Qatar Mail: ‘ನ್ಯಾಷನಲ್ ಜಿಯಾಗ್ರಫಿಕ್’ ರೇಂಜ್​ನಲ್ಲಿರುವ ನಿನ್ನ ಫೋಟೋಗಳಿಗೆ ನಾವು ಸಲಹೆ ಕೊಡಲಾಗುವುದಿಲ್ಲ

Women’s Day 2022 : ದೈನಂದಿನ ಸಂಭಾಷಣೆಗಳಲ್ಲಿ ಸಾಕಷ್ಟು ಬಾರಿ ಅರಿವಿಲ್ಲದೆ, ಅರಿವಿದ್ದೂ ಸೆಕ್ಸಿಸ್ಟ್ ಭಾಷೆ ಬಂದು ಹೋಗುತ್ತದೆ. ಇದು ತಪ್ಪು ಎಂದು ಒಪ್ಪಿಕೊಳ್ಳುವುದೇ ಬದಲಾವಣೆಯ ಮೊದಲ ಕ್ರಿಯೆಗೆ ನಾಂದಿಯಾಗಬಹುದೇನೋ.

Qatar Mail: ‘ನ್ಯಾಷನಲ್ ಜಿಯಾಗ್ರಫಿಕ್’ ರೇಂಜ್​ನಲ್ಲಿರುವ ನಿನ್ನ ಫೋಟೋಗಳಿಗೆ ನಾವು ಸಲಹೆ ಕೊಡಲಾಗುವುದಿಲ್ಲ
Follow us
ಶ್ರೀದೇವಿ ಕಳಸದ
|

Updated on:Mar 17, 2022 | 3:09 PM

ಕತಾರ್ ಮೇಲ್ | Qatar Mail : ಈ ಪ್ರಶ್ನೆ-ಉತ್ತರ, ವಾದ-ವಿವಾದ ಗಂಟೆಗಟ್ಟಲೆ ನಡೆದು, ನನ್ನ ಮಾತಿಗೆ ಮತ್ತೆ ಅದೇ ವ್ಯಕ್ತಿಗಳು ನಗುವ ಇಮೋಜಿ ಹಾಕಲು ಪ್ರಾರಂಭಿಸಿದಾಗ ರೋಸಿಹೋಯಿತು. ಹತ್ತನ್ನೆರಡು ಮಹಿಳೆಯರೂ ಸೇರಿದಂತೆ ನೂರಕ್ಕೂ ಹೆಚ್ಚು ಸದಸ್ಯರಿರುವ ಗುಂಪಿನಲ್ಲಿ, ಅತ್ಯಾಚಾರ ಎನ್ನುವ ಪದವನ್ನು ಹಗುರವಾಗಿ ಬಳಸುವುದಲ್ಲದೆ ಅದನ್ನು ಸಮರ್ಥಿಸಿಕೊಳ್ಳುವ ವ್ಯಕ್ತಿಗಳ ನಡುವೆ ನಾನೊಬ್ಬಳೇ ಆ ದಿನ ವಾದಕ್ಕಿಳಿದಾಗ ಮಹಿಳೆಯರನ್ನೂ ಒಳಗೊಂಡು ಯಾರೊಬ್ಬರೂ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಆ ದಿನ ಒಂದು ವಿಚಾರ ಸ್ಪಷ್ಟವಾಯಿತು: ಅವರ ಕಣ್ಣ ಮುಂದೆಯೇ ನನಗೇನಾದರೂ ಹೆಚ್ಚು ಕಡಿಮೆಯಾದರೆ ಅವರಾರೂ ತಡೆಯುವುದಿರಲಿ, ಅದನ್ನು ಹೆಣ್ಣಾಗಿ ಹುಟ್ಟಿದ, ಅವರ ಜೊತೆ ಹೆಣ್ಣಾಗಿಯೂ ಫೋಟೋ ತೆಗೆಯಲು ಹೋಗಿದ್ದು ನನ್ನ ತಪ್ಪೆಂದೇ ಹೇಳಿಬಿಡುತ್ತಾರೆ! ಆ ದಿನ ಸಂಜೆ ಆ ವ್ಯಕ್ತಿ ಫೋನಾಯಿಸಿ, ತನ್ನ ಹೇಳಿಕೆ ಜನರಲ್ ಆಗಿತ್ತೆಂದೂ, ಅದನ್ನು ನಾನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅಗತ್ಯವಿರಲಿಲ್ಲವೆಂಬುದೂ ಬುದ್ಧಿ ಹೇಳಲು ಪ್ರಯತ್ನಿಸಿದಾಗ ಅಚ್ಚರಿಯಾಯಿತು. ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ನೈಟ್ ಫೋಟೋಗ್ರಾಫರ್ (Chaitra Arjunpuri)

(ಪತ್ರ 5, ಭಾಗ 4)

ಆ ಬಳಿಕ ಗುಂಪಿನಲ್ಲಿ ನಾನು ತೆಗೆಯುವ ಫೋಟೋಗಳಿಗೆ ಮುಂಚೆ ಪ್ರತಿಕ್ರಿಯಿಸುತ್ತಿದ್ದವರು, “ನೀನು ಈಗ ಬೇರೆ ರೇಂಜ್​ನಲ್ಲಿದ್ದೀಯ, “ನ್ಯಾಟ್ ಜಿಯೋ ಮಟ್ಟದಲ್ಲಿದ್ದೀಯೆ, ನಮ್ಮಿಂದ ನಿನ್ನ ಚಿತ್ರಗಳಿಗೆ ಸಲಹೆಗಳನ್ನು ಕೊಡಲಾಗುವುದಿಲ್ಲ,” ಎಂದು ಗೇಲಿ ಮಾಡತೊಡಗಿದರು. ಇನ್ನೂ ಒಂದು ಹೆಜ್ಜೆ ಮುಂದುವರೆದು, ನಾಲ್ಕು ಹುಡುಗರನ್ನು ಸೇರಿಸಿಕೊಂಡು ಒಂದು ವಾಟ್ಸಾಪ್ ಗ್ರೂಪ್ ರಚಿಸಿ, ನಾನು ತೆಗೆದಿರುವ ಎಲ್ಲಾ ಪ್ರಕಾರಗಳ ಚಿತ್ರಗಳನ್ನೂ ತರಿಸಿಕೊಂಡು ಪೋಸ್ಟರ್ ತಯಾರಿಸಿ ಹಂಗಿಸುವುದರಿಂದ ಹಿಡಿದು, ಪ್ರತಿ ವಾರ ಹೋಗುವ ಫೋಟೋವಾಕ್​ಗಳಿಗೆ ತಾವು ಹೋಗುತ್ತಿಲ್ಲವೆಂದು ಹೇಳಿ ನಂತರ ಫೋಟೋವಾಕ್​ನ ಚಿತ್ರಗಳನ್ನು ಫೇಸ್​ಬುಕ್ಕಿನಲ್ಲಿ ಹಾಕುವುದು, ನಾನು ಎಲ್ಲಿಗೆ ಫೋಟೋ ತೆಗೆಯಲು ಹೋಗುತ್ತೇನೆ ಎನ್ನುವುದರ ಬಗ್ಗೆ ನನ್ನ ಇತರೆ ಸ್ನೇಹಿತರ ಬಳಿ ವಿಚಾರಿಸುವುದನ್ನೂ ಮಾಡತೊಡಗಿದರು.

ಅಪ್ಪನನ್ನು ಕಳೆದುಕೊಂಡ ನೋವನ್ನು ಮರೆಯಲು ಫೋಟೋಗ್ರಫಿಯನ್ನು, ಅದರಲ್ಲೂ ಆಸ್ಟ್ರೋಫೋಟೋಗ್ರಫಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದ ನಾನು, ಅಮ್ಮನನ್ನು ಕಳೆದುಕೊಂಡ ನಾಲ್ಕೈದು ತಿಂಗಳಿನಲ್ಲಿಯೇ ನಾನು ಗೌರವಿಸುತ್ತಿದ್ದ ವ್ಯಕ್ತಿಗಳು ಮಹಿಳೆಯರ ಬಗ್ಗೆ ಇಟ್ಟುಕೊಂಡಿರುವ ಕೀಳು ಅಭಿಪ್ರಾಯವನ್ನು ಕಂಡು ಅಕ್ಷರಶಃ ಬೆಚ್ಚಿ ಬಿದ್ದಿದ್ದೆ. ಇಂತಹ ಗುಂಪಿನ ಜೊತೆಯಲ್ಲಿ ನಾನು ಚಿತ್ರಗಳನ್ನು ತೆಗೆಯಲು ಒಂದು ವರ್ಷದಿಂದಲೂ ಹೋಗುತ್ತಿದ್ದೇನೆ ಎಂದು ನನ್ನ ಬಗ್ಗೆಯೇ ನನಗೆ ತುಂಬಾ ರೇಜಿಗೆಯಾಗಿಬಿಟ್ಟಿತ್ತು. ದಿನಗಳೆದಂತೆ ಆ ಗುಂಪಿನಿಂದ, ಮತ್ತದರ ಸದಸ್ಯರಿಂದ ದೂರವಾಗಿ ಉಳಿದೆ.

ಭಾಗ 1 : Qatar Mail: ಪುರುಷ ಜಗತ್ತಿನೊಳಗೆ ಛಾಯಾಗ್ರಾಹಕಿಯ ಮೌನಯುದ್ಧ

ನಾವು ಹೆಣ್ಣುಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಬದುಕುವ ಕಾಲ ಇದಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ನಾವು ನಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಮುನ್ನಡೆಯುತ್ತಿದ್ದೇವೆ. ನಾವು ಎಷ್ಟೇ ಗಟ್ಟಿಗಿತ್ತಿಯರಾಗಿದ್ದರೂ ಆಗಾಗ ಇಂತಹ ಮಾತುಗಳು, ಘಟನೆಗಳು ಮನಸ್ಸಿಗೆ ನೋವು ಮಾಡಿ ನಮ್ಮನ್ನು ಸೊರಗಿಸಿಬಿಡುತ್ತವೆ. ಜನರು ಬಳಸುವ ದೈನಂದಿನ ಸಂಭಾಷಣೆಗಳಲ್ಲಿ ಸಾಕಷ್ಟು ಬಾರಿ ಅರಿವಿಲ್ಲದೆ, ಹಲವು ಸಲ ಅರಿವಿದ್ದೂ ಸೆಕ್ಸಿಸ್ಟ್ ಭಾಷೆ ಬಂದು ಹೋಗುತ್ತದೆ. ಇದು ತಪ್ಪು ಎಂದು ಒಪ್ಪಿಕೊಳ್ಳುವುದೇ ಬದಲಾವಣೆಯ ಮೊದಲ ಕ್ರಿಯೆಗೆ ನಾಂದಿಯಾಗಬಹುದೇನೋ. ಇರಲಿ, ಆಲ್ ಈಸ್ ವೆಲ್ ಎಂದು ನಾವು ಮುಂದುವರೆಯುತ್ತಿರುತ್ತೇವೆ. ಮುಂಚಿತವಾಗಿಯೇ, ಹ್ಯಾಪಿ ವುಮೆನ್ಸ್ ಡೇ!

(ಮುಗಿಯಿತು)

(ಮುಂದಿನ ಪತ್ರ : 18.3.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/qatar-mail

Published On - 3:16 pm, Fri, 4 March 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ