ಜಾರ್ಖಂಡ್ನಲ್ಲಿ ಕಲ್ಲಿದ್ದಲು ಗಣಿ ಕುಸಿತ; ಅವಶೇಷಗಳಡಿ ಸಿಲುಕಿದ 50ಕ್ಕೂ ಹೆಚ್ಚು ಜನರು
ಈ ಘಟನೆ ನಡೆದ ಸ್ಥಳದಲ್ಲಿ ಕಲ್ಲಿದ್ದಲು ಗುಂಡಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎಂದು ವರದಿಗಳು ಹೇಳಿವೆ. 50 ಮಂದಿ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.
ಪಾಟ್ನಾ: ಜಾರ್ಖಂಡ್‌ನ (Jharkhand) ಧನ್‌ಬಾದ್‌ನಲ್ಲಿ ಕಲ್ಲಿದ್ದಲಿನ ಕಣಿವೆ (Coal Pit) ಕುಸಿದು ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆ ನಡೆದ ಸ್ಥಳದಲ್ಲಿ ಕಲ್ಲಿದ್ದಲು ಗುಂಡಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎಂದು ವರದಿಗಳು ಹೇಳಿವೆ. ಈ ಘಟನೆಯಲ್ಲಿ ಅವಶೇಷಗಳಡಿ 50ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಕೈಬಿಟ್ಟ ಕಲ್ಲಿದ್ದಲು ಗಣಿ ಕುಸಿದ ನಂತರ 50 ಕ್ಕೂ ಹೆಚ್ಚು ಜನರು ಸಿಲುಕಿದ್ದಾರೆ. ಈ ಘಟನೆ ನಡೆದಾಗ ಕಲ್ಲಿದ್ದಲು ಗುಂಡಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎನ್ನಲಾಗಿದೆ.
ಈ ವರ್ಷದ ಫೆಬ್ರವರಿ ಆರಂಭದಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಫೆಬ್ರವರಿಯಲ್ಲಿ ಅಕ್ರಮ ಕಲ್ಲಿದ್ದಲು ಗಣಿ ಕುಸಿದು ಕನಿಷ್ಠ 5 ಜನರು ಸಾವನ್ನಪ್ಪಿದ್ದರು. ಧನ್ಬಾದ್‌ನ ನಿರ್ಸಾ ಬ್ಲಾಕ್‌ನ ಇಸಿಎಲ್ ಮುಗ್ಮಾ ಪ್ರದೇಶದಲ್ಲಿ 20 ಅಡಿ ಎತ್ತರದಿಂದ ಗಣಿಗಾರಿಕೆಯ ಉಪಕರಣವೊಂದು ಬಿದ್ದ ಪರಿಣಾಮ ಈ ಘಟನೆ ನಡೆದಿತ್ತು.
ಇದನ್ನೂ ಓದಿ: ಕಲ್ಲಿದ್ದಲು ಕೊರತೆ; ಆರ್ಟಿಪಿಎಸ್ನ 3 ವಿದ್ಯುತ್ ಉತ್ಪಾದನಾ ಘಟಕಗಳು ತಾತ್ಕಾಲಿಕ ಸ್ಥಗಿತ
ಅಕ್ರಮ ಗಣಿಗಾರಿಕೆ ತನಿಖೆಯ ಎಸ್ಐಟಿ ಅವಧಿ ಒಂದು ವರ್ಷಕ್ಕೆ ವಿಸ್ತರಣೆ
Published On - 2:14 pm, Thu, 21 April 22