International Mother Language Day: ಯುನೆಸ್ಕೋ ವಿಶ್ವ ಮಾತೃಭಾಷೆ ದಿನ- ಕನ್ನಡಕ್ಕಾಗಿ ಗೂಗಲ್​​ ನಿಂದ ವಿಶೇಷ ಪ್ರಯತ್ನ

| Updated By: ಸಾಧು ಶ್ರೀನಾಥ್​

Updated on: Feb 19, 2022 | 11:42 AM

Google Kannada: ಅಂತಾರಾಷ್ಟ್ರೀಯ ಮಾತೃಭಾಷೆ ದಿನ ಹತ್ತಿರ ಬರುತ್ತಿದೆ. ಅದಕ್ಕಾಗಿ ನಾವು ಸಂಭ್ರಮಾಚರಣೆ ಮಾಡಲು ಆಲೋಚಸುತ್ತಿದ್ದೇವೆ. ನಿಮ್ಮ ಮಾತೃಭಾಷೆಯಲ್ಲಿರುವ ಅತ್ಯಂತ ಸುಂದರ ಪದಗಳನ್ನು ನಮಗೆ ತಿಳಿಸಿ. ನಾವು ಕಲಾವಿದರ ಜೊತೆಗೆ ಸೇರಿ ಕೆಲ ಪದಗಳಿಗೆ ಜೀವ ತುಂಬುವ ಕೆಲಸ ಮಾಡುತ್ತೇವೆ. ಟೈಪ್​ ಮಾಡಲು ಆರಂಭಿಸಿ ಎಂದು ಫೇಸ್​​ಬುಕ್​ ಪ್ರಕಟಣೆಯಲ್ಲಿ ಗೂಗಲ್ ತಿಳಿಸಿದೆ.

International Mother Language Day: ಯುನೆಸ್ಕೋ ವಿಶ್ವ ಮಾತೃಭಾಷೆ ದಿನ- ಕನ್ನಡಕ್ಕಾಗಿ ಗೂಗಲ್​​ ನಿಂದ ವಿಶೇಷ ಪ್ರಯತ್ನ
ವಿಶ್ವ ಮಾತೃಭಾಷೆ ದಿನ- ಕನ್ನಡಕ್ಕಾಗಿ ಗೂಗಲ್​​ ನಿಂದ ವಿಶೇಷ ಪ್ರಯತ್ನ
Follow us on

ಬೆಂಗಳೂರು: ಪ್ರತಿವರ್ಷದಂತೆ ಈ ಬಾರಿಯೂ ಯುನೆಸ್ಕೋ (UNESCO) ವತಿಯಿಂದ ಅಂತಾರಾಷ್ಟ್ರೀಯ ಮಾತೃಭಾಷೆ ದಿನ ಆಚರಿಸಲಾಗುತ್ತಿದೆ. ನಾಳಿದ್ದು ಸೋಮವಾರ ಫೆಬ್ರವರಿ 21 ರಂದು ಈ ವಿಶ್ವ ಮಾತೃಭಾಷೆ ದಿನ (International Mother Language Day) ಆಚರಿಸಲ್ಪಡುತ್ತದೆ. ಯುನೆಸ್ಕೋ ಪ್ರಕಾರ ಈ ವರ್ಷದ ಧ್ಯೇಯವೇನೆಂದರೆ ಬಹುಭಾಷಾ ಕಲಿಕೆಗೆ ತಂತ್ರಜ್ಞಾನ ಬಳಕೆ- ಸವಾಲುಗಳು ಮತ್ತು ಅವಕಾಶಗಳು ಎಂಬ ಸಕಾಲಿಕ ಥೀಮ್​ ಆಯ್ಕೆ ಮಾಡಿಕೊಂಡಿದೆ.

ಆಧುನಿಕ ಸಂವಹನ ತಂತ್ರಜ್ಞಾನ ಬಳಕೆ ಮಾಡಿ ಬಹುಭಾಷಾ ಕಲಿಕೆಗೆ ನೆರವಾಗುವುದು ಹೇಗೆ ಎಂಬುದು ಈ ವರ್ಷದ ವಿಶ್ವ ಮಾತೃಭಾಷೆ ದಿನದ ಸಾರವಾಗಿದೆ. ಇದರ ಅಂಗವಾಗಿ ಯುನೆಸ್ಕೋ ವೆಬಿನಾರ್​ ಸಹ (webinar) ಆಯೋಜಿಸುತ್ತಿದೆ.

ಶೈಕ್ಷಣಿಕ ರಂಗದಲ್ಲಿ ತಂತ್ರಜ್ಞಾನ ಬಳಕೆ ಅಪಾರ ಅವಕಾಶಗಳನ್ನು ತೆರೆದಿಡುತ್ತದೆ. ಬಹುಭಾಷಾ ಶಿಕ್ಷಣ, ಮಾತೃ ಭಾಷೆ ಮತ್ತು ಶಿಕ್ಷಣಕ್ಕೆ (Multilingual education) ಇದು ವಿಫುಲ ಅವಕಾಶಗಳನ್ನು ತೆರೆದಿಡುತ್ತದೆ. ಇದು ಕೋವಿಡ್​ ಮಹಾಸೋಂಕಿನ ಸಂದರ್ಭದಲ್ಲಿ ಹೆಚ್ಚು ಅರಿವಿಗೆ ಬಂದಿದೆ. UNESCO, UNICEF, World Bank and OECD survey ಸಮೀಕ್ಷೆಗಳ ಪ್ರಕಾರ 143 ರಾಷ್ಟ್ರಗಳು ಆಲ್​ಲೈನ್​ ಮೂಲಕ ಮಾತೃ ಭಾಷೆ ಮತ್ತು ಶಿಕ್ಷಣ ಕಲಿಕೆಗೆ ಒತ್ತು ನೀಡಿದ್ದವು. ಇದೇ ವೇಳೆ ಅಧ್ಯಾಪಕ ವರ್ಗ ಸೇರಿದಂತೆ ಶಿಕ್ಷಣ ಮಾನವ ಸಂಪನ್ಮೂಲಗಳಿಗೆ ಹೊಸ ತಂತ್ರಜ್ಞಾನ ಬಳಕೆ ಸ್ವಲ್ಪಮಟ್ಟಿಗೆ ತೊಡಕಾಗಿದ್ದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಈ ತೊಡಕುಗಳನ್ನು ಮೆಟ್ಟಿನಿಂತು ಆಧುನಿಕ ಸಂವಹನ ತಂತ್ರಜ್ಞಾನ ಬಳಕೆ ಮಾಡಿ ಬಹುಭಾಷಾ ಕಲಿಕೆ ಮತ್ತು ಬಹುಭಾಷಾ ಶಿಕ್ಷಣಕ್ಕೆ ಮಣೆ ಹಾಕುವುದು ಅನಿವಾರ್ಯ ಎಂಬುದನ್ನು ಅಂತಾರಾಷ್ಟ್ರೀಯ ಸಂಸ್ಥೆಗಳು ಮನಗಂಡಿವೆ.

ಕನ್ನಡಕ್ಕಾಗಿ google ನಿಂದ ವಿಶೇಷ ಪ್ರಯತ್ನ
ಇನ್ನು ಭಾಷೆಗಳ ಮೇಲೆ ಬಹು ಮಹತ್ವದ ಪರಿಣಾಮ ಬೀರಬಲ್ಲ ಗೂಗಲ್​ ಸಂಸ್ಥೆ (google) ಸಹ ಈ ಬಾರಿ ಮಾತೃಭಾಷೆ ಕಲಿಕೆಗೆ ಮಹತ್ವದ ಸ್ಥಾನ ನೀಡಿದೆ. Google ಪ್ರತಿ ರ್ಷದಂತೆ ಈ ಬಾರಿಯೂ International Mother Language Day ಆಚರಸುತ್ತಿದೆ. ಕನ್ನಡಕ್ಕೂ ಮನ್ನಣೆ ನೀಡಿರುವ ಗೂಗಲ್​ ನಿಮ್ಮ ಮಾತೃಭಾಷೆ ಕನ್ನಡದಲ್ಲಿ ಒಂದು ಸುಂದರವಾದ ಪದವನ್ನು ಹೆಸರಿಸಿ, ಅದಕ್ಕೆ ನಮ್ಮ ಗೂಗಲ್​ ಕಲಾವಿದರು ಸುಂದರ ಚಿತ್ರಗಳನ್ನು ಬಿಡಿಸುತ್ತಾರೆ ಎಂದು ಪ್ರಕಟಿಸಿದೆ. ಫೇಸ್​​ಬುಕ್​ ಮೂಲಕ ಈ ತಿಂಗಳ ಆರಂಭದಿಂದ ಈ ಅಭಿಯಾನ ಆರಂಭಿಸಿರುವ ಗೂಗಲ್ ಕನ್ನಡಿಗರನ್ನು ಹುರಿದುಂಬಿಸಿದೆ.

ಅಂತಾರಾಷ್ಟ್ರೀಯ ಮಾತೃಭಾಷೆ ದಿನ ಹತ್ತಿರ ಬರುತ್ತಿದೆ. ಅದಕ್ಕಾಗಿ ನಾವು ಸಂಭ್ರಮಾಚರಣೆ ಮಾಡಲು ಆಲೋಚಸುತ್ತಿದ್ದೇವೆ. ನಿಮ್ಮ ಮಾತೃಭಾಷೆಯಲ್ಲಿರುವ ಅತ್ಯಂತ ಸುಂದರ ಪದಗಳನ್ನು ನಮಗೆ ತಿಳಿಸಿ. ನಾವು ಕಲಾವಿದರ ಜೊತೆಗೆ ಸೇರಿ ಕೆಲ ಪದಗಳಿಗೆ ಜೀವ ತುಂಬುವ ಕೆಲಸ ಮಾಡುತ್ತೇವೆ. ಟೈಪ್​ ಮಾಡಲು ಆರಂಭಿಸಿ ಎಂದು ಫೇಸ್​​ಬುಕ್​ ಪ್ರಕಟಣೆಯಲ್ಲಿ ಗೂಗಲ್ ತಿಳಿಸಿದೆ. ಇದಕ್ಕೆ ಈಗಾಗಲೇ ಅನೇಕ ಕನ್ನಡಿಗರು ಉತ್ತಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ತಡವೇಕೆ? ನೀವೂ ಕನ್ನಡದಲ್ಲಿರುವ ಸುಂದರ ಪದಗಳನ್ನು ಹೆಕ್ಕಿ ತೆಗೆದು ಗೂಗಲ್​ಗೆ ಕಳಿಸಿಕೊಡಿ. ಅದರೊಂದಿಗೆ ಅಂತಾರಾಷ್ಟ್ರೀಯ ಮಾತೃಭಾಷೆ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ, ಕನ್ನಡಿಗರೇ!

Published On - 11:40 am, Sat, 19 February 22