Gang Rape: ಚಲಿಸುವ ಕಾರಿನಲ್ಲೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಕಾಮುಕರ ಕೃತ್ಯಕ್ಕೆ ಬೆಚ್ಚಿದ ದೆಹಲಿ

Delhi News: ಚಲಿಸುವ ಕಾರಿನಲ್ಲೇ ಅತ್ಯಾಚಾರ ನಡೆಸಿರುವುದರಿಂದ ಈ ಅತ್ಯಾಚಾರದ ಘಟನೆ ಆ ವೇಳೆ ಯಾರ ಗಮನಕ್ಕೂ ಬಂದಿಲ್ಲ. ಅತ್ಯಾಚಾರ ನಡೆಯುವಾಗ ಆ ಬಾಲಕಿ ಜೋರಾಗಿ ಕಿರುಚಾಡಿದರೂ ಯಾರಿಗೂ ಕೇಳಿಲ್ಲ.

Gang Rape: ಚಲಿಸುವ ಕಾರಿನಲ್ಲೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಕಾಮುಕರ ಕೃತ್ಯಕ್ಕೆ ಬೆಚ್ಚಿದ ದೆಹಲಿ
ಪ್ರಾತಿನಿಧಿಕ ಚಿತ್ರ
Image Credit source: India.com
TV9kannada Web Team

| Edited By: Sushma Chakre

Jul 15, 2022 | 2:45 PM

ನವದೆಹಲಿ: ಇಡೀ ಜಗತ್ತಿನಾದ್ಯಂತ ಸುದ್ದಿಯಾಗಿದ್ದ ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರದ (Nirbhaya Gang Rape) ಬೆನ್ನಲ್ಲೇ ಅದೇ ರೀತಿಯ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದೀಗ ಅದೇ ರೀತಿಯಲ್ಲಿ ದೆಹಲಿಯಲ್ಲಿ (Delhi Rape) ಮತ್ತೊಂದು ಘಟನೆ ನಡೆದಿದ್ದು, 16 ವರ್ಷದ ಬಾಲಕಿಯನ್ನು ಆಕೆಯ ಮನೆಯ ಬಳಿಯಿಂದ ಕಿಡ್ನಾಪ್ ಮಾಡಿ, ಚಲಿಸುತ್ತಿದ್ದ ಕಾರಿನೊಳಗೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಈ ಘಟನೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಅತ್ಯಾಚಾರ ನಡೆಸಿದ ಆರೋಪಿಗಳು ದಕ್ಷಿಣ ದೆಹಲಿಯ ವಸಂತ ವಿಹಾರ್‌ನಿಂದ ಪಕ್ಕದ ಉತ್ತರ ಪ್ರದೇಶದ ಘಜಿಯಾಬಾದ್‌ಗೆ ಸುಮಾರು 44 ಕಿ.ಮೀ.ಗಳವರೆಗೆ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಈ ವೇಳೆ ಚಲಿಸುವ ಕಾರಿನಲ್ಲೇ ಅತ್ಯಾಚಾರ ನಡೆಸಿರುವುದರಿಂದ ಈ ಅತ್ಯಾಚಾರದ ಘಟನೆ ಆ ವೇಳೆ ಯಾರ ಗಮನಕ್ಕೂ ಬಂದಿಲ್ಲ. ಅತ್ಯಾಚಾರ ನಡೆಯುವಾಗ ಆ ಬಾಲಕಿ ಜೋರಾಗಿ ಕಿರುಚಾಡಿದರೂ ಯಾರಿಗೂ ಕೇಳಿಲ್ಲ.

ಇದನ್ನೂ ಓದಿ: Rape: ಮದುವೆಯಾಗುವ ಆಮಿಷವೊಡ್ಡಿ 14 ವರ್ಷದ ಬಾಲಕಿ ಮೇಲೆ 2 ತಿಂಗಳಿಂದ ಅತ್ಯಾಚಾರ

ಬಾಲಕಿಯ ಮನೆಯ ಸಮೀಪವೇ ಉಳಿದುಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಜುಲೈ 6ರಂದು ಸ್ನೇಹಿತನ ಮನೆಯಿಂದ ವಾಪಾಸ್ ಬಂದ ನಂತರ ಸಂಜೆ ವಸಂತ್ ವಿಹಾರ್ ಮಾರುಕಟ್ಟೆಯಲ್ಲಿ ಆ ಬಾಲಕಿ ಇಬ್ಬರು ಯುವಕರನ್ನು ಭೇಟಿಯಾಗಿದ್ದಳು. 10ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಹುಡುಗಿ ಆ ಇಬ್ಬರು ತನ್ನ ಸುತ್ತಲೂ ತಿರುಗಾಡುತ್ತಿದ್ದರು ಎಂದು ಹೇಳಿದ್ದಾಳೆ.

ಅದಾದ ಸ್ವಲ್ಪ ಸಮಯದ ನಂತರ ಇನ್ನೋರ್ವ ವ್ಯಕ್ತಿ ತಮ್ಮ ಕಾರನ್ನು ತಂದು ಆ ಬಾಲಕಿ ಮತ್ತು ಇಬ್ಬರು ಯುವಕರನ್ನು ಹತ್ತಿಸಿಕೊಂಡು ಹೋಗಿದ್ದಾರೆ. ಆಕೆ ಕುಡಿಯುವ ಜ್ಯೂಸ್​ಗೆ ಅಮಲು ಬರುವ ವಸ್ತುವನ್ನು ಹಾಕಿ, ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಲಾಗಿದೆ. ಒಂದೇ ಕಡೆ ಕಾರು ನಿಲ್ಲಿಸಿ ಅತ್ಯಾಚಾರವೆಸಗಿದರೆ ಬೇರೆಯವರಿಗೆ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ದೆಹಲಿಯ ಸುತ್ತಲೂ ಕಾರು ಓಡಿಸಿದ್ದಾರೆ. ಅಲ್ಲದೆ, ಥಾವು ಅತ್ಯಾಚಾರ ನಡೆಸುತ್ತಿರುವುದನ್ನು ವಿಡಿಯೋ ಕೂಡ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Gang Rape: ಕಬ್ಬಿನ ಗದ್ದೆಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ; ಅಕ್ಕನಿಂದಲೇ ಮಾಸ್ಟರ್​ ಪ್ಲಾನ್!

ಎರಡು ದಿನಗಳ ಬಳಿಕ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯನ್ನು ಸಂಪರ್ಕಿಸಿ, ಪೊಲೀಸರಿಗೆ ಮಾಹಿತಿ ನೀಡಲಾಯಿತು. ಜುಲೈ 8ರಂದು ಮುಂಜಾನೆ 4 ಗಂಟೆಗೆ ಎಸ್‌ಜೆ ಆಸ್ಪತ್ರೆಯಿಂದ ಫೋನ್ ಬಂದಿದ್ದು, ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಘಟನೆಯ ಬಗ್ಗೆ ಕರೆ ಮಾಡಿದವರು ಮಾಹಿತಿ ನೀಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada