No Delete Option: ಅಂದಿನ ಹಸಿವು ನಾಣ್ಯದಂತೆ ಸದ್ದು ಹೊರಡಿಸುತ್ತಿತ್ತು, ಇಂದಿನ ಹಸಿವು ನೋಟಿನಂತೆ ಮಲಗಿರುತ್ತದೆ

Religion and Politics : ‘ಒಬ್ಬರ ಬಟ್ಟೆ ಇನ್ನೊಬ್ಬರು ತೊಡುವುದು ನಮಗೆ ಸಾಮಾನ್ಯ ಸಂಗತಿಯಾಗಿತ್ತು. ಟಿ-ಶರ್ಟ್​, ಜರ್ಕಿನ್​ ಬದಲಾವಣೆ ಸಹಜ ಸಂಗತಿಯಾಗಿತ್ತು. ಶೂ ಮತ್ತು ಬೆಲ್ಟ್​ಗಳಂತೂ ಸಾರ್ವಜನಿಕ ಆಸ್ತಿಯಾಗಿದ್ದವು. ಯಾವುದಕ್ಕೂ ಯಾರಿಗೂ ನಿರ್ಬಂಧ ಎನ್ನುವುದು ಇದ್ದಿರಲೇ ಇಲ್ಲ.’ ಡಾ. ಶಿವು ಅರಕೇರಿ

No Delete Option: ಅಂದಿನ ಹಸಿವು ನಾಣ್ಯದಂತೆ ಸದ್ದು ಹೊರಡಿಸುತ್ತಿತ್ತು, ಇಂದಿನ ಹಸಿವು ನೋಟಿನಂತೆ ಮಲಗಿರುತ್ತದೆ
ಡಾ. ಶಿವು ಅರಕೇರಿ
Follow us
ಶ್ರೀದೇವಿ ಕಳಸದ
|

Updated on:Feb 19, 2022 | 4:08 PM

ನೋ ಡಿಲೀಟ್ ಆಪ್ಷನ್ | No Delete Option : ಸಲಾಹುದ್ದೀನ ರೂಮ್​ನಲ್ಲಿ ಯಾವಾಗಲೋ ಒಮ್ಮೆ ಚಿಕನ್ ಸಂಭ್ರಮ. ಯರೂ ಅವನ ರೂಮಿಗೆ ಬರಬಹುದಿತ್ತು. ಆದರೆ ಅದಕ್ಕೆ ಮುಂಚಿತವಾಗಿ ಹೆಸರು ರಿಜಿಸ್ಟರ್ ಮಾಡಬೇಕಿತ್ತು. ಅವನು ಮಾಡುತ್ತಿದ್ದ ಟೊಮ್ಯಾಟೋ ಸಾರಿನ ನೆನಪಂತೂ ಇನ್ನೂ ನಾಲಿಗೆಯ ಮೇಲಿದೆ. ಗಿರೀಶ್ ಕುಲಕರ್ಣಿ ಆಗೊಮ್ಮೆ ಈಗೊಮ್ಮೆ ರೂಮಿಗೆ ಕರೀತಿದ್ದ. ಅವರ ಅಮ್ಮ ಕಳಿಸುತ್ತಿದ್ದ ತುಪ್ಪದ ಪರಿಮಳ ಮಾತ್ರ ಅಮೋಘ! ಇನ್ನು ಚಂದ್ರಕಾಂತ್ ವಾಗ್ಮೋರೆ ಸಂಡೇ ಬಂತೆಂದರೆ ಸಾಕು, ಸಂಡೇ ಸ್ಪೆಷಲ್ ಅಂತ ಹಾಸ್ಟೆಲ್​ನಲ್ಲಿ ಊಟದ ಪ್ಲೇಟು ತೆಗೆದಿಟ್ಟು ನಮ್ಮೆಲ್ಲರಿಗಾಗಿ ಕಾಯ್ತಿದ್ದ. ನಾವು ಪರೀಕ್ಷೆಗೆ ಓದಿಕೊಳ್ಳುತ್ತಿದ್ದಾಗ ನಮ್ಮ ಸೀನಿಯರ್ಸ್ ಖುದ್ದು ತಾವೇ ಅಡುಗೆ ಮಾಡಿ ಊಟ ಬಡಿಸುತ್ತಿದ್ದರು. ಇವರೆಲ್ಲ ಯಾವೊತ್ತೂ ನಮ್ಮನ್ನು ಬಿಟ್ಟು ಉಂಡವರಲ್ಲ. ಅವರೆಲ್ಲರ ಜಾತಿ ಇಂದಿಗೂ ಕೂಡ ನಮಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳಬೇಕೆನ್ನುವ ಯಾವ ಕುತೂಹಲವೂ ನಮ್ಮಲ್ಲಿ ಎಂದೂ ಹುಟ್ಟಲೇ ಇಲ್ಲ. ಡಾ. ಶಿವು ಅರಕೇರಿ, ಬಳ್ಳಾರಿ (Dr. Shivu Arakeri) 

*

ಭಾಗ 2

ಒಬ್ಬರ ಬಟ್ಟೆ ಇನ್ನೊಬ್ಬರು ತೊಡುವುದು ನಮಗೆ ಸಾಮಾನ್ಯ ಸಂಗತಿಯಾಗಿತ್ತು. ಟಿ-ಶರ್ಟ್​, ಜರ್ಕಿನ್​ಗಳ  ಬದಲಾವಣೆ ಸಹಜ ಸಂಗತಿಯಾಗಿತ್ತು. ಶೂ ಮತ್ತು ಬೆಲ್ಟ್​ಗಳಂತೂ ಸಾರ್ವಜನಿಕ ಆಸ್ತಿಯಾಗಿದ್ದವು. ಯಾವುದಕ್ಕೂ ಯಾರಿಗೂ ನಿರ್ಬಂಧ ಎನ್ನುವುದು ಇದ್ದಿರಲೇ ಇಲ್ಲ. ನೀವೇನೇ ಹೇಳಿ… ಕಾಲೇಜು ಜೀವನದ ಅನುಭವಗಳು ಎಂದಿಗೂ ಅದ್ಭುತ. ಎಲ್ಲರೂ ಬಡ ಮತ್ತು ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆ ಉಳ್ಳವರೇ ಆದ್ದರಿಂದ ಎಲ್ಲರ ಬದುಕೂ ಸಮಾನವಾಗಿತ್ತು. ಅಂದಿನ ಹಸಿವು ಜೇಬಿನಲ್ಲಿರುತ್ತಿದ್ದ ಚಿಲ್ಲರೆ ನಾಣ್ಯಗಳ ಸದ್ದಿನಂತೆ ಸಪ್ಪಳ ಮಾಡುತ್ತಿತು. ಬದಲಾದ ಕಾಲಘಟ್ಟದಲ್ಲಿ ಇಂದಿನ ಹಸಿವು ಶಬ್ದವೇ ಬರದ ನೋಟಿನ ಕಂತೆಯಂತೆ ಮತ್ತೆಗೆ ಮಲಗಿಬಿಟ್ಟಿರುತ್ತದೆ.

ಇದನ್ನೂ ಓದಿ : No Delete Option: ಮರುದಿನ ಬೆಳಗ್ಗೆ ಪುಳಿಯೋಗರೆ; ಎಳ್ಳಿನ ಮುಖವಾಡ ಹೊತ್ತ ನುಸಿಸೈನ್ಯ ಮತ್ತು ಕರಿಪಾರಿವಾಳ

ಅನ್ನ, ಗಾಳಿ, ನೀರಿಗೆ ಯಾವ ಧರ್ಮವಿದ್ದೀತು ಅಲ್ಲವೇ..? ಕೊರೊನಾ ಎನ್ನುವ ಹೆಸರಿನಲ್ಲಿ ಅಂಥಾ ಬಲವಾದ ಪೆಟ್ಟು ಕೊಟ್ಟಮೇಲೂ ಈ ಮನುಷ್ಯನೆಂಬ ಪ್ರಾಣಿಗೆ ಬುದ್ಧಿ ಬರದೇ ಹೋಯಿತೆ? ರಾಶಿ ರಾಶಿ ಹೆಣಗಳು ಹಿಟಾಚಿಯಿಂದ ಗುಂಡಿ ತೋಡಿಸಿಕೊಂಡು ಕನಿಷ್ಠ ನಾಲ್ಕು ಹಿಡಿ ಮಣ್ಣನ್ನು ಕಾಣದೇ ಸ್ಮಶಾನದ ದೂರದ ಮೂಲೆಯಲ್ಲಿ ಒಟ್ಟಿಗೆ ಸಮಾಧಿಯಾದಾಗ ಅವುಗಳದ್ದು ಯಾವ ಜಾತಿ, ಯಾವ ಧರ್ಮ?

ನನಗಿನ್ನೂ ನೆನಪಿದೆ… ಅಂದು ಬಳ್ಳಾರಿಯ ಸಹಾಯಕ ಜಿಲ್ಲಾಧಿಕಾರಿಗಳು ಮತ್ತು ನಾನು ಕೊವಿಡ್​ನಿಂದ  ಮೃತಪಟ್ಟವರನ್ನು ಸರ್ಕಾರದ ವತಿಯಿಂದ ಸಾಮೂಹಿಕ ಸಂಸ್ಕಾರ ಮಾಡಲು ಹೋಗುತ್ತಿದ್ದಾಗಿನ ಸಂದರ್ಭ.  ಜಾತಿ ಮತ ಪಂಥ ಧರ್ಮ ಬಿಡಿ, ಹೆತ್ತ ಮಕ್ಕಳೇ ಹೆಣದತ್ತ ಸುಳಿಯುತ್ತಿರಲಿಲ್ಲ! ಮನುಷ್ಯ ಮನುಷ್ಯನಾಗಿ ಬದುಕಲು ಪ್ರಕೃತಿ ದೊಡ್ಡದೊಂದು ಅವಕಾಶ ಕಲ್ಪಿಸಿತ್ತು. ಆದರೂ ನಮಗೆ ಬುದ್ಧಿ ಬರಲಿಲ್ಲವಲ್ಲ. ಎಲ್ಲಿ ಎಡವಿದೆವು ಎನ್ನುವ ಗೊಂದಲ. ಅಂದು ನಮ್ಮ ಹಸಿವು ಮತ್ತು ಅನ್ನಕ್ಕೆ ಇರದ ಜಾತಿ ಧರ್ಮಗಳು ಇಂದು ಬಟ್ಟೆ ಮತ್ತು ಬಣ್ಣಕ್ಕೆ.

(ಮುಗಿಯಿತು)

ಗಮನಿಸಿ : ನಿಮ್ಮ ಮನಸ್ಸಿನಲ್ಲಿ ಹೂತ ಯಾವ ಘಟನೆ, ಪ್ರಸಂಗ, ನೆನಪುಗಳನ್ನೂ ‘No Delete Option’ ಅಂಕಣದಲ್ಲಿ ಬರೆಯಬಹುದು. ನುಡಿ ಅಥವಾ ಯೂನಿಕೋಡ್​ನಲ್ಲಿ ಕನಿಷ್ಟ 300, ಗರಿಷ್ಠ 800 ಪದಗಳಿರಲಿ. ಜೊತೆಗೆ ನಿಮ್ಮ ಭಾವಚಿತ್ರವೂ ಇರಲಿ. ಮೇಲ್ :  tv9kannadadigital@gmail.com

*

ಭಾಗ 1 : No Delete Option: ಸುಂಕಪ್ಪನ ಹೋಟೆಲ್​ಗೆ ಹೋಗೋಣವಾ; ಎಲ್ಲೆಲ್ಲಿದ್ದೀರಿ ಕೃಷ್ಣಾ, ಅಜ್ಮತ್, ಸಲಾಹುದ್ದೀನ್, ರೆಡ್ಡಿ, ಪಾಷಾ, ರಾಘು

Published On - 2:23 pm, Sat, 19 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ