No Delete Option: ಆ ಅಸ್ತಿಪಂಜರದ ಸಾರು, ಈ ಪವಿತ್ರ ನುಸಿಚಿತ್ರಾನ್ನ, ಉಪವಾಸ ಸತ್ಯಾಗ್ರಹ ಮತ್ತು ರೊಟ್ಟಿ ಪಾರ್ಟಿ

Hostel Memories : ‘ಕೃತಿ ಮುದ್ದೆಯನ್ನೊಮ್ಮೆ, ನಮ್ಮ ವಾರ್ಡನ್ ಮುಖವನ್ನೊಮ್ಮೆ ನೋಡಿದಳು. ಕಣ್ಣಲ್ಲಿ ನೀರು ಸುರಿಯತೊಡಗಿದವು. ಬಹುಶಃ ಅವರು ನೋಡಿಲ್ಲವೆಂದುಕೊಂಡು, ವಿಷಯ ತಿಳಿಸಿದಳು. ಅವರು ಅದನ್ನ ಸುತರಾಂ ಒಪ್ಪದೆ, ಅವು ಸಾಸಿವೆ ಕಾಳುಗಳೆಂದು ವಾದಿಸಿದರು.’ ಡಾ. ಜ್ಯೋತಿ ಸಾಮಂತ್ರಿ

No Delete Option: ಆ ಅಸ್ತಿಪಂಜರದ ಸಾರು, ಈ ಪವಿತ್ರ ನುಸಿಚಿತ್ರಾನ್ನ, ಉಪವಾಸ ಸತ್ಯಾಗ್ರಹ ಮತ್ತು ರೊಟ್ಟಿ ಪಾರ್ಟಿ
ಡಾ. ಜ್ಯೋತಿ ಸಾಮಂತ್ರಿ
Follow us
ಶ್ರೀದೇವಿ ಕಳಸದ
|

Updated on:Feb 09, 2022 | 5:50 PM

No Delete Option : ಮನೆಯಿಂದ ತಂದ ಬುತ್ತಿ ಖಾಲಿಯಾದ ಮೇಲೆ ಎಂದಿನಂತೆ ಪರಾತದಂತಹ ತಟ್ಟೆಗಳನ್ನ ಹಿಡಿದು ಸಾಲಾಗಿ ನಿಂತಿದ್ದರು. ಏನೋ ಒಂಥರಾ ವಾಸನೆ ಬರುತಿತ್ತು. ಕೃತಿಯ ತಟ್ಟೆಗೆ ಮುದ್ದೆ ಸಾರು ಬಿದ್ದಮೇಲೆ ತಿಳಿಯಿತು, ಅವರಿಗಾಗಿ ಸರಬರಾಜಾಗಿದ್ದ ಬೇಳೆಗಳನ್ನ ಅದಾಗಲೇ ಹುಳುಗಳು ತಿಂದುತೇಗಿದ್ದವು. ಸ್ವತಃ ಅವುಗಳ ಅಸ್ತಿಪಂಜರದ ಸಾರನ್ನು ಮಕ್ಕಳಿಗೆ ಬಡಿಸಲಾಗಿತ್ತು. ಕೃತಿ ಮುದ್ದೆಯನ್ನೊಮ್ಮೆ, ನಮ್ಮ ವಾರ್ಡನ್ ಮುಖವನ್ನೊಮ್ಮೆ ನೋಡಿದಳು. ಕಣ್ಣಲ್ಲಿ ನೀರು ಸುರಿಯತೊಡಗಿದವು. ಬಹುಶಃ ಅವರು ನೋಡಿಲ್ಲವೆಂದುಕೊಂಡು, ವಿಷಯ ತಿಳಿಸಿದಳು. ಅವರು ಅದನ್ನ ಸುತರಾಂ ಒಪ್ಪದೆ, ಅವು ಸಾಸಿವೆ ಕಾಳುಗಳೆಂದು ವಾದಿಸಿದರು. ಮೊದಲೇ ಸೊಕ್ಕಿನ ಕೃತಿ ಅಂದು ಊಟ ಮಾಡದೆ, ತಟ್ಟೆಯಲ್ಲಿದ್ದ ಅಷ್ಟನ್ನೂ ಚೆಲ್ಲಿ, ಹಾಗೇ ಹೋಗಿ ಮಲಗಿಕೊಂಡಳು, ಜೊತೆಗೆ ಅವಳ ಕೆಲ ಗೆಳತಿಯರದು ಅದೇ ಕಥೆ. ಅದಕ್ಕಾಗಿ ಮತ್ತಷ್ಟು ಮಧುರ ಮಾತುಗಳನ್ನ ಕೇಳಿ ಅವರೂ ಬಂದು, ಕೃತಿಯೊಂದಿಗೆ ಅಳುತ್ತಾ ಮಲಗಿದರು.

ಡಾ. ಜ್ಯೋತಿ ಸಾಮಂತ್ರಿ, ಬಳ್ಳಾರಿ (Dr Jyothi Samanthri)

(ಭಾಗ – 1)

ಎಲ್ಲ ಮಾಹಿತಿ ಕೊಡೋಕೆ ನಾನ್ ರೆಡಿ; ಓದೋವಷ್ಟು ತಾಳ್ಮೆ ಯಾರಿಗಿದೆ ಹೇಳಿ. ಅಷ್ಟಕ್ಕೂ ಹೇಳೋಕೆ ಹೊರಟಿರೊ ಕಥೆನೂ ತಾಳ್ಮೆಗೆಟ್ಟವರ ರೌದ್ರಾವತಾರದ ಬಗ್ಗೆನೇ! ಹಾಗಾಗಿ ಆದಷ್ಟು ಸಂಕ್ಷಿಪ್ತವಾಗಿ ಹೇಳೋಕೆ ಪ್ರಯತ್ನ ಮಾಡ್ತೀನಿ.

ಅದು ಅವರ ದ್ವಿತೀಯ ಪಿಯುಸಿಯ ಎರಡನೇ ಸೆಮಿಸ್ಟರ್. ಊರು ಗೀರು ಇಲ್ಲಿ ಅನವಶ್ಯಕ. ಮೊದಲಿಗಿದ್ದ ಹಾಸ್ಟೆಲ್​ ಅನ್ನು ಬೇರೆ ಕಡೆ ಶಿಫ್ಟ್ ಮಾಡಲಾಗಿತ್ತು ಹಾಗೂ ಕಾರಣಾಂತರಗಳಿಂದ ರಜೆ ದಿನಗಳನ್ನು ಹೆಚ್ಚಿಸಿದ್ದರಿಂದ ಅವರೂ ತಡವಾಗಿಯೇ ಬಂದಿದ್ದರು. ಅದಕ್ಕಾಗಿ ವಾರ್ಡನ್ ಅವರಿಂದ ಸಾಕಷ್ಟು ಬೈಗುಳ ತಿಂದಿದ್ದ ಅವರು, ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಮನೆಯಿಂದ ಬಂದದ್ದ ಶೋಕದಲ್ಲಿ ಮುಳುಗಿದ್ದರು, ಅದಕಿಂತ ಬೇರಾವ ನೋವಿನ ಸಂಗತಿಯೂ ಅವರಿಗಿರಲಿಲ್ಲ.

ಮನೆಯಿಂದ ತಂದ ಬುತ್ತಿ ಖಾಲಿಯಾದ ಮೇಲೆ ಎಂದಿನಂತೆ ಪರಾತದಂತಹ ತಟ್ಟೆಗಳನ್ನ ಹಿಡಿದು ಸಾಲಾಗಿ ನಿಂತಿದ್ದರು. ಏನೋ ಓಂಥರಾ ವಾಸನೆ ಬರುತಿತ್ತು. ಕೃತಿಯ ತಟ್ಟೆಗೆ ಮುದ್ದೆ ಸಾರು ಬಿದ್ದಮೇಲೆ ತಿಳಿಯಿತು, ಅವರಿಗಾಗಿ ಸರಬರಾಜಾಗಿದ್ದ ಬೇಳೆಗಳನ್ನ ಅದಾಗಲೇ ಹುಳುಗಳು ತಿಂದುತೇಗಿದ್ದವು. ಸ್ವತಃ ಅವುಗಳ ಅಸ್ತಿಪಂಜರದ ಸಾರನ್ನು ಮಕ್ಕಳಿಗೆ ಬಡಿಸಲಾಗಿತ್ತು. ಕೃತಿ ಮುದ್ದೆಯನ್ನೊಮ್ಮೆ, ನಮ್ಮ ವಾರ್ಡನ್ ಮುಖವನ್ನೊಮ್ಮೆ ನೋಡಿದಳು. ಕಣ್ಣಲ್ಲಿ ನೀರು ಸುರಿಯತೊಡಗಿದವು. ಬಹುಶಃ ಅವರು ನೋಡಿಲ್ಲವೆಂದುಕೊಂಡು, ವಿಷಯ ತಿಳಿಸಿದಳು. ಅವರು ಅದನ್ನ ಸುತರಾಂ ಒಪ್ಪದೆ, ಅವು ಸಾಸಿವೆ ಕಾಳುಗಳೆಂದು ವಾದಿಸಿದರು. ಮೊದಲೇ ಸೊಕ್ಕಿನ ಕೃತಿ ಅಂದು ಊಟ ಮಾಡದೆ, ತಟ್ಟೆಯಲ್ಲಿದ್ದ ಅಷ್ಟನ್ನೂ ಚೆಲ್ಲಿ, ಹಾಗೇ ಹೋಗಿ ಮಲಗಿಕೊಂಡಳು, ಜೊತೆಗೆ ಅವಳ ಕೆಲ ಗೆಳತಿಯರದು ಅದೇ ಕಥೆ. ಅದಕ್ಕಾಗಿ ಮತ್ತಷ್ಟು ಮಧುರ ಮಾತುಗಳನ್ನ ಕೇಳಿ ಅವರೂ ಬಂದು, ಕೃತಿಯೊಂದಿಗೆ ಅಳುತ್ತಾ ಮಲಗಿದರು.

ಜ್ಯೋತಿ ಸಾಮಂತ್ರಿ ಬರೆದ ಈ ಬರಹವನ್ನೂ ಓದಿ : Corona Warrior : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ : 85ರ ಅಜ್ಜಿಯ ನಗುವೂ ಮತ್ತು ಬೆಡ್​ ಒಂದರ ಕಥೆಯೂ

ರಾತ್ರಿ ಒಂದ್ಹೊತ್ತಿನಲ್ಲಿ ಹೊಟ್ಟೆ ಕರ ಕರ! ಅವರದೊಂದು ಒಳ್ಳೆಯ ಹವ್ಯಾಸವಿತ್ತು. ಎಲ್ಲರೂ ತಮ್ಮ ಮನೆಗಳಿಂದ ಒಣರೊಟ್ಟಿ ಹಾಗೂ ಶೇಂಗಾ ಚಟ್ನಿ ಮಾಡಿಸಿಕೊಂಡು ತಂದಿಟ್ಟುಕೊಳ್ಳುತ್ತಿದ್ದರು. ಹೀಗೆ ಹೊತ್ತಿಲ್ಲದ ಹೊತ್ತಲ್ಲಿ ಹಸಿದಾಗ ಒಟ್ಟಿಗೆ ಕೂತು ತಿನ್ನೋದು. ಅಂದು, ಸುಮಾರು 9 ಜನ ಉಪವಾಸ ವ್ರತ ಮಾಡಿದವರು, ಎಲ್ಲರೂ ರಾತ್ರಿ 2 ಗಂಟೆಗೆ ರೊಟ್ಟಿ ಪಾರ್ಟಿ ಮಾಡಿದ್ದರು. ಅದೊಂದು ಅವರ ದಿನಚರಿಯ ಅವಿಭಾಜ್ಯ ಅಂಗವಾಗಿಹೋಗಿತ್ತು. ಮಾರನೇ ದಿನ ತಿಂಡಿಗೆಂದು ಮತ್ತದೇ ಸಾಲು. ‘ಪವಿತ್ರ’ ಚಿತ್ರಾನ್ನ. ಆದರೆ ಅದು ತಟ್ಟೆಗೆ ಬಿದ್ದಮೇಲೆ ತಿಳಿದದ್ದು, ನುಸಿಗಳ ಪ್ರಸಾದವೆಂದು! ಮತ್ತದೇ ಬೇಸರ, ಅದೇ ಮುನಿಸು, ಅದೆ ತಿರಸ್ಕಾರ. ಅವಳಿಗಿನ್ನು ಆ ವಾರ್ಡನ್ ಕಣ್ಣುಗಳ ಡಯಾಮೀಟರ್ ನೆನಪಿದೆ. ಆದರೆ, ಅದಕ್ಕಿಂತಲೂ ಅವಳ ಸ್ವಾಭಿಮಾನದ ಅಳತೆ ತುಂಬಾನೇ ದೊಡ್ಡದಿದ್ದುದರಿಂದ  ಆ ವ್ರತ ಸತ್ಯಾಗ್ರಹವಾಗಿ ಪರಿವರ್ತನೆಯಾಯಿತು. ಪಾಪ, ಹಸಿದ ಕೆಲವರು ವಿಧಿಯೇ ಇರದೆ ಅದನ್ನೇ ತಿಂದಿದ್ದರು, ಅದರಲ್ಲಿ ಅವಳ ಪ್ರೀತಿಯ ತಂಗಿ ಅಕ್ಷತಾ ಕೂಡ. ಅವಳು ಕಣ್ಣೀರು ಹಾಕ್ತಾ ತುತ್ತನ್ನ ತಿಂದದ್ದು ಬಹುಶಃ ಕೃತಿ ಎಂದಿಗೂ ಮರೆಯುವುದಿಲ್ಲ.

ಮಕ್ಕಳ ಯಾವುದೇ ಚಳುವಳಿಗೂ ಬಗ್ಗದ ವಾರ್ಡನ್ ಮೇಡಂನ ಹೇಗಾದರೂ ಮಾಡಿ ಸೋಲಿಸಲೇಬೇಕು ಎಂದು ಅದೆಂಥೆಂಥ ಕ್ರಿಮಿನಲ್ ಕೆಲಸಗಳನ್ನ ಮಾಡಿದ್ದರು!

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

*

ಗಮನಿಸಿ : ನಿಮ್ಮ ಮನಸ್ಸಿನಲ್ಲಿ ಹೂತ ಯಾವ ಘಟನೆ, ಪ್ರಸಂಗ, ನೆನಪುಗಳನ್ನೂ ‘No Delete Option’ ಅಂಕಣದಲ್ಲಿ ಬರೆಯಬಹುದು. ನುಡಿ ಅಥವಾ ಯೂನಿಕೋಡ್​ನಲ್ಲಿ ಕನಿಷ್ಟ 300, ಗರಿಷ್ಠ 800 ಪದಗಳಿರಲಿ. ಜೊತೆಗೆ ನಿಮ್ಮ ಭಾವಚಿತ್ರವೂ ಇರಲಿ. ಮೇಲ್ :  tv9kannadadigital@gmail.com

ಜ್ಯೋತಿ ಸಾಮಂತ್ರಿ ಬರೆದ ಈ ಬರಹವನ್ನೂ ಓದಿ : Covid Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ವಿಜ್ಞಾನವೂ ಕಾಣದ ಮುಖ ಮನಸ್ಸಿಗಿದೆ!

Published On - 5:21 pm, Wed, 9 February 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ