ಗುಜರಾತ್ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ದೋಣಿಗಳು ಮಗುಚಿದ ಪರಿಣಾಮ 10 ಮೀನುಗಾರರು ಕಾಣೆಯಾಗಿದ್ದಾರೆ. ಮೂಲಗಳ ಪ್ರಕಾರ ಸುಮಾರು 10-12 ದೋಣಿಗಳು ಮಗುಚಿವೆ. ಅತಿಯಾದ ಗಾಳಿ ಮತ್ತು ಮಳೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಕಾಣೆಯಾದ ಮೀನುಗಾರರನ್ನು ಹುಡುಕಲಾಗುತ್ತಿದೆ.
ಗುಜರಾತ್ನಲ್ಲಿ ನಿನ್ನೆಯಿಂದ ಒಂದೇ ಸಮನೆ ಮಳೆಯಾಗುತ್ತಿದೆ. ಅದರಲ್ಲೂ ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರಗಳ ಸುಮಾರು 108 ತಾಲೂಕುಗಳಲ್ಲಿ ಭರ್ಜರಿ ಮಳೆ ಬೀಳುತ್ತಿದೆ. ಸೂರತ್, ಡಾಂಗ್, ನವ್ಸರಿ, ವಾಲ್ಸಾದ್ಗಳಲ್ಲಿ ಗುರುವಾರ ಮತ್ತು ದಾಹೋಡ್, ಮಹಿಸಾಗರ್, ಛೋಟಾ, ಉದೇಪುರ, ನರ್ಮದಾ ಜಿಲ್ಲೆಗಳಲ್ಲಿ ನಾಳೆ (ಶುಕ್ರವಾರ) ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ಗುಜರಾತ್ನಲ್ಲಿ ಡಿ.1 ಮತ್ತು 2ರಂದು ಭಾರಿ ಮಳೆ ಬೀಳುವ ಎಚ್ಚರಿಕೆ ನೀಡಿದ್ದ ಐಎಂಡಿ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹೇಳಿತ್ತು.
ಈ ಅಕಾಲಿಕವಾಗಿ ಒಂದೇ ಸಮ ಸುರಿಯುತ್ತಿರುವ ಮಳೆಯಿಂದಾಗಿ ತಾಪಮಾನ ತೀವ್ರತರವಾಗಿ ಕುಸಿದಿದೆ. ಬುಧವಾರ ಸಂಜೆಯ ಹೊತ್ತಿಗೆ ಸೂರತ್ನ ಉಮೇರ್ಪಡಾ ದಲ್ಲಿ ಅತಿ ಹೆಚ್ಚು ಅಂದರೆ 31 ಎಂಎಂ ಮಳೆಯಾಗಿದೆ. ಅದಾದ ಬಳಿಕ ಅಮ್ರೇಲಿಯ ಖಂಬಾ ಮತ್ತು ಗಿರ್ ಸೋಮನಾಥ್ದ ಉನಾದಲ್ಲಿ 25 ಎಂಎಂ ಮಳೆ ಬಿದ್ದಿದೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಸ್ಥಾನಕ್ಕಾಗಿ 2ನೇ ಟೆಸ್ಟ್ನಿಂದ ಹೊರಗುಳಿಯಲಿದ್ದಾರೆ ಈ ಸ್ಟಾರ್ ಬ್ಯಾಟರ್: ಯಾರು ಗೊತ್ತಾ?
Published On - 9:40 am, Thu, 2 December 21