ಮಹಾರಾಷ್ಟ್ರದಲ್ಲಿ ಮೇಲ್ಸೇತುವೆಯ ಸ್ಲ್ಯಾಬ್ ಕುಸಿದು ಮಹಿಳೆ ಸಾವು, 12 ಜನರಿಗೆ ಗಾಯ

ಪುಣೆಗೆ ಹೋಗುವ ರೈಲನ್ನು ಹಿಡಿಯಲು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮೇಲ್ಸೇತುವೆಯ ಮೇಲೆ ಸಂಚರಿಸುತ್ತಿದ್ದರು. ಆಗ ಅದರ ಒಂದು ಭಾಗವು ಹಠಾತ್ತನೆ ಕೆಳಗೆ ಕುಸಿದಿದೆ.

ಮಹಾರಾಷ್ಟ್ರದಲ್ಲಿ ಮೇಲ್ಸೇತುವೆಯ ಸ್ಲ್ಯಾಬ್ ಕುಸಿದು ಮಹಿಳೆ ಸಾವು, 12 ಜನರಿಗೆ ಗಾಯ
ಮಹಾರಾಷ್ಟ್ರದಲ್ಲಿ ಮೇಲ್ಸೇತುವೆ ಕುಸಿದು ಓರ್ವ ಮಹಿಳೆ ಸಾವು
Updated By: ಸುಷ್ಮಾ ಚಕ್ರೆ

Updated on: Nov 28, 2022 | 8:56 AM

ಮುಂಬೈ: ಮಹಾರಾಷ್ಟ್ರದ (Maharashtra) ಚಂದ್ರಾಪುರದ ಬಲ್ಹರ್ಷಾ ರೈಲ್ವೆ ಜಂಕ್ಷನ್‌ನಲ್ಲಿ ಭಾನುವಾರ ಮೇಲ್ಸೇತುವೆಯ (Sky Walk) ಒಂದು ಭಾಗ ಕುಸಿದು ಬಿದ್ದ ಪರಿಣಾಮ 48 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಈ ಅವಘಡದಿಂದ 12 ಜನರು ಗಾಯಗೊಂಡಿದ್ದಾರೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಸ್ಕೈವಾಕ್​ ಕೆಳಗೆ ನಡೆದುಕೊಂಡು ಹೋಗುತ್ತಿದ್ದ ಪ್ರಯಾಣಿಕರ ಮೇಲೆ ಸ್ಲ್ಯಾಬ್ ಕುಸಿದು ಬಿದ್ದಿದೆ. ಇದರಿಂದ ಕೆಲವು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪ್ಲಾಟ್‌ಫಾರ್ಮ್ ಸಂಖ್ಯೆ 1ರಿಂದ 5ರವರೆಗೆ ಸಂಪರ್ಕಿಸುವ ಏಕೈಕ ಮೇಲ್ಸೇತುವೆ ಇದಾಗಿದೆ. ಸಂಜೆ 5 ಗಂಟೆ ಸುಮಾರಿಗೆ ಅನೇಕ ಪ್ರಯಾಣಿಕರು ರೈಲು ಹತ್ತಲು ಇದರ ಮೇಲೆ ಮತ್ತು ಕೆಳಗೆ ಸಂಚರಿಸುತ್ತಿದ್ದರು. ಪುಣೆಗೆ ಹೋಗುವ ರೈಲನ್ನು ಹಿಡಿಯಲು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮೇಲ್ಸೇತುವೆಯ ಮೇಲೆ ಸಂಚರಿಸುತ್ತಿದ್ದರು. ಆಗ ಅದರ ಒಂದು ಭಾಗವು ಹಠಾತ್ತನೆ ಕೆಳಗೆ ಕುಸಿದಿದೆ. ಇದರಿಂದಾಗಿ, 13 ಜನರು ಸುಮಾರು 20 ಅಡಿ ಕೆಳಗಿದ್ದ ರೈಲ್ವೆ ಹಳಿಯ ಮೇಲೆ ಬಿದ್ದಿದ್ದಾರೆ. ಈ ವೇಳೆ ಓರ್ವ ಮಹಿಳೆ ಮೃತಪಟ್ಟಿದ್ದು, ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Stock Market Updates: 3 ದಿನಗಳ ಕುಸಿತದ ಬಳಿಕ ಚೇತರಿಸಿದ ಷೇರುಪೇಟೆ; ಈ ಕಂಪನಿಯ ಷೇರುಗಳಿಗೆ ಲಾಭ

ಗಾಯಾಳುಗಳನ್ನು ಬಲ್ಲಾರ್‌ಪುರ ಗ್ರಾಮಾಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಲ್ಲಿ ಕೆಲವರನ್ನು ನಂತರ ಚಂದ್ರಾಪುರ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಜಿಎಂಸಿಎಚ್) ಮತ್ತು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಜಿಲ್ಲಾ ಮಾಹಿತಿ ಕಚೇರಿ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ