AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

No Delete Option: ಮರುದಿನ ಬೆಳಗ್ಗೆ ಪುಳಿಯೋಗರೆ; ಎಳ್ಳಿನ ಮುಖವಾಡ ಹೊತ್ತ ನುಸಿಸೈನ್ಯ ಮತ್ತು ಕರಿಪಾರಿವಾಳ

Hostel Food : ‘ಹುಳ ಇರೋ ಅಡಿಗೇನ ತಿನ್ನೋಕೆ ಹೇಗಾಗುತ್ತೆ ಸರ್? ನಿಜ! ನಾವಿಲ್ಲಿಗೆ ಓದೋಕೇ ಬಂದಿರೋದು; ಆದರೆ, ಈ ರೀತಿಯ ಊಟ ಮಾಡಿ ನಾಳೆ ಏನಾದ್ರೂ ಹೆಚ್ಚೂ ಕಮ್ಮಿ ಆದ್ರೆ ಯಾರಿಗೆ ಸರ್ ನಷ್ಟ? ಕನಿಷ್ಟ ಪಕ್ಷ ಶುದ್ಧವಾದ ಊಟ ಕೇಳೋಕೂ ನಮಗೆ ಹಕ್ಕಿಲ್ವ?” ಡಾ. ಜ್ಯೋತಿ ಸಾಮಂತ್ರಿ

No Delete Option: ಮರುದಿನ ಬೆಳಗ್ಗೆ ಪುಳಿಯೋಗರೆ; ಎಳ್ಳಿನ ಮುಖವಾಡ ಹೊತ್ತ ನುಸಿಸೈನ್ಯ ಮತ್ತು ಕರಿಪಾರಿವಾಳ
ಡಾ. ಜ್ಯೋತಿ ಸಾಮಂತ್ರಿ
ಶ್ರೀದೇವಿ ಕಳಸದ
|

Updated on: Feb 09, 2022 | 6:26 PM

Share

No Delete Option: ಅಂದು ಮೀಟಿಂಗ್, ಇಬ್ಬರು ವಾರ್ಡನ್ ಜೊತೆಗೆ ಒಬ್ಬ ಪುರುಷನೂ ಇದ್ದ. ಮಹಿಳಾ ಹಾಸ್ಟೆಲ್ ಆಗಿದ್ದರಿಂದ, ಸಾಮಾನ್ಯವಾಗಿ ಪುರುಷರಿಗೆ ಪ್ರವೇಶ ನಿರ್ಬಂಧವಿತ್ತು. ಆದರೆ ಆಮೇಲೆ ತಿಳಿಯಿತು, ಅವರು, ಇನ್ನೊಬ್ಬ ವಾರ್ಡನ್​ನ ಅಣ್ಣ ಹಾಗೂ ಗುಪ್ತವಾಣಿಯ ಸಂದೇಶವನ್ನು ಹೊತ್ತುತಂದ ಕರಿಪಾರಿವಾಳವೆಂದು (ಕ್ಷಮಿಸಿ, ಇಲ್ಲಿ ಕರಿ ಎಂಬುದು ಅವರ ಪ್ಲ್ಯಾನಿಗೆ ಆತ ಬಳಿದ ಕಪ್ಪು ಮಸಿಯ ಸಂಕೇತ). ಆತ – “ನೋಡ್ರಮ್ಮ, ನಿಮ್ಮ ಸಮಸ್ಯೆಗಳೇನಿದ್ದರೂ ನಮ್ಮ ಬಳಿ ಹೇಳಿಕೊಳ್ಳಿ, ನಾವದನ್ನ ಬಗೆಹರಿಸ್ತೀವಿ. ಅದನ್ನ ಬಿಟ್ಟು ಹಿರಿಯ ಅಧಿಕಾರಿಗಳ ಹತ್ರ ಹೇಳೀದ್ರೆ ಏನ್ ಸಿಗುತ್ತೆ? ಅವ್ರಿಗೆ 108 ಕೆಲಸ, ನಿಮ್ಮ ಕರೆಗಳು ಅವರನ್ನ ತಲುಪುವುದೇ ಇಲ್ಲ, ಇನ್ನು ಪರಿಹಾರವೆಲ್ಲಿಂದ ಸಿಗುತ್ತದೆ? ಫೋನ್ ಮಾಡಿದ್ದು ಯಾರು ಅಂತ ಹೇಳೋದ್ ಬೇಡ, ನಿಮ್ ಪ್ರಾಬ್ಲಮ್ ಏನು ಅಂತ ಹೇಳೀ.”

ಡಾ. ಜ್ಯೋತಿ ಸಾಮಂತ್ರಿ, ಬಳ್ಳಾರಿ (Dr. Jyothi Samantri)

*

ಭಾಗ – 3

ಲಕ್ಷ್ಮಿ – “ಏನು ಇಲ್ಲ ಸರ್. ಇವತ್ ರಾತ್ರಿ ನಮ್ಮೆಲ್ಲರಿಗಿಂತ ಮುಂಚೆ ನೀವ್ ಮೂವರು ನಮಗೆ ಅಂತ ಮಾಡಿದ ಅಡುಗೆನ ಊಟ ಮಾಡಬೇಕು. ಅಷ್ಟ್ ಮಾಡಿ ಪುಣ್ಯ ಕಟ್ಕೊಳಿ.”

ಆತ – “ ಗೊತ್ತಾಯ್ತು, ಆ ಅಕ್ಕಿ ಬೇಳೆಗಳನ್ನ ಚಲ್ಲೋಕೆ ನಿಮ್ ಮೇಡಂಗೆ ನಾನೇ ಖುದ್ದಾಗಿ ಹೇಳಿದೀನಿ ಆಯ್ತಾ..?”

ಕಮಲ – “ಇಲ್ಲ ಸರ್, ಈಗಲೇ ನಮ್ಮ ಕಣ್ಮುಂದೇನೆ ಚಲ್ಬೇಕು. ಇಲ್ಲಾಂದ್ರೆ ನಾವು ಊಟ ಮಾಡಲ್ಲ”

ವಾರ್ಡನ್ – “ನಂಗೊತ್ತಿತ್ತು, ನೀವೇ ಈ ಕೆಲಸ ಮಾಡಿರದು ಅಂತ. ನೀನ್ಯಾಕೆ ನಸುಗುನ್ನಿಕಾಯಿ ಥರ ಕೂತಿದೀಯ? ಬಾಯ್ಬಿಡೆ ಕೃತಿ, ನಿಮ್ನೆಲ್ಲ ಒಳ್ಳೆ ಹುಡುಗೀರು ಅನ್ಕೊಂಡಿದ್ದೆ, ಇಷ್ಟ್ ನೀಚ ಕೆಲಸ ಮಾಡ್ತೀರಿ ಅಂತ ಕನ್ಸಲ್ಲು ಅನ್ಕೊಂಡಿರ್ಲಿಲ್ಲ.. ಥೂ.. ಓದಕ್ ಬಂದಿದೀರ ತಿನ್ನಕ್ ಬಂದಿದೀರ?”

ಕೃತಿ – “ನೋಡಿ ಸರ್, ನಿಮ್ ಮುಂದೇನೇ ಹೀಗೆಲ್ಲ ಮಾತಾಡೋರು, ನೀವಿಲ್ದೆ ಇರೋವಾಗ ಇನ್ಹೇಗೆ ಮಾತಾಡ್ಬೇಡ? ಹುಳ ಇರೋ ಅಡಿಗೇನ ತಿನ್ನೋಕೆ ಹೇಗಾಗುತ್ತೆ ಸರ್? ನಿಜ! ನಾವಿಲ್ಲಿಗೆ ಓದೋಕೇ ಬಂದಿರೋದು; ಆದರೆ, ಈ ರೀತಿಯ ಆಹಾರ ತಿಂದು ನಾಳೆ ಏನಾದ್ರೂ ಹೆಚ್ಚೂ ಕಮ್ಮಿ ಆದ್ರೆ ಯಾರಿಗೆ ಸರ್ ನಷ್ಟ? ಕನಿಷ್ಟ ಪಕ್ಷ ಶುದ್ಧವಾದ  ಊಟ ಕೇಳೋಕೂ ನಮಗೆ ಹಕ್ಕಿಲ್ವ?”

ವಾರ್ಡನ್ – “ಹಕ್ಕಿನ ಬಗ್ಗೆ ಮಾತಾಡ್ತಿಯ? ಎಷ್ಟ್ ಕೊಡ್ತೀಯ ತಿಂಗ್ಳು ತಿಂಗ್ಳು ಊಟಕ್ಕೆ ಅಂತ? ಹಾ? ಬಂದ್ಬಿಟ್ಳು ಮಾತಾಡೋಕೆ..?”

ಭಾಗ 1 : No Delete Option: ಆ ಅಸ್ತಿಪಂಜರದ ಸಾರು, ಈ ಪವಿತ್ರ ನುಸಿಚಿತ್ರಾನ್ನ, ಉಪವಾಸ ಸತ್ಯಾಗ್ರಹ ಮತ್ತು ರೊಟ್ಟಿ ಪಾರ್ಟಿ

ಆತ – “ನೋಡಮ್ಮ, ಮಕ್ಳು ಏನೋ ತಿಳಿದೆ ಮಾಡಿವೆ. ಇದನ್ನ ಇಲ್ಲಿಗೇ ಬಿಟ್ ಬಿಡಿ. ಈಗೇನು? ನಿಮ್ ಕಣ್ಮುಂದೆನೇ ಚಲ್ಬೇಕು ತಾನೆ… ಸರಿ, ನಾನೆ ಆ ಕೆಲಸ ಮಾಡ್ತೀನಿ. ಸರೀನಾ”ಎಂದು ಹೇಳುತ್ತಾ, ಆ ವಾರ್ಡನ್ ನ ಹೇಗೋ ಸಮಾಧಾನ ಮಾಡಿ, ಆ ಘನಕಾರ್ಯ ಮಾಡಿ ಅವರೆಲ್ಲರಿಗೂ ಉಪಕಾರ ಮಾಡಿದ.

ವಾರ್ಡನ್ – “ಗೆದ್ವಿ ಅಂತ ಬೀಗ್ಬೇಡ್ರಿ, ನೀವಿನ ನನ್ ಕೈಯಲ್ಲಿ 6 ತಿಂಗಳಿರಬೇಕು… ನೋಡ್ಕೋತೀನಿ.”

ಅಂದು ನಿಜಕ್ಕೂ ಗೆಲುವಾಗಿತ್ತು. ಒಗ್ಗಟ್ಟಿಗೆ ಅಷ್ಟೊಂದು ಶಕ್ತಿಯಿದೆ ಎಂಬುದನ್ನ ಆ ಮಕ್ಕಳು ಕಂಡುಕೊಂಡಿದ್ದವು.

ಮರುದಿನ ಬೆಳಿಗ್ಗೆ ‘ಪುಳಿಯೋಗರೆ’ ಹಾಗೂ ಗೆದ್ದ ಖುಷಿಗೆ ತಣ್ಣೀರೆರಚಿದ ಹಳೆಯ ಸಮಸ್ಯೆ. ಎಳ್ಳಿನ ಹೆಸರು ಪಡೆದುಕೊಂಡು ಅನ್ನದ ತುಂಬ ತುಂಬಿದ್ದ ನುಸಿಗಳು. ಮತ್ತೆ ಮುಸುರೆ ಪಾತ್ರೆ ತುಂಬಿತ್ತು; ವಾರ್ಡನ್​ನ ಕೋಪದ ಕೆರೆಯೂ.

(ಮುಗಿಯಿತು)

*

ಗಮನಿಸಿ : ನಿಮ್ಮ ಮನಸ್ಸಿನಲ್ಲಿ ಹೂತ ಯಾವ ಘಟನೆ, ಪ್ರಸಂಗ, ನೆನಪುಗಳನ್ನೂ ‘No Delete Option’ ಅಂಕಣದಲ್ಲಿ ಬರೆಯಬಹುದು. ನುಡಿ ಅಥವಾ ಯೂನಿಕೋಡ್​ನಲ್ಲಿ ಕನಿಷ್ಟ 300, ಗರಿಷ್ಠ 800 ಪದಗಳಿರಲಿ. ಜೊತೆಗೆ ನಿಮ್ಮ ಭಾವಚಿತ್ರವೂ ಇರಲಿ. ಮೇಲ್ :  tv9kannadadigital@gmail.com

ಭಾಗ 2 : No Delete Option: ‘ಯಾವಳೇ ಅವಳು ಅಷ್ಟೊಂದ್ ಧೈರ್ಯ ಎಲ್ಲಿಂದ ಬಂತು ನಿಮಗೆ!’ ವಾರ್ಡನ್ ರೌದ್ರಾವತಾರ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!