AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPF nomination: ಇಪಿಎಫ್ ನಾಮಿನೇಷನ್ ಇನ್ನೂ ಕೆಲ ದಿನ ಗಡುವು ವಿಸ್ತರಣೆ; ಇ- ನಾಮಿನೇಷನ್ ಹೇಗೆ, ಏನು?

ಚಂದಾದಾರರು ಇ-ನಾಮಿನೇಷನ್ ಮಾಡುವ ದಿನಾಂಕದ ಗಡುವನ್ನು ಇಪಿಎಫ್​ಒ ವಿಸ್ತರಣೆ ಮಾಡಿದೆ. ಇ-ನಾಮಿನೇಷನ್ ಮಾಡುವುದು ಹೇಗೆ ಎಂಬುದರ ಹಂತಹಂತವಾದ ವಿವರ ಇಲ್ಲಿದೆ.

EPF nomination: ಇಪಿಎಫ್ ನಾಮಿನೇಷನ್ ಇನ್ನೂ ಕೆಲ ದಿನ ಗಡುವು ವಿಸ್ತರಣೆ; ಇ- ನಾಮಿನೇಷನ್ ಹೇಗೆ, ಏನು?
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Jan 03, 2022 | 6:18 PM

Share

ಕೇಂದ್ರ ಸರ್ಕಾರವು ವಿವಿಧ ವಲಯಗಳ ಇಪಿಎಫ್ ನಾಮಿನೇಷನ್ ಫೈಲ್ ಮಾಡುವ ದಿನಾಂಕವನ್ನು ಡಿಸೆಂಬರ್ 31ನೇ ತಾರೀಕಿನ ಗಡುವನ್ನು ವಿಸ್ತರಿಸಿದೆ. ಡಿಸೆಂಬರ್​ನಲ್ಲಿ ಇದ್ದ ಗಡುವನ್ನು ಇನ್ನೂ ಕೆಲ ದಿನ ವಿಸ್ತರಣೆ ಮಾಡಲಾಗಿದೆ. ಈ ಬಾರಿ ನಿರ್ದಿಷ್ಟವಾಗಿ ಇಂಥದ್ದೇ ದಿನ ಎಂದು ನಿಗದಿ ಮಾಡಿಲ್ಲ. ಖಾತೆದಾರರು ಆದಷ್ಟು ಶೀಘ್ರವಾಗಿ ಇ-ನಾಮಿನೇಷನ್ ಮಾಡುವಂತೆ ಇಪಿಎಫ್​ಒ ಪ್ರೋತ್ಸಾಹಿಸಿದೆ. ಈ ನಿರ್ಧಾರವನ್ನು ಇಪಿಎಫ್​ಒ ಟ್ವೀಟ್ ಮಾಡಿದ್ದು, ಸದಸ್ಯರ ಕುಟುಂಬದ ಭವಿಷ್ಯಕ್ಕೆ ಇದು ಬಹಳ ಮುಖ್ಯವಾದದ್ದು ಎಂದು ತಿಳಿಸಲಾಗಿದೆ. ಇಪಿಎಫ್​ಒ ಪೋರ್ಟಲ್​ನಲ್ಲಿ ಫೈಲಿಂಗ್ ವೇಳೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹಲವು ಬಳಕೆದಾರರು ದೂರಿದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ.

ಭಾರತದಲ್ಲಿ ಬಹುತೇಕ ಎಲ್ಲ ವೇತನದಾರರು ಇಪಿಎಫ್​ಒದಲ್ಲಿ ಖಾತೆ ಹೊಂದಿದ್ದಾರೆ. ಪ್ರತಿ ತಿಂಗಳು ಸಿಬ್ಬಂದಿ ವೇತನದಿಂದ ಇಂತಿಷ್ಟು ಮೊತ್ತ ಎಂದು ಕಡಿತ ಆಗುತ್ತದೆ. ಅದಕ್ಕೆ ಪ್ರತಿ ವರ್ಷ ಬಡ್ಡಿ ಸೇರ್ಪಡೆ ಆಗಿ, ನಿವೃತ್ತಿ ನಂತರದಲ್ಲಿ ಕೈ ಸೇರುತ್ತದೆ. ಆದರೆ ಕೆಲವು ಸನ್ನಿವೇಶದಲ್ಲಿ ಅವಧಿಗೆ ಪೂರ್ವವಾಗಿಯೂ ಪಿಎಫ್​ ವಿಥ್​ಡ್ರಾ ಮಾಡಬಹುದು. ಉದ್ಯೋಗಿಯ ವೇತನದಿಂದ ಕಡಿತ ಆಗುವ ಮೊತ್ತದಷ್ಟನ್ನೇ ಉದ್ಯೋಗದಾತರು ಸಹ ಪ್ರತಿ ತಿಂಗಳು ಪಾವತಿ ಮಾಡುತ್ತಾರೆ. ನಿಗದಿತ ಗಡುವು ಎಂದೇನೂ ಇಲ್ಲ ಅಂತಾದರೂ ಆದಷ್ಟು ಬೇಗ ಇ-ನಾಮಿನೇಷನ್ ಮಾಡುವುದು ಉತ್ತಮ. ಅದನ್ನು ಮಾಡುವುದು ಹೇಗೆ ಎಂಬ ಬಗ್ಗೆ ಹಂತಹಂತವಾದ ವಿವರ ಇಲ್ಲಿದೆ.

ಹಂತ 1 ಇಪಿಎಫ್​ಒ ವೆಬ್‌ಸೈಟ್‌ಗೆ ಭೇಟಿ ನೀಡಿ >> ಸರ್ವೀಸಸ್ >> ಫಾರ್ ಎಂಪ್ಲಾಯೀಸ್ >> “ಮೆಂಬರ್ UAN/ಆನ್‌ಲೈನ್ ಸರ್ವೀಸಸ್’ ಕ್ಲಿಕ್ ಮಾಡಬೇಕು.

ಹಂತ 2 “UAN ಮತ್ತು ಪಾಸ್‌ವರ್ಡ್”ನೊಂದಿಗೆ ಲಾಗಿನ್ ಮಾಡಬೇಕು.

ಹಂತ 3 ‘ಮ್ಯಾನೇಜ್ ಟ್ಯಾಬ್’ ಅಡಿಯಲ್ಲಿ ‘ಇ-ನಾಮಿನೇಷನ್’ ಆಯ್ಕೆ ಮಾಡಬೇಕು.

ಹಂತ 4 ‘ಪ್ರೊವೈಡ್ ಡೀಟೇಲ್ಸ್’ ಟ್ಯಾಬ್ ಪರದೆಯ ಮೇಲೆ ಕಾಣಿಸುತ್ತದೆ. ‘ಸೇವ್’ ಕ್ಲಿಕ್ ಮಾಡಬೇಕು.

ಹಂತ 5 ಕುಟುಂಬದ ಘೋಷಣೆಯನ್ನು ಅಪ್​ಡೇಟ್​ ಮಾಡುವುದಕ್ಕೆ ‘ಯೆಸ್’ ಕ್ಲಿಕ್ ಮಾಡಬೇಕು.

ಹಂತ 6 ಕುಟುಂಬದ ವಿವರಗಳನ್ನು ಸೇರಿಸಿ ಕ್ಲಿಕ್ ಮಾಡಬೇಕು. (ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರಿಸಬಹುದು)

ಹಂತ 7 ಷೇರಿನ ಒಟ್ಟು ಮೊತ್ತವನ್ನು ಘೋಷಿಸಲು ‘ನಾಮಿನೇಷನ್ ಡೀಟೇಲ್ಸ್’ ಕ್ಲಿಕ್ ಮಾಡಬೇಕು. “ಇಪಿಎಫ್ ನಾಮಿನೇಷನ್ ಸೇವ್” ಕ್ಲಿಕ್ ಮಾಡಬೇಕು.

ಹಂತ 8 OTPಗಾಗಿ ‘E-sign’ ಕ್ಲಿಕ್ ಮಾಡಬೇಕು. ಆಧಾರ್‌ನೊಂದಿಗೆ ಜೋಡಣೆ ಮಾಡಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಅನ್ನು ಸಲ್ಲಿಸಬೇಕು.

ಇದನ್ನೂ ಓದಿ: PF Transfer: 6 ಹಂತಗಳಲ್ಲಿ ಆನ್​ಲೈನ್​ನಲ್ಲಿ ಪಿಎಫ್ ವರ್ಗಾವಣೆ ಮಾಡುವುದರ ಮಾಹಿತಿ ಇಲ್ಲಿದೆ

Published On - 6:15 pm, Mon, 3 January 22

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!