Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market Updates: 3 ದಿನಗಳ ಕುಸಿತದ ಬಳಿಕ ಚೇತರಿಸಿದ ಷೇರುಪೇಟೆ; ಈ ಕಂಪನಿಯ ಷೇರುಗಳಿಗೆ ಲಾಭ

ಸೆನ್ಸೆಕ್ಸ್​ನಲ್ಲಿ ಇಂಡ್​ಇಂಡ್ ಬ್ಯಾಂಕ್, ಎನ್​ಟಿಪಿಸಿ, ಅಲ್ಟ್ರಾಟೆಕ್ ಸಿಮೆಂಟ್, ಟೈಟಾನ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಟಿಸಿಎಸ್, ಎಲ್​ ಆ್ಯಂಟ್ ಟಿ ಉತ್ತಮ ಗಳಿಕೆ ದಾಖಲಿಸಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ 1,593.83 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

Stock Market Updates: 3 ದಿನಗಳ ಕುಸಿತದ ಬಳಿಕ ಚೇತರಿಸಿದ ಷೇರುಪೇಟೆ; ಈ ಕಂಪನಿಯ ಷೇರುಗಳಿಗೆ ಲಾಭ
ಸಾಂದರ್ಭಿಕ ಚಿತ್ರImage Credit source: PTI
Follow us
TV9 Web
| Updated By: Ganapathi Sharma

Updated on:Nov 22, 2022 | 5:38 PM

ಮುಂಬೈ: ಕಳೆದ ಮೂರು ದಿನಗಳಿಂದ ಕುಸಿತದ ಹಾದಿಯಲ್ಲಿದ್ದ ದೇಶೀಯ ಷೇರುಪೇಟೆಗಳು (Stock Markets) ಮಂಗಳವಾರ ತುಸು ಚೇತರಿಕೆ ದಾಖಲಿಸಿವೆ. ಇನ್ಫೊಸಿಸ್ (Infosys) ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಷೇರುಗಳ ಖರೀದಿಗೆ ಹೂಡಿಕೆದಾರರು ಹೆಚ್ಚು ಆಸಕ್ತಿ ವಹಿಸಿದರು. ಬಿಎಸ್​ಇ ಸೆನ್ಸೆಕ್ಸ್ (BSE Sensex) 274.12 ಅಂಶ, ಅಂದರೆ ಶೇಕಡಾ 0.45ರಷ್ಟು ಗಳಿಕೆ ದಾಖಲಿಸಿ 61,418.96ರಲ್ಲಿ ವಹಿವಾಟು ಮುಗಿಸಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 61,466.63ರ ವರೆಗೂ ವಹಿವಾಟು ದಾಖಲಿಸಿತ್ತು. ಎನ್​​​ಎಸ್​ಇ ನಿಫ್ಟಿ (NSE Nifty) ಶೇಕಡಾ 0.46ರಷ್ಟು, ಅಂದರೆ 84.25 ಅಂಶ ಚೇತರಿಸಿ 18,244.20ರಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ.

ಸೆನ್ಸೆಕ್ಸ್​ನಲ್ಲಿ ಇಂಡ್​ಇಂಡ್ ಬ್ಯಾಂಕ್, ಎನ್​ಟಿಪಿಸಿ, ಅಲ್ಟ್ರಾಟೆಕ್ ಸಿಮೆಂಟ್, ಟೈಟಾನ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಟಿಸಿಎಸ್, ಎಲ್​ ಆ್ಯಂಟ್ ಟಿ ಉತ್ತಮ ಗಳಿಕೆ ದಾಖಲಿಸಿವೆ. ನೆಸ್ಲೆ, ಭಾರ್ತಿ ಏರ್​ಟೆಲ್, ಪವರ್ ಗ್ರಿಡ್, ಎಚ್​ಡಿಎಫ್​ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರು ಮೌಲ್ಯದಲ್ಲಿ ಕುಸಿತವಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ 1,593.83 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ವಿದೇಶಿ ಮಾರುಕಟ್ಟೆಗಳ ಸ್ಥಿತಿಗತಿ…

ಏಷ್ಯಾದಲ್ಲಿ ಟೋಕಿಯೊ, ಶಾಂಘೈ ಮಾರುಕಟ್ಟೆಗಳು ಚೇತರಿಕೆ ದಾಖಲಿಸಿವೆ. ಸಿಯೋಲ್ ಮತ್ತು ಹಾಂಕಾಂಗ್​​ ಮಾರುಕಟ್ಟೆಗಳಲ್ಲಿ ವಹಿವಾಟು ಕುಸಿದಿದೆ. ಯುರೋಪ್​ನಲ್ಲಿ ಈಕ್ವಿಟಿ ಎಕ್ಸ್​ಚೇಂಜ್ ಉತ್ತಮ ವಹಿವಾಟು ದಾಖಲಿಸಿದೆ. ವಾಲ್​ಸ್ಟ್ರೀಟ್ ವಹಿವಾಟು ಕುಸಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್​ಗೆ ಶೇಕಡಾ 0.67ರಷ್ಟು ಹೆಚ್ಚಾಗಿ 88.04 ಡಾಲರ್​ನಂತೆ ವಹಿವಾಟು ನಡೆಸಿದೆ.

ಚೇತರಿಸಿದ ರೂಪಾಯಿ ಮೌಲ್ಯ

ಕಳೆದ ಕೆಲವು ದಿನಗಳಿಂದ ಮತ್ತೆ ಕುಸಿತದ ಹಾದಿಯಲ್ಲಿದ್ದ ರೂಪಾಯಿ ಮೌಲ್ಯ ಮಂಗಳವಾರ ತುಸು ಚೇತರಿಕೆ ಕಂಡಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ದಿನದ ವಹಿವಾಟಿನ ಅಂತ್ಯದ ವೇಳೆಗೆ 12 ಪೈಸೆ ಚೇತರಿಕೆ ದಾಖಲಿಸಿದ ರೂಪಾಯಿ ಮೌಲ್ಯ, ಅಮೆರಿಕನ್ ಡಾಲರ್ ವಿರುದ್ಧ 81.67 ಆಗಿದೆ. ಒಂದು ಹಂತದಲ್ಲಿ 81.64ರಲ್ಲಿ ವಹಿವಾಟು ನಡೆಸಿದ್ದ ರೂಪಾಯಿ, 81.83ರ ವರೆಗೂ ಚೇತರಿಕೆ ದಾಖಲಿಸಿತ್ತು. ನಂತರ ಕುಸಿಯಿತು. ಕೊನೆಗೆ 81.67ರಲ್ಲಿ ವಹಿವಾಟು ಮುಗಿಸಿತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Tue, 22 November 22

ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ