AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gang Rape: ರೈಲ್ವೆ ನಿಲ್ದಾಣದಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

Delhi News: ಇಬ್ಬರು ಆರೋಪಿಗಳು ಮಹಿಳೆಯ ಮೇಲೆ ಅತ್ಯಾಚಾರವೆಸಗಿದರೆ, ಇತರರು ಹೊರಗೆ ಕಾವಲು ಕಾಯುತ್ತಿದ್ದರು. ಮಹಿಳೆ ಬೆಳಿಗ್ಗೆ 3.27ರ ಸುಮಾರಿಗೆ ಪೊಲೀಸ್ ಠಾಣೆಗೆ ಕರೆ ಮಾಡಿ ತನ್ನ ಮೇಲೆ ಅತ್ಯಾಚಾರ ನಡೆದಿರುವ ಘಟನೆಯ ಬಗ್ಗೆ ತಿಳಿಸಿದರು.

Gang Rape: ರೈಲ್ವೆ ನಿಲ್ದಾಣದಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಸಾಂದರ್ಭಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on: Jul 23, 2022 | 12:19 PM

Share

ನವದೆಹಲಿ: ದೆಹಲಿಯ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ನಡೆಸಿರುವ ಆಘಾತಕಾರಿ ಘಟನೆ (Shocking News) ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರು ಆರೋಪಿಗಳು ರೈಲ್ವೆಯ ಎಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ತಡರಾತ್ರಿ ಪ್ಲಾಟ್‌ಫಾರ್ಮ್‌ನಲ್ಲಿರುವ ರೈಲ್ವೆ ಸ್ಟೇಷನ್​​ನ ರೂಂನೊಳಗೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಆರೋಪಿಗಳು ಮಹಿಳೆಯ ಮೇಲೆ ಅತ್ಯಾಚಾರವೆಸಗಿದರೆ, ಇತರರು ಹೊರಗೆ ಕಾವಲು ಕಾಯುತ್ತಿದ್ದರು ಎನ್ನಲಾಗಿದೆ. 35 ವರ್ಷದ ಸತೀಶ್ ಕುಮಾರ್, 38 ವರ್ಷದ ವಿನೋದ್ ಕುಮಾರ್, 33 ವರ್ಷದ ಮಂಗಲ್ ಚಂದ್ ಮತ್ತು 37 ವರ್ಷದ ಜಗದೀಶ್ ಚಂದ್ ಬಂಧಿತ ಆರೋಪಿಗಳಾಗಿದ್ದಾರೆ.

ರೈಲ್ವೆ ಡಿಸಿಪಿ ಹರೇಂದ್ರ ಸಿಂಗ್ ಪ್ರಕಾರ, ಮಹಿಳೆ ಬೆಳಿಗ್ಗೆ 3.27ರ ಸುಮಾರಿಗೆ ಪೊಲೀಸ್ ಠಾಣೆಗೆ ಕರೆ ಮಾಡಿ ತನ್ನ ಮೇಲೆ ಅತ್ಯಾಚಾರ ನಡೆದಿರುವ ಘಟನೆಯ ಬಗ್ಗೆ ತಿಳಿಸಿದರು. ತಕ್ಷಣ ರೈಲ್ವೆ ಸ್ಟೇಷನ್​ಗೆ ಧಾವಿಸಿದ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: Gang Rape: ಚಲಿಸುವ ಕಾರಿನಲ್ಲೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಕಾಮುಕರ ಕೃತ್ಯಕ್ಕೆ ಬೆಚ್ಚಿದ ದೆಹಲಿ

ಆ ಮಹಿಳೆ ಹರಿಯಾಣದ ಫರಿದಾಬಾದ್‌ನಲ್ಲಿ ವಾಸಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಪತಿಯಿಂದ ಬೇರ್ಪಟ್ಟು ಕೆಲಸ ಅರಸಿ ದೆಹಲಿಗೆ ಬಂದಿದ್ದರು. ಆರೋಪಿಗಳಲ್ಲಿ ಒಬ್ಬನಾದ ಸತೀಶ್‌ನನ್ನು ಸ್ನೇಹಿತನ ಮೂಲಕ ಭೇಟಿಯಾಗಿದ್ದ ಆಕೆಗೆ ಆತ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ. ಗುರುವಾರ ಸತೀಶ್ ಆಕೆಗೆ ಕರೆ ಮಾಡಿ ತಮ್ಮ ಹೊಸ ಮನೆಗೆ ಮಗನ ಹುಟ್ಟುಹಬ್ಬಕ್ಕೆ ಆಹ್ವಾನಿಸಿದ್ದ. ರಾತ್ರಿ 10.30ರ ಸುಮಾರಿಗೆ ಮಹಿಳೆ ಸತೀಶ್ ಅವರನ್ನು ಕೀರ್ತಿನಗರ ಮೆಟ್ರೋ ನಿಲ್ದಾಣದಲ್ಲಿ ಭೇಟಿಯಾಗಿದ್ದಳು. ನಂತರ ಆಕೆಯನ್ನು ದೆಹಲಿಯ ರೈಲು ನಿಲ್ದಾಣಕ್ಕೆ ಕರೆದೊಯ್ದು ಅಲ್ಲಿ ಮೂವರು ಗೆಳೆಯರನ್ನು ಪರಿಚಯ ಮಾಡಿಸಿದ್ದ. ನಂತರ ಆಕೆಯನ್ನು ರೈಲ್ವೆ ಸ್ಟೇಷನ್​ನಲ್ಲಿದ್ದ ರೂಂಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು.