AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್: ದಾಳಿ ನಡೆಸಿ, ಹೊಟ್ಟೆ ಬಗೆದು ಕರುಳು ಕಿತ್ತು ಹಾಕಿದ ಮಂಗಗಳು, ಬಾಲಕ ಸಾವು

ಹತ್ತು ವರ್ಷದ ಬಾಲಕನನ್ನು ಕೋತಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಕೋತಿಯೊಂದು ಬಾಲಕನನ್ನು ಹತ್ಯೆ ಮಾಡಿ ಕರುಳನ್ನು ಬಗೆದು ಹೊರ ತೆಗೆದಿದೆ. ಗುಜರಾತ್‌ನ ಗಾಂಧಿನಗರದ ಸಾಲ್ಕಿ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ದೆಹಗಾಂ ತಾಲೂಕಿನ ದೇವಸ್ಥಾನದ ಬಳಿ ಕೋತಿಗಳು ದಾಳಿ ನಡೆದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಯಾದ ಬಾಲಕನನ್ನು ದೀಪಕ್ ಠಾಕೂರ್ ಎಂದು ಪೊಲೀಸರು ಗುರುತಿಸಿದ್ದಾರೆ.

ಗುಜರಾತ್: ದಾಳಿ ನಡೆಸಿ, ಹೊಟ್ಟೆ ಬಗೆದು ಕರುಳು ಕಿತ್ತು ಹಾಕಿದ ಮಂಗಗಳು, ಬಾಲಕ ಸಾವು
ಕೋತಿ-ಸಾಂದರ್ಭಿಕ ಚಿತ್ರ
Follow us
ನಯನಾ ರಾಜೀವ್
|

Updated on:Nov 15, 2023 | 2:38 PM

ಹತ್ತು ವರ್ಷದ ಬಾಲಕನನ್ನು ಕೋತಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಕೋತಿಯೊಂದು ಬಾಲಕನನ್ನು ಹತ್ಯೆ ಮಾಡಿ ಕರುಳನ್ನು ಬಗೆದು ಹೊರ ತೆಗೆದಿದೆ. ಗುಜರಾತ್‌ನ ಗಾಂಧಿನಗರದ ಸಾಲ್ಕಿ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ದೆಹಗಾಂ ತಾಲೂಕಿನ ದೇವಸ್ಥಾನದ ಬಳಿ ಕೋತಿಗಳು ದಾಳಿ ನಡೆದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಯಾದ ಬಾಲಕನನ್ನು ದೀಪಕ್ ಠಾಕೂರ್ ಎಂದು ಪೊಲೀಸರು ಗುರುತಿಸಿದ್ದಾರೆ.

ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಆರಂಭಿಸುವ ಮುನ್ನವೇ ಬಾಲಕ ಕೊನೆಯುಸಿರೆಳೆದಿದ್ದಾನೆ. ದೀಪಕ್ ಹಳ್ಳಿಯಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಕೋತಿಗಳ ಗುಂಪನ್ನು ಕಂಡು ಹೆದರಿದ್ದ ಎಂದು ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಮಂಗಗಳು ಬಾಲಕನ ಮೇಲೆ ಹಾರಿದ್ದವು, ಬಳಿಕ ಉಗುರಿನಿಂದ ಪರಚಿವೆ, ಬಳಿಕ ಹೊಟ್ಟೆಯನ್ನು ಬಗೆದು ಕರುಳನ್ನು ಹೊರತೆಗೆದಿದ್ದವು. ಒಂದು ವಾರದಲ್ಲಿ ಗ್ರಾಮದಲ್ಲಿ ಕೋತಿಗಳು ನಡೆಸಿದ ಮೂರನೇ ದಾಳಿ ಇದಾಗಿದೆ ಎಂದು ಅವರು ಹೇಳಿದರು. ಮಂಗಗಳನ್ನು ಹಿಡಿಯಲು ಇಲಾಖೆ ಪ್ರಯತ್ನಿಸುತ್ತಿದೆ ಎಂದು ಅರಣ್ಯಾಧಿಕಾರಿ ವಿಶಾಲ್ ಚೌಧರಿ ತಿಳಿಸಿದ್ದಾರೆ.

ಮತ್ತಷ್ಟು ಓದಿ:ದಾವಣಗೆರೆ: ವ್ಯಕ್ತಿಯನ್ನು ಕೊಂದ ಮಂಗ ಕೊನೆಗೂ ಸೆರೆ

ನಾವು ಕಳೆದ ಒಂದು ವಾರದಲ್ಲಿ ಎರಡು ಲಾಂಗುರ್‌ಗಳನ್ನು ರಕ್ಷಿಸಿದ್ದೇವೆ ಮತ್ತು ಇನ್ನೊಂದು ಲಾಂಗುರ್ ಅನ್ನು ಬಲೆಗೆ ಬೀಳಿಸಲು ಪಂಜರಗಳನ್ನು ಸ್ಥಾಪಿಸಿದ್ದೇವೆ. ಗ್ರಾಮದಲ್ಲಿ ಕಳೆದ ಒಂದು ವಾರದಲ್ಲಿ ದಾಳಿಯಲ್ಲಿ ತೊಡಗಿರುವ ಕೋತಿಗಳ ದಂಡೇ ಇದೆ.

ಈ ವರ್ಷದ ಆರಂಭದಲ್ಲಿ, ಮಧ್ಯಪ್ರದೇಶದ ರಾಜ್‌ಗಢ್ ಪಟ್ಟಣದಲ್ಲಿ ಎರಡು ವಾರಗಳ ಕಾಲ ಜನರನ್ನು ಭಯಗೊಳಿಸಿತ್ತು, ಬಳಿಕ ಕೋತಿ ಹಿಡಿದುಕೊಟ್ಟವರಿಗೆ 21 ಸಾವಿರ ರೂ. ನಗದು ಬಹುಮಾನವನ್ನು ಘೋಷಿಸಲಾಗಿತ್ತು, ಬಳಿಕ ಕೋತಿ ಸಿಕ್ಕಿಬಿದ್ದಿತ್ತು ಅದು 20 ಜನರ ಮೇಲೆ ದಾಳಿ ಮಾಡಿತ್ತು.

ರಕ್ಷಣಾ ತಂಡವು ಮಂಗಗಳನ್ನು ಪತ್ತೆ ಹಚ್ಚಲು ಡ್ರೋನ್​ಗಳನ್ನು ಬಳಸಿತ್ತು, ಬಳಿಕ ಡಾರ್ಟ್​ಗಳನ್ನು ಬಳಸಿ ಅದನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾದರು, ಬಳಿಕ ಪಂಜರದಲ್ಲಿ ಇರಿಸಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:37 pm, Wed, 15 November 23