ಕೊವಿಡ್ ನಂತರದ ಚೇತರಿಕೆಯ 2021ನೇ ಇಸವಿಯಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಉತ್ತಮ ಸಂಖ್ಯೆಯ ಮಲ್ಟಿಬ್ಯಾಗರ್ ಸ್ಟಾಕ್‌ಗಳನ್ನು ನೀಡಿದೆ. ಅವುಗಳಲ್ಲಿ ಕೆಲವು ವರ್ಷಾಂತ್ಯದ ಮೊದಲು ಕಳೆದ ಕೆಲವು ತಿಂಗಳಲ್ಲಿ ಭಾರೀ ಏರಿಕೆಯನ್ನು ಕಂಡಿವೆ. ಆದ್ದರಿಂದ ಅಂತಹ ಷೇರುಗಳನ್ನು 2022ಕ್ಕೆ ಮಲ್ಟಿಬ್ಯಾಗರ್ ಸ್ಟಾಕ್‌ಗಳೆಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿನ ಲಿಸ್ಟಿಂಗ್ ಮಾಡಲಾದ ಮಲ್ಟಿಬ್ಯಾಗರ್ ಸ್ಟಾಕ್‌ಗಳು ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಅನ್ನು ಒಳಗೊಂಡಿದ್ದು, ಅಂಥದ್ದೇ ಒಂದು ರೂ. 21.15ರಿಂದ (1ನೇ ಅಕ್ಟೋಬರ್ 2020ರಂದು ಇದ್ದ ಬೆಲೆ) 15 ತಿಂಗಳಲ್ಲಿ ರೂ. 941.50ರ ವರೆಗೆ (ಎನ್‌ಎಸ್‌ಇಯಲ್ಲಿ 31, ಡಿಸೆಂಬರ್ 2021ರ ಬೆಲೆ) 44.50 ಪಟ್ಟು ಹೆಚ್ಚಾಗಿದೆ.
ಷೇರು ಬೆಲೆ ಇತಿಹಾಸ
ಈಗ ಮಾತನಾಡುತ್ತಿರುವ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಎಕ್ಸ್ಪ್ರೋ (Xpro) ಇಂಡಿಯಾ. ಕಳೆದ ಒಂದು ತಿಂಗಳಲ್ಲಿ, ಎಕ್ಸ್ಪ್ರೋ ಇಂಡಿಯಾ ಷೇರಿನ ಬೆಲೆಯು ಸುಮಾರು ರೂ. 897ರಿಂದ ರೂ. 941.50ರ ಹಂತಕ್ಕೆ ಏರಿದೆ. ಈ ಅವಧಿಯಲ್ಲಿ ಶೇ 5ರಷ್ಟು ಏರಿಕೆಯಾಗಿದೆ. ಕಳೆದ 6 ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ರೂ. 175ರ ಸಮೀಪದಿಂದ ರೂ. 941.50ಕ್ಕೆ ಜಿಗಿದಿದೆ. ಈ ಅವಧಿಯಲ್ಲಿ ಸುಮಾರು ಶೇ 450ರವರೆಗೆ ಏರಿಕೆಯಾಗಿದೆ. ಅದೇ ರೀತಿ, ಕಳೆದ ಒಂದು ವರ್ಷದಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ಸುಮಾರು ರೂ. 35ರಿಂದ ರೂ. 941.50ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಶೇ 2,560ರಷ್ಟು ಏರಿಕೆ ದಾಖಲಿಸಿದೆ. ಇನ್ನು ಕಳೆದ 15 ತಿಂಗಳಲ್ಲಿ ಸ್ಟಾಕ್ ರೂ. 21.15ರಿಂದ ರೂ. 941.50 ಮಟ್ಟಕ್ಕೆ ಏರಿದೆ. ಆ ಮೂಲಕ ಈ ಅವಧಿಯಲ್ಲಿ ಷೇರುದಾರರಿಗೆ ಸುಮಾರು ಶೇ 4,350 ರಷ್ಟು ಲಾಭವನ್ನು ನೀಡುತ್ತದೆ.
ಹೂಡಿಕೆ ಮೇಲೆ ಪರಿಣಾಮ
ಎಕ್ಸ್‌ಪ್ರೊ ಇಂಡಿಯಾ ಷೇರು ಬೆಲೆ ಇತಿಹಾಸ ನೋಡಿದರೆ, ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಆ 1 ಲಕ್ಷ ಇಂದು 1.05 ಲಕ್ಷ ರೂಪಾಯಿಯಾಗಿ ಬದಲಾಗುತ್ತಿತ್ತು. ಹೂಡಿಕೆದಾರರು 6 ತಿಂಗಳ ಹಿಂದೆ 1 ಲಕ್ಷ ಹೂಡಿಕೆ ಮಾಡಿದ್ದರೆ ಅದು ಇಂದು ರೂ. 5.50 ಲಕ್ಷಕ್ಕೆ ಬದಲಾಗುತ್ತಿತ್ತು. ಅದೇ ರೀತಿ ಹೂಡಿಕೆದಾರರು ಒಂದು ವರ್ಷದ ಹಿಂದೆ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಇಂದು ರೂ. 26.60 ಲಕ್ಷ ಆಗುತ್ತಿತ್ತು. ಹೂಡಿಕೆದಾರರು 15 ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ, ಆ ಸ್ಟಾಕ್ ಅನ್ನು ರೂ. 21.15 ಮಟ್ಟದಲ್ಲಿ ಖರೀದಿಸಿದರೆ ಅದರ ರೂ. 1 ಲಕ್ಷ ಇಂದು ರೂ. 44.50 ಲಕ್ಷ ಆಗಿರುತ್ತಿತ್ತು.
Xpro ಇಂಡಿಯಾ vs ನಿಫ್ಟಿ vs ಸೆನ್ಸೆಕ್ಸ್
ಈ ಅವಧಿಯಲ್ಲಿ ಎನ್‌ಎಸ್‌ಇ ನಿಫ್ಟಿ ಶೇಕಡಾ 15ರಷ್ಟು ಏರಿಕೆ ಕಂಡು, 11,417 ರಿಂದ 17,354 ಮಟ್ಟಕ್ಕೆ ಏರಿಕೆ ಕಂಡಿದೆ. ಕಳೆದ 15 ತಿಂಗಳ ಈ ಅವಧಿಯಲ್ಲಿ ಸುಮಾರು ಶೇ 52ರಷ್ಟು ಏರಿಕೆಯಾಗಿದೆ. ಅದೇ ರೀತಿ, ಕಳೆದ 15 ತಿಂಗಳಲ್ಲಿ ಬಿಎಸ್‌ಇ ಸೆನ್ಸೆಕ್ಸ್ 38,697 ರಿಂದ 58,254 ಮಟ್ಟಕ್ಕೆ ಏರಿದೆ. ಈ ಅವಧಿಯಲ್ಲಿ ಸುಮಾರು ಶೇ 50.50ರಷ್ಟು ಮೌಲ್ಯ ಸೇರ್ಪಡೆ ಆಗಿದೆ. ಆದ್ದರಿಂದ ಎಕ್ಸ್‌ಪ್ರೊ ಇಂಡಿಯಾ ಷೇರುಗಳು 2021ರಲ್ಲಿ ಆಲ್ಫಾ ಸ್ಟಾಕ್‌ಗಳಲ್ಲಿ ಒಂದಾಗಿದೆ. ಏಕೆಂದರೆ ಅವುಗಳು ಈ ಅವಧಿಯಲ್ಲಿ ಪ್ರಮುಖ ಬೆಂಚ್‌ಮಾರ್ಕ್ ಸೂಚ್ಯಂಕಗಳಿಗಿಂತ ಹೆಚ್ಚಿನ ಆದಾಯವನ್ನು ಗಳಿಸಿದೆ.
ಇದನ್ನೂ ಓದಿ: Multibagger stock: ಈ ಮಲ್ಟಿಬ್ಯಾಗರ್ ಸ್ಟಾಕ್ ಮೇಲೆ 3 ವರ್ಷದ ಹಿಂದೆ ಮಾಡಿದ 1 ಲಕ್ಷದ ಹೂಡಿಕೆ ಈಗ ಎಷ್ಟು ಕೋಟಿ ಗೊತ್ತೆ?