ಜಾರ್ಖಂಡ್​ನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಡಿಯೋ ವೈರಲ್; 10 ಜನರ ಬಂಧನ

| Updated By: ಸುಷ್ಮಾ ಚಕ್ರೆ

Updated on: Apr 21, 2022 | 5:06 PM

ಮುಂಬರುವ ಜಾರ್ಖಂಡ್ ಗ್ರಾಮಾಂತರ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಬುಧವಾರ ಚುನಾವಣಾ ಕಚೇರಿಗೆ ಮುಖಿಯಾ ಅಭ್ಯರ್ಥಿ ಮೊಹಮ್ಮದ್ ಶಾಕಿರ್ ಹೋಗುತ್ತಿದ್ದಾಗ ಅವರನ್ನು ಬೆಂಬಲಿಸುವವರು 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆಗಳನ್ನು ಕೂಗಿದ್ದಾರೆ.

ಜಾರ್ಖಂಡ್​ನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಡಿಯೋ ವೈರಲ್; 10 ಜನರ ಬಂಧನ
ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುತ್ತಿರುವ ವಿಡಿಯೋ ವೈರಲ್
Follow us on

ಜಾರ್ಖಂಡ್: ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುತ್ತಿರುವ ವಿಡಿಯೋ ವೈರಲ್ (Video Viral) ಆಗುತ್ತಿದ್ದಂತೆ ಜಾರ್ಖಂಡ್​ನ ಗಿರಿದಿಹ್‌ನಲ್ಲಿ 10 ಜನರನ್ನು ಬಂಧಿಸಲಾಗಿದೆ. ಗಂದೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಎಂದು ಪಾಕಿಸ್ತಾನದ ಪರ ಘೋಷಣೆ ಕೂಗಿದ ವಿಡಿಯೋ ವೈರಲ್ ಆಗಿದೆ. ನಿನ್ನೆ ಈ ಘಟನೆ ನಡೆದಿದೆ.

ಮುಖಿಯಾ ಅಭ್ಯರ್ಥಿ ಮೊಹಮ್ಮದ್ ಶಾಕಿರ್ ಬೆಂಬಲಿಗರು ಬ್ಲಾಕ್ ಆಫೀಸ್ ಗೇಟ್ ಬಳಿ ಅವರ ಬೆಂಬಲಕ್ಕೆ ಘೋಷಣೆಗಳನ್ನು ಕೂಗುತ್ತಿದ್ದರು. ಈ ವೇಳೆ ಪಾಕಿಸ್ತಾನದ ಪರ ಘೋಷಣೆಗಳು ಮೊಳಗಿದವು. ಗಿರಿದಿಹ್ ಪೊಲೀಸರು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಘೋಷಣೆ ಕೂಗಿದ 10 ಮಂದಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಶಾಕಿರ್ ಡೊಕೋಡಿಹ್‌ನಿಂದ ಪಂಚಾಯತ್ ಚುನಾವಣಾ ಅಭ್ಯರ್ಥಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಮುಂಬರುವ ಜಾರ್ಖಂಡ್ ಗ್ರಾಮಾಂತರ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಬುಧವಾರ ಚುನಾವಣಾ ಕಚೇರಿಗೆ ಮುಖಿಯಾ ಅಭ್ಯರ್ಥಿ ಮೊಹಮ್ಮದ್ ಶಾಕಿರ್ ಹೋಗುತ್ತಿದ್ದಾಗ ಅವರನ್ನು ಬೆಂಬಲಿಸುವವರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ. ಇದಾದ ನಂತರ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.

ಸಮಾಜದಲ್ಲಿ ದ್ವೇಷ ಹರಡುವ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ನಾವು ಮುಖಿಯಾ ಅಭ್ಯರ್ಥಿ ಎಂಡಿ ಶಾಕಿರ್ ಮತ್ತು ಅವರ ಇಬ್ಬರು ಬೆಂಬಲಿಗರಾದ ಆಸಿಫ್ ಮತ್ತು ಸೊಹೈಬ್ ಅವರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಮೊದಲ ಹಂತದ ಪಂಚಾಯತ್ ಚುನಾವಣೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಏಪ್ರಿಲ್ 16ರಿಂದ ರಾಜ್ಯದ 21 ಜಿಲ್ಲೆಗಳ 72 ಬ್ಲಾಕ್‌ಗಳಲ್ಲಿ ಪ್ರಾರಂಭವಾಯಿತು. ಮೇ 14ರಂದು ಮೊದಲ ಹಂತದಲ್ಲಿ 1,127 ಪಂಚಾಯತ್‌ಗಳಿಗೆ ಮತದಾನ ನಡೆಯಲಿದ್ದು, ಮೇ 17ರಂದು ಮತ ಎಣಿಕೆ ನಡೆಯಲಿದೆ. ಮುಖ್ಯಾಧಿಕಾರಿಗಳು ಮತ್ತು ಪಂಚಾಯತ್ ಸಮಿತಿ, ಜಿಲ್ಲಾ ಪರಿಷತ್ ಮತ್ತು ಗ್ರಾಮ ಪಂಚಾಯತ್ ಸದಸ್ಯರ ಸ್ಥಾನಕ್ಕೆ ಒಟ್ಟು 6,267 ಅಭ್ಯರ್ಥಿಗಳು ಇದುವರೆಗೆ ಮೊದಲ ಸುತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಮೊದಲ ಸುತ್ತಿನ ನಾಮನಿರ್ದೇಶನವು ಏಪ್ರಿಲ್ 23ರಂದು ಮುಕ್ತಾಯಗೊಳ್ಳಲಿದೆ. ಬುಧವಾರ 16 ಜಿಲ್ಲೆಗಳ ವ್ಯಾಪ್ತಿಯ 50 ಬ್ಲಾಕ್‌ಗಳಲ್ಲಿ ಎರಡನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಇದನ್ನೂ ಓದಿ: ಜಾರ್ಖಂಡ್​ನಲ್ಲಿ ಕಲ್ಲಿದ್ದಲು ಗಣಿ ಕುಸಿತ; ಅವಶೇಷಗಳಡಿ ಸಿಲುಕಿದ 50ಕ್ಕೂ ಹೆಚ್ಚು ಜನರು

ಪಾಕಿಸ್ತಾನ ಪರ ಸಂದೇಶ ಹರಿಯಬಿಟ್ಟ ಯುವಕನ ಬಂಧನ