ಮಹಾರಾಷ್ಟ್ರ ಸಿವಿಲ್​ ಆಸ್ಪತ್ರೆಯ ಕೊವಿಡ್​ ವಾರ್ಡ್​​ನಲ್ಲಿ ಬೆಂಕಿ; 10 ರೋಗಿಗಳ ದುರ್ಮರಣ

| Updated By: Lakshmi Hegde

Updated on: Nov 06, 2021 | 3:08 PM

ಉಳಿದ ರೋಗಿಗಳನ್ನು ಸಮೀಪದ ಇನ್ನೊಂದು ಆಸ್ಪತ್ರೆಗೆ ಕೊವಿಡ್​ 19 ವಾರ್ಡ್​ಗೆ ಸ್ಥಳಾಂತರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭೋಸ್ಲೆ ಮಾಹಿತಿ ನೀಡಿದ್ದಾರೆ.  ಇನ್ನು ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ.

ಮಹಾರಾಷ್ಟ್ರ ಸಿವಿಲ್​ ಆಸ್ಪತ್ರೆಯ ಕೊವಿಡ್​ ವಾರ್ಡ್​​ನಲ್ಲಿ ಬೆಂಕಿ; 10 ರೋಗಿಗಳ ದುರ್ಮರಣ
ಬೆಂಕಿ ಕಾಣಿಸಿಕೊಂಡ ಕೊವಿಡ್​ 19 ವಾರ್ಡ್​​
Follow us on

ಅಹ್ಮದ್​ನಗರ: ಮಹಾರಾಷ್ಟ್ರದ ಅಹ್ಮದ್​ನಗರದಲ್ಲಿನ ಸಿವಿಲ್ ಆಸ್ಪತ್ರೆಯ ಐಸಿಯುದಲ್ಲಿ ಬೆಂಕಿ ಹೊತ್ತಿ ಉರಿದು ಸುಮಾರು 10 ರೋಗಿಗಳು ಮೃತಪಟ್ಟ ದುರ್ಘಟನೆ ನಡೆದಿದೆ. ಇನ್ನೊಬ್ಬ ರೋಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಐಸಿಯುದಲ್ಲಿ ಕಾಣಿಸಿಕೊಂಡ ಬೆಂಕಿ ಸುಮಾರು 17 ರೋಗಿಗಳು ಅಡ್ಮಿಟ್​ ಆಗಿದ್ದ ಕೊವಿಡ್​ 19 ವಾರ್ಡ್​ಗೆ ಪಸರಿಸಿದೆ. ಅಲ್ಲಿಂದ 10 ಮಂದಿ ಮೃತಪಟ್ಟಿದ್ದು, ಇನ್ನೊಬ್ಬ ರೋಗಿ ಗಂಭೀರವಾಗಿ ಗಾಯಗೊಂಡಿದ್ದರು. 

ಉಳಿದ ರೋಗಿಗಳನ್ನು ಸಮೀಪದ ಇನ್ನೊಂದು ಆಸ್ಪತ್ರೆಗೆ ಕೊವಿಡ್​ 19 ವಾರ್ಡ್​ಗೆ ಸ್ಥಳಾಂತರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭೋಸ್ಲೆ ಮಾಹಿತಿ ನೀಡಿದ್ದಾರೆ.  ಇನ್ನು ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ.ಆದರೆ ಶಾರ್ಟ್​ಸರ್ಕ್ಯೂಟ್​ನಿಂದಲೇ ಅಗ್ನಿ ಹೊತ್ತಿಕೊಂಡಿರಬಹುದು ಎಂದು ಹೇಳಲಾಗಿದೆ. ಹಾಗೇ, ಈಗಾಗಲೇ ಬೆಂಕಿಗೆ ಕಾರಣವೇನು ಎಂಬ ಬಗ್ಗೆ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಇನ್ನು ಅಹ್ಮದ್​ನಗರ ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿ, ಎನ್​ಸಿಪಿ ನಾಯಕ ಸಂಗ್ರಾಮ್​ ಜಗ್​ತಾಪ್​ ಈ ದುರ್ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಮತ್ತು ಪ್ರಕರಣದ ತನಿಖೆಗಾಗಿ ಜಿಲ್ಲಾ ಸಮಿತಿ ರಚನೆ ಮಾಡಬಾರದು. ರಾಜ್ಯ ಸರ್ಕಾರದಿಂದ ಸಮಿತಿ ರಚನೆಯಾಗಬೇಕು ಎಂದು ಹೇಳಿದ್ದಾರೆ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಕೂಡ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಈ ಹೊತ್ತಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಹಾಗೇ, ಈ ಘಟನೆ ತುಂಬ ಶಾಕಿಂಗ್​ ಮತ್ತು ಮನಸಿಗೆ ತಳಮಳ ನೀಡುತ್ತಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್​ ಹೇಳಿದ್ದಾರೆ.

ಇದೇ ವರ್ಷ ಏಪ್ರಿಲ್​ 15ರಂದು ಮಹಾರಾಷ್ಟ್ರದ ಪಾಲ್ಗಾರ್​​ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಇಂಥದ್ದೇ ದುರ್ಘಟನೆ ನಡೆದಿತ್ತು. ಈ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಹೊತ್ತಿಕೊಂಡು ಹಲವು ಕೊವಿಡ್​ 19 ರೋಗಿಗಳು ಸಾವನ್ನಪ್ಪಿದ್ದರು.

ಇದನ್ನೂ ಓದಿ: Ravichandran Ashwin: ನ್ಯೂಜಿಲೆಂಡ್ ವಿರುದ್ಧ ಗೆಲ್ಲಲು ಅಫ್ಘಾನಿಸ್ತಾನಕ್ಕೆ ದೊಡ್ಡ ಆಫರ್ ಕೊಟ್ಟ ರವಿಚಂದ್ರನ್ ಅಶ್ವಿನ್: ಏನದು?

ಹಾಸನ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಸನಾಂಬೆ ದೇವಿಯ ದರ್ಶನಕ್ಕೆ ತೆರೆ

Published On - 2:23 pm, Sat, 6 November 21