Rakesh Jhunjhunwala: ರಾಕೇಶ್​ ಜುಂಜುನ್​ವಾಲಾಗೆ ಈ ಷೇರಿನಿಂದ 3 ತಿಂಗಳಲ್ಲಿ 1540 ಕೋಟಿ ರೂಪಾಯಿ ತನಕ ಲಾಭ

ಷೇರು ಮಾರುಕಟ್ಟೆ ಹೂಡಿಕೆದಾರಾದ ರಾಕೇಶ್​ ಜುಂಜುನ್​ವಾಲಾ ಅವರ ಪೋರ್ಟ್​ಫೋಲಿಯೋದಲ್ಲಿನ ಟಾಟಾದ ಈ ಕಂಪೆನಿಯ ಷೇರು ಕೇವಲ ಮೂರು ತಿಂಗಳಲ್ಲಿ ಹತ್ತಿರಹತ್ತಿರ 1540 ಕೋಟಿ ರೂಪಾಯಿಯಷ್ಟು ಲಾಭ ತಂದುಕೊಟ್ಟಿದೆ.

Rakesh Jhunjhunwala: ರಾಕೇಶ್​ ಜುಂಜುನ್​ವಾಲಾಗೆ ಈ ಷೇರಿನಿಂದ 3 ತಿಂಗಳಲ್ಲಿ 1540 ಕೋಟಿ ರೂಪಾಯಿ ತನಕ ಲಾಭ
ರಾಕೇಶ್ ಜುಂಜುನ್​ವಾಲಾ (ಸಂಗ್ರಹ ಚಿತ್ರ)
Edited By:

Updated on: Jan 01, 2022 | 11:32 AM

ಟೈಟಾನ್ ಕಂಪೆನಿಯು ಷೇರುಪೇಟೆಯ ಹಿರಿಯ ಹೂಡಿಕೆದಾರರಾದ ರಾಕೇಶ್ ಜುಂಜುನ್‌ವಾಲಾ ಅವರ ನೆಚ್ಚಿನ ಪೋರ್ಟ್‌ಫೋಲಿಯೊ ಸ್ಟಾಕ್‌ಗಳಲ್ಲಿ ಒಂದಾಗಿದೆ. ಕೊವಿಡ್‌ನ ಸವಾಲಿನ ಸಮಯದಲ್ಲೂ ಷೇರಿನಲ್ಲಿ ಹೂಡಿಕೆ ಮಾಡಿ ಜುಂಜುನ್​ವಾಲಾ ಈ ಟಾಟಾ ಗುಂಪಿನ ಷೇರುಗಳ ಬಗ್ಗೆ ತಮಗಿರುವ ಬಲವಾದ ನಂಬಿಕೆಯನ್ನು ಪ್ರದರ್ಶಿಸಿದ್ದಾರೆ. ಅದೇ ಈಗ ‘ಭಾರತದ ವಾರೆನ್ ಬಫೆಟ್’ ಎನಿಸಿಕೊಂಡಿರುವ ಜುಂಜುನ್​ವಾಲಾಗೆ ಲಾಭ ದೊರಕಿಸುತ್ತಿದೆ. ಕಳೆದ 3 ತಿಂಗಳಲ್ಲಿ ಟೈಟಾನ್ ಷೇರಿನ ಬೆಲೆಯು ರೂ. 2161.85ರಿಂದ (30ನೇ ಸೆಪ್ಟೆಂಬರ್ 2021ರಂದು NSEನಲ್ಲಿನ ಬೆಲೆ) ರೂ. 2517.55ಕ್ಕೆ (31 ಡಿಸೆಂಬರ್ 2021ರಂದು NSE ಬೆಲೆ) ಏರಿಕೆಯಾಗಿದೆ. ಈ ಮೂಲಕ ರಾಕೇಶ್ ಜುಂಜುನ್‌ವಾಲಾ ಅವರ ನಿವ್ವಳ ಮೌಲ್ಯವು ಈ ಅವಧಿಯಲ್ಲಿ 1540 ಕೋಟಿ ರೂಪಾಯಿ ಹತ್ತಿರ ಬೆಳೆಯಲು ಸಹಾಯ ಮಾಡಿದೆ.

2021ರ ಜುಲೈನಿಂದ- ಸೆಪ್ಟೆಂಬರ್ ತ್ರೈಮಾಸಿಕದ ಷೇರುದಾರರ ಮಾಹಿತಿ ಪ್ರಕಾರ, ರಾಕೇಶ್ ಜುಂಜುನ್‌ವಾಲಾ ಮತ್ತು ಅವರ ಪತ್ನಿ ರೇಖಾ ಜುಂಜುನ್‌ವಾಲಾ ಟೈಟಾನ್ ಕಂಪೆನಿಯ ಹೂಡಿಕೆ ಮಾಡಿದ್ದಾರೆ. ರಾಕೇಶ್ ಜುಂಜುನ್‌ವಾಲಾ ಕಂಪೆನಿಯಲ್ಲಿ 3,37,60,395 ಷೇರುಗಳನ್ನು ಅಥವಾ ಶೇ 3.80 ಪಾಲನ್ನು ಹೊಂದಿದ್ದಾರೆ. ಆದರೆ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಕಂಪೆನಿಯಲ್ಲಿ 95,40,575 ಷೇರುಗಳನ್ನು ಅಥವಾ ಶೇ 1.07ರಷ್ಟು ಪಾಲನ್ನು ಹೊಂದಿದ್ದಾರೆ. ಹೀಗೆ ಒಟ್ಟು ಶೇ 4.87 ಪಾಲನ್ನು ಅಥವಾ 4,33,00,970 ಟೈಟಾನ್ ಕಂಪೆನಿ ಷೇರುಗಳನ್ನು ಹೊಂದಿದ್ದಾರೆ.

ಟೈಟಾನ್ ಷೇರು ಬೆಲೆ ಇತಿಹಾಸ
ಟೈಟಾನ್ ಕಂಪೆನಿಯ ಷೇರು ಬೆಲೆ ಇತಿಹಾಸದ ಪ್ರಕಾರ, ಸೆಪ್ಟೆಂಬರ್ 30ನೇ 2021ರಂದು NSEನಲ್ಲಿ ರೂ. 2161.85 ಇತ್ತು. 31ನೇ ಡಿಸೆಂಬರ್ 2021ರಂದು NSEನಲ್ಲಿ ಪ್ರತಿ ಷೇರಿಗೆ ರೂ. 2517.55ರಂತೆ ಮುಕ್ತಾಯ ಕಂಡಿತು. ಹಾಗಾಗಿ, ಕಳೆದ 3 ತಿಂಗಳಲ್ಲಿ ಟೈಟಾನ್ ಪ್ರತಿ ಈಕ್ವಿಟಿ ಷೇರಿನ ಬೆಲೆ ರೂ. 355.70 ಏರಿಕೆಯಾಗಿದೆ.

ರಾಕೇಶ್ ಜುಂಜುನ್​ವಾಲಾ ನಿವ್ವಳ ಮೌಲ್ಯದ ಮೇಲೆ ಪರಿಣಾಮ
ರಾಕೇಶ್ ಜುಂಜುನ್‌ವಾಲಾ ಮತ್ತು ಅವರ ಪತ್ನಿ 4,33,00,970 ಟೈಟಾನ್ ಕಂಪೆನಿ ಷೇರುಗಳನ್ನು ಹೊಂದಿರುವುದರಿಂದ ಮತ್ತು ಷೇರುಗಳು ತಲಾ ರೂ. 355.70 ಏರಿಕೆಯಾಗಿದೆ. ಕಳೆದ 3 ತಿಂಗಳಲ್ಲಿ ಈ ಸ್ಟಾಕ್‌ನಿಂದ ರಾಕೇಶ್ ಜುಂಜುನ್‌ವಾಲಾ ಅವರ ನಿವ್ವಳ ಆದಾಯವು ಸುಮಾರು ರೂ. 1540 ಕೋಟಿ (₹355.70 x 974) ಆಗಿದೆ.

ಟೈಟಾನ್ ಷೇರು ಬೆಲೆ ಬಾಹ್ಯನೋಟ
ಷೇರು ಮಾರುಕಟ್ಟೆ ತಜ್ಞರ ಪ್ರಕಾರ, ಟೈಟಾನ್ ಷೇರುಗಳ ಏರಿಕೆಯು ಅಲ್ಪಾವಧಿಯಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ಹೂಡಿಕೆದಾರರು ಪ್ರಸ್ತುತ ಮಟ್ಟದಲ್ಲಿ ಖರೀದಿಸಬಹುದು ಹಾಗೂ ಇಟ್ಟುಕೊಳ್ಳಬಹುದು. ವಿಶ್ಲೇಷಕರು ಹೇಳುವಂತೆ, “ಪ್ರಸ್ತುತ ದರದ ಮಟ್ಟದಲ್ಲಿ ಟೈಟಾನ್ ಕಂಪೆನಿಯ ಷೇರುಗಳನ್ನು ಖರೀದಿಸಬಹುದು ಮತ್ತು ಇಟ್ಟುಕೊಳ್ಳಬಹುದು. ಮುಂದಿನ 15-25 ದಿನಗಳಲ್ಲಿ ಇದು ರೂ.2700 ಮಟ್ಟಕ್ಕೆ ಏರಬಹುದು.”

ಇದನ್ನೂ ಓದಿ: Rakesh Jhunjhunwala: ಸ್ಟಾರ್ ಹೆಲ್ತ್ ಇನ್ಷೂರೆನ್ಸ್​ ಲಿಸ್ಟಿಂಗ್​ನಿಂದ ರಾಕೇಶ್​ ಜುಂಜುನ್​ವಾಲಾಗೆ 6 ಸಾವಿರ ಕೋಟಿ ರೂ. ಲಾಭ