Women’s Day 2022: ವೈಶಾಲಿಯಾನ; ತಾಲಿಬಾನಿಗಳಿಂದ ಭಾರತೀಯರನ್ನು ಕರೆತರುವಲ್ಲಿಯೂ ಆರತಿಯವರ ಪಾತ್ರವಿತ್ತು

Rescue : ‘‘ಮೇಡಂ, ನಾನು ಮತ್ತು ನನ್ನ ಐನೂರು ಸ್ನೇಹಿತರು ಖಾರ್ಕಿವ್‌ನ ಹಾಸ್ಟೆಲ್ ಒಂದರಲ್ಲಿ ಅಡಗಿಕೊಂಡಿದ್ದೇವೆ. ಹೊರಗೆ ರಷ್ಯನ್ ಟ್ಯಾಂಕರ್‌ಗಳ ಶಬ್ದ ಕೇಳಿಸುತ್ತಿದೆ. ನಾವು ಇಲ್ಲಿಂದ ಹೇಗೆ ತಪ್ಪಿಸಿಕೊಂಡು ಹಂಗೇರಿ ಅಥವಾ ಸ್ಲೊವಾಕಿಯಾ ತಲುಪುವುದು?’’

Women’s Day 2022: ವೈಶಾಲಿಯಾನ; ತಾಲಿಬಾನಿಗಳಿಂದ ಭಾರತೀಯರನ್ನು ಕರೆತರುವಲ್ಲಿಯೂ ಆರತಿಯವರ ಪಾತ್ರವಿತ್ತು
ಸಮಾಜ ಸೇವಕಿ ಡಾ. ಆರತಿ ಕೃಷ್ಣ
Follow us
ಶ್ರೀದೇವಿ ಕಳಸದ
|

Updated on:Mar 05, 2022 | 2:52 PM

ವೈಶಾಲಿಯಾನ | Vaishaliyaana : ಆರತಿಯವರಿಗೆ ಉಕ್ರೇನ್‌ನ ಹಲವಾರು ನಗರಗಳಿಂದ ಕೂಡ ವಾಕ್‌ಸಂದೇಶಗಳು ಬರುತ್ತಿವೆ. ಕನ್ನಡ, ಹಿಂದಿ ಹಾಗೂ ಇಂಗ್ಲಿಷಿನಲ್ಲಿ ಅವರಿಗೆ ಕಳುಹಿಸುತ್ತಿರುವ ವಾಕ್‌ಸಂದೇಶಗಳಲ್ಲಿ ಕೆಲವು ನಮ್ಮನ್ನು ಬಹಳ ವಿಚಲಿತಗೊಳಿಸುತ್ತವೆ. ವಿದ್ಯಾರ್ಥಿನಿಯೊಬ್ಬಳು ಆರತಿಯವರಿಗೆ ಕಳುಹಿಸಿದ ವಾಕ್‌ಸಂದೇಶ ಹೀಗಿದೆ: ‘‘ಮೇಡಂ, ನಾನು ಮತ್ತು ನನ್ನ ಸ್ನೇಹಿತರು ಸೇರಿ ನಾವು ಐನೂರು ಜನ ಖಾರ್ಕಿವ್‌ನ ಹಾಸ್ಟೆಲ್ ಒಂದರಲ್ಲಿ ಅಡಗಿಕೊಂಡಿದ್ದೇವೆ. ಹೊರಗೆ ರಷ್ಯನ್ ಟ್ಯಾಂಕರ್‌ಗಳ ಶಬ್ದ ಕೇಳಿಸುತ್ತಿದೆ. ನಮಗೆ ಹೊರ ಪ್ರಪಂಚದ ಸಂಪರ್ಕವೇ ಸಿಗುತ್ತಿಲ್ಲ. ನಾವು ಇಲ್ಲಿಂದ ಹೇಗೆ ತಪ್ಪಿಸಿಕೊಂಡು ಹಂಗೇರಿ ಅಥವಾ ಸ್ಲೊವಾಕಿಯಾ ತಲುಪುವುದು? ದಯವಿಟ್ಟು ಎಂಬೆಸಿಯನ್ನು ಸಂಪರ್ಕಿಸಿ ನಮಗೆ ನೆರವು ನೀಡಿ.” ಆ ಹುಡುಗಿಯ ಕಂಪಿಸುವ ದನಿಯನ್ನು ಕೇಳಿದ ನನಗೆ ಒಂದು ರಾತ್ರಿಯಿಡೀ ಮಲಗಲು ಆಗಲೇ ಇಲ್ಲ. ಈ ಬಗೆಯ ಸಾವಿರಾರು ಸಂದೇಶಗಳನ್ನು ಸತತವಾಗಿ ಕೇಳಿಸಿಕೊಂಡು, ಎಂಬೆಸಿಗೆ ಮಾಹಿತಿ ನೀಡುವ ಮಹತ್ಕಾರ್ಯವನ್ನು ನಿರ್ವಹಿಸಲು ಎಷ್ಟು ಮಾನಸಿಕ ಸ್ಥೈರ್ಯ ಬೇಕಲ್ಲವೇ? ಡಾ. ಕೆ. ಎಸ್. ವೈಶಾಲಿ (Dr. K. S. Vaishali)

ಯಾವ ಪ್ರತಿಫಲಾಪೇಕ್ಷೆಯಿಲ್ಲದೇ, ನಿಸ್ವಾರ್ಥ ಸೇವಾ ಮನೋಭಾವದಿಂದ, ಮುತುವರ್ಜಿಯಿಂದ ವಿದ್ಯಾರ್ಥಿಗಳ ಮಾಹಿತಿಯನ್ನು ರಾಯಭಾರಿ ಕಚೇರಿಗಳಿಗೆ ಒದಗಿಸಿ, ಅವರು ಹಿಂದಿರುಗಲು ಬೇಕಾಗುವ ಏರ್ಪಾಡುಗಳನ್ನು ಮಾಡುವತ್ತ ಅವಿಶ್ರಾಂತವಾಗಿ ದುಡಿಯುತ್ತ, ಅವರಿಗೆ ಭರವಸೆಯ ಬೆಳಕಾಗಿರುವ ವ್ಯಕ್ತಿ ಡಾ. ಆರತಿ ಕೃಷ್ಣ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಆರತಿ ನನ್ನ ಪ್ರೀತಿಯ ಸ್ನೇಹಿತೆ. ಇಬ್ಬರೂ ಸದಾಶಿವನಗರದಿಂದ ಬಸ್ಸನ್ನೇರುತ್ತಿದ್ದೆವು. ಯಾವಾಗಲೂ ಮುಗುಳ್ನಗೆ ಬೀರುತ್ತಿದ್ದ ಆರತಿ ಸ್ನಿಗ್ಧ ಸ್ವಭಾವದ, ಸರಳತೆಯನ್ನು ಮೈಗೂಡಿಸಿಕೊಂಡ ಚೆಲುವೆ. ಸ್ವಲ್ಪ ಗಂಭೀರ, ಅಂತರ್ಮುಖಿಯೆನಿಸಿದರೂ ಪರಿಚಯವಾದ ಮೇಲೆ ಆತ್ಮೀಯ ಗೆಳತಿಯಾಗಿದ್ದರು.

ಆರತಿ ನಮ್ಮ ನಾಡಿನ ಅತ್ಯಂತ ಸುಸಂಸ್ಕೃತ ಮನೆತನವೊಂದಕ್ಕೆ ಸೇರಿದವರು. ಸಜ್ಜನಿಕೆ, ಸರಳತೆಗಳನ್ನೇ ಮೌಲ್ಯವಾಗಿರಿಸಿಕೊಂಡಿರುವ ರಾಜಕಾರಣಿ ಬೇಗಾನೆ ರಾಮಯ್ಯನವರ ಪುತ್ರಿ. ರಾಮಯ್ಯನವರು ಗುಂಡೂರಾವ್‌ರವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಈ ಕಳೆದ ಎರಡು ದಶಕಗಳಲ್ಲಿ ನನ್ನ ಸ್ನೇಹಿತೆ ಆರತಿಯವರು ಬೆಳೆದಿರುವ ರೀತಿಯನ್ನು ನೋಡಿ ನಾನು ಅತೀವ ಸಂತಸ ಪಟ್ಟಿದ್ದೇನೆ. ತಮ್ಮ ವಿವಾಹದ ಬಳಿಕ ಅಮರಿಕಾಗೆ ತೆರಳಿ, ಅಲ್ಲಿ ಉನ್ನತ ವ್ಯಾಸಂಗ ಮಾಡಿದ ಆರತಿ, ಅನಿವಾಸಿ ಭಾರತೀಯರ ವೇದಿಕೆಗಳಲ್ಲಿ ಸಕ್ರಿಯವಾಗಿದ್ದುಕೊಂಡು, ಅವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶ್ಲಾಘನೀಯ ನಿಸ್ಪೃಹತೆಯಿಂದ ಕಾರ್ಯ ನಿರ್ವಹಿಸಿದ್ದಾರೆ.

ಭಾಗ 2 : Literature: ವೈಶಾಲಿಯಾನ; ಸಾಹಿತ್ಯಕ್ಕೆ ಮನಸ್ಸನ್ನು ಪರಿವರ್ತಿಸುವಂಥ ಅಪರಿಮಿತ ಶಕ್ತಿಯಿದೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಬಂದ ಮೇಲೆ ಉಂಟಾದ ವಿಷಮ ಪರಿಸ್ಥಿತಿಯಲ್ಲಿ, ಅಲ್ಲಿದ್ದ ಭಾರತೀಯರಲ್ಲಿ ಅನೇಕರನ್ನು ಭಾರತಕ್ಕೆ ಕರೆತರುವಲ್ಲಿಯೂ ಆರತಿ ಪ್ರಮುಖ ಪಾತ್ರವಹಿಸಿದ್ದರು. ಉಕ್ರೇನಿನಿಂದ ಪಾರಾಗಿ ನೆರೆಹೊರೆಯ ದೇಶಗಳನ್ನು ತಲುಪಿ ಅಲ್ಲಿಂದ ಬಾರತವನ್ನು ಸುರಕ್ಷಿತವಾಗಿ ತಲುಪಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನಗುಮುಖದ ಪ್ರೀತಿಯ ಸ್ವಾಗತವನ್ನು ಕೋರಿ, ಅವರನ್ನು ಮನೆಗೆ ತಲುಪಿಸುವವರೆಗೂ, ಆರತಿ ದಣಿವಿಲ್ಲದೇ ಶ್ರಮಿಸಿದ್ದಾರೆ. ರಾಜಕೀಯ ವಲಯಗಳಲ್ಲಿ ಪುರುಷ ಸಾರ್ವಭೌಮತ್ವವೇ ವಿಜೃಂಭಿಸುತ್ತಿರುವ ನಮ್ಮ ನಾಡಿನಲ್ಲಿ, ಡಾ. ಆರತಿಯಂತಹ ಪ್ರಜ್ಞಾವಂತ, ಸುಮನಸ್ಸಿನ, ಮಾನವೀಯತೆಯುಳ್ಳ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನಾಯಕಿಯರಾಗಿ ಬರಲೆಂದು ಹಾರೈಸುತ್ತ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಗೆಳತಿ ಆರತಿಗೆ ಉನ್ನತ ಸ್ಥಾನ-ಪದವಿಗಳು ಲಭಿಸಿ, ಆಕೆ ಹೆಚ್ಚಿನ ಸಮಾಜಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಕೋರುತ್ತಿದ್ದೇನೆ.

(ಮುಗಿಯಿತು)

ಮುಂದಿನ ಯಾನ : 19.3.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/vaishaliyaana

ಭಾಗ 3 : Ukraine Crises: ವೈಶಾಲಿಯಾನ; ಭಾರತೀಯ ವಿದ್ಯಾರ್ಥಿಗಳ ಸಹಾಯದಲ್ಲಿ ತೊಡಗಿರುವ ಕನ್ನಡತಿ ಡಾ ಆರತಿ ಕೃಷ್ಣ

Published On - 2:51 pm, Sat, 5 March 22

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?