಇಫ್ ಐ ಕಾಂಟ್ ಅವಾಯ್ಡ್ ರೇಪ್, ಐ ವಿಲ್ ಎಂಜಾಯ್ ಇಟ್,” ಎನ್ನುವ ಹೇಳಿಕೆಯೊಂದನ್ನು ಆಕೆ ನೀಡಿದ್ದಳು. ಅದನ್ನು ಓದಿದ ಅಪ್ಪ, “ನೋಡು, ಎಷ್ಟು ಅಸಹ್ಯವಾದ ಹೇಳಿಕೆ ಕೊಟ್ಟಿದ್ದಾಳೆ. ಇಂಥವರೆಲ್ಲಾ ನಟಿಯರು, ಇವರಿಗೆ ಚಪ್ಪಾಳೆ, ಶಿಳ್ಳೆ ಬೇರೆ,” ಎಂದು ರೇಗಿ ಆ ಹಾಳೆಯನ್ನು ಹರಿದು ಹಾಕಿದ್ದರು.

ಇದನ್ನೂ ಓದಿ : Qatar Mail: ಅಷ್ಟಕ್ಕೂ ನಾವು ದೇಶ ಬಿಟ್ಟವರು, ಫಾರಿನ್​ನಲ್ಲಿ ಮಜವಾಗಿರುವವರು!

ಆಗ ಹಳ್ಳಿಯಲ್ಲಿದ್ದ ನಮ್ಮ ಮನೆಯಲ್ಲಿ ಕೇಬಲ್ ಇರಲಿಲ್ಲ, ಇದ್ದದ್ದು ದೂರದರ್ಶನ ಮಾತ್ರ. ಆಗ ನನಗೂ, ನನ್ನ ತಮ್ಮನಿಗೂ ಟಿವಿ ಮುಂದೆ ಕೂರಲು ಅವಕಾಶವಿದ್ದದ್ದು ವಾರಕ್ಕೆರಡು ಬಾರಿ ಮಾತ್ರ – ಗುರುವಾರವೋ, ಶುಕ್ರವಾರವೋ ಬರುತ್ತಿದ್ದ ಕನ್ನಡ ಚಿತ್ರಮಂಜರಿ, ಮತ್ತೊಂದು ಭಾನುವಾರ ಸಂಜೆಯ ಕನ್ನಡ ಸಿನಿಮಾ. ವಾರಕ್ಕೊಮ್ಮೆ ದೂರದರ್ಶನದಲ್ಲಿ ಬರುತ್ತಿದ್ದ ಚಿತ್ರಮಂಜರಿಯಲ್ಲಿ ಮಮತಾ ಕುಲಕರ್ಣಿಯ ಮೊಗವೇನಾದರೂ ಅಪ್ಪಿತಪ್ಪಿ ಬಂದರೆ ಟಿವಿ ಆರಿಸಿ ಬಿಡುತ್ತಿದ್ದರು. ಅಪ್ಪ-ಅಮ್ಮ ಇಬ್ಬರೂ ಆ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿದ್ದರು.

ಕಹಿ ಸತ್ಯ: ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಮಾತ್ರ ಹೀಗೆ ಯೋಚಿಸುತ್ತಾರೆ, ಅದಕ್ಕೆ ಇಂಥಾ ಹೇಳಿಕೆ ನೀಡಿ ವಿವಾದಗಳಿಗೆ ಸಿಲುಕಿ ಬೀಳುತ್ತಾರೆ ಎಂದುಕೊಂಡರೆ ತಪ್ಪಾಗುತ್ತದೆ. ಸಣ್ಣ ಗುಂಪುಗಳಲ್ಲೂ ಹೆಣ್ಣನ್ನು ಕುರಿತು, ಅತ್ಯಾಚಾರದ ಕುರಿತು ಇಷ್ಟೇ ಉಡಾಫೆಯ ಮಾತುಗಳು ಬಂದು ಹೋಗುತ್ತವೆ. ಇದಕ್ಕೆ ಕಾಲ, ದೇಶ, ಗಡಿಗಳೆಂಬ ನಿರ್ದಿಷ್ಟ ಮಿತಿಗಳಿಲ್ಲ. ಒಂದಲ್ಲಾ ಒಂದು ತಿರುವಿನಲ್ಲಿ ಎಲ್ಲರ ಜೀವನದಲ್ಲೂ ಇಂತಹ ಅನಿರೀಕ್ಷಿತ ಮಾತುಗಳು ಕೇಳಿ ಬರುತ್ತವಾದರೂ ಆ ಸಮಯದಲ್ಲಿ ನಾವು ಅವುಗಳನ್ನು ಹೇಗೆ ಮೆಟ್ಟಿ ನಿಲ್ಲುತ್ತೇವೆ, ಯಾವ ರೀತಿ ಪ್ರತಿಕ್ರಿಯಿಸುತ್ತೇವೆ ಎನ್ನುವುದೂ ಮುಖ್ಯವಾಗುತ್ತದೆ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಹಿಂದಿನ ಪತ್ರ : Qatar Mail: ಇಲ್ಲಿರುವ ಜನ ನೀರಿಲ್ಲದೆ ಬೇಕಿದ್ದರೆ ಇದ್ದಾರು, ಆದರೆ ಟಿಶ್ಯೂ ಪೇಪರ್ ಇಲ್ಲದೆ ಒಂದು ದಿನವೂ ಇರಲಾರರು

Published On - 12:52 pm, Fri, 4 March 22

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್